ಹಾಯ್ ಗೆಳೆಯರೇ, ನಾನು ಜೀವನದಲ್ಲಿ ಸಾಕಷ್ಟು ಸಲ ಸೋತಿದ್ದೇನೆ, ಬಹಳಷ್ಟು ಸಲ ನೊಂದಿದ್ದೇನೆ, ಸಂಕಷ್ಟಗಳಿಗೆ ಬೇಜಾರಾಗಿ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಲು ಮುಂದಾಗಿದ್ದೇನೆ. ನನ್ನ ಬಿಜನೆಸ್ ನಾನೆಂದುಕೊಂಡಂತೆ ಸಾಗದಿದ್ದಾಗ ನಾನು ನನ್ನ ರೋರಿಂಗ್ ಕ್ರಿಯೇಷನ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು (www.Roaringcreations.com) ಮುಚ್ಚಲು ಸಹ ಮುಂದಾಗಿದ್ದೆ. ಆದರೆ ಮಹಾನ್ ಸಾಧಕರ ಕೆಲವೊಂದಿಷ್ಟು ಸ್ಪೂರ್ತಿದಾಯಕ ಮಾತುಗಳು ಮತ್ತೆ ನನ್ನಲ್ಲಿ ಧೈರ್ಯವನ್ನು ತುಂಬಿದವು. ನನಗೆ ಪರ್ಸನಲ್ಲಾಗಿ ಹಾಗೂ ಪ್ರೊಫೆಷನಲ್ಲಾಗಿ ಬೆಳೆಯಲು ದಾರಿ ತೋರಿಸಿದವು. ಈ ಮಾತುಗಳಿಂದ ನನ್ನ ಬದುಕು ಬದಲಾಗಿದೆ. ಈ ಮಾತುಗಳಿಂದ ಬಯಸಿದ್ದೆಲ್ಲವು ನನಗೆ ಸಿಕ್ಕಿದೆ. ನಾನು ನನ್ನ ಲೈಫಲ್ಲಿ ಸಕ್ಸೆಸಫುಲ್ ಆಗುವಲ್ಲಿ ಈ ಮಾತುಗಳ ಪಾತ್ರ ಬಹಳಷ್ಟಿದೆ. ನನ್ನ ಬದುಕನ್ನು ಬದಲಿಸಿದ ಆ ಮಾತುಗಳು ಇಲ್ಲಿವೆ ;
ಬದುಕು ಬದಲಿಸಿದ ಮಾತುಗಳು : Here are the Kannada Quotes which changed my life
1) ನೀನು ಬಡವನಾಗಿ ಹುಟ್ಟಿದ್ದರೆ ಅದು ನಿನ್ನ ತಪ್ಪಲ್ಲ. ಆದರೆ ನೀನು ಬಡವನಾಗಿ ಸತ್ತರೆ, ಅದು ಖಂಡಿತ ನಿನ್ನದೇ ತಪ್ಪು. ---> ಬಿಲಗೇಟ್ಸ
2) ನಿಮಗೆ ಯಾವುದಾದರೂ ಒಂದು ಕೆಲಸವನ್ನು ಮಾಡಲು ಮೋಟಿವೇಷನ್ ಬೇಕಾದರೆ ಆ ಕೆಲಸವನ್ನು ಮಾಡಬೇಡಿ. ---> ಈಲಾನ್ ಮಸ್ಕ
3) ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ. ---> ಆಚಾರ್ಯ ಚಾಣಕ್ಯ
4) ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ, ಅದು ನಮ್ಮ ಮೇಲೆನೇ ಇದೆ. ---> ವಿಲಿಯಮ ಶೇಕ್ಸ್‌ಪಿಯರ್
6) ನಿಮಗೆ ಸೂರ್ಯನಂತೆ ಮಿಂಚುವ ಆಸೆಯಿದ್ದರೆ ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ. ---> ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್
7) ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ. ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯವಿರುವುದು ನಿಮಗೆ ಮಾತ್ರ. ---> ಸ್ವಾಮಿ ವಿವೇಕಾನಂದ
8) ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ಗೆಲ್ಲಿ. ಆನಂತರ ಜಗತ್ತು ನಿಮ್ಮ ಕಾಲ ಕೆಳಗಿರುತ್ತದೆ. ---> ಸ್ವಾಮಿ ವಿವೇಕಾನಂದ
9) ಅತಿದೊಡ್ಡ ರಿಸ್ಕ ಎಂದರೆ ರಿಸ್ಕ ತೆಗೆದುಕೊಳ್ಳದೇ ಇರುವುದು. ---> ಮಾರ್ಕ ಜುಕರಬರ್ಗ
10) ಸಂತೋಷದ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ. ಆದರೆ ನಾವು ಎಲ್ಲಿಯವರೆಗೂ ಮುಚ್ಚಿದ ಬಾಗಿಲಿನ ಕಡೆಗೆ ನೋಡುತ್ತಿರುತ್ತೇವೆಯೋ ಅಲ್ಲಿ ತನಕ ನಮಗೆ ನಮಗಾಗಿ ತೆರೆದ ಇನ್ನೊಂದು ಬಾಗಿಲು ಕಾಣಿಸುವುದಿಲ್ಲ. ---> ಹೆಲೆನ್ ಕೆಲರ್.
11) ಎಲ್ಲವೂ ನಿಮ್ಮ ವಿರುದ್ಧವಾಗಿ ಹೊರಟಾಗ ಒಂದು ಮಾತನ್ನು ನೆನಪಿಡಿ ; ವಿಮಾನ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ಗಾಳಿಯ ಜೊತೆಗಲ್ಲ. ---> ಹೆನ್ರಿ ಫೋರ್ಡ್
13) ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ. ಆದರೆ ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಹುಡುಕುತ್ತಾನೆ. ---> ವಿನ್ಸಸ್ಟನ್ ಚರ್ಚಿಲ್.
15) ಇವತ್ತಿನ ನೋವು ನಾಳೆಯ ಶಕ್ತಿಯಾಗಿದೆ. ಇವತ್ತು ಹೆಚ್ಚಿಗೆ ಕಷ್ಟಪಟ್ಟಷ್ಟು ನಾಳೆ ಮತ್ತಷ್ಟು ಬಲಿಷ್ಟರಾಗುತ್ತೇವೆ. ---> ಅನಾಮಿಕ
16) ಕೆಲವು ಸಲ ನಂತರ (Later) ಎಂದಿದ್ದು, ನೆವರ್ (Never) ಆಗಿ ಬಿಡುತ್ತದೆ. ಆದ್ದರಿಂದ ಮಾಡಬೇಕಾದ ಕೆಲಸಗಳನ್ನು ಈಗಲೇ ಮಾಡಿ. ---> ಅನಾಮಿಕ
19) ಬೇರೆಯವರು ಮಲಗಿಕೊಂಡಾಗ ನೀವು ಕೆಲಸ ಮಾಡಿ. ಬೇರೆಯವರು ಪಾರ್ಟಿ ಮಾಡುವಾಗ ನೀವು ಕಲಿಯಿರಿ. ಬೇರೆಯವರು ಖರ್ಚು ಮಾಡುವಾಗ ನೀವು ಕೂಡಿಡಿ. ಕೊನೆಗೆ ಬೇರೆಯವರು ಕನಸು ಕಾಣುವಂತೆ ನೀವು ಬದುಕಿ. ---> ಅನಾಮಿಕ
20) ಯಾರಾದರೂ ನಿಮ್ಮನ್ನು ತಿರಸ್ಕರಿಸಿದಾಗ ಬೇಜಾರು ಮಾಡಿಕೊಳ್ಳದಿರಿ. ಏಕೆಂದರೆ ಬಡ ಜನರಿಗೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳುವ ಯೋಗ್ಯತೆ ಇರುವುದಿಲ್ಲ. ---> ಅನಾಮಿಕ
21) ನಿಮಗೆ ಸ್ಟ್ರೇಸ್ಸನ್ನು, ಸೋಲನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಿಮ್ಮಿಂದ ಸಕ್ಸೆಸನ್ನು ಸಹ ನಿಭಾಯಿಸಲು ಸಾಧ್ಯವಿಲ್ಲ. ---> ಅನಾಮಿಕ
22) ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣಸಣ್ಣ ಕೆಲಸಗಳನ್ನೇ ಮಹಾನ್ ರೀತಿಯಲ್ಲಿ ಮಾಡಿ. ---> ನೆಪೋಲಿಯನ್ ಹಿಲ್.
25) ಈ ಜಗತ್ತಿನಲ್ಲಿ ಯಾವುದು ಸುಲಭವಲ್ಲ, ಯಾವುದು ಅಸಾಧ್ಯವಲ್ಲ. ಎಲ್ಲ ಆಟ ನಂಬಿಕೆಯ ಮೇಲೆ ನಿಂತಿದೆ. ಯಾವನು ತನಗೆ ಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಸಾಧ್ಯವಿದೆ. ಯಾವನು ತನಗೆ ಅಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಅಸಾಧ್ಯವಾಗಿದೆ. ---> ಸಂದೀಪ ಮಹೇಶ್ವರಿ
ಇವೀಷ್ಟು ನನ್ನ ಬದುಕನ್ನು ಬದಲಿಸಿದ ಮಾತುಗಳು. ನಿಮ್ಮ ಬದುಕನ್ನು ಬದಲಿಸಿದ ಮಾತುಗಳನ್ನು ತಪ್ಪದೇ ಕಮೆಂಟ್ ಮಾಡಿ. ಬರೀ ಅಂಕಣಗಳನ್ನು ಓದುವುದರಿಂದ ಏನು ಆಗಲ್ಲ. ನಿಮ್ಮ ಬದುಕನ್ನು ಬದಲಿಸಿದ ಮಾತನ್ನು ಕಮೆಂಟ್ ಮಾಡಿ. ಅದರಿಂದ ಬೇರೆಯವರಿಗೂ ಸ್ಪೂರ್ತಿ ಸಿಗಲಿ. ಅವರ ಬದುಕು ಬದಲಾಗಲಿ. ನೀವು ಯಾವಾಗ ಬೇರೆಯವರ ಲಾಭಕ್ಕಾಗಿ ಯೋಚಿಸುತ್ತಿರಿಯೋ ಅವತ್ತು ಜಗತ್ತು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ. All the Best and Thanks you...