ಉತ್ತರವಿಲ್ಲದ ಪ್ರಶ್ನೆಗಳು - Unanswered Questions in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಉತ್ತರವಿಲ್ಲದ ಪ್ರಶ್ನೆಗಳು - Unanswered Questions in Kannada

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

             ಒಂಟಿತನ ಎನ್ನುವುದೊಂದು ಭೀಕರ ಶಾಪ. ಮನುಷ್ಯ ಒಂಟಿಯಾಗಿದ್ದಾಗ ಅವನ ಮನಸ್ಸು ಮಸಣವಾಗುತ್ತದೆ. ಪರಿಶುದ್ಧ ಏಕಾಂತವೊಂದು ಸ್ವರ್ಗ. ಆದರೆ ಒರಟಾದ ಒಂಟಿತನ ನರಕ. ಮನುಷ್ಯ ಒಂಟಿಯಾಗಿದ್ದಾಗ ಅವನ ಮನಸ್ಸಲ್ಲಿ ನೂರೆಂಟು ಉತ್ತರವಿಲ್ಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವು ಇಲ್ಲಿವೆ ;

೧) ತಮ್ಮ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಎಲ್ಲರಿಗೂ ಪರರ ಹೆಂಡತಿ ಪರಮ ಸುಂದರಿಯಾಗೇ ಕಾಣುತ್ತಾಳೆ ಯಾಕೆ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೨) ನಾವು ಅತಿಯಾಗಿ ಪ್ರೀತಿಸಿದ ವ್ಯಕ್ತಿಗಳೇ ನಮಗೆ ಹೆಚ್ಚಿನ ನೋವನ್ನು ನೀಡುತ್ತಾರಲ್ಲ ಯಾಕೆ?
ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೩) ಮೈ ಮಾರಿಕೊಳ್ಳೋ ಹುಡುಗಿಯರಿಗೆ ಇರುವ ನಿಯತ್ತು ಮನಸ್ಸು ಮಾರಿಕೊಳ್ಳೋ ಹುಡುಗಿಯರಿಗೆ ಯಾಕಿರಲ್ಲ? ಗುಡಿಸಿನಲ್ಲಿರುವ ಬಡವನ ಮನಸ್ಸಲ್ಲಿರುವ ಪ್ರೀತಿ ಅರಮನೆಯಲ್ಲಿರುವ ಶ್ರೀಮಂತನ ಮನಸ್ಸಲ್ಲಿ ಇರುವುದಿಲ್ಲ ಯಾಕೆ?
ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೪) ಮುಗಿದ ಕಥೆಯನ್ನು ಮತ್ತೆ ಕೆದಕಿ ಕೇಳಲು ಎಲ್ಲರೂ ತುದಿಗಾಲ ಮೇಲೆ ನಿಂತಿರುತ್ತಾರಲ್ಲ ಯಾಕೆ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೫) ಬುದ್ಧಿಯಿಲ್ಲದವರು ಬೇರೆಯವರಿಗೆ ಬೇಡವೆಂದರೂ ಬುದ್ಧಿವಾದಗಳನ್ನು ಹೇಳಿ ತಲೆ ತಿನ್ನುತ್ತಲೇ ಇರುತ್ತಾರಲ್ಲ ಯಾಕೆ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೬) ಕಷ್ಟ ಅಂತಾ ಮಧ್ಯ ರಾತ್ರಿ ಕರೆ ಮಾಡಿದಾಗ ನಾನು ನನ್ನ ಶತ್ರುಗಳಿಗೂ ಸಹಾಯ ಮಾಡಿರುವೆ. ಆದರೆ ನಾನು ಕಷ್ಟದಲ್ಲಿರುವಾಗ ನನ್ನ ಮಿತ್ರರೇ ನನಗೆ ಸಹಾಯ ಮಾಡಲಿಲ್ಲ. ಗುಣ ಯಾರಿಗೂ ಬೇಕಿಲ್ಲ. ಎಲ್ಲರಿಗೂ ಹಣ ಮಾತ್ರ ಬೇಕಲ್ವಾ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೭) ಎದುರಿಗೆ ಬಂದರೂ ಮಾತಾಡವಳು ಮನಸ್ಸಲ್ಲೇಕೆ ಬಂದು ಮನೆ ಕಟ್ಟಿಹಳು? ಕೈಗೆ ಸಿಗದವಳು, ಕಣ್ಣಿಗೆ ಕಾಣಿಸದವಳು ಕನಸ್ಸಲ್ಲೇಕೆ ಕಾಡುತಿಹಳು? ಅವಳು ವಾಸ್ತವಕ್ಕಿಂತ ಕನಸ್ಸಲ್ಲೇ ಯಾಕೆ ಅಷ್ಟೊಂದು ಮುದ್ದಾಗಿ ಕಾಣಿಸುತ್ತಾಳೆ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೮) ಸಿನಿಮಾದಲ್ಲಿ ತೋರಿಸುವ ಪ್ರೇಯಸಿ ನಿಜ ಜೀವನದಲ್ಲಿ ಯಾಕೆ ಸಿಗಲ್ಲ? ಫಿಲ್ಮನಲ್ಲಿ ಚಪ್ಪಾಳೆ ತಟ್ಟಿಸಿಕೊಳ್ಳುವ ಫ್ರೆಂಡ್ ರಿಯಲ್ ಲೈಫಲ್ಲಿ ಯಾಕೆ ಯಾವ ತ್ಯಾಗಾನು ಮಾಡಲ್ಲ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೯) ಭಾರತದ ಕೆಲವು ಜನ ದೇಶಕ್ಕೆ ತೆರಿಗೆ ಕಟ್ಟದೆ ತಮ್ಮ ದೇಶಕ್ಕೇನೆ ವಂಚಿಸುತ್ತಾರಲ್ಲ? ನಮ್ಮ ದೇಶದ ನಾಚಿಕೆಗೇಡು ರಾಜಕಾರಣಿಗಳು ತಮ್ಮ ದೇಶವನ್ನೇ ಲೂಟಿ ಮಾಡುತ್ತಾರಲ್ಲ? ಬೇರೆ ದೇಶಗಳನ್ನು ಲೂಟಿ ಮಾಡುವಷ್ಟು ಸಾಮರ್ಥ್ಯ ಅವರಲ್ಲಿ ಇಲ್ಲವಾ? ಅಥವಾ ಅವರನ್ನು ತಲೆ ಒಡೆದು ಸಾಯಿಸುವಷ್ಟು ಸಾಮರ್ಥ್ಯ ನಮ್ಮಲ್ಲಿ ಇಲ್ಲವಾ?

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

೧೦) ಪ್ರತಿದಿನ ರಾತ್ರಿ ಮಲಗುವಾಗ "ನಾಳೆ ಬದಲಾಗ್ತೀನಿ, ನಾಳೆಯಿಂದ ಏನಾದರೂ ಹೊಸದನ್ನು ಮಾಡ್ತೀನಿ, ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸತ್ತೀನಿ..." ಅನ್ನೋ ಮನಸ್ಸು ಮುಂಜಾನೆಯಾದಾಗ ಮಂಕಾಗುತ್ತದೆಯಲ್ಲ ಯಾಕೆ? 

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

                       ಉತ್ತರವಿಲ್ಲದ ಪ್ರಶ್ನೆಗಳು ಇನ್ನು ಬಹಳಷ್ಟಿವೆ. ಆದರೆ ಎಲ್ಲವನ್ನೂ ಹೊರ ಹಾಕಿದರೆ ಅನಾವಶ್ಯಕ ವಾದವಿವಾದಗಳು ಸೃಷ್ಟಿಯಾಗುತ್ತವೆ. ವಾದಗಳನ್ನು ಎದುರಿಸುವ ಸಾಮರ್ಥ್ಯ ನನ್ನಲ್ಲಿದೆ. ಆದರೆ ವಿವಾದಗಳನ್ನು ಎದುರಿಸುವಷ್ಟು ಸಾಮರ್ಥ್ಯ ನನಗಿನ್ನೂ ಬಂದಿಲ್ಲ. ಬಂದ ಮೇಲೆ ಮತ್ತೆ ಇವುಗಳ ಮೇಲೆ ಬರೆಯುವೆ. ಈ ಅಂಕಣ ನಿಮಗಿಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಉತ್ತರವಿಲ್ಲದ ಪ್ರಶ್ನೆಗಳನ್ನು ಕಮೆಂಟ್ ಮಾಡಿ.

ಉತ್ತರವಿಲ್ಲದ ಪ್ರಶ್ನೆಗಳು : Kannada Quotes

Blogger ನಿಂದ ಸಾಮರ್ಥ್ಯಹೊಂದಿದೆ.