ವಿಧಿನಿಯಮ : Kannada Poetry : kannada kavanagalu about life - Kannada Inpirational Poem - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ವಿಧಿನಿಯಮ : Kannada Poetry : kannada kavanagalu about life - Kannada Inpirational Poem

ವಿಧಿನಿಯಮ : Kannada Poetry : kannada kavanagalu about life

ಸೋಲನ್ನು ಸವಾಲಾಗಿ ಸ್ವೀಕರಿಸು
ಗೆಲುವನ್ನು ಬುನಾದಿಯಾಗಿ ಉಳಿಸು
ಸೋಲು ಗೆಲುವನ್ನು ಸಮನಾಗಿ ಅನುಭವಿಸು
ನಗುನಗುತ್ತಾ ನೀ ಜೀವನವಾ ಸಾಗಿಸು...


kannada inspirational kavanagalu about life

ಸತತ ಪರಿಶ್ರಮವೇ ಗೆಲುವಿನ ಗುಟ್ಟು
ಪ್ರಯತ್ನವಿರದ ಆಲಸ್ಯವೇ ಸೋಲಿನ ಹುಟ್ಟು
ಪ್ರಯತ್ನಗಳಿಂದ ಎದೆಬಾಗಿಲನ್ನು ತಟ್ಟು
ಆತ್ಮವಿಶ್ವಾಸದಿಂದ ಸೋಲನ್ನು ಹಿಮ್ಮೆಟ್ಟು...

kannada inspirational kavanagalu about life

ಸೋತವನಿಗೆ ಗೆಲ್ಲುವ ಛಲಬೇಕು
ಗೆದ್ದವನ ಕಾಲು ನೆಲ ತಾಗಿರಬೇಕು
ಸೋತವನಿಗೆ ಸಹನೆ ಬೇಕು
ಗೆದ್ದವನಿಗೆ ಸಂಯಮ ಇರಬೇಕು...

kannada inspirational kavanagalu about life

ಸೋತ ಮನಸ್ಸಿಗೆ ತಾನೇ
ಗೆಲ್ಲುವ ಛಲವಿರುವುದು?
ಗೆಲ್ಲದ ಮನಸ್ಸಿಗೆ ತಾನೇ
ಸೋಲುವ ಭಯ ಕಾಡುವುದು...?

kannada inspirational kavanagalu about life

ಸೋತ ಮನಸ್ಸು ಗೆಲ್ಲಲೇಬೇಕು.
ಗೆದ್ದ ಮನಸ್ಸು ಒಮ್ಮೆಯಾದರೂ,
ಯಾರಿಗಾದರೂ ಸೋಲಲೇಬೇಕು
ಇದು ವಿಧಿ ನಿಯಮ ತಾನೇ...?

kannada inspirational kavanagalu about life
Blogger ನಿಂದ ಸಾಮರ್ಥ್ಯಹೊಂದಿದೆ.