೩೬) ಹುಡುಗಾಟಿಕೆಯ ಹುಡುಗಿಯ ಹುಚ್ಚಾಟಗಳಿಂದ ದಿನೇ ದಿನೇ ನಾ ಹುಚ್ಚನಾಗ್ತಿದೀನಿ. ಅವಳಿಗೆ ನಾನು ಕಾಲ್ಕಸವಾದರೂ ಅವಳು ನನಗೆ ಸರ್ವಸ್ವವಾಗ್ತಿದಾಳೆ...
೩೭) ಪ್ರೀತಿ ವ್ಯಾಧಿ ಹುಟ್ಟಿಕೊಂಡ ಮೇಲೆ ರಾತ್ರಿ ನಿದ್ದೆಗೆ ಸಮಾಧಿ. ಹಗಲು ನಿದ್ದೆಯಲಿ ಹಗಲುಗನಸುಗಳಿಗೆ ಬುನಾದಿ...
೩೮) ನಕಲಿ ನಾಣ್ಯದಂತೆ ನಕಲಿ ಪ್ರೀತಿಯೂ ಸಹ ಬಹಳ ದಿನ ಚಲಾವಣೆಯಾಗುವುದಿಲ್ಲ.
೩೯) ಅವಳಿಗೆ ನನ್ನ ಪ್ರೀತಿಯ ಮೇಲೆ ವಿಶ್ವಾಸವೇ ಇಲ್ಲವೆಂದ್ಮೇಲೆ ನನಗೆ ಈ ಶ್ವಾಸವಾದರೂ ಯಾಕೆ ಬೇಕು?
೪೦) "ತಾನು ಸುಳಿದಾಡೋದ್ರಿಂದಲೇ ಈ ಜಗತ್ತಿನಲ್ಲಿ ತಂಗಾಳಿ ಬೀಸ್ತಿದೆ. ತಾನು ನಗೋದ್ರಿಂದಲೇ ಈ ಜಗತ್ತಿನಲ್ಲಿ ಹೂಗಳು ಅರಳ್ತಿವೆ..." ಅನ್ನೋ ಅಹಂಕಾರ ಅವಳಿಗೆ ಆಭರಣವಾಗಿದೆ...
೪೧) ಪ್ರೀತಿಯ ಅಮೃತ ವಿಷವಾದ ಮೇಲೆ ಭರವಸೆಯ ಬೆಳಕು ಕತ್ತಲಾಗಿದೆ. ಮುರಿದ ಮನಸ್ಸಲ್ಲಿ ನೋವು ನಿರಾಸೆಯ ಮೋಡಗಳು ನಲಿದಾಡುತ್ತಿವೆ.
೪೨) ಗೆದ್ಲು ಕಟ್ಟಿದ ಹುತ್ತದೊಳಗೆ ಹಾವು ಬಂದು ವಾಸಿಸಲು ಶುರು ಮಾಡಿದಂಗೆ, ನಾನು ಅವಳಿಗಾಗಿ ಕಟ್ಟಿದ ಅರಮನೆಯಲ್ಲಿ ಅವನು ಬಂದು ರಾಜನಾದನು...
೪೩) ಜಗವನ್ನು ಬೆಳಗಲು ಸೂರ್ಯ ಬೇಕು. ನನ್ನ ಬಾಳನ್ನು ಬೆಳಗಲು ನೀನು ಸಾಕು...
೪೪) ಬಂದಾಗ ಭರಣಿ ಮಳೆ, ಧರಣಿ ತುಂಬೆಲ್ಲ ಹಸಿರು ಬೆಳೆ... ನೀನು ಪ್ರೀತಿ ಮಳೆಯಾಗಿ ಬಂದರೆ ನನ್ನ ಜೀವನದಲ್ಲಿ ರಾಜಕಳೆ... ನೀನು ಬರದಿದ್ದರೆ ಹೃದಯದ ತುಂಬೆಲ್ಲ ವಿರಹದ ಕಳೆ... ನೀ ಬರುವುದಾದರೆ ಭರಣಿ ಮಳೆಯಾಗಿ ನನ್ನ ಬಾಳಿಗೆ ಬಾ... ರೋಣಿ ಮಳೆಯಾಗಿ ಬಂದು ನನ್ನ ಪ್ರೀತಿಯನ್ನು ಕೊಚ್ಚಿಕೊಂಡು ಹೋಗಬೇಡ...
೪೫) ಹುಣಿಸೆ ಮರಕ್ಕೆ ಮುಪ್ಪಾದರೂ ಹುಳಿ ಕಮ್ಮಿ ಆಗಲ್ಲ. ನೀನು ಮುದುಕಿಯಾದರು ನನಗೆ ನಿನ್ಮೇಲಿನ ಪ್ರೀತಿ ಎಳ್ಳಷ್ಟೂ ಕಮ್ಮಿಯಾಗಲ್ಲ...
೪೬) ಪ್ರತಿ ಕ್ಷಣ ಅವಳ ಫೋಟೋ ನೋಡ್ತಾ ಕುಂತ್ರು ಸಮಾಧಾನವಾಗಲ್ಲ. ಡೈರೆಕ್ಟಾಗೆ ನೋಡಬೇಕು ಅಂತಾ ಅನಿಸುತ್ತೆ...
೪೭) ನನ್ನ ಪ್ರೀತಿ ಒಂಥರಾ ಹಿಮಾಲಯದಿಂದ ಧುಮುಕಿ ಬರೋ ಜೀವಂತ ನದಿಯಿದ್ದಂತೆ, ಯಾವತ್ತೂ ಬತ್ತಲ್ಲ...
೪೮) ಮೋಡಗಳು ಮೂಡಿದಾಗ ಗಂಡು ನವಿಲು ಗರಿಬಿಚ್ಚಿ ನರ್ತಿಸುವಂತೆ, ಅವಳನ್ನು ಕಂಡಾಗ ನನ್ನೀ ಹುಚ್ಚುಮನ ಗಾಳಿಗೆ ಗೆಜ್ಜೆ ಕಟ್ಟಿ ಕುಣಿಸತ್ತಿನಿ, ಬೆಂಕಿಗೆ ಬಿರುಗಾಳಿಯೊಡನೆ ಮದುವೆ ಮಾಡಿಸತ್ತೀನಿ, ಸಮುದ್ರದ ಉಪ್ಪು ನೀರನ್ನು ಸಿಹಿ ಮಾಡ್ತೀನಿ, ಆಗಸಕ್ಕೆ ಆಭರಣ ತೊಡಿಸಿ ಅಲಂಕಾರ ಮಾಡ್ತೀನಿ ಅಂತೆಲ್ಲ ಕನಸು ಕಾಣ್ತಾ ಹುಚ್ಚನಾಗುತ್ತೆ...
೪೯) ಅವಳು ಧಾರೆ ಸೀರೆಯುಟ್ಟುಕೊಂಡು ನನ್ನೊಡನೆ ಸಪ್ತಪದಿ ತುಳಿಯುತ್ತಾಳೆಂದು ನಾನವಳ ಹೃದಯದ ಹಿಂದೆ ಕೋಟ್ಯಾಂತರ ಸಪ್ತಪದಿಗಳನ್ನು ತುಳಿದು ಸುಸ್ತಾದೆ...
೫೦) ಮುಗಿಲು ಕಳಚಿಕೊಂಡು ಬೀಳೊವಂತೆ ಮಾತಾಡುತ್ತಿದ್ದವಳು ಇಂದೇಕೋ ಮೌನವಾಗಿದ್ದಾಳೆ... ತಂಗಾಳಿಗೂ ಕಾಲ್ನೋಯುವಂತೆ ಸುಳಿದಾಡುತ್ತಿದ್ದವಳು ಇಂದೇಕೋ ಸ್ತಬ್ಧವಾಗಿದ್ದಾಳೆ...
೫೧) ನನ್ನ ವಿರಹ ವೇದನೆಯನ್ನು ನೋಡಿ ಆಗಸದಲ್ಲಿರುವ ಮೋಡಗಳು ಕಣ್ಣೀರಾಕಿದಾಗ ಮಳೆಯಾಯಿತು. ಆ ಮಳೆಯಲ್ಲಿ ನೆನೆದು ಕುಣಿದಾಡಿ ನನ್ನವಳು ಸಂತಸಪಟ್ಟಳು...
೫೨) ನೀ ಹಾಗೇ ಸುಮ್ಮನೆ ಹಾದು ಹೋದಾಗ ರಾಜಸ್ಥಾನದ ಮರಭೂಮಿ ಫಲವತ್ತಾದ ಭೂಮಿಯಾಯಿತು. ಆದರೆ ನೀ ನನ್ನ ಜೀವನಕ್ಕೆ ಬಂದು ಹೋದಾಗ ಗಂಗಾನದಿ ಮುಖಜ ಭೂಮಿಯಂತಿದ್ದ ನನ್ನ ಬಾಳು ದಕ್ಷಿಣ ಆಫ್ರಿಕಾದ ಸಹರಾ ಮರುಭೂಮಿಯಾಗಿದೆ...
೫೩) ಸಂದರ್ಭ ಬಂದರೆ ನಾನಿನ್ನ ಮೇಲೆ ಪ್ರೀತಿ ತೋರಿಸುವುದನ್ನು ನಿಲ್ಲಿಸಬಲ್ಲೆ. ಆದರೆ ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸಲಾರೆ.
೫೩) ನನ್ನ ಮತ್ತು ನಿನ್ನ ಪ್ರೇಮ ಪ್ರಶ್ನಾತೀತ...
೫೪) ಹಿಮಪಾತವಾದರೂ ಬದುಕಬಲ್ಲೆ, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ. ಆದರೆ ನಿನ್ನ ಪ್ರೀತಿಪಾತವಾದರೆ ಬದುಕಲಾರೆ....
೫೫) ನೀನಿಲ್ಲದೆ ಈ ಮುಸ್ಸಂಜೆ ಮುತ್ತು ಸಂಜೆ ಆಗುವ ಬದಲು ಮುಸ್ಸಂಜೆಯಾಗೇ ಉಳಿದಿದೆ...
೫೬) ನೀನಿಲ್ಲದ ಹಗಲುಗಳು ನನ್ನ ಕಣ್ಣುಗಳನ್ನು ಮಂಜಾಗಿಸಿವೆ. ನೀನಿಲ್ಲದ ರಾತ್ರಿಗಳು ನನ್ನ ರಕ್ತ ಹಿಂಡುತ್ತಿವೆ. ನಿನ್ನ ಹೆಗಲು ಜೊತೆಯಿಲ್ಲದ ಹಗಲು, ನಿನ್ನ ಸನಿಹವಿಲ್ಲದ ರಾತ್ರಿ ನನಗೆ ಬೇಕಿಲ್ಲ. ನೀನಿಲ್ಲ ಎಂದು ಗೊತ್ತಾದಾಗ ಈ ರಾತ್ರಿಯ ಕಗ್ಗತ್ತಲು ನನ್ನ ಹೆದರಿಸುವ ಉದ್ಧಟತನ ಮಾಡುತ್ತಿದೆ. ಅದರ ಸೊಕ್ಕಡಗಿಸಲು ಬಾ ಗೆಳತಿ...
೫೭) ನನ್ನ ನೋವನ್ನು ನೋಡಿ ನಗುವ ಚಂದ್ರನಿಗಿಂತ ಆ ಸುಡೋ ಸೂರ್ಯನೇ ಎಷ್ಟೋ ವಾಸಿ...
೫೮) ಅವಳ ಪ್ರೀತಿ ಗೋಪುರದ ಮಹಡಿಯನ್ನು ಹತ್ತಲು ನಾನು ಮೆಟ್ಟಿಲುಗಳನ್ನು ಹುಡುಕಿ ಸುಸ್ತಾಗಿರುವೆ. ಯಾಕಂದ್ರೆ ಅವಳು ಗಾಳಿಯಲ್ಲಿ ಪ್ರೀತಿಯ ಗೋಪುರ ಕಟ್ಟಿದಾಳೆಯೇ ಹೊರತು ಮನಸ್ಸಿನ ಭಾವನೆಗಳಲಲ್ಲ...
೫೯) ನೆನಪುಗಳ ನೆಪ ಮಾಡಿಕೊಂಡು, ನನ್ನ ಮನಸ್ಸಲ್ಲಿ ನಿನ್ನ ಮನೆಯನ್ನು ಕಟ್ಟುತ್ತಿರುವೆ ಯಾಕೆ?
೬೦) ನೀ ವಿರಹದ ಕಣ್ಣೀರನ್ನು ಒರೆಸಿಯಾದರೂ ಪ್ರೀತಿಸು, ಇಲ್ಲ ಪ್ರೇಮದ ಕಣ್ಣೀರನ್ನು ಬರಿಸಿಯಾದರೂ ಪ್ರೀತಿಸು. ಒಟ್ನಲ್ಲಿ ಪ್ರೀತಿಸು...
೬೧) ಸಾಮ್ರಾಜ್ಯವೇ ಹೊತ್ತಿ ಉರಿಯುವಾಗ ರೋಮ್ ದೊರೆ ಪಿಟೀಲು ಬಾರಿಸುತ್ತಿದ್ದನಂತೆ. ಅವನಿಂದ ಪ್ರೇರಿತಳಾಗಿ ನನ್ನ ಪ್ರೇಯಸಿ ನನ್ನೆದೆಗೆ ಬೆಂಕಿ ಹಚ್ಚಿ ಕವನ ಬರೆದು ಖುಷಿಪಡ್ತಿದಾಳೆ...
೬೨) ಅರ್ಧಕ್ಕೆ ನಿಂತ ಕವನವಾಗದಿರಲ
೬೩) ನನ್ನೊಡನೆ ಧೈರ್ಯವಾಗಿ ತಂಗಾಳಿ ಮಾತಾಡುತ್ತದೆ. ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ...
೬೪) ಶಬರಿ ಶ್ರೀರಾಮನಿಗಾಗಿ 14 ವರ್ಷ ಕಾದಳು. ಊರ್ಮಿಳೆ ಕೂಡ ಲಕ್ಷ್ಮಣನಿಗಾಗಿ 14 ವರ್ಷ ಕಾದಳು. ಆದ್ರೆ ನಾನು ನಿನಗಾಗಿ ಜೀವನಾಪೂರ್ತಿ ಕಾಯುವೆ...
೬೫) ಅವಳು ನನ್ನ ಪ್ರೇಮದ ತೊಟ್ಟಿಲಿನಲ್ಲಿ ಮಲಗಿದರೆ, ನಾನು ನವಿಲಾಗಿ ಗರಿಬಿಚ್ಚಿ ನರ್ತಿಸಿ ಅವಳಿಗೆ ಗಾಳಿ ಬೀಸುವೆ...
೬೬) ನೀ ನನ್ನ ಕಿವಿಯಲ್ಲಿ ಪ್ರೀತಿಯಿಂದ ಪೀಸುಗೂಡುತ್ತಿದ್ದಾಗ ಕಿವಿ ತಮಟೆಯಲ್ಲಿ ತಂಗಾಳಿ ಬೀಸಿದಂಗಾಗುತಿತ್ತು. ಆದ್ರೆ ಇಂದು ನಿನ್ನ ಕುಹಕದ ಮಂದಹಾಸಕ್ಕೆ ನನ್ನ ಕಿವಿ ತಮಟೇನೆ ಹರಿದು ಹೋಗಿ ಕಿವುಡಾಗೋ ಸ್ಥಿತಿ ತಲುಪಿದೆ...
೬೭) ನಾನು ಮಾತಿನ ಪರ್ವತ,
ನೀನು ಪ್ರೀತಿ ಸೇತುವೆಗೆ ಮಾತುಗಳೆಂಬ ರಂಧ್ರ ಕೊರೆದು ನನ್ನನ್ನು ಮುಳುಗಿಸು. ಆದರೆ ಮೌನವೆಂಬ ಹೆಬ್ಬಂಡೆಯನ್ನು ನಿರ್ಮಿಸಿ ನನ್ನನ್ನು ಎಡವಿಸಿ ಬೀಳಿಸಬೇಡ...
೬೮) ಮೀಸೆ ಇಲ್ದೆ ಇರೋಳಿಗೆ ಆಸೆ ಯಾಕೆ? ಹೃದಯವೇ ಇಲ್ಲದವಳಿಗೆ ನನ್ನ ಹೃದಯವೇಕೆ?
೬೯) ಶಿವನಿಗಾಗಿ ಪಾರ್ವತಿ ತಪಸ್ಸು ಮಾಡಿದಳು. ಆದ್ರೆ ನನಗ್ಯಾವ ಸುಂದರಿ ಪ್ರೇಮ ತಪಸ್ಸು ಮಾಡ್ತಾಳೋ...???.
೭೦) ನಿನ್ನ ಕಣ್ಣೀರಿಗೆ ನಾ ರೆಪ್ಪೆಯಾಗಿ ಕಾಯಲೆ?
೭೧) ಬರೀ ಪ್ರೀತಿಸಿದರೆ ಸಾಲದು. ಆ ಪ್ರೀತಿನಾ ಪ್ರೀತಿಸಿದವರಿಗೆ ಮನವರಿಕೆ ಮಾಡ್ಸೋವಷ್ಟು ಅರ್ಹತೆನೂ ಇರಬೇಕು
೭೨) ನಾನು ಯಾರನ್ನು ಪ್ರೀತಿಸಲ್ಲ. ಯಾಕಂದ್ರೆ ಈಗ ನನ್ನತ್ರ ನನ್ನ ಹೃದಯವಿಲ್ಲ...
೭೩) ಮೇಸೆಜು ಖಾಲಿ, ಕರೆನ್ಸಿನೂ ಖಾಲಿ, ನನ್ ಹುಡ್ಗಿ ಕಾಯ್ತಾ ಇದಾಳೆ ಏನ್ ಮಾಡ್ಲಿ?
೭೪) ಪ್ರೀತಿನಾ ದ್ವೇಷಿಸೋದು ಸರಿನಾ?
೭೫) ಹುಡ್ಗೀರ ನೋಟಕ್ಕೆ ಬಲಿಯಾಗದೆ ನಾನಿನ್ನು ಬದುಕಿದಿನಿ ಅಂದ್ರೆ ನಂಬಕ್ಕಾಗತ್ತಿಲ್ಲ.
೭೬) ಪ್ರೀತಿ ಸಮರದಲ್ಲಿ ಸ್ನೇಹ ಅಮರವಾಗಿರಲಿ...
೭೭) ಪ್ರೀತಿ ಹೃದಯದಲ್ಲಿ ಭದ್ರವಾಗಿ ನೆಲೆಯೂರಬೇಕಂದ್ರೆ ಮುಖ್ಯವಾಗಿ ನಂಬಿಕೆ ಮತ್ತು ನಿಯತ್ತು ಬೇಕು.
೭೮) ಪ್ರೀತಿಯ ರಾದ್ಧಾಂತಗಳಿಗೆ ಸ್ನೇಹದ ಸಿದ್ಧಾಂತಗಳಲ್ಲಿ ಪರಿಹಾರವಿದೆ.
೮೩) ನಿಜವಾದ ಪ್ರೇಮಿಗಳೇ ಜಾಸ್ತಿ ಜಗಳವಾಡೋದು, ಬೇಗನೆ ಬೇರೆ ಬೇರೆಯಾಗಿ ಕೊರಗೋದು...
೮೪) ನೋವಿನ ನದಿಯಲ್ಲಿ ಮಿಂದೆದ್ದರೆ ನೋವೆಲ್ಲ ಮಾಯ. ಆದರೆ ಪ್ರೇಮದ ನದಿಯಲ್ಲಿ ಮಿಂದೆದ್ದರೆ ಹೃದಯದ ತುಂಬೆಲ್ಲ ಗಾಯ...
೮೫) ಕನ್ನಡಿಯಲ್ಲಿ ಅವಳ ಮುಖದ ಪ್ರತಿಬಿಂಬ ಮಾತ್ರ ಕಾಣುತ್ತೆ. ಆದ್ರೆ ನನ್ನ ಕಣ್ಣಲ್ಲಿ ಅವಳು ಕಣ್ಣಿಟ್ಟು ನೋಡಿದರೆ ಅವಳ ಮನಸ್ಸಿನ ಪ್ರತಿಬಿಂಬಾನೂ ಕಾಣಿಸುತ್ತೆ...
೮೬) ಯೌವ್ವನವೆಂಬ ಸ್ವಚ್ಛಂದವಾದ ಆಕಾಶದಲ್ಲಿ ಪ್ರೀತಿಯೆಂಬ ಕಾಮನಬಿಲ್ಲು ಮೂಡಿದಾಗ ಖುಷಿ ಪಡಬೇಕೋ ಅಥವಾ ಅದೇ ಕಾಮನಬಿಲ್ಲಿನ ಬಣ್ಣಗಳು ವಿರಹದ ರಕ್ತಸಿಕ್ತ ಕಳಂಕದ ಕಲೆಗಳಾದರೆ ಕಣ್ಣೀರಾಕಬೇಕೋ ಅನ್ನೋ ಗೊಂದಲದಲ್ಲಿ ಯೌವ್ವನ ಕಳೆದೋಗುತ್ತೆ...
೮೭) ರಾತ್ರಿವೊತ್ತು ಕಾಗೆನಾ ನೋಡೋವಾಸೆ...
ಹಗಲೊತ್ತು ಗೂಬೆನಾ ಮುದ್ದಾಡುವಾಸೆ...
ಆ ಸೂರ್ಯನನ್ನು ಫುಟ್ಬಾಲ್ ಮಾಡಿಕೊಂಡು ಆಡೋವಾಸೆ...
೮೮) ಪ್ರೇಮದಾಸ "ಪ್ರೀತಿಯಿಲ್ಲದ ಬಾಳು ಬರಡು" ಅಂತಾನೆ. ಆದ್ರೆ ದೇವದಾಸ "ಪ್ರೀತಿಯಿಂದಲೇ ಕಣ್ಣು ಕುರುಡು" ಅಂತಾನೇ. ಯಾರನ್ನು ನಂಬಲಿ ನಾನು?
೮೯) ಬಯಸಿದ ಪ್ರೀತಿ ಸಿಗದಿದ್ದರೆ, ಹೃದಯ ಕೊರಗಿಗೆ ಕೆರಳಿ ಬಂಡಾಯವೇಳುವುದು ಸಹಜ...
೯೦) ಯಾರಾದರೂ ಕಡ್ಡಿ ಗೀರಿದಾಗಲೇ ಬೆಂಕಿ ಹತ್ತೋದು, ಯಾರಾದರೂ ಕಿವಿ ಚುಚ್ಚಿದಾಗಲೇ ಹೃದಯ ಚೂರಾಗೋದು, ಯಾರಾದರೂ ಕ್ಯಾತೆ ತೆಗೆದಾಗಲೇ ಕಣ್ಣು ಕೆಂಪಾಗೋದು, ಯಾರಾದರೂ ಸ್ಮೈಲ್ ಕೊಟ್ಟಾಗಲೇ ಪ್ರೀತಿ ಹುಟ್ಟೋದು...
೯೧) ಮಳೆ ಸುರಿಯೋವಾಗ ಆಕಾಶಕ್ಕೆ ಕೊಡೆ ಹಿಡಿಯುವಾಸೆ. ಚಳಿಯಾದಾಗ ಭೂಮಿಗೆ ಕಂಬಳಿ ಹೊದಿಸುವಾಸೆ. ಸುಡೋ ಸೂರ್ಯನಿಗೆ 7up ಕುಡಿಯೋವಾಸೆ. ಚಂದ್ರನಿಗೆ ಚಾಕಲೇಟ ತಿನ್ನಿಸೋವಾಸೆ. ಕೊನೆಯದಾಗಿ ಅಮವಾಸ್ಯೆ ಕತ್ತಲಲ್ಲಿ ನಿನ್ನ ಕೂಲಿಂಗ ಗ್ಲಾಸ್ ಹಾಕಿಕೊಂಡು ನೋಡುವಾಸೆ...
೯೨) "ನಿಮ್ಮ ದಾರಿಗೆ ಮುಳ್ಳು ಚೆಲ್ಲಿದವರ ದಾರಿಯಲ್ಲಿ ನೀವು ಹೂವು ಚೆಲ್ಲಿ" ಅಂತಾ ಕಬೀರದಾಸರು ಹೇಳಿದನ್ನು ಕೇಳಿ ನಾನು ಅವಳ ದಾರಿಯಲ್ಲಿ ಹೂವ ಚೆಲ್ಲಿದರೆ, ಅವಳು ನನ್ನೆದೆಗೆ ಮುಳ್ಳನ್ನು ಚುಚ್ಚಿದಳು...
೯೩) ಪ್ರೀತಿ ಎಂಬ ಸರ್ಕಾರಕ್ಕೆ ವಿರೋಧ ಪಕ್ಷದವರು ಇರೋದು ಸಹಜಾನೇ. ಹಾಗಂತ ರಾಜ್ಯಭಾರ ನಡ್ಸೋದ ಬಿಟ್ಟು ರಾಜೀನಾಮೆ ಕೋಡೋಕ್ಕಾಗುತ್ತಾ...?
೯೪) ಮಾತಿಗಿಂತ ಮೌನದಿಂದಲೇ ಜಾಸ್ತಿ ಮನಸ್ತಾಪಗಳು ಬರುತ್ತವೆ. ಅದಕ್ಕಾಗಿ ಮೌನ ಮುರಿದು ನಿಮ್ಮ ಮನಸ್ಸಲ್ಲಿರೋರ ಜೊತೆ ಮನ್ಸಬಿಚ್ಚಿ ಮಾತಾಡಿ...
೯೫) ಅವಳ ಮುಖದಲ್ಲಿನ ತೇಜಸ್ಸು,
ತುಟಿಯಲ್ಲಿನ ವರ್ಚಸ್ಸು,
ಪ್ರೀತಿ ಮಾಡೋ ವಯಸ್ಸು,
ಎಲ್ಲಾ ನೋಡಿ ಹಾಳಾಗೋಯ್ತು ನನ್ನ ಮನಸ್ಸು...
೯೬) ಪ್ರೇಮಿಗಳು ಪ್ರೀತಿಯಲ್ಲಿ ಬಿದ್ದ ಮೇಲೆ ಏನ ಕಲಿಯದಿದ್ರು ಸಿಹಿಯಾಗಿ ಸುಳ್ಳೇಳೊದನ್ನು ತಪ್ಪದೆ ಕಲಿಯುತ್ತಾರೆ...
೯೭) ನಮ್ಮ ಕನಸುಗಳನ್ನು ಕೊಂದ ಕೊಲೆಗಾರರನ್ನು ಪ್ರೀತಿಸುವ ಅವಶ್ಯಕತೆ ಏನಿಲ್ಲ. ಅದಕ್ಕಾಗಿ ನನ್ನ ಕನಸುಗಳನ್ನು ಕೊಂದ ಕೊಲೆಗಾರ್ತಿಯನ್ನು ನಾನು ಬಹಿರಂಗವಾಗಿ ದ್ವೇಷಿಸುತ್ತೇನೆ.
೯೮) ಮಾತುಗಳು ಮೌನವಾದಾಗ ಮನಸ್ಸುಗಳು ಮರಗುತ್ತವೆ. ಮಾತುಗಳು ಮುರಿದಾಗ ಮನಸುಗಳು ಮುರಿಯುತ್ತವೆ...
೯೯) ಹುಡುಗರು ಕ್ಯಾಂಡಲ್ ಥರಾ ಕರಗಿ ಪ್ರೀತಿ ನೆಪದಲ್ಲಿ ಹುಡುಗಿಯರಿಗೆ ಬೆಳಕಾಗಲು ಹೋಗಿ ಬತ್ತಿ ಕರಗಿ ವೇಸ್ಟ ಆಗ್ತಾರೆ. ಕ್ಯಾಂಡಲ್ ಅತ್ತಾಗಲೇ ಕತ್ತಲು ಕಳೆದು ಬೆಳಕಾಗೋದು. ಹುಡುಗರು ಅತ್ತಾಗಲೇ ಹುಡುಗಿಯರಿಗೆ ಸಮಾಧಾನ ಸಿಗೋದು...
೧೦೦) ಪ್ರೇಮಿಗಳು ಪ್ರೇಯಸಿ ಪಕ್ಕದಲ್ಲಿರುವಾಗ ಈ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ. ವಿರಹಿಗಳು ಈ ನಿದ್ದೆ ಎಲ್ಲಿ ಹಾಳಾಗ ಹೋಯ್ತು? ಇನ್ನೂ ಯಾಕ ಬರ್ತಿಲ್ಲ? ಅಂತಾ ತಲೆದಿಂಬನ್ನು ತಬ್ಬಿಕೊಂಡು ಸುಮ್ನೆ ಹೊರಳಾಡುತ್ತಾರೆ. ನಿದ್ದೆಗೂ ನಿಯತ್ತಿಲ್ಲ. ಟೈಮಸೆನ್ಸ ಅಂತು ಮೊದಲೇ ಇಲ್ಲ...
೧೦೧) ನಿಮ್ಮೆಲ್ಲರ ಲವ ಸಕ್ಸೆಸ್ಸಾಗಿ ನೀವು ಲೈಫಲಾಂಗ ಹೆಂಡ್ತಿ ಕಾಟ ಅನುಭವಿಸುವಂತಾಗಲಿ ಎಂದು ಆಶಿಸುವೆ...