ಪ್ಲೀಜ ನನ್ನನ್ನು ಕಾಪಾಡಿ... ಪರಿಸರ ಕವನ, ಕನ್ನಡ ನಿಸರ್ಗ ಕವಿತೆ - Nature Poem in Kannada - parisara kavana in kannada

ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ಸುಂದರ ನಿಸರ್ಗ
ಭೂಮಿ ಮೇಲಿನ ಸ್ವರ್ಗ
ನನ್ನನ್ನು ಸಾಯಿಸಿದರೆ ತೋರಿಸುವೇನು
ನಿಮಗೆ ಬದುಕಿರುವಾಗಲೇ ನರಕ...
ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ನಿಮ್ಮ ನಿಸರ್ಗ
ನಾನು ನಿಮಗೆಲ್ಲವನ್ನು ಕೊಟ್ಟಿರುವೆ
ಆದರೆ ನನಗೆ ನೀವೇನು ಕೊಟ್ಟಿಲ್ಲ.
ಒಳ್ಳೆಯದನ್ನ ಕೊಡಲಾಗದಿದ್ದರೆ
ಪ್ಲೀಜ ಪೋಲುಷನನ್ನು ಕೊಡಬೇಡಿ,
ಕಸ ಎಸೆದು ನನ್ನನ್ನು ಮೈಲಿಗೆ ಮಾಡಬೇಡಿ...
ನನ್ನನ್ನು ಕಾಪಾಡಿ
ಪ್ಲೀಜ ನನ್ನನ್ನು ಕಾಪಾಡಿ,,,
ನಾನು ನಿಮ್ಮ ಪರಿಸರ
ನನ್ನ ಮೇಲೆ ಮಾಡಬೇಡಿ ಅತ್ಯಾಚಾರ
ಉಪಕಾರವರಿಯದೇ ಮಾಡಬೇಡಿ ಅಪಚಾರ
ಇಲ್ಲವಾದರೆ ನಾನು ಪ್ರವಾಹ, ಸುನಾಮಿ ತಂದು
ಮಾಡುವೆನು ಸ್ವಚ್ಛತೆಯ ಜೊತೆಗೆ ನಿಮ್ಮ ಅಂತ್ಯ ಸಂಸ್ಕಾರ...
ನನ್ನನ್ನು ಕಾಪಾಡಿ, ಪ್ಲೀಜ ನನ್ನನ್ನು ಕಾಪಾಡಿ
ನಾನು ನಿಮ್ಮ ತಾಯಿ ಭೂದೇವಿ
ನಿಮಗೆ ಗಾಳಿ, ಮಳೆ, ಬಿಸಿಲು, ಬೆಳಕು, ಅನ್ನ,
ನೀರು, ಆಶ್ರಯ ಎಲ್ಲವನ್ನು ನಾನೇ ಫ್ರಿಯಾಗಿ ಕೊಟ್ಟಿರುವೆ.
ನೀವು ನನ್ನ ಮನೆಯಲ್ಲಿ ಬಾಡಿಗೆ ಕೊಡದೇ ಇರುವಿರಿ,
ಇರುವುದಾದರೆ ಸರಿಯಾಗಿರಿ,
ಸ್ವಚ್ಛತೆ ಪಾಲಿಸಿ ನನ್ನನ್ನು ಕಾಪಾಡಿ
ಇಲ್ಲವಾದರೆ ನಾನು ನಿಮ್ಮನ್ನು ಖಂಡಿತ ಕೊಲ್ಲುವೆ,,,
ನಾನು ಕೆರಳಿ ಒಮ್ಮೆ ಕಂಪಿಸಿದರೆ ಸಾಕು
ನೀವೆಲ್ಲ ಕ್ರಿಮಿ ಕೀಟಗಳಂತೆ ನನ್ನ ಗರ್ಭದಲ್ಲಿ ಮಣ್ಣಾಗಿ ಹೋಗುವಿರಿ.
ಆಗ ನೀವು ಕಿರುಚುವಿರಿ "ನನ್ನನ್ನು ಕಾಪಾಡಿ, ಪ್ಲೀಜ ನನ್ನನ್ನು ಕಾಪಾಡಿ...."