ಒಂದು ನಿರಾಸೆ... ಒಂದು ವಿರಹ ಕಾವ್ಯ - Kannada sad Love Poem - Sad Love Kavana - Viraha Kavana - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಒಂದು ನಿರಾಸೆ... ಒಂದು ವಿರಹ ಕಾವ್ಯ - Kannada sad Love Poem - Sad Love Kavana - Viraha Kavana

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poem

ನನಗೆ ಕಾರಣವಿಲ್ಲದೆ ವಿರಹದ ಕಣ್ಣೀರನ್ನು ಕರುಣಿಸಿ ಕಣ್ಮರೆಯಾದವಳನ್ನು ಕಣ್ತುಂಬ ನೋಡೋವಾಸೆ. ಆದ್ರೆ ಆಕೆಯ ಕಣ್ಣ ಕಾಡಿಗೆ ನನ್ನ ನೋಡಿ ಕೀಚಾಯಿಸಿ ಕಾಡುತ್ತಿದೆ...

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ನನ್ನ ಲೈಫ್ನಾ ಬರಿಬಾದ ಮಾಡಿದವಳನ್ನು ಬಾಯ್ತುಂಬ ಹಾಡಿ ಹೊಗಳುವಾಸೆ. ಆದ್ರೆ ಆಕೆಯ ಕೆಂದುಟಿಯ ಕೆಂಪು ನನ್ನ ನಾಲಿಗೆನಾ ಕಟ್ಟಿ ಹಾಕುತ್ತಿದೆ...

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ನನ್ನ ಕಿವಿಗಳಿಗೆ ಬರೀ ನನ್ನ ನಿಂದನೆಗಳನ್ನೇ ಕೇಳುವಂಥೆ ಮಾಡಿದವಳಿಗೆ ಕಿವಿಯಲ್ಲಿ ಗುಟ್ಟಾಗಿ ಏನೋ ಹೇಳೊವಾಸೆ. ಆದ್ರೆ ಅವಳ ಕಿವಿಯೋಲೆ ನನ್ನ ಕೆಣಕಿ ಕೇಕೆ ಹಾಕುತ್ತಿದೆ...

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ನನ್ನ ಮಂದಹಾಸವನ್ನು ಕಿತ್ತುಕೊಂಡವಳನ್ನು ಮುತ್ತು ನೀಡಿ ಮುದ್ದಾಡುವಾಸೆ. ಆದ್ರೆ ಅವಳ ಮೂಗಿನ ಮೂಗುತಿ ನನ್ನ ಅಪಹಾಸ್ಯ ಮಾಡಿ ನಗುತ್ತಿದೆ...

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ಅವಳ ಕಂಗಳ ಕಿಟಕಿಯಲ್ಲಿ ನನ್ನ ಪ್ರೀತಿಯಾಳವನ್ನು ಇಣುಕಿ ಇಣುಕಿ ನೋಡುವಾಸೆ. ಆದರೆ ಅವಳ ಕಣ್ಣೋಟ ನನ್ನನ್ನು ಕೋಪಕಾರಿ ಕೊಲ್ಲುತ್ತಿದೆ... 

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ಅವಳ ಮುದುಡಿದ ಮುಖದಲ್ಲಿ ನನಗಾಗಿ ಅರಳಿದ ನಗುವನ್ನು ಮತ್ತೊಮ್ಮೆ ನೋಡುವಾಸೆ. 
ಆದರೆ ಅವಳ ಮುಗುಳ್ನಗೆ ನನ್ನ ಮನಸ್ಸಿಗೆ ಮುಳ್ಳಾಗಿ ಚುಚ್ಚುತ್ತಿದೆ... 

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ಮಳೆ ಸುರಿಯುವಾಗ ಆಕಾಶಕ್ಕೆ ಕೊಡೆ ಹಿಡಿಯುವಾಸೆ. ಚಳಿಯಾದಾಗ ಭೂಮಿಗೆ ಕಂಬಳಿ ಹೊದಿಸುವಾಸೆ. ಸುಡೋ ಸೂರ್ಯನಿಗೆ ಸಾರಾಯಿ ಕುಡಿಸುವಾಸೆ. ಚಂದ್ರನಿಗೆ ಚಾಕಲೇಟ ತಿನ್ನಿಸುವಾಸೆ. ಕೊನೆಯದಾಗಿ ಕಣ್ಮುಚ್ಚುವ ಮುನ್ನ ಅವಳನ್ನು ಕಣ್ತುಂಬ ನೋಡುವಾಸೆ. ಆದರೆ ಅವಳ ದುರಾಸೆಯಿಂದಾಗಿ ಎಲ್ಲವೂ ಬರೀ ನಿರಾಸೆ...

ಒಂದು ನಿರಾಸೆ... ಒಂದು ವಿರಹ ಕಾವ್ಯ : Kannada sad Love Poetry

ಒಂದು ನಿರಾಸೆ... ಒಂದು ವಿರಹ ಕಾವ್ಯ - Kannada sad Love Poem - Sad Love Kavana - Viraha Kavana ಒಂದು ನಿರಾಸೆ... ಒಂದು ವಿರಹ ಕಾವ್ಯ - Kannada sad Love Poem - Sad Love Kavana - Viraha Kavana Reviewed by Director Satishkumar on April 13, 2018 Rating: 4.5
Powered by Blogger.
close
skkkannada.com