ಹಾಯ್ ಫ್ರೆಂಡ್ಸ, ನಾನು ಇವತ್ತಿನ ಈ ಅಂಕಣವನ್ನು ಶೋಅಪ ಮಾಡುವುದಕ್ಕಾಗಿ ಅಥವಾ ಯಾರದೋ ಹೊಟ್ಟೆ ಊರಿಸುವುದಕ್ಕಾಗಿ ಬರೆಯುತ್ತಿಲ್ಲ. ನನ್ನಂತೆ ಬಿಜನೆಸ ಮಾಡುತ್ತಿರುವವರಿಗೆ ಮೋಟಿವೇಷನ ಸಿಗಲಿ ಅನ್ನೋ ಕಾರಣಕ್ಕಷ್ಟೇ ಬರೆಯುತ್ತಿರುವೆ. ಬಿಜನೆಸ ಮಾಡುವಾಗ ಎಲ್ಲರೂ ನಮ್ಮ ಕೈಬಿಟ್ಟು ಬಿಡುತ್ತಾರೆ, ಜೊತೆಗೆ ಕಿಂಡಲ ಮಾಡಿ ಡಿಮೋಟಿವೇಟ ಮಾಡುತ್ತಾರೆ. ಸೋ ಬಿಜನೆಸ ಮಾಡುತ್ತಿರುವವರಿಗೆ ಒಂದು ಐಡಿಯಾ ಮೂಡಿಸುವುದಕ್ಕಾಗಿ ಈ ಅಂಕಣವನ್ನು ಬರೆಯುತ್ತಿರುವೆ ಅಷ್ಟೇ. ಇದರಲ್ಲಿ ಬೇರೆ ಉದ್ದೇಶ ಹುಡುಕಿ ನೆಗೆಟಿವ ಕಮೆಂಟ ಮಾಡಿ ತಮ್ಮ ಕೀಳು ಮನಸ್ಥಿತಿ ತೋರಿಸುವವರಿಗೆ ಮೊದಲೇ ಥ್ಯಾಂಕ್ಸ. ಚೇಕನಲ್ಲಿ ಕಂಪನಿಯ ಬ್ಯಾಂಕ್ ಅಕೌಂಟ್ ಸೇಫ್ಟಿಗಾಗಿ ಅಕೌಂಟ್ ನಂಬರ್ ಹಾಗೂ ಬ್ರಾಂಚ್ ಅಡ್ರೆಸ್ ಬ್ಲರ್ ಮಾಡಿರುವೆ. ಅದನ್ನು ನೋಡಿ ತಮ್ಮ ಮಹಾ ಜ್ಞಾನ ತೋರಿಸುವ ಮೂರ್ಖರ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಗೆ ನಿಯತ್ತಾಗಿ ಬಿಜನೆಸ ಮಾಡಿ ಮುಂದೆ ಬರ್ತಿನಿ ಅನ್ನೋರಿಗೆ ಆಲ ದ ಬೆಸ್ಟ್...
ನನಗಿದು ಮೊದಲ ಸ್ಯಾಲರಿಯೇನಲ್ಲ, ಇದಕ್ಕೂ ಮೊದಲು ನನಗೆ ಬಹಳಷ್ಟು ಸ್ಯಾಲರಿ ಬಂದಿವೆ. ಫೇಸ್‌ಬುಕ್, ಯುಟ್ಯೂಬ, ಗೂಗಲ, ಅಮೇಜಾನದಿಂದಷ್ಟೇ ಅಲ್ಲ ಭಾರತದ ಬೇರೆಬೇರೆ ಕಂಪನಿಗಳಿಂದ ಇದಕ್ಕಿಂತಲೂ ಹೆಚ್ಚಿಗೆ ಹಣ ಬಂದಿದೆ. ಈಗಲೂ ನಾನು ಬಹಳಷ್ಟು ಕಂಪನಿಗಳ ಬ್ರ್ಯಾಂಡಗಳ ಸೇಲ್ಸ & ಮಾರ್ಕೆಟಿಂಗ್ ಮಾಡುತ್ತಿರುವೆ. ಬುಕ್ಸಗಳಿಂದ ಹಿಡಿದು ಬೈಕಗಳ ಅಡ್ವಟೈಜಿಂಗಾಗಿ ಕೆಲಸ ಮಾಡುತ್ತಿರುವೆ. ಬೇರೆ ಬೇರೆ ಕಂಪನಿಗಳಿಂದ ಸ್ಯಾಲರಿ ಬಂದಾಗ ಆಗದ ಖುಷಿ ಈಗಾಗುತ್ತಿದೆ. ಏಕೆಂದರೆ ಈ ಸ್ಯಾಲರಿ ನನ್ನ ಪಾಲಿಗೆ ಬಹಳಷ್ಟು ಸ್ಪೆಷಲ್ ಆಗಿದೆ, ಮರೆಯಲಾಗದ ನೆನಪಾಗಿದೆ. ಏಕೆಂದರೆ ಇದು ನಮ್ಮ ರೋರಿಂಗ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ನನಗೆ ಬರುತ್ತಿರುವ ಮೊದಲ ಸ್ಯಾಲರಿಯಾಗಿದೆ. ಇಲ್ಲಿ ತನಕ ನಾನು ನಮ್ಮ ಕಂಪನಿಯಿಂದ ಒಂದು ರೂಪಾಯಿ ಕೂಡ ಸ್ಯಾಲರಿ ತೆಗೆದುಕೊಂಡಿಲ್ಲ. ಈಗ ಕಂಪನಿ ಫುಲ್ಲಿ ಸಕ್ಸೆಸಫುಲ್ಲಾಗಿ ಸ್ಟ್ಯಾಂಡಾದಾಗ ಎಲ್ಲ ಬಾಸಗಳ ಪ್ರೀತಿಗೆ ಸೋತು ತೆಗೆದುಕೊಳ್ಳುತ್ತಿರುವೆ. ಮೂರು ವರ್ಷಗಳ ನಂತರ ನಾನು ನಮ್ಮ ಕಂಪನಿಯಿಂದ ಸ್ಯಾಲರಿ ತೆಗೆದುಕೊಳ್ಳುತ್ತಿರುವೆ. ಅದಕ್ಕಾಗಿ ನಮ್ಮ ಕಂಪನಿಯ ಎಲ್ಲ ಬಾಸಗಳಿಗೆ ಬಿಗ ಥ್ಯಾಂಕ್ಸ. ಸ್ಪೆಷಲಾಗಿ #ರಾಣಿಗೆ ಸ್ಪೆಷಲ್ ಥ್ಯಾಂಕ್ಸ. ಸ್ವಂತ ಕಂಪನಿಯಿಂದ ಮೊದಲ ಸಲ ಸ್ಯಾಲರಿ ತೆಗೆದುಕೊಳ್ಳುವ ಖುಷಿ ಬೇರೆನೆ ಇದೆ.
2018 ಜುಲೈ 4ಕ್ಕೆ ನಾವು ನಮ್ಮ ಮನೆಯನ್ನೇ ಆಫೀಸ ಮಾಡಿಕೊಂಡು ನಮ್ಮ ರೋರಿಂಗ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ಟಾರ್ಟ ಮಾಡಿದೆವು. ನಮ್ಮ ಕಂಪನಿ ಒಂದು ಫಿಲ್ಮ್ ಟೆಕ್ ಕಂಪನಿಯಾಗಿದೆ. ಇದು ಮೊದಲ ತಿಂಗಳಲ್ಲೆ ಭಾರತ ಸರ್ಕಾರದಿಂದ ಸ್ಟಾರ್ಟಪ ಎಂದು ಗುರುತಿಸಲ್ಪಟ್ಟಿತು. ಆದರೆ ಆರಂಭದಲ್ಲೇ ನಾವು ಕೆಲವೊಂದಿಷ್ಟು ಮಿಸ್ಟೇಕ್ಸಗಳನ್ನ ಮಾಡಿಕೊಂಡಿದ್ದರಿಂದ ದೊಡ್ಡ ಚಾಲೆಂಜ್ ಎದುರಾಯಿತು. ನಮ್ಮ ಸ್ಟಾರ್ಟಪ ಸಾವಿನ ಸ್ಥಿತಿಗೆ ತಲುಪಿತು. ಆದರೆ ನಮ್ಮ ಟೀಮ ಮೆಂಬರಗಳ ಧೈರ್ಯದಿಂದ ಮತ್ತೆ ನಮ್ಮ ಕಂಪನಿ ಸಿಡಿದೆದ್ದಿತು.

ನಾವು ಪುಣೆಯಲ್ಲಿ ನಮ್ಮ ಕಂಪನಿಯನ್ನು 2019 ಫೆಬ್ರುವರಿ 6ಕ್ಕೆ ರಿಸ್ಟಾರ್ಟ ಮಾಡಿದೆವು. ಎಲ್ಲವೂ ಚೆನ್ನಾಗಿ ಸಾಗಿತು. ನಾವು 10 ತಿಂಗಳಲ್ಲಿ 60 ಲಕ್ಷ ಲಾಭ ಕೂಡ ಮಾಡಿಕೊಂಡೆವು. ಆದರೆ ಮಹಾರಾಷ್ಟ್ರದಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದ ನಮಗೆ ಮತ್ತೆ ದೊಡ್ಡ ನಷ್ಟವಾಯಿತು. ಪುಣೆಯಲ್ಲಿ ಬಂದ ಪ್ರವಾಹದ ನೀರು ನಮ್ಮ ಆಫೀಸಿನ ತನಕ ಬಂದಿತ್ತು. ಆವಾಗ ಜನಸಂಚಾರ ಅಸ್ತವ್ಯಸ್ತವಾಗಿತ್ತು. ಜೊತೆಗೆ ಎರಡು ತಿಂಗಳು ಹಾಯವೇ ಬ್ಲಾಕಾಗಿತ್ತು. ಇದರಿಂದ ನಮಗೆ ಕಸ್ಟಮರಗಳಾಗಿದ್ದ ಕಂಪನಿಗಳು ಲಾಸಿಗೆ ಹೋಗಿದ್ದರಿಂದ ನಮ್ಮ ಬಿಜನೆಸ ಸ್ಲೋವಾಯ್ತು. ನಾವು ಬೇರೆ ದೊಡ್ಡ ಕಂಪನಿಗಳಿಗೆ ಇಂಟರ್ನೆಟ್ ಟೆಕ್ನಾಲಜಿ, ಆ್ಯಡ ಫಿಲ್ಮ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸರ್ವಿಸಗಳನ್ನ ಕೊಡುತ್ತಿದ್ದೇವು. ಅವೇ ಸ್ಟಾಪಾದಾಗ ನಮ್ಮ ಬಿಜನೆಸ ಸ್ಲೋವಾಯ್ತು. ನಾವು ಹೇಗೋ ಮಾಡಿ ಮೂರು ತಿಂಗಳ ನಂತರ ಈ ಲಾಸಿನಿಂದ ಹೊರಬಂದೆವು. ಮತ್ತೆ ಲಾಭ ಬಂತು. ಅಷ್ಟರಲ್ಲಿ 2020 ಶುರುವಾಯಿತು. ನಾವು ಎಲ್ಲ ಮರೆತು ಹೊಸ ಹೋಪ್ಸಗಳೊಂದಿಗೆ ಮುಂಬೈಯಲ್ಲಿ ಹೊಸ ಆಫೀಸ ಮಾಡಿಕೊಂಡು ಬಿಜನೆಸ ಎಕ್ಸಪ್ಯಾಂಡ ಮಾಡಿದೆವು. ಬಂದ ಲಾಭವನ್ನೆಲ್ಲ ಮತ್ತೆ ಬಿಜನೆಸ್ಸಲ್ಲಿ ಇನ್ವೆಸ್ಟ ಮಾಡಿದೆವು. ಇದರ ಜೊತೆಗೆ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ನಮ್ಮ ಕಂಪನಿ ಅಡಿಯಲ್ಲಿ 8 ಹೊಸ ಸ್ಟಾರ್ಟಪ ಐಡಿಯಾಗಳಿಗೆ ಹಣ ಹಾಕಿದೆವು. ಮತ್ತೆ ಬೇರೆ ಹೊಸ ಆಫೀಸ ತೆಗೆದುಕೊಂಡೆವು, ಹೊಸ ಟೀಮ ಮೇಂಬರ್ಸ, ಟ್ಯಾಲೆಂಟೆಡ ವರ್ಕರ್ಸಗಳನ್ನು ಸೇರಿಸಿಕೊಂಡೆವು, ಹೊಸಹೊಸ ಕ್ಯಾಮೆರಾ, ಡ್ರೋನ್, ಲ್ಯಾಪ್‌ಟಾಪ್, ಕಾರ ಸೇರಿದಂತೆ ಎಲ್ಲ ಇನಸ್ಟ್ರುಮೆಂಟ್ಸಗಳನ್ನೆಲ್ಲ ಪರಚೇಸ ಮಾಡಿದೆವು. ಮಾರ್ಚನಲ್ಲಿ ಕೆಲಸ ಕೂಡ ಸ್ಟಾರ್ಟ ಮಾಡಿದೆವು. ಆದರೆ ನಾವು ಕೆಲಸ ಶುರು ಮಾಡಿದ 16 ದಿನದಲ್ಲೇ ಕರೋನಾ ಮಾರಿಯ ಅವಾಂತರದಿಂದ ಲಾಕಡೌನಾಗಿ ನಮ್ಮ ಎಲ್ಲ ಕೆಲಸಗಳು ಅರ್ಧಕ್ಕೆ ನಿಂತವು. ನಮಗೆ ಸಿಕ್ಕಾಪಟ್ಟೆ ನಷ್ಟವಾಯಿತು.
ನಾವು ಇಷ್ಟು ದಿನ ಸಂಪಾದಿಸಿದ ಹಣವನ್ನೆಲ್ಲ ಈ ಹೊಸ 8 ಸ್ಟಾರ್ಟಪ ಐಡಿಯಾಗಳ ಮೇಲೆ ಸುರಿದಿದ್ದೆವು. ಕೈ ಪೂರ್ತಿ ಖಾಲಿಯಾಗಿತ್ತು. ನಮ್ಮ ಕಂಪನಿ ಜೊತೆಗೆ ನಮ್ಮ ಲೈಫ ಕೂಡ ಸ್ಟ್ರಗಲಿಂಗ ಫೇಜಗೆ ಸಿಲುಕಿತು. ಲಾಕಡೌನ ಕಂಟಿನ್ಯುವ ಆಯ್ತು. ಇನಕಮ ಇಲ್ಲದೇ 16 ಜನ ವರ್ಕರ್ಸಗಳ ಸ್ಯಾಲರಿ, ಮೂರು ಆಫೀಸಗಳ ರೆಂಟ, ಕಂಪನಿಯ ಕಂಪ್ಲಾಯನ್ಸಸಗಳು, ಇನಕಮ ಟ್ಯಾಕ್ಸ್, ಜಿ.ಎಸ.ಟಿ, ಸಾಲದಕ್ಕೆ ನಮ್ಮ ಪರ್ಸನಲ್ ಖರ್ಚುಗಳನ್ನು ನಿಭಾಯಿಸುವಷ್ಟರಲ್ಲಿ ನಮ್ಮೆಲ್ಲರ ಬ್ಯಾಂಕ್ ಬ್ಯಾಲೆನ್ಸ್ ಖತಮ ಆಗಿ ನೆಗೆಟಿವಗೆ ಹೋಯ್ತು.
ಇನಕಮ ಇಲ್ಲದೇ ಬದುಕುವುದೇ ಕಷ್ಟವಾಗಿರುವಾಗ ಕಂಪನಿ ರನ ಮಾಡಲಾಗದೇ ನಾವು ಬಿಜನೆಸ ಕ್ಲೋಜ ಮಾಡುವ ಹಂತಕ್ಕೆ ಬಂದಿದ್ದೆವು. ಇದು ನನಗೆ ಹಾಗೂ ಆಕಾಂಕ್ಷಾ ದಿದಿಗೆ ಮಾತ್ರ ಗೊತ್ತಿತ್ತು. ನಾವು ಎಲ್ಲರ ಮುಂದೆ ನಗುತ್ತಾ ಎಲ್ಲಾ ಸರಿಯಾಗಿದೆ ಅನ್ನೋ ತರ ನಾಟಕ ಮಾಡುತ್ತಾ ಇದ್ವಿ. ಸೈಲೆಂಟಾಗಿ ನಮ್ಮ ಬಿಜನೆಸ ಸೇವ ಮಾಡಿಕೊಳ್ಳಲು ಲೋನಗಾಗಿ ಟ್ರಾ ಮಾಡುತ್ತಿದ್ದೇವು. ಆದರೆ ರಾಣಿಗೆ ನಮ್ಮ ಮನದಾಳ ಹೇಳದೇನೆ ಗೊತ್ತಾಯಿತು. ಅವಳು ಆ ಕ್ಷಣವೇ 15 ಲಕ್ಷ ಹಣ ಕೊಟ್ಟು ನಮ್ಮ ಕಂಪನಿ, ಬಿಜನೆಸ, ಸ್ಟಾರ್ಟಪಗಳನ್ನು ಪೂರ್ತಿಯಾಗಿ ಸೇವ ಮಾಡಿಕೊಳ್ಳಲು ಹೆಲ್ಪ ಮಾಡಿದಳು. ಇದು ನಮ್ಮೆಲ್ಲ ಕ್ಲೋಜ ಫ್ರೆಂಡ್ಸಗಳಿಗೆ ಗೊತ್ತಾಗಿ ಅವರು ಕೂಡ ಕೇಳದೇನೆ ನಮಗೆ ಹೆಲ್ಪ ಮಾಡಿದರು. ಡಾ. ಪ್ರಿಯಾಂಕಾ 5 ಲಕ್ಷ ಕೊಟ್ಟಳು, ಅಂಜನಾ 2 ಲಕ್ಷ ಹಣ ಕೊಟ್ಟಳು, ಅದೇ ರೀತಿ ಸೌರಭ, ಮನಾಲಿ, ರಿಷಭ, ಸಾಕೇತ, ಕವಿತಾ, ಸುಜಾತಾ ಎಲ್ಲ ಫ್ರೆಂಡ್ಸ ತಲಾ 1 ಲಕ್ಷ ಹಣವನ್ನು ಕೊಟ್ಟರು. ಇನಕಮಯಿಲ್ಲದಿದ್ದರೂ ಲಾಸನಲ್ಲೇ ನಾವು ನಮ್ಮ ಎಲ್ಲ ವರ್ಕರ್ಸಗಳಿಗೆ ಡಬಲ್ ಸ್ಯಾಲರಿ ಕೊಟ್ಟೆವು, ಪೂರ್ತಿ ಆಫೀಸ ಬಾಡಿಗೆ ಕಟ್ಟಿದೆವು, ಕಂಪನಿ ಕಂಪ್ಲಾಯನ್ಸಗಳನ್ನು ಕಂಪ್ಲೀಟ ಮಾಡಿ ಬೆಸ್ಟ ಕಂಪನಿಯ ಸ್ಥಾನಮಾನವನ್ನು ಉಳಿಸಿಕೊಂಡೆವು. ಈಗ ನನಗೆ ಬೆಸ್ಟ ಫ್ರೆಂಡ್ಸಗಳ ಇಂಪಾರಟನ್ಸ ಗೊತ್ತಾಯಿತು. ನನ್ನೆಲ್ಲ ಗೆಳೆಯರು ನನ್ನನ್ನು ದೊಡ್ಡ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ನಾನು ಎದೆಸೆಟೆಸಿ ತಲೆಯೆತ್ತಿಕೊಂಡು ಮೆರೆದಾಡುವಂತೆ ಮಾಡಿದರು.

ಈಗ ನಮ್ಮ ಕಂಪನಿ ಬಿಜನೆಸ ಸ್ಟಾರ್ಟಪ್ಸ ಎಲ್ಲವೂ ಸೇಫಾಗಿತ್ತು. ನಾವು ನಮ್ಮ ಎಲ್ಲ ಫ್ರೆಂಡ್ಸಗಳೊಂದಿಗೆ ಮುಂದಿನ ಬಿಜನೆಸ ಪ್ಲ್ಯಾನಗಳ ಬಗ್ಗೆ ಡಿಸ್ಕಸ ಮಾಡುತ್ತಾ ಹಾಯಾಗಿದ್ದೆವು. ನಮಗೆ ಹೊಸ ಸ್ಕೀಲ್ಸ ಕಲಿಯಲು ಮತ್ತೆ ಆಟವಾಡಲು ಸಿಕ್ಕಾಪಟ್ಟೆ ಟೈಮ ಸಿಕ್ಕಿತು. ಆದರೆ ಸಡನ್ನಾಗಿ ನನ್ನೆಲ್ಲ ಹಳೇ ನಕಲಿ ಗೆಳೆಯರು ಅಂದರೆ ಕ್ಲಾಸಮೇಟ್ಸಗಳು ಕಾಲ ಮಾಡಿ ಮೆಸೆಜ ಮಾಡಿ ಇದ್ದಕ್ಕಿದ್ದಂತೆ ಟಚ್ಚಲ್ಲಿ ಬಂದರು. ನಾನು ಡಿಗ್ರಿ ಮುಗಿಸಿದ ತಕ್ಷಣವೇ ಬಿಜನೆಸ ಸ್ಟಾರ್ಟ ಮಾಡಿದಾಗ ನನಗೆ ಮೋಸ ಮಾಡಿ ನನ್ನಿಂದ ಕ್ಯಾಂಟ್ಯಾಕ್ಟ ಕಟ ಮಾಡಿಕೊಂಡು ಮಾಯವಾದವರು ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರು. ಈ ಫೇಕ್ ಫ್ರೆಂಡ್ಸಗಳ ಜೊತೆಗೆ ನಾನೆಲ್ಲಿ ಮತ್ತೆ ಸೇರಿ ಲಾಸ ಮಾಡಿಕೊಳ್ತಿನೋ ಅಂತಾ ಭವಾನಿ ಅಕ್ಕಾ, ಆಕಾಂಕ್ಷಾ ಅಕ್ಕಾ ಇಬ್ಬರೂ ಸ್ಟ್ರೀಕ್ಟ ವಾರ್ನಿಂಗ ಮಾಡಿದರು. "ನಮ್ಮ ಜೊತೆಗೆ ನಮ್ಮ ನಿಜವಾದ ಫ್ರೆಂಡ್ಸ ಇದಾರೆ, ಗುರುಗಳಿದಾರೆ, ದೇವರಿದ್ದಾನೆ ಅಷ್ಟೇ ಸಾಕು, ನೀ ಮತ್ತೆ ಡಮ್ಮಿ ಫ್ರೆಂಡ್ಸಗಳ ಜೊತೆಗೆ ಕ್ಲೋಜ ಆಗಬೇಡ, ಅವರಿಂದ ಮೊದಲಾದ ತೊಂದರೆಗಳೆ ಸಾಕು" ಎಂದರು. ಆದರೆ ನನ್ನ ಹಳೇ ಫೇಕ ಗೆಳೆಯರು ತುಂಬಾನೇ ಒಳ್ಳೆ ಮಾತಾಡಿ ಕ್ಲೋಜ ಆಗಲು ಟ್ರಾಯ ಮಾಡಿದರು.
ಆಗ ರಾಣಿ ನನಗೆ ಇವರನ್ನು ಟೆಸ್ಟ ಮಾಡಲು ಒಂದೊಳ್ಳೆ ಐಡಿಯಾ ಕೊಟ್ಟಳು. ಅವಳು ಕೊಟ್ಟ ಐಡಿಯಾದಂತೆ ನಮಗೀಗ ಹಣದ ಅವಶ್ಯಕತೆ ಇಲ್ಲದಿದ್ದರೂ ನಾನು ಈ ಡಮ್ಮಿ ಗೆಳೆಯರಿಗೆ "ಫ್ರೆಂಡ್ಸ ನಿಮಗೆ ಗೊತ್ತೇ ಇದೆಯಲ್ಲ ಲಾಕಡೌನ ಆಗಿದೆ, ನಮ ಬಿಜನೆಸ ನಿಂತಿದೆ, ಸ್ವಲ್ಪ ಹಣ ಸಹಾಯ ಮಾಡಿ, ತುಂಬಾ ಏನ ಬೇಡ ಜಸ್ಟ ಒಬ್ಬೊಬ್ರು 500 ರೂ ಕೊಡಿ ಸಾಕು" ಎಂದೆ. ಆಗ ಒಬ್ಬೊಬ್ಬರು ಸೈಲೆಂಟಾಗಿ ದೂರಾಗಲು ಸ್ಟಾರ್ಟ ಮಾಡಿ ಅವರ ಯೋಗ್ಯತೆ ಪ್ರೂ ಮಾಡಿದರು. ನಾನು ಹೇಳಿದನ್ನು ನಿಜವೆಂದು ತಿಳಿದು ತಮ್ಮ ಕಾಲೇಜ ವಾಟ್ಸಾಪ ಗ್ರೂಪಗಳಲ್ಲಿ ಇದನ್ನ ಶೇರ ಮಾಡಿ ನನ್ನನ್ನು ಕಿಂಡಲ ಮಾಡಿದರು. ಅದೇ ಸರಿಯಾದ ಸಮಯ ಅಂತಾ ನಾನು ನನ್ನ ಯುಟ್ಯೂಬ ಹಾಗೂ ಫೇಸ್‌ಬುಕ್ ಫಾಲೋವರ್ಸಗಳಿಗೆ, ವೆಟಸೈಟ ಓದುಗರಿಗೆ ಜಸ್ಟ 1 ರೂಪಾಯಿ ಡೊನೆಟ ಮಾಡಲು ಕೇಳಿಕೊಂಡೆ. ಆದರೆ ಎಲ್ಲರೂ ನನ್ನ ಕಿಂಡಲ ಮಾಡಿದರು. ಒಬ್ರು ಒಂದ ರೂಪಾಯಿನೂ ಡೊನೆಟ ಮಾಡಲಿಲ್ಲ.
ಒಂದು ವಾರದಲ್ಲಿ ನನ್ನ ಎಲ್ಲ ಟೀಚರ್ಸಗಳು, ಕ್ಲಾಸಮೇಟ್ಸಗಳು, ಹುಡುಗರು, ಹುಡುಗಿಯರು ಕಾಲ ಮಾಡಿ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಕಿಂಡಲ ಮಾಡಿದರು. ನಾನು ಎಲ್ಲರನ್ನೂ ಬ್ಲಾಕ್ ಮಾಡಿ ಸುಮ್ಮನಾದೆ. ನನಗೀಗ ನಮ್ಮಕ್ಕಂದಿರು ಹೇಳಿದ್ದು 1000% ಸರಿಯಿದೆ ಅಂತಾ ಖಾತ್ರಿಯಾಯಿತು. ಅಷ್ಟರಲ್ಲಿ ಇದು ನಮ ಗುರುಗಳಿಗೂ ಕೂಡ ಗೊತ್ತಾಯಿತು. ಆಗವರು "ರಾಜಾ ಯಾರು ನಿನ್ನಂತೆ ತಮ್ಮನ್ನು ತಾವು ಅಡವಿಟ್ಟು ಸಹಾಯ ಮಾಡಲ್ಲ. ನೀನು ಬಹಳಷ್ಟು ಒಳ್ಳೆಯವನಾದರೆ ಜನ ಮಿಸಯುಜ ಮಾಡಿಕೊಳ್ತಾರೆ. ನಿನ್ನ ಹಳೇ ಕ್ಲಾಸಮೇಟ್ಸಗಳು ನಿನ್ನಿಂದ ಎಷ್ಟು ಸಾಧ್ಯಾನೋ ಅಷ್ಟು ಮೊದಲೇ ದೋಚಿಕೊಂಡಿದ್ದಾರೆ, ಈಗ ಮತ್ತೆ ದೊಸ್ತಿ ನೆಪದಲ್ಲಿ ಕ್ಲೋಜಾಗಿ ದೋಚಲು ಬಂದಿದ್ರು. ಆದರೆ ನಿನ್ನತ್ರ ಏನಿಲ್ಲ ಅಂದಾಗ ಓಡಿ ಹೋದ್ರು. ಈ ಜಗತ್ತು ಕೂಡ ಅದೇ ರೀತಿ ಇದೆ. ಸಕ್ಕರೆ ಬಿದ್ದಲ್ಲಿ ಇರುವೆಗಳು ಮುತ್ತುವಂತೆ ಹಣ ಇದ್ದಲ್ಲಿ ಸ್ನೇಹಿತರು ಸಂಬಂಧಿಗಳು ಹುಟ್ಟಿಕೊಳ್ಳುತ್ತಾರೆ. ಅದಕ್ಕೆ ನೀನು ಬದಲಾಗು. ಎಲ್ಲರಿಗೆ ನಿನ್ನ ನಾಲೇಜ ದಾನ ಮಾಡು, ಆದರೆ ಯಾರಿಗೂ ಹಣ ದಾನ ಮಾಡಬೇಡ. ನೊಂದವರಿಗೆ ಸಮಾಧಾನ ಹೇಳು, ಯುವಕರನ್ನು ಮೋಟಿವೇಟ ಮಾಡು. ಆದರೆ ಯಾರಿಗೂ ಹಣ ದಾನ ಮಾಡಿ ನೀನು ಬರಿಗೈ ಫಕೀರನಾಗಬೇಡ. ದಾನ ತೆಗೆದುಕೊಂಡವರು ಹಾಳಾಗುತ್ತಾರೆ. ಹಣದ ಬದಲಾಗಿ ನಾಲೇಜ ದಾನ ಮಾಡು ಸಾಕು. ಕೋರ್ಸಲ್ಲಿ ಹಣ ತೆಗೆದುಕೊಂಡರೂ ಫ್ರಿಯಾಗಿ ದಿನಾ ವಿಡಿಯೋ ಮಾಡು. ಬರೀ ನಿನ್ನ ಬಿಜನೆಸ ಮೇಲಷ್ಟೆ ಫೋಕಸ ಮಾಡು. ಮುಂದೆ ನಮ್ಮ ಆಶ್ರಮದ ಜವಾಬ್ದಾರಿಯ ಜೊತೆಗೆ ಬಹಳಷ್ಟು ಆಶ್ರಮದ ಜವಾಬ್ದಾರಿಗಳು ನಿನ್ನ ಮೇಲೆ ಬೀಳುತ್ತವೆ. ಅದಕ್ಕಾಗಿ ನಿನ್ನ ಹಣವನ್ನು ಸೇಫಾಗಿಟ್ಟುಕೊ. ಇಲ್ಲ ಎಲ್ಲ ಹಣವನ್ನು ರಾಣಿಯತ್ರ ಕೊಡು ಅವಳು ಸೇಫಾಗಿಡುತ್ತಾಳೆ. ನಿನಗೆ ಕಷ್ಟ ಬಂದಾಗ ರಾಣಿ ಮಾತ್ರ ಬರುತ್ತಾಳೆ, ಫೇಸ್‌ಬುಕ್ ಯುಟ್ಯೂಬ ಫಾಲೋವರ್ಸ ಬರಲ್ಲ, ನೀನಾಯ್ತು ನಿನ್ನ ಮನೆ, ನಿನ್ನ ನಿಜವಾದ ಫ್ರೆಂಡ್ಸ ಅಷ್ಟೇ ಇದ್ದು ಬಿಡು, ನಿನಗೆ ಗ್ರೇಟ ಫ್ಯುಚರಿದೆ" ಅಂತೇಳಿ ಗೈಡ ಮಾಡಿದರು.

ಮುಂದೆ ಜೂನಗೆ ಲಾಕಡೌನ ಮುಗಿಯಿತು. ಮನೆಯಲ್ಲಿ ಕುಳಿತು ಸಿಕ್ಕಾಪಟ್ಟೆ ಬೋರಾಗಿತ್ತು. ಸೋ ನಾವೆಲ್ಲರೂ ಫ್ರೆಂಡ್ಸ ಗ್ಯಾಂಗ ಸೇರಿ ಮಹಾಬಳೇಶ್ವರಕ್ಕೆ ಹೋದೆವು. ಒಂದು ವಾರ ಟೂರ ಮಾಡಿ ಮತ್ತೆ ಮುಂಬಯಿಗೆ ಬಂದು ಬಿಜನೆಸ ರಿಸ್ಟಾರ್ಟ ಮಾಡಿದೆವು. ಹಗಲು ರಾತ್ರಿ ಕತ್ತೆ ತರಹ ಕೆಲಸ ಮಾಡಿ ಮತ್ತೆ ನಮ್ಮ ಬಿಜನೆಸಗಳನ್ನು ಸಕ್ಸೆಸನ ಟ್ರ್ಯಾಕಿಗೆ ತೆಗೆದುಕೊಂಡು ಬಂದೆವು. ನಮ್ಮ ಟ್ರೂ ಫ್ರೆಂಡ್ಸಗಳೆಲ್ಲ ನಮ್ಮ ಬಿಜನೆಸ ಜೊತೆಗೆ ಪರ್ಮನೆಂಟಾಗಿ ಸೇರಿಕೊಂಡರು. ನಾವು ಅವರು ಕೊಟ್ಟ ಹಣವನ್ನು ವಾಪಸ ಕೊಡಲು ಹೋದಾಗ ಒಬ್ಬರು ಕೂಡ ತೆಗೆದುಕೊಳ್ಳಲಿಲ್ಲ. ಎಲ್ಲರೂ ದೋಸ್ತಿಯೇ ಆಸ್ತಿ ಅಂತಾ ಪ್ರೂ ಮಾಡಿದರು. ಇನ್ನೂ ರಾಣಿ ನನಗೆ ಚಿಕ್ಕ ವಯಸ್ಸಿನಿಂದ ಲೆಕ್ಕ ಇಡದೇನೆ ಏನು ಕೇಳದೇನೆ ಸಾಕಷ್ಟು ಹೆಲ್ಪ ಮಾಡಿದ್ದಾಳೆ. ಅವಳು ನನಗೆ ಕೊಟ್ಟ ಏನನ್ನೂ ಸಹ ವಾಪಸ್ಸು ತೆಗೆದುಕೊಂಡಿಲ್ಲ. ಆಕೆಗೆ ಹಣ ಕೊಡಲು ಹೋದರೆ ಹೊಡಿತಾಳೆ ಅಂತಾ ಗೊತ್ತಿತ್ತು. ಆಕೆ ನನಗೆ ಗುರು, ಗೆಳತಿ, ಪ್ರೇಯಸಿ, ಮನದೊಡತಿ, ಮನೆಯೊಡತಿ ಎಲ್ಲವೂ ಅವಳೇ. ಸೋ ನಮ್ಮಿಬ್ಬರ ಮಧ್ಯೆ ನಂದು ನಿಂದು ಏನಿಲ್ಲ, ಎಲ್ಲ ನಮ್ಮದು.
ಈಗ ಮತ್ತೆ ಲಾಕಡೌನಾದರೂ ನಮ್ಮ ಎಲ್ಲ ಕಂಪನಿ, ಸ್ಟಾರ್ಟಪ್ಸ, ಬಿಜನೆಸಗಳು ಸಕ್ಸೆಸಫುಲ್ಲಾಗಿ ಸಾಗಿವೆ. ಈಗ ನಮ್ಮ ಸ್ವಂತ ಜಾಗದಲ್ಲೇ ನಮ್ಮ ಆಫೀಸ ಬಿಲ್ಡಿಂಗ್ ಕನಸ್ಟ್ರಕ್ಷನ ಶುರುವಾಗಿದೆ. ಈಗ ಮತ್ತೆ ನಮ್ಮ ಸಕ್ಸೆಸನ್ನು ನೋಡಿ ನನ್ನನ್ನು ಕಿಂಡಲ ಮಾಡಿದ ನಕಲಿ ಗೆಳೆಯರು ಹತ್ತಿರ ಬರಲು ಟ್ರಾಯ ಮಾಡುತ್ತಿದ್ದಾರೆ. ಆದರೆ ನಾನೀಗ ಮ್ಯಾಚುರ ಆಗಿರುವೆ. ಜೊತೆಗೆ ಸಂಪೂರ್ಣ ಸ್ವಾರ್ಥಿಯಾಗಿರುವೆ. ಏಕೆಂದರೆ ಫೇಕ ಜನರ ಮೇಲೆ ಹಣ ವೇಸ್ಟ ಮಾಡಲು ನನ್ನತ್ರ ಟೈಮಿಲ್ಲ. ಆಫೀಸ ಬಿಲ್ಡಿಂಗ್ ಹಾಗೂ ಸ್ವಂತ ಮನೆ ಕನಸ್ಟ್ರಕ್ಷನ್ಸ ಮುಗಿಸಬೇಕು, ಅಕ್ಕಂದಿರ ಮದುವೆ ಮಾಡಿಸಬೇಕು, ಎಲ್ಲಾ ಫ್ರೆಂಡ್ಸಗಳಿಗೆ ಮದುವೆ ಮಾಡಿಸಬೇಕು, ಆನಂತರ ನಾನು ರಾಣಿ ಮದುವೆಯಾಗಬೇಕು. ಸಾಕಷ್ಟು ಜವಾಬ್ದಾರಿಗಳಿವೆ. ಜೊತೆಗೆ ಕಷ್ಟಕಾಲದಲ್ಲಿ ನನಗೆ ಸಹಾಯ ಮಾಡಿದ ನನ್ನೆಲ್ಲ ಕುಚುಕು ಗೆಳೆಯ ಗೆಳತಿಯರಿಗೆ, ಅಕ್ಕಂದಿರಿಗೆ ಏನಾದರೂ ಒಂದು ಸ್ಪೆಷಲ್ ಗಿಫ್ಟ ಕೊಡಬೇಕಾಗಿದೆ. ನನ್ನ ಬಿಜನೆಸ ಕೋಚಗಳಿಗೆ ಗಿಫ್ಟ ಕೊಡಬೇಕಾಗಿದೆ. ನನಗೆ ಗೈಡ ಮಾಡಿ ನನ್ನನ್ನು ಬೆಳೆಸಿದ ನಮ್ಮ ಗುರುಗಳಿಗೆ ದೊಡ್ಡ ಗಿಫ್ಟ ಕೊಡಬೇಕಾಗಿದೆ. ನಮ್ಮ ಕಂಪನಿ ಟೀಮ ಮೆಂಬರ್ಸ ಹಾಗೂ ಎಂಪ್ಲಾಯಿಗಳಿಗೆ ಗಿಫ್ಟ ಕೊಡಬೇಕಾಗಿದೆ. ಕೊನೆಗೆ ನನ್ನ ಜೀವ ಹಾಗೂ ಜೀವನ ಎಲ್ಲಾನೂ ಆದ ರಾಣಿಗೆ ಏನಾದರೂ ಸ್ಪೆಷಲ್ ಗಿಫ್ಟ ಕೊಡಬೇಕಾಗಿದೆ. ಅವಳಿಗೆ ಹಣ, ಒಡವೆ, ಗಿಫ್ಟಗಳ ಹಂಬಲವಿಲ್ಲ. ಎಲ್ಲವೂ ಅವಳತ್ತಿರ ಸಾಕಷ್ಟಿವೆ. ಅವಳಿಗೆ ನಿಸರ್ಗದ ಮಡಿಲಲ್ಲಿ ಓಡಾಡೋದು, ಕ್ಯಾಮರಾ ಹಿಡಿದುಕೊಂಡು ಕಾಡು ಸುತ್ತೋದು, ಟ್ರೆಕ್ಕಿಂಗ್ ಮಾಡುವುದು, ಕಾರು ಓಡಿಸೋದು, ಮಳೆಯಲ್ಲಿ ನೆನಿಯೋದು, ರೋಡ ಸೈಡ ಫುಡ್ ತಿನ್ನೊದು ಇಂಥದ್ದರಲ್ಲೇ ಅವಳ ಖುಷಿಯಿದೆ. ಅದಕ್ಕೆ ಅವಳ ಜೊತೆಗೆ ನಮ್ಮೆಲ್ಲ ಫ್ರೆಂಡ್ಸ ಗ್ಯಾಂಗ ಜೊತೆಗೆ ಲಾಕಡೌನ ಓಪನಾಗುತ್ತಿದ್ದಂತೇಯೆ ಯಾವುದಾದರೂ ಒಂದು ಬೆಸ್ಟ ಪ್ಲೇಸಗೆ ಟೂರಗೆ ಹೋಗೋದಿದೆ. ಅದಕ್ಕೆ ಈ ಫಸ್ಟ ಸ್ಯಾಲರಿಯನ್ನು ಖರ್ಚು ಮಾಡಬೇಕೆಂದಿರುವೆ.
ಫ್ರೆಂಡ್ಸ ನೀವು ಬಿಜನೆಸ ಮಾಡೋವಾಗ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಆ ಟೈಮಲ್ಲಿ ನಿಮ್ಮವರನ್ನು ಜೊತೆಗಿಟ್ಟುಕೊಂಡು ಧೈರ್ಯವಾಗಿ ಮುಂದೆ ಸಾಗಿ. ನಕಲಿ ಗೆಳೆಯರನ್ನು ಯಾವುದೇ ಕಾರಣಕ್ಕೂ ಮತ್ತೆ ನಿಮ್ಮ ಲೈಫಲ್ಲಿ ಬಿಟ್ಟುಕೊಳ್ಳಬೇಡಿ, ಬಿಟ್ಟುಕೊಂಡರೆ ನಿಮ್ಮ ಸಾಧನೆಯ ಪಯಣ ಸಾವಿನ ಪಯಣವಾಗುತ್ತದೆ. ನಿಮ್ಮೆಲ್ಲರಿಗೂ ಆಲ ದ ಬೆಸ್ಟ್. ಶುಭವಾಗಲಿ....
