
ಹಾಯ್ ಗೆಳೆಯರೇ, ಇವತ್ತಿನ ಸಂಡೇ ಸಾಯಿನ್ಸ ಅಂಕಣದಲ್ಲಿ "ಸ್ತನಗಳ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸ್ಪೆಷಲ್ ಹಾಗೂ ಶಾಕಿಂಗ ವಿಷಯಗಳ" ಬಗ್ಗೆ ತಿಳಿದುಕೊಳ್ಳೋಣಾ. ಈ ಅಂಕಣವನ್ನು ಬರೆಯಲು ನನಗೆ ಗೈಡ ಮಾಡಿದ ನನ್ನ ಬೆಸ್ಟ ಫ್ರೆಂಡ ಡಾ. ಪ್ರಿಯಾಂಕಾಗೆ ದೊಡ್ಡ ಥ್ಯಾಂಕ್ಸ & ಲಾಟ್ಸ ಆಫ್ ಲವ್. ಈ ಅಂಕಣವನ್ನು ಕೇವಲ ಎಜುಕೇಷನ್ & ಅವೇರನೆಸ ಉದ್ದೇಶಕ್ಕಾಗಿ ಬರೆಯಲಾಗಿದ್ದು ಸೋ ಇದನ್ನು ಅದೇ ಉದ್ದೇಶದಿಂದ ಓದಿ ಮತ್ತು ಎಲ್ಲೆಡೆಗೆ ಶೇರ್ ಮಾಡಿ.

ಸ್ತನಗಳು ಮಹಿಳೆಯರ ದೇಹದ ಪ್ರಮುಖ ಆಕರ್ಷಣೆಯಾಗಿವೆ ಎಂಬುದು ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ ಅವುಗಳ ಪಾತ್ರ ಬಹಳಷ್ಟು ಮಹತ್ವದಾಗಿದೆ. ಸ್ತನಗಳು ಹಾಲಿನ ಗ್ರಂಥಿಗಳಾಗಿವೆ. (Milk Glands) ಅವು ಕೇವಲ ಕೊಬ್ಬಿನಿಂದ ಮಾಡಲ್ಪಟ್ಟಿಲ್ಲ. ಸ್ತನಗಳು ಗ್ರಂಥಿಗಳ ಹಾಗೂ ನಾಳಗಳ ಸಂಕೀರ್ಣ ವ್ಯವಸ್ಥೆಯಾಗಿದ್ದು ಮೊಲೆತೊಟ್ಟುಗಳನ್ನು (Nipples) ಸಹ ಒಳಗೊಂಡಿವೆ. ಮತ್ತು ಪ್ರತಿ ಸ್ತನದ ಕೆಳಗೆ ಸ್ನಾಯು, ಹಾಗೇಯೆ ಪಕ್ಕೆಲುಬುಗಳಿಂದ ಬೇರ್ಪಡಿಸುವ ನಾರಿನ ಅಂಗಾಂಶವಿರುತ್ತದೆ. ಅದಾಗ್ಯೂ ಒಂದು ನಿರ್ದಿಷ್ಟ ವಯಸ್ಸಿನ ನಂತರ ಸ್ತನಗಳು ಕೊಬ್ಬಾಗಿ ಬದಲಾಗುತ್ತವೆ. ಸ್ತನಗಳ ಬಗ್ಗೆ ನಿಮಗೆ ಗೊತ್ತಿರದ 15 ಅಚ್ಚರಿಯ ವಿಷಯಗಳು ಇಂತಿವೆ ;

1) ಎರಡು ಸ್ತನಗಳ ಗಾತ್ರ ಒಂದೇಯಾಗಿರಲ್ಲ : Both Breasts are not Identical
ಎರಡೂ ಸ್ತನಗಳ ಗಾತ್ರ ಸಮವಾಗಿರುವುದಿಲ್ಲ. ಒಂದು ಸ್ತನವು ಮತ್ತೊಂದು ಸ್ತನಕ್ಕಿಂತ ಒನ ಫಿಫ್ಥ ದೊಡ್ಡದಾಗಿರುತ್ತದೆ. ಸ್ತನಗಳ ಗಾತ್ರ ನಿಮಗೆ ನಿಮ್ಮ ಪೋಷಕರಿಂದ ಅನುವಂಶಿಕವಾಗಿ ಕೂಡ ಸಿಗಬಹುದು. ಜನರಲ್ಲಾಗಿ ಮಹಿಳೆಯರ ಲೆಫ್ಟ ಬೂಬ ರೈಟ ಬೂಬಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಎರಡು ಸ್ತನಗಳು ಸಮವಾಗಿರುವುದಿಲ್ಲ. ಕೆಲವೇ ಕೆಲವು ಲಕ್ಕಿ ಮಹಿಳೆಯರು ಮಾತ್ರ ಈಕ್ವಲ ಗಾತ್ರದ ಸ್ತನಗಳನ್ನು ಹೊಂದಿರುತ್ತಾರೆ. ಸ್ತನಗಳ ಗಾತ್ರ ಈಕ್ವಲಾಗಿಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಇದು ತುಂಬಾನೇ ನಾರ್ಮಲ ಸಂಗತಿಯಾಗಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

2) ಸ್ತನಗಳ ಗಾತ್ರ ಆಕಾರ ಸ್ಥಾನ ಪದೇಪದೇ ಬದಲಾಗುತ್ತಿರುತ್ತದೆ : Your Breasts constantly keep changing their Size, Shape and Position
ಸ್ತನಗಳ ಗಾತ್ರ ಆಕಾರ ಸ್ಥಾನ ಮಹಿಳೆಯಿಂದ ಮಹಿಳೆಗೆ ವ್ಯತ್ಯಾಸವಾಗುತ್ತದೆ. ಸ್ತನಗಳ ಗಾತ್ರ ಆಕಾರ ಸ್ಥಾನ ಪದೇಪದೇ ಬದಲಾಗುತ್ತಿರುತ್ತದೆ. ನಿಮ್ಮ ತೂಕ ಹೆಚ್ಚು ಕಡಿಮೆಯಾದಾಗ ನಿಮ್ಮ ಸ್ತನಗಳ ಗಾತ್ರ ಕೂಡ ಹೆಚ್ಚು ಕಡಿಮೆಯಾಗುತ್ತದೆ. ನಿಮ್ಮ ತೂಕ ಹೆಚ್ಚಾದಾಗ ನಿಮ್ಮ ಸ್ತನಗಳ ಗಾತ್ರ ಹೆಚ್ಚಾಗುತ್ತದೆ. ನೀವು ತೂಕ ಇಳಿಸಿಕೊಂಡರೆ ನಿಮ್ಮ ಸ್ತನಗಳ ಗಾತ್ರ ಕುಗ್ಗುತ್ತದೆ.

ಗರ್ಭಧಾರಣೆ, ಸ್ತನಪಾನ, ಮೆನೊಪಾಸ, ಜನನ ನಿಯಂತ್ರಣ ಮಾತ್ರೆಗಳ ಸೇವನೆ ಹಾಗೂ ಸೆ*ಕ್ಸನಿಂದ ಸ್ತನಗಳು ಊದಿಕೊಳ್ಳಬಹುದು. ಋತುಚಕ್ರದ ಸಮಯದಲ್ಲಿ ಸ್ತನಗಳು ಪೂರ್ತಿ ಕಪ್ ಗಾತ್ರದಷ್ಟು ಬೆಳೆಯಬಹುದು. ಆದರೆ ಪೀರಿಯಡ ಅವಧಿ ಮುಗಿದ ಕೆಲವು ದಿನಗಳ ನಂತರ ಹಾರ್ಮೊನಗಳ ಮಟ್ಟ ಇಳಿಯುತ್ತದೆ. ಆಗ ಸ್ತನಗಳು ಮತ್ತೆ ನಾರ್ಮಲ ಗಾತ್ರಕ್ಕೆ ಬರುತ್ತವೆ.

3) ವಯಸ್ಸಾದಂತೆ ಸ್ತನಗಳು ಕುಗ್ಗುತ್ತವೆ ಮತ್ತು ಸ್ಥಾನ ಬದಲಾಯಿಸುತ್ತವೆ.
ನಿಮ್ಮ ಸ್ತನಗಳು ನಿಮಗೆ ವಯಸ್ಸಾದಂತೆ ಕುಗ್ಗುತ್ತವೆ ಮತ್ತು ಕುಸಿಯುತ್ತವೆ ಅಂದರೆ ಜೋತು ಬೀಳುತ್ತವೆ. ಸ್ತನಗಳು ಕುಗ್ಗಲು ಹಾಗೂ ಜೋತು ಬೀಳಲು ಗುರುತ್ವಾಕರ್ಷಣೆ, ಸ್ಮೋಕಿಂಗ ಹಾಗೂ ಮಲಗುವ ಸ್ಟೈಲ ಕೂಡ ಮುಖ್ಯ ಕಾರಣವಾಗುತ್ತವೆ. ನೀವು ಹೊಟ್ಟೆ ಮೇಲೆ ಮಲಗುತ್ತಿದ್ದರೆ ಅಂದರೆ ಡಬ್ಬು ಮಲಗುತ್ತಿದ್ದರೆ ನಿಮ್ಮ ಸ್ತನಗಳ ಆಕಾರ ಚೇಂಜ್ ಆಗುವ ಚಾನ್ಸಸ ತುಂಬಾನೆ ಅಧಿಕವಾಗಿರುತ್ತದೆ.

4) ಸ್ತನಗಳು ಸಹ ಚಲಿಸುತ್ತವೆ ;
ನೀವು ಓಡುವಾಗ, ಆಟವಾಡುವಾಗ, ಜಂಪ ಮಾಡಿದಾಗ ನಿಮ್ಮ ಸ್ತನಗಳು ಮೇಲಕ್ಕೆ ಕೆಳಕ್ಕೆ ಬದಿಗಳಿಗೆ ಎಂಟು ಕಡೆಗೆ ಎಂಟು ಇಂಚುಗಳ ತನಕ ಚಲಿಸುತ್ತವೆ.

5) ಮೂರನೇ ಮೊಲೆತೊಟ್ಟನ್ನು ಹೊಂದುವುದು ನಾರ್ಮಲಲ್ಲ :
ಕೆಲವೊಂದಿಷ್ಟು ಜನರಿಗೆ ಒಂದು ಎಕ್ಸಟ್ರಾ ಮೊಲೆತೊಟ್ಟು ಇರುತ್ತದೆ. ಎಕ್ಸಟ್ರಾ ಮೊಲೆತೊಟ್ಟನ್ನು ಅಂದರೆ ನಿಪ್ಪಲ್ಲನ್ನು ಹಾಗೂ ಹೆಚ್ಚುವರಿ ಸ್ತನ ಅಂಗಾಂಶವನ್ನು ಹೊಂದುವುದು ನಾರ್ಮಲಲ್ಲ. ಏಕೆಂದರೆ ಈ ಹೆಚ್ಚುವರಿ ಸ್ತನಗಳು ಮುಟ್ಟಿನ ಸಂದರ್ಭದಲ್ಲಿ ಹಾಲನ್ನು ಉತ್ಪಾದಿಸಬಹುದು ಮತ್ತು ಕಿರಿಕಿರಿ ಮಾಡಬಹುದು.

ಮೊಲೆತೊಟ್ಟುಗಳಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ ; ಅವೆಂದರೆ
1) Protruding Nipple (ಚಾಚಿಕೊಂಡಿರುವ ಮೊಲೆ ತೊಟ್ಟು)
2) Flat Nipple (ಚಪ್ಪಟೆ ಮೊಲೆತೊಟ್ಟು)
3) Puffy Nipple (ಉದಿಕೊಂಡಿರುವ / ತುಂಬಿಕೊಂಡಿರುವ ಮೊಲೆತೊಟ್ಟು)
4) Inverted Nipple (ತಲೆ ಕೆಳಗಾದ ಮೊಲೆತೊಟ್ಟು)
ಮತ್ತೆ ಇವೆಲ್ಲವೂ ನಾರ್ಮಲ್ಲಾಗಿವೆ. ಇವುಗಳ ಬಗ್ಗೆ ಕೊರಗುವ ಅವಶ್ಯಕತೆ ಇಲ್ಲ.

6) ಶಾಶ್ವತ ಸ್ತನಗಳನ್ನು ಹೊಂದಿರುವ ಏಕೈಕ ಸಸ್ತನಿಗಳು ನಾವಷ್ಟೇ !
ಮಹಿಳೆಯರು ಪ್ರೌಢಾವಸ್ಥೆಗೆ ತಲುಪುವ ಮುನ್ನವೇ ಸ್ತನಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಜೀವನದುದ್ದಕ್ಕೂ ಬೆಳೆಯುತ್ತಲೇ ಇರುತ್ತವೆ. ವಿಶೇಷವಾಗಿ ಗರ್ಭಧಾರಣೆ ಹಾಗೂ ಮುಟ್ಟಿನ ಸಮಯದಲ್ಲಿ ಅವು ದೊಡ್ಡದಾಗುತ್ತವೆ. ಬರೀ ಮನುಷ್ಯರಿಗಷ್ಟೇ ಶಾಶ್ವತ ಸ್ತನಗಳಿವೆ. ಬೇರೆ ಸಸ್ತನಿಗಳ ಸ್ತನಗಳು ಸ್ತನಪಾನ ಮಾಡುವಾಗ ಮಾತ್ರ ಬೆಳೆಯುತ್ತವೆ.

7) ಒಂದು ಸ್ತನದ ಸರಾಸರಿ ತೂಕವು ಒಂದರಿಂದ ಎರಡು ಪೌಂಡ ಇರುತ್ತದೆ.
ಒಂದು ಸ್ತನದ ಸರಾಸರಿ ತೂಕವು ಒಂದರಿಂದ ಎರಡು ಪೌಂಡ ಇರುತ್ತದೆ. ಇದು ಮಹಿಳೆಯಿಂದ ಮಹಿಳೆಗೆ ಬದಲಾದರೂ ಹೆಚ್ಚಿನ ಸ್ತನಗಳು ಇದೇ ತೂಕ ಹೊಂದಿರುತ್ತವೆ.

8) ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಎರಡನೇ ದೊಡ್ಡ ಮಾರಕ ಕ್ಯಾನ್ಸರ್ ಆಗಿದೆ.
ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಎರಡನೇ ದೊಡ್ಡ ಮಾರಕ ಕ್ಯಾನ್ಸರ್ ಆಗಿದೆ. ಲಂಗ ಕ್ಯಾನ್ಸರ್ ಮೊದಲನೇ ಮಾರಕವಾಗಿದೆ. ಸ್ತನ ಕ್ಯಾನ್ಸರ್ ಬರೀ ಮಹಿಳೆಯರಿಗೆ ಮಾತ್ರ ಬರುತ್ತದೆ ಅಂತಲ್ಲಾ ಇದು ಪುರುಷರಿಗೂ ಕೂಡ ಬರುತ್ತದೆ. ಸ್ತನ ಕ್ಯಾನ್ಸರ್ ಲಿಂಗಭೇದ ಮಾಡಲ್ಲ. ದಿನಾಲು ಎಕ್ಸರಸೈಜ ಮಾಡುವುದರಿಂದ ಹಾಗೂ ಎಲ್ಲ ತರಹದ ದುಶ್ಚಟಗಳಿಂದ ದೂರವಿರುವುದರಿಂದ ಈ ಸ್ತನ ಕ್ಯಾನ್ಸರನಿಂದ ಸೇಫಾಗಬಹುದು.

9) ಬಹಳಷ್ಟು ಮಹಿಳೆಯರು ತಮ್ಮ ಸ್ತನಗಳೊಂದಿಗೆ ಖುಷಿಯಾಗಿಲ್ಲ ;
ಬಹಳಷ್ಟು ಮಹಿಳೆಯರು ತಮ್ಮ ಸ್ತನಗಳ ಗಾತ್ರ ಆಕಾರದೊಂದಿಗೆ ಅನಹ್ಯಾಪಿಯಾಗಿದ್ದಾರೆ. ನನ್ನ ಸ್ತನಗಳು ದೊಡ್ಡದಾಗಿವೆ ಚಿಕ್ಕದಾಗಿವೆ ಫ್ಲ್ಯಾಟಾಗಿವೆ ಎಂದೆಲ್ಲ ಕೊರಗುತ್ತಾರೆ.

10) ಮೊಲೆತೊಟ್ಟನ್ನು ಟಚ್ ಮಾಡಿದಾಗ ಮಹಿಳೆ ಟರ್ನ ಆನಾಗುತ್ತಾಳೆ ;
ಮೊಲೆತೊಟ್ಟನ್ನು ಅಂದರೆ ಸ್ತನದ ನಿಪ್ಪಲ್ಲನ್ನು ಟಚ್ ಮಾಡಿದರೆ ಮಹಿಳೆ ಕೂಡಲೇ ಸರಸಕ್ಕೆ ತಯಾರಾಗುತ್ತಾಳೆ. ಕ್ಲೈಟೋರಲ ಹಾಗೂ ಯೋನಿ ಸ್ಪರ್ಶದಿಂದ ಮೆದುಳಿಗೆ ಯಾವ ಸಂದೇಶ ರವಾನೆಯಾಗುತ್ತದೆಯೋ ಅದೇ ಸಂದೇಶ ಅವಳ ಮೊಲೆತೊಟ್ಟುಗಳನ್ನು ಸ್ಪರ್ಶಿಸಿದಾಗ ರವಾನೆಯಾಗುತ್ತದೆ. ಇದರಿಂದ ಅವಳು ಸೆ**ಕ್ಸಗಾಗಿ ಟರ್ನ ಆನಾಗುತ್ತಾಳೆ.

11) ಬಹಳಷ್ಟು ಮಹಿಳೆಯರು ರಾಂಗ ಸೈಜ ಬ್ರಾ ಧರಿಸುತ್ತಾರೆ ;
ಒಂದು ಸ್ಟಡಿ ಅನುಸಾರ ಜಗತ್ತಿನಲ್ಲಿ 85% ಮಹಿಳೆಯರು ರಾಂಗ ಸೈಜ ಬ್ರಾವನ್ನು ಧರಿಸುತ್ತಾರೆ. ಕೆಲವರಿಗೆ ತಮ್ಮ ಸ್ತನಗಳ ಕರೆಕ್ಟ ಸೈಜ ಗೊತ್ತಿರಲ್ಲ ಇನ್ನೂ ಕೆಲವರಿಗೆ ಸೈಜ ಕೇಳಿ ತರಲು ನಾಚಿಕೆಯಾಗುತ್ತದೆ. ಹೀಗಾಗಿ ಬಹಳಷ್ಟು ಮಹಿಳೆಯರು ರಾಂಗ ಸೈಜ ಬ್ರಾ ಧರಿಸಿ ಅನಕಂಫರ್ಟೇಬಲ ಫೀಲ ಮಾಡುತ್ತಾರೆ. ಅಲ್ಲದೇ ರಾಂಗ ಸೈಜ ಬ್ರಾ ಧರಿಸುವುದರಿಂದ ಅವರ ಸ್ತನಗಳ ಸೈಜ, ಶೇಪ ಹಾಗೂ ಪೋಜಿಷನಗಳಲ್ಲಿ ಚೇಂಜ್ ಆಗುತ್ತದೆ. ಪ್ರತಿದಿನ 40 ಲಕ್ಷ ಹೊಸ ಬ್ರಾಗಳು ತಯಾರಾಗುತ್ತವೆ. L ಅತಿದೊಡ್ಡ ಬ್ರಾ ಸೈಜಾದರೆ AAA ಅತಿ ಚಿಕ್ಕ ಸೈಜಾಗಿದೆ.

12) ಪುರುಷರಿಗೂ ಕೂಡ ಸ್ತನಗಳು ಹಾಗೂ ಮೊಲೆತೊಟ್ಟುಗಳು ಇರುತ್ತವೆ.
ಆರಂಭದಲ್ಲಿ ಪ್ರತಿ ಭ್ರೂಣವೂ ಹೆಣ್ಣಾಗಿ ಬೆಳೆಯಲು ಪ್ರಾರಂಭವಾಗುತ್ತದೆ. ಟೆಸ್ಟೊಸ್ಟೆರಾನನ ಪ್ರಭಾವ ಅದರ ಮೇಲಾಗಲು ಅಟಲಿಸ್ಟ ಆರು ವಾರ ಬೇಕಾಗುತ್ತದೆ. ಈ ಆರು ವಾರಗಳಿಗಿಂತ ಮುಂಚೆಯೇ ಗಂಡು ಮಗುವಿನಲ್ಲೂ ಸ್ತನಗಳು ಹಾಗೂ ಮೊಲೆತೊಟ್ಟುಗಳು ಬೆಳೆದು ಬಿಟ್ಟಿರುತ್ತವೆ. ಮುಂದೆ ಪುರುಷರಲ್ಲಿ ಹಾರ್ಮೋನ ಲೆವೆಲ ಚೇಂಜಸ ಆದರೆ ಅವರಿಗೂ ಸಹ ಮಹಿಳೆಯರಂತೆ ದೊಡ್ಡ ಗಾತ್ರದ ಸ್ತನಗಳು ಬೆಳೆಯುತ್ತವೆ.

13) ಸ್ತನಪಾನ ಒಳ್ಳೆಯದಾಗಿದೆ ;
ಸ್ತನಪಾನ ಒಳ್ಳೆಯದ್ದಾಗಿದೆ ಹಾಗೂ ಆರೋಗ್ಯಕರವಾಗಿದೆ. ಆದರೆ ಕೆಲ ಮಾತೆಯರು ಸೌಂದರ್ಯ ಹಾಳಾಗುತ್ತದೆ ಅಂತಾ ತಮ್ಮ ಮಗುವಿಗೆ ಎದೆಹಾಲನ್ನು ಕುಡಿಸುವುದಿಲ್ಲ. ಮಗುವಿಗೆ ಎದೆಹಾಲನ್ನು ಕುಡಿಸಿದಾಗ ಮಗುವಿಗೆ ಪೋಷಣೆ ಸಿಗುತ್ತದೆ. ಜೊತೆಗೆ ತಾಯಿಗೂ ಕೂಡ ಕೆಲವೊಂದಿಷ್ಟು ಲಾಭಗಳಾಗುತ್ತವೆ. ಸ್ತನಪಾನ ಗರ್ಭಾಶಯದ ಸೈಜನ್ನು ಕಡಿಮೆ ಮಾಡಲು ಮತ್ತು ಅದನ್ನು ಮತ್ತೆ ಅದರ ನಾರ್ಮಲ ಸೈಜಗೆ ರಿಟರ್ನ್ ತರಲು ಹೆಲ್ಪ ಮಾಡುತ್ತದೆ. ಸ್ತನಪಾನ ಮಾಡಿದಾಗ ತಾಯಿಯಲ್ಲಿ ಹ್ಯಾಪಿ ಹಾರ್ಮೋನುಗಳು ರೀಜಿಲಾಗುತ್ತವೆ. ಇದರಿಂದ ಅವಳು ಖುಷಿಯಾಗಿರುತ್ತಾಳೆ. ಜೊತೆಗೆ ಫುಲ್ ಪೋಜಿಟಿವ ಮೂಡನಲ್ಲಿರುತ್ತಾಳೆ. ಸ್ತನಪಾನದಿಂದ ದಿನಕ್ಕೆ 500 ಕ್ಯಾಲೋರಿ ತನಕ ಬರ್ನ ಮಾಡಬಹುದು. ವೇಟ ಲಾಸ ಮಾಡಿಕೊಳ್ಳಲು ಮಾತೆಯರಿಗೆ ಇದು ಬೆಸ್ಟ ಐಡಿಯಾವಾಗಿದೆ.

ಸ್ತನಪಾನ ಮಾಡುವುದರಿಂದ ಹಾರ್ಟ ಅಟ್ಯಾಕ, ಪ್ಯಾರಾಲೈಸಿಸ, ಹೃದಯ ಸಂಬಂಧಿ ಕಾಯಿಲೆಗಳು, ಬ್ರಿಸ್ಟ ಕ್ಯಾನ್ಸರ್, ಓವಿರಿತನ ಕ್ಯಾನ್ಸರ್ ಆಗುವ ಚಾನ್ಸಸ ತುಂಬಾನೇ ಕಡಿಮೆಯಾಗುತ್ತದೆ. ಸ್ತನಪಾನದಿಂದ ಬ್ಲಡ ಪ್ರೆಶರ್, ಎಮೋಷನಲ ಪ್ರೆಶರ ಹಾಗೂ ಡಿಪ್ರೆಶನ್ ಕೂಡ ಕಡಿಮೆಯಾಗುತ್ತದೆ. ಹೆಚ್ಚಿಗೆ ಹಾಲು ಉತ್ತಾದನೆಯಾದಾಗ ಸ್ತನಗಳ ಮೇಲೆ ಒತ್ತಡ ಬೀಳುತ್ತದೆ. ಮಗುವಿಗೆ ಸ್ತನಪಾನ ಮಾಡಿದಾಗ ಈ ಒತ್ತಡ ಕೂಡ ಕಡಿಮೆಯಾಗುತ್ತದೆ. ಸ್ತನಪಾನ ಸಂಪೂರ್ಣವಾಗಿ ಫ್ರಿಯಾಗಿದೆ. ಇದರಿಂದ ಟೈಮ ಹಾಗೂ ಹಣ ಎರಡೂ ಸೇವ ಆಗುತ್ತವೆ. ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲು ದಿನಾಲು ಉತ್ಪಾದನೆಯಾಗುತ್ತದೆ. ಮಗುವಿನ ಡಿಮ್ಯಾಂಡಗೆ ತಕ್ಕಂತೆ ಹಾಲನ್ನು ಸಪ್ಲಾಯ ಮಾಡುವಷ್ಟು ಸಾಮರ್ಥ್ಯ ಸ್ತನಗಳಲ್ಲಿದೆ.

14) ಮಹಿಳೆಯರ ಎದೆ ನೋಡಿ ಜೊಲ್ಲು ಸುರಿಸಿದವರು ಹಾಳಾಗಿದ್ದಾರೆ ಅಷ್ಟೇ.
2013ರಲ್ಲಾದ ಒಂದು ಸ್ಟಡಿ ಅನುಸಾರ ದಪ್ಪ ಸ್ತನಗಳುಳ್ಳ ಮಹಿಳೆಯರನ್ನು ಇಷ್ಟಪಡುವ ಪುರುಷರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಮತ್ತು ಸಣ್ಣ ಸ್ತನಗಳುಳ್ಳ ಮಹಿಳೆಯರನ್ನು ಇಷ್ಟಪಡುವ ಪುರುಷರು ಆರ್ಥಿಕವಾಗಿ ಸಬಲರಾಗಿದ್ದಾರೆ. ಸಿಂಪಲಾಗಿ ಹೇಳಬೇಕೆಂದರೆ ಮಹಿಳೆಯರ ಎದೆ ನೋಡಿ ಜೊಲ್ಲು ಸುರಿಸಿದವರು ಹಾಳಾಗಿದ್ದಾರೆ ಅಷ್ಟೇ.

15) ಟಚ್ ಮಾಡಿದಾಗ ಸ್ತನಗಳ ಗಾತ್ರ ಹೆಚ್ಚಾಗಲ್ಲ ;
ನಿಮ್ಮ ಸ್ತನಗಳನ್ನು ನೀವು ಪದೇಪದೇ ಟಚ್ ಮಾಡುವುದರಿಂದ ಅಥವಾ ನಿಮ್ಮ ಬೆಡ್ ಪಾರ್ಟನರ ನಿಮ್ಮ ಸ್ನನಗಳನ್ನು ಟಚ್ ಮಾಡುವುದರಿಂದ ಅವುಗಳ ಸೈಜ ಹೆಚ್ಚಾಗಲ್ಲ. ರಫ್ಪಾಗಿ ಅದುಮುವುದರಿಂದ, ಲಾಂಗ ಕಿಸ ಮಾಡುವುದರಿಂದ, ಕಚ್ಚುವುದರಿಂದ ಅವು ಸ್ವಲ್ಪ ದಿನಗಳ ತನಕ ಊದಿಕೊಳ್ಳಬಹುದು. ಬಟ ಅವುಗಳ ಸೈಜನಲ್ಲಿ ಶಾಶ್ವತ ಚೇಂಜ ಆಗಲ್ಲ. ಸೋ ಸೆ**ಕ್ಸ ಮಾಡಲು ಹೆದರುವ ಅವಶ್ಯಕತೆ ಇಲ್ಲ.

ಓಕೆ ಗೆಳೆಯರೇ ಫೈನ, ನಿಮಗೆ ಈ ಸಂಡೇ ಸಾಯಿನ್ಸ ಅಂಕಣ ಇಷ್ಟವಾಗಿದೆ, ಜೊತೆಗೆ ಹೊಸ ವಿಷಯಗಳು ಕಲಿಯಲು ಸಿಕ್ಕಿವೆ ಅಂತಾ ಭಾವಿಸುವೆ. ಈ ಅಂಕಣವನ್ನು ಬರೆಯಲು ನನಗೆ ಗೈಡ ಮಾಡಿದ ನನ್ನ ಬೆಸ್ಟ ಫ್ರೆಂಡ ಡಾ. ಪ್ರಿಯಾಂಕಾಗೆ ಥ್ಯಾಂಕ್ಸ. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ ಕಮೆಂಟ ಮಾಡಿ ಮತ್ತು ಇದನ್ನು ಶೇರ್ ಮಾಡಿ. ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಮತ್ತೆ ಮುಂದಿನ ಸಂಡೇ ಹೊಸ ಸಾಯಿನ್ಸ ಅಂಕಣದೊಂದಿಗೆ ಮತ್ತೆ ಸಿಗೋಣಾ. ಧನ್ಯವಾದಗಳು...
