
1) 25 ಕಾಡುವ ಪ್ರೇಮ ಕವನಗಳು : Sad Love Poems in Kannada - Kannada Prema Kavanagalu











೧೨) ಕಣ್ಣಿಗೂ, ಕಣ್ಣೀರಿಗೂ
ಕದನವು ಶುರುವಾಗಿದೆ.
ಮನಸಿಗೂ ಕನಸಿಗೂ
ವಿರಹವು ಕಾಡಿದೆ...

೧೩) ಬಲಗಾಲಿಟ್ಟು ನನ್ನೆದೆಯೊಳಗೆ ಬಂದವಳು, ಎಡಗಾಲಿಟ್ಟು ಹೊರ ನಡೆಯುವಾಗ ಅವಸರಪಟ್ಟು ಎಡವಿ ಬಿದ್ದಳು...


೧೫) ಪ್ರೀತಿ ಬತ್ತಿ ಹೋದ
ಮೇಲೆ ಪ್ರೇಯಸಿಯ ನೆನಪೇಕೆ?
ಗೆದ್ದು ಸೋತ ಮೇಲೆ
ಮತ್ತೆ ಸೋಲುವ ಆಸೆಯೇಕೆ?

೧೬) ಕನಸು ಕರಗಿ ಕಂಬನಿಯಾಗಿದೆ
ಅವಳ ನೆನಪು ನಂಜಾಗಿದೆ...

ತರುತ್ತಿದೆ ಸಾವು...

೧೮) ಖಾಲಿ ಜೀವನ
ಪೋಲಿ ಯೌವ್ವನ
ಯಾರಿಗೇಳಲಿ ನನ್ನ ಪ್ರೇಮಕವನ?

ತಣ್ಣೀರಲ್ಲಿ ನನ್ನೆದೆಯ ಸ್ನಾನ
ಒದ್ದೆಯಾಯ್ತು ಪ್ರೇಮ ಕವನ
ದಾರಿ ತಪ್ಪಿದೆ ಪ್ರೀತಿಯ ಪಯಣ
ಕಳೆದೋಗುತ್ತಿದೆ ಯೌವ್ವನ
ಇದ್ದನ್ನೆಲ್ಲ ಯಾರಿಗೇಳಿ ಸಾಯೋಣಾ? ಸುಸ್ತಾದ ಅನುಭವಸ್ಥರು ಸ್ವಲ್ಪ ಹೇಳ್ರಣ್ಣಾ?

೨೦) ಹೃದಯವು ಖಾಲಿಖಾಲಿ
ಜೀವನವು ಖಾಲಿಖಾಲಿ
ಎಕ್ಸಾಮಲ್ಲಿ ಆ್ಯನ್ಸರ್ ಶೀಟು ಖಾಲಿಖಾಲಿ
ನಾನ್ಯಾಕಾದೆ ಇಷ್ಟೊಂದು ಪೋಲಿ?

೨೧) ಎಷ್ಟಂತ ನೆನೆಯಲಿ ನಿನ್ನ
ಕಣ್ಣೀರು ಬತ್ತೊಗೋ ಮುನ್ನ.
ಬೇಗನೆ ಹೇಳಿಬಿಡು ಚಿನ್ನ
ನಾ ನಿನ್ನಲ್ಲೇ ಮರೆಯಾಗೋ ಮುನ್ನ..

೨೨) ಪ್ರೀತಿಗಾಗಿ ಹೂವಾ ಕೊಟ್ಟೆ
ಹೂವಿನಲ್ಲಿ ಹೃದಯ ಇಟ್ಟೆ
ಆ ಹೃದಯದಲ್ಲಿ ಜೀವಾ ಬಿಟ್ಟೆ
ನಿನ್ನಿಂದೆ ಅಲೆದು ನಾ ತುಂಬಾ ಕೆಟ್ಟೆ
ಆದ್ರೂ ನಾ ನಿನ್ನ ಹೊಗಳುವೆ ಕಟ್ಟಿ ಕವನಗಳ ಕೋಟೆ...

೨೩) ನೀ ನಿರ್ಮಿಸಿದ ಮಸಣದ ಮನೆ
ನನ್ನೆದೆಯ ಒಂಟಿ ಕೋಣೆ...

ಕನಸುಗಳ ಸೇತುವೆ
ಕೇಳದೇನೆ ಯಾಕೆ ಕಟ್ಟಿದೆ ಹೇಳು ನೀ ಚೆಲುವೆ..??





3) ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poem - Sad Love Kavana - Viraha Kavana
4) ಪ್ರೀತಿ ಇಲ್ಲದ ಮೇಲೆ : Kannada Sad Love Poem
6) ನನ್ನವಳು : Romantic Love Poem in Kannada - Kannada Love Kavan
7) ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Love Kavana - Kannada Feeling Kavanagalu
ಗೊತ್ತಾಗದ ಪ್ರೀತಿ, ನೀನು ದೂರಾದ ಮೇಲೇಕೆ ಗೊತ್ತಾಗಿ ನನ್ನ ಕಾಡುತ್ತಿದೆ?
8) ನನ್ನ ಪ್ರೇಯಸಿ : ಪ್ರೇಮ ಕಾವ್ಯ Love Kavana - Kannada Love Kavanagalu - My Lover Poetry in Kannada
9) 18 ಪ್ರೇಮ ಕವನಗಳು - ಕನ್ನಡ ಪ್ರೀತಿಯ ಕವನಗಳು - Short Love Poems in Kannada - Kannada Love Kavanagalu


















10) ದ್ವಂದ್ವ ಪ್ರೀತಿ... Kannada Love Poetry.
೨) ಚಟದ ಚಟ್ಟ...
13) ವಿರಹದ ವಿಷ : Sad Love Poetry - Feeling Kavana
14) ನಾನ್ಯಾರು...???? Kannada Poetry - ಕವನಗಳು
ಕನ್ನಡಿಯಲ್ಲೊಮ್ಮೆ ನಿಮ್ಮ ಮುಖವನ್ನು
15) ಮುರಿದ ಮನಸ್ಸು : Sad Poetry - ಕನ್ನಡ ಪ್ರೇಮ ಕವನಗಳು : kannada feeling kavanagalu
16) ಬಂಜರು ಬದುಕು : ಕನ್ನಡ ಕವನಗಳು - ಕನ್ನಡ ಕವನಗಳು - Kannada Kavanagalu - Kannada Kavanagalu About Life
೨) ಲಂಚಾವತಾರ...
೩) ಸಮಯ ಸಾಧಕರು...
17) 4 ಟೈಮ್ ಪಾಸ್ ಪ್ರೇಮಗೀತೆಗಳು.... - ಪ್ರೇಮ ಕವನ ಪ್ರೀತಿಯ ಕವನ
೨) ಅರ್ಥವಾಗದ ಅಸ್ಥಿರ ಪ್ರೀತಿ
೩) ನಿನಗಾಗಿಯೇ...
೪) ಭರವಸೆಯಿಲ್ಲದ ಬಾಳದೋಣಿ
18) ಸೋತಾಗ ಸ್ಪೂರ್ತಿಯಾಗುವ ಕವನಗಳು - ಕನ್ನಡ ಕವನಗಳು - ಬದುಕಿನ ಕವನಗಳು - Kannada Kavanagalu about Life
೧) ಸಾಧನೆಯ ಗಾಳಿಪಟ
೨) ಬಾಳು ಬರೀ ಗೋಳಲ್ಲ... - Kannada Kavanagalu about Life
೩) ಭಾರವಾದ ಬದುಕು : Kannada Kavanagalu About Life
೪) ಮನುಜ ಮತದ ಹೂಬುಟ್ಟಿ
19) ಸೋತ ಪ್ರೇಮಿಯ 5 ವಿರಹಗೀತೆಗಳು - Sad love poems in kannada
೨) ಪ್ರೇಮಪೂಜೆ
೩) ಮಸಣದ ಹೂವು
೪) ಕಾಣೆಯಾದ ಕನಸು
೫) ಹೃದಯದ ಹಾಡು ;
20) ಪ್ರೇಮಿಯೊಬ್ಬನ ಚರಣಗೀತೆ : Sad Love Poetry in Kannada - feeling kavana
21) ಸ್ನೇಹಾನಾ? ಪ್ರೀತಿನಾ? Kannada Love Poetry - Kannada Kavanagalu Friendship
22) ಪ್ರೀತಿಸು ಇಲ್ಲವೇ ಸಾಯಿಸು.. Kannada Sad love Poetry
23) 3 ಪೋಲಿ ಪ್ರೇಮ ಕವನಗಳು - ಕನ್ನಡ ಕವನಗಳು - Love Poems In Kannada - Kannada Kavanagalu
೧) ಮದುವೆ ಗಂಟಿನ ಕಗ್ಗಂಟು :
೨) ಕನ್ಯೆ V/S ಸೊನ್ನೆ
೩) ಹುಚ್ಚು ಹರಕೆ
24) ಪ್ರೇತಾತ್ಮದ ಪ್ರೇಮ ವೇದನೆ..... Kannada Virah Geetegalu
ನೀನಾಗೆ ಬಂದು ಪ್ರೀತಿಸುತ್ತೇನೆಂದಾಗ
ನನ್ನ ಹೃದಯವನ್ನೇ ಕೊಟ್ಟೆ........
25) ಗೆಳತಿ ನೀ ದೂರಾದಾಗ - Kannada Sad Love Kavanagalu - Kannada Love Poems : Love Kavana
26) ಕೇಳು ಓ ಮನಸ್ಸೇ ... - Kannada Kavan
27) ಓ ಪ್ರೀತಿಯೇ ನೀ ಅಮರವೇ ? - Kannada Sad Love Poem - ಕನ್ನಡ ವಿರಹ ಕವನ
ನನ್ನ ಹೃದಯದೊಡನೆ ನಿನ್ನ ಸಮರವೇ?
ಪ್ರಿಯೆಯೆಂಬ ಕೋಗಿಲೆಗೆ ನೀ ಮಾಮರವೇ?
ನನ್ನ ಮನಕುಟೀರದಲ್ಲಿ ನೀ ಚಾಮರವೇ?
ನನ್ನವಳ ಅಂತರಂಗ ನಿನ್ನಲ್ಲಿ ಪರಸ್ಪರ,
ಸಂಬಂಧದ ಹೊರನೋಟಕ್ಕೆ ನೀನೇ ಅಪಸ್ವರ.
ಬಂಧ ಬಂಧನವಾಗಲು ನಿನ್ನದೇ ಬಲುಕಾತುರ,
ಕೊಂಡಿ ಕಳಚಿದರೆ ನಿನ್ನದು ಬರೀ ಮರ್ಮರ...
ಪ್ರೀತಿ ನಿನಗಿಲ್ಲ ತಾನೇ ರೂಪ ಶರೀರ?
ನ್ಯಾಯವೇ ನಿನಗಾಗಿ ಹುಡುಗನ ಕಳೇಬರ?
ತಾರುಣ್ಯದ ಶಿಖರದಲ್ಲಿ ನಿನ್ನ ಸಿಹಿ ಶಿಬಿರ,
ಅವಸರದ ಮನದಲ್ಲಿ ನಿನ್ನದೇ ಸಡಗರ...
ಅವಳ ಜೊತೆಸಾಗಲು ನನಗೆ ಕಾತರ,
ನೀ ಎದೆ ಮೀಟಿದರೆ ಎಲ್ಲವೂ ಸುಂದರ.
ನಾ ಅವಳೊಡನೆ ಇದ್ದಾಗ
ನಿನ್ನ ನೆನಪು ಸಾವಿರ,
ಅವಳು ಮರೆಯಾದರೂ
ನೀನೇಕೆ ಅಜರಾಮರ?
28) ಕಳ್ಳನೋಟಗಳ ಕರಾಳ ನೆನಪುಗಳು : Respect Women and Save Women - ಕನ್ನಡ ಸಾಮಾಜಿಕ ಕವನ
29) ನನ್ನ ಸೌಂದರ್ಯ ನನಗೆ ಶಾಪವೇ? kannada Sad Poetry ಕನ್ನಡ ಕವನಗಳು
ಭ್ರೂಣವಾಗಿರುವಾಗಲೇ ನನ್ನ ಕೊಲ್ಲಲೆತ್ನಿಸಿದರು
ಆದರೆ ಹೇಗೋ ದೈವಬಲದಿ ನಾ ಬದುಕಿ ಬಂದೆ.
ನನ್ನ ಮೇಲೆ ಎಲ್ಲರಿಗೂ ತಾತ್ಸಾರ,
ಹೆಣ್ಣು ಮಗು ಹುಣ್ಣೆಂಬ ಲೆಕ್ಕಾಚಾರ...
ಬೀದಿಯಲ್ಲಿ ಬಿದ್ದು ಬೆಳೆದೆ
ವಿಧಿಯನ್ನು ಗೆದ್ದು ಓದಿದೆ
ಕಾಮುಕರ ಕಣ್ತಪ್ಪಿಸಿ ಓಡಾಡಿದೆ
ಹಗಲೊತ್ತಿನಲ್ಲೆ ಕತ್ತಲನ್ನು ಕಂಡೆ...
ಶಾಲೆಯಲ್ಲಿ ಗುರುವಿನ ಕಣ್ಣು
ಆಶ್ರಮದಲ್ಲಿ ಪ್ರಭುವಿನ ಕಣ್ಣು
ನನ್ನ ಸೌಂದರ್ಯವೇ ನನಗೆ ಶಾಪ
ಯಾರ ಮೇಲೆ ತೀರಿಸಿಕೊಳ್ಳಲಿ ನನ್ನ ಕೋಪ ??
ಆವತ್ತು ನನ್ನ ಕೂಗಿಗೆ ಬೆಲೆಯಿರಲಿಲ್ಲ
ನನ್ನ ಕೊರಗಿಗೆ ಎಲ್ಲೆಯಿರಲಿಲ್ಲ
ಕಾಮದ ಬೇಗೆಗೆ ನನ್ನ ದೇಹ ದಹಿಸಿದರೂ
ಕಾಮುಕರ ಕಾಮದಾಹ ತೀರಲಿಲ್ಲ.
ಬದುಕುವ ಆಸೆಯಿದ್ದರೂ
ನನ್ನನ್ನು ಬದುಕಲು ಬಿಡಲಿಲ್ಲ
ನನಗಾದ ದ್ರೋಹಕ್ಕೆ ಪರಿಹಾರವಿಲ್ಲ
ನನಗೆ ನಿಮ್ಮ ಕ್ಯಾಂಡಲ್ ಮತ್ತು
ತೋರಿಕೆಯ ಮೊಸಳೆ ಕಣ್ಣೀರು ಬೇಕಿಲ್ಲ...
ಹೆಣ್ಣನ್ನು ಬರೀ ಕಾಮದ ಕಣ್ಣಿಂದ ಕಾಣ್ತಿರಲ್ಲ,
ಪ್ರೇಮದ ಕಣ್ಣಿಂದಲೂ ಕಾಣಬಹುದಲ್ಲ?
ನನ್ನಾತ್ಮಕ್ಕೆ ಶಾಂತಿ ಸಿಗುತ್ತಿಲ್ಲವಲ್ಲ?
ನಾ ಅಳಿದರೂ ನನ್ನ ಸೋದರಿಯರಿಗೆ
ಸುಭದ್ರ ರಕ್ಷಣೆ ಯಾಕಿಲ್ಲ?
ಹೆಣ್ಣಾಗಿ ಹುಟ್ಟಿದ್ದು ತಪ್ಪಾ?
ಅಥವಾ ಕುರುಡು ಕಾನೂನಿರುವ
ದೇಶದಲ್ಲಿ ಹುಟ್ಟಿದ್ದು ತಪ್ಪಾ?
ಇಲ್ಲವೇ ನನ್ನ ಸೌಂದರ್ಯವೇ
ನನಗೆ ಶಾಪವೇ ?????
30) ನಿನಗೆ ನೆನಪಿದೆಯಾ? Love kavana - Kavanagalu - Feeling kavana
31) ಒಂದು ಕಾಲದಲ್ಲಿ - ಒಂದು ವಿರಹ ಕಾವ್ಯ - Kannada Sad Love Kavanagalu - Viraha Kavya

ಒಂದು ಕಾಲದಲ್ಲಿ ನಾ ಹುಚ್ಚನಂತೆ ನಿನ್ನ ಹಿಂದೆ ಸುತ್ತುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಹುಚ್ಚನಂತೆ ಪ್ರೀತಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನೊಡನೆ ಮಾತನಾಡಲು ಹುಚ್ಚನಂತೆ ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಮುಗುಳ್ನಗೆಯನ್ನು ನೋಡಲು ಹುಚ್ಚನಂತೆ ಕಾತರಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಪೋನ ಕರೆಗೆ, ಮುದ್ದಾದ ಮೆಸೇಜಗಳಿಗೆ ರಾತ್ರಿಯೆಲ್ಲ ಗೂಬೆಯಂತೆ ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾನು ನಿನ್ನನ್ನು ಊರ ತುಂಬ ಸುತ್ತಾಡಿಸಲು ಬಾಡಿಗೆ ಬೈಕನ್ನು ಸಾಲ ಮಾಡಿ ತರುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನಗೆ ಚೂಡಿದಾರವನ್ನು ಕೊಡಿಸಲು ನನ್ನ ಬೆಳ್ಳಿ ಉಡದಾರವನ್ನು ಮಾರಿಕೊಂಡಿದ್ದೆ...
ಒಂದು ಕಾಲದಲ್ಲಿ ನಾ ನಿನಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೆ...
ಒಂದು ಕಾಲದಲ್ಲಿ ನಾ ನೀನಿಲ್ಲದೆ ಬದುಕಲಾರೆನು ಎಂದುಕೊಂಡಿದ್ದೆ...
ಒಂದು ಕಾಲದಲ್ಲಿ ನಾನು ನಿನಗಾಗಿ ತಲೆಕೆಡಿಸಿಕೊಂಡು ಕುಡುಕನಾಗಿದ್ದೆ...
ಒಂದು ಕಾಲದಲ್ಲಿ ನಾನು ನಿದ್ರೆಯಲ್ಲಿಯೂ ನಿದ್ರೆ ಬಾರದೆ ನಿನ್ನ ಹೆಸರನ್ನೇ ಕನವರಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ, ಪ್ರೀತಿಸಿ ಮೋಸ ಮಾಡಿ ಹೋದ ನೀ ಮರಳಿ ಬರುವೆ ಎಂದು ನಿದ್ದೆಗೆಟ್ಟು ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾ, ನೀ ಮರಳಿ ಬರಲ್ಲ ಎಂಬುದು ಗೊತ್ತಾದಾಗ ಆತ್ಮಹತ್ಯೆ ಮಾಡಿಕೊಂಡು ಸಾಯಲು ಮುಂದಾಗಿದ್ದೆ...
ಒಂದು ಕಾಲದಲ್ಲಿ ನಾ ನಿನ್ನನ್ನು ಅಪರಿಚಿತ ಊರಲ್ಲಿ ಬೀದಿಬೀದಿ ಹುಡುಕಾಡಿದ್ದೆ...
ಒಂದು ಕಾಲದಲ್ಲಿ ನಾ, ನೀನೇ ನನ್ನ ಸರ್ವಸ್ವ ಎಂದುಕೊಂಡು ಜೀವಂತ ಶವದಂತೆ ಬದುಕುತ್ತಿದ್ದೆ...
ಒಂದು ಕಾಲದಲ್ಲಿ ಯಾವಾಗ ನೀನು ನಾನಿಲ್ಲದೆ ನಗುತ್ತಿರುವೆ ಎಂಬುದು ಗೊತ್ತಾಯಿತೋ ನಾನು ಬದಲಾದೆ. ಮೋಸ ಮಾಡಿ ಹೋದ ನಿನ್ನನ್ನು ಮರೆತು ನಾನು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದೆ..
ಒಂದು ಕಾಲದಲ್ಲಿ ನಾ ನಿನ್ನನ್ನು ಬಿಟ್ಟು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದರಿಂದ ನನ್ನ ಬಳಿ ಎಲ್ಲವೂ ಇದೆ...
ಒಂದು ಕಾಲದಲ್ಲಿ ನೀನು ನನ್ನನ್ನು ಪ್ರೀತಿಸಿ ವಂಚಿಸಿ ಹೋದದ್ದರ ಫಲವಾಗಿ ನಾನು ಅರಮನೆಯಂಥ ಮನೆಯಲ್ಲಿರುವೆ. ಆದರೆ ನೀನಿನ್ನೂ ಅದೇ ಬಾಡಿಗೆ ಮನೆಯಲ್ಲಿ ಗಂಡನ ಗುಲಾಮಗಿರಿ ಮಾಡಿಕೊಂಡು ಬಿದ್ದಿರುವೆ...
32) ಚಂದ್ರಬಿಂಬದಲ್ಲಿ ಪ್ರೇಮಕಹಾನಿ : Kannada Love Poem - ಕನ್ನಡ ಲವ್ ಕವನಗಳು
ಪಾಡ್ಯದ ಚಂದ್ರ ಪರನಂತೆ ಕಂಡಾಗ
ಎವೆಯಿಕ್ಕದೆ ಅವಳನ್ನು ಕಂಡೆ...
ಬಿದಿಗೆ ಚಂದ್ರ ಬೀದಿಯಲ್ಲಿ ಬಿದ್ದಾಗ
ಅವಳ ಸ್ನೇಹ ಬಯಸಿದೆ....
ತದಿಗೆ ಚಂದ್ರ ಶರದಿ ಸೇರಿದಾಗ
ಸ್ನೇಹದ ಪರಿಧಿ ಭರದಿ ಸಾಗಿದೆ...
ಚತುರ್ಥಿ ಚಂದ್ರ ಚಾಮರ ಸೂಸಿದಾಗ
ಪ್ರೇಮದಲೆಯ ಆಸರೆ ಅರಸಿದೆ....
ಪಂಚಮಿ ಚಂದ್ರ ಪಂಚಾಮೃತ ನೀಡಿದಾಗ
ನಾನವಳ ಪ್ರೀತಿಯಲ್ಲಿ ಬಿದ್ದೆ...
ಷಷ್ಠಿ ಚಂದ್ರ ಶುಭಮಸ್ತು ಎಂದಾಗ
ಪ್ರೀತಿ ಹೇಳಲು ಒದ್ದಾಡಿದೆ...
ಸಪ್ತಮಿ ಚಂದ್ರ ಸಾರಥಿಯಾದಾಗ
ನಾನವಳ ಹೃದಯದೆಡೆಗೆ ಸವಾರಿ ಮಾಡಿದೆ...
ಅಷ್ಟಮಿ ಚಂದ್ರ ಅಗ್ಗಿಷ್ಟಿಕೆ ನೀಡಿದಾಗ
ಅವಳ ಮನದಲ್ಲಿ ಪ್ರೀತಿಜ್ಯೋತಿ ಬೆಳಗಿದೆ...
ನವಮಿ ಚಂದ್ರ ನಗುಬೀರಿದಾಗ
ನನ್ನ ಅಶ್ರುಧಾರೆಯ ನಿಲ್ಲಿಸಿದಳಾಕೆ...
ದಶಮಿ ಚಂದ್ರ ದಶಾವತಾರ ತೋರಿದಾಗ
ನನ್ನ ಜೀವನಕ್ಕೆ ಕಾಲಿಟ್ಟಳಾಕೆ...
ಏಕಾದಶ ಚಂದ್ರ ಏಕಾಂತ ಸೂಸಿದಾಗ,
ಅವಳು ನನ್ನ ಪ್ರೀತಿಗೆ ಆತಂಕ ನೀಡಿದ್ದೇಕೆ?
ದ್ವಾದಶ ಚಂದ್ರ ದಿಢೀರನೆ ಅತ್ತಾಗ,
ನನ್ನನ್ನು ನಡು ನೀರಿನಲ್ಲಿ ಮುಳುಗಿಸಿದಳಾಕೆ...
ತ್ರಯೋದಶ ಚಂದ್ರ ಚಾರಿತ್ರ್ಯ ಬೋಧಿಸಿದಾಗ,
ಅವಳ ಚರಿತ್ರೆ ಮರೆಯಲು ಪ್ರಯತ್ನಿಸಿದೆ....
ಚತುರ್ಧಶ ಚಂದ್ರ ಬೆಳದಿಂಗಳ ಹುಣ್ಣಿಮೆ ಎಂದಾಗ
ಅವಳು ಕೊಟ್ಟ ಅಮವಾಸ್ಯೆಯನ್ನು ಮರೆತೆ.....
33) ನನ್ನ ಬೆಸ್ಟ ಟೀಚರ್ಸ : My Best Teachers : kannada kavanagalu

ಕಲಿಸಿದವರು ಮಾತ್ರ ಗುರುಗಳಲ್ಲ...
ಕಷ್ಟದಲ್ಲಿದ್ದಾಗ ಇಷ್ಟಪಟ್ಟು ಸಹಾಯ ಮಾಡಿ,
ಹೆಗಲಿಗೆ ಹೆಗಲು ಕೊಟ್ಟ ನಿಂತ ಸ್ನೇಹಿತರು...
ಅಜ್ಞಾನವೆಂಬ ಕತ್ತಲೆಯಲ್ಲಿದ್ದಾಗ ಜ್ಞಾನದಾಹವನ್ನು
ನೀಗಿಸಿ ಬದುಕಿನ ದಾರಿಯನ್ನೇ ಬದಲಿಸಿದ ಹೊತ್ತಿಗೆಗಳು...
ನಡುದಾರಿಯಲ್ಲಿ ಅಳುತ್ತಾ ನಿಂತಿದ್ದಾಗ
ಕಣ್ಣೀರೊರಸಿ ಕೈತುತ್ತು ನೀಡಿದ ಕರುಣೆಯ ಕೈಗಳು...
ಜನ್ಮಕೊಟ್ಟು ಜಗತ್ತನ್ನು ಪರಿಚಯಿಸಿದ
ಪೂಜ್ಯ ತಂದೆತಾಯಿಗಳು...
ಹೊಟ್ಟೆಬಟ್ಟೆಗಿಲ್ಲದೆ, ಓದಿಗೆ ದುಡ್ಡಿಲ್ಲದೇ
ಅಲೆಯುತ್ತಿರುವಾಗ ಕರೆದು ಕೆಲಸ ಕೊಟ್ಟ ಮಹಾತ್ಮರು...
ತಪ್ಪು ಮಾಡಿದಾಗ ಪಶ್ಚಾತ್ತಾಪ ಪಡುವಂತೆ
ಮಾಡಿದ ಆತ್ಮಸಾಕ್ಷಿಯ ಅರಿವು...
ಮುಗುಳುನಗೆಯಲ್ಲಿ ಹಗೆಯ ಸಂಚನ್ನು ಮುಚ್ಚಿಟ್ಟು
ವಂಚಿಸಿದ ನಯವಂಚಕ ಸಮಯಸಾಧಕರು...
ಬದುಕೇ ಬೇಡವಾದಾಗ ಬದುಕಿಗೆ
ಸ್ಪೂರ್ತಿಯಾಗಿ ಬಂದ ಜೀವದ ಗೆಳತಿ...
ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವುದನ್ನು
ಕಲಿಸಿದ ಬರಿಬಾದ ಬದುಕು...
ಹೇಗೆ ಬದುಕಬೇಕು ಎಂಬುದನ್ನು
ತೋರಿಸಿಕೊಟ್ಟ ಮಹಾನ್ ಸಾಧಕರು...
ಹೀಗೆ ಎಲ್ಲರೂ ನನ್ನ ಪಾಲಿಗೆ ಬೆಲೆಕಟ್ಟಲಾಗದ
" ಬೆಸ್ಟ್ ಟೀಚರ್ಸ " . ಏಕೆಂದರೆ
"ವರ್ಣಮಾತ್ರಂ ಕಲಿಸಿದಾತನೂ ಸಹ ಗುರು"
34) ಅನಾಥನ ಆತ್ಮವಿಶ್ವಾಸ - Kannada Short Poems - Inspirational Poetry in Kannada

35) ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ... - ಪ್ರೇಮ ಕವನಗಳು - ಪ್ರೀತಿಯ ಕವನಗಳು

36) ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... Kannada Mother Poems - Kavanagalu About Amma in Kannada

37) ವಿಧಿನಿಯಮ : Kannada Poetry : kannada kavanagalu about life
38) ಪ್ಲೀಜ ನನ್ನನ್ನು ಕಾಪಾಡಿ... ಪರಿಸರ ಕವನ, ಕನ್ನಡ ನಿಸರ್ಗ ಕವಿತೆ - Nature Poem in Kannada - parisara kavana in kannada

ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ಸುಂದರ ನಿಸರ್ಗ
ಭೂಮಿ ಮೇಲಿನ ಸ್ವರ್ಗ
ನನ್ನನ್ನು ಸಾಯಿಸಿದರೆ ತೋರಿಸುವೇನು
ನಿಮಗೆ ಬದುಕಿರುವಾಗಲೇ ನರಕ...
ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ನಿಮ್ಮ ನಿಸರ್ಗ
ನಾನು ನಿಮಗೆಲ್ಲವನ್ನು ಕೊಟ್ಟಿರುವೆ
ಆದರೆ ನನಗೆ ನೀವೇನು ಕೊಟ್ಟಿಲ್ಲ.
ಒಳ್ಳೆಯದನ್ನ ಕೊಡಲಾಗದಿದ್ದರೆ
ಪ್ಲೀಜ ಪೋಲುಷನನ್ನು ಕೊಡಬೇಡಿ,
ಕಸ ಎಸೆದು ನನ್ನನ್ನು ಮೈಲಿಗೆ ಮಾಡಬೇಡಿ...
ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ನಿಮ್ಮ ಪರಿಸರ
ನನ್ನ ಮೇಲೆ ಮಾಡಬೇಡಿ ಅತ್ಯಾಚಾರ
ಉಪಕಾರವರಿಯದೇ ಮಾಡಬೇಡಿ ಅಪಚಾರ
ಇಲ್ಲವಾದರೆ ನಾನು ಪ್ರವಾಹ, ಸುನಾಮಿ ತಂದು
ಮಾಡುವೆನು ಸ್ವಚ್ಛತೆಯ ಜೊತೆಗೆ ನಿಮ್ಮ ಅಂತ್ಯ ಸಂಸ್ಕಾರ...
ನನ್ನನ್ನು ಕಾಪಾಡಿ, ಪ್ಲೀಜ ನನ್ನನ್ನು ಕಾಪಾಡಿ
ನಾನು ನಿಮ್ಮ ತಾಯಿ ಭೂದೇವಿ
ನಿಮಗೆ ಗಾಳಿ, ಮಳೆ, ಬಿಸಿಲು, ಬೆಳಕು, ಅನ್ನ,
ನೀರು, ಆಶ್ರಯ ಎಲ್ಲವನ್ನು ನಾನೇ ಫ್ರಿಯಾಗಿ ಕೊಟ್ಟಿರುವೆ.
ನೀವು ನನ್ನ ಮನೆಯಲ್ಲಿ ಬಾಡಿಗೆ ಕೊಡದೇ ಇರುವಿರಿ,
ಇರುವುದಾದರೆ ಸರಿಯಾಗಿರಿ,
ಸ್ವಚ್ಛತೆ ಪಾಲಿಸಿ ನನ್ನನ್ನು ಕಾಪಾಡಿ
ಇಲ್ಲವಾದರೆ ನಾನು ನಿಮ್ಮನ್ನು ಖಂಡಿತ ಕೊಲ್ಲುವೆ,,,
ನಾನು ಕೆರಳಿ ಒಮ್ಮೆ ಕಂಪಿಸಿದರೆ ಸಾಕು
ನೀವೆಲ್ಲ ಕ್ರಿಮಿ ಕೀಟಗಳಂತೆ ನನ್ನ ಗರ್ಭದಲ್ಲಿ ಮಣ್ಣಾಗಿ ಹೋಗುವಿರಿ.
ಆಗ ನೀವು ಕಿರುಚುವಿರಿ "ನನ್ನನ್ನು ಕಾಪಾಡಿ, ಪ್ಲೀಜ ನನ್ನನ್ನು ಕಾಪಾಡಿ...."
39) ಕೇಳಿಸದ ಕೂಗು - ಒಂದು ಆಕ್ರೋಶದ ಕವಿತೆ : One Outrage Poem in Kannada
To Be Continued....