ನನ್ನ ಪ್ರೇಯಸಿ : ಪ್ರೇಮ ಕಾವ್ಯ - Love Kavana - Kannada Love Kavanagalu - My Lover Poetry in Kannada - ಹೆಣ್ಣಿನ ಸೌಂದರ್ಯ ಕವನಗಳು - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನನ್ನ ಪ್ರೇಯಸಿ : ಪ್ರೇಮ ಕಾವ್ಯ - Love Kavana - Kannada Love Kavanagalu - My Lover Poetry in Kannada - ಹೆಣ್ಣಿನ ಸೌಂದರ್ಯ ಕವನಗಳು

ನನ್ನ ಪ್ರೇಯಸಿ : ಪ್ರೇಮ ಕಾವ್ಯ - Love Kavana - Kannada Love Kavanagalu

ನನ್ನ ಪ್ರೇಯಸಿ ಮಿಸ್ ವಲ್ಡ್ ಅಲ್ಲ.
ಅವಳು ಮಿಸ್ ಇಂಡಿಯಾ ಸಹ ಅಲ್ಲ.
ಅವಳು ಮಿಸ್ ಕರ್ನಾಟಕ ಕೂಡ ಅಲ್ಲ.
ಅವಳು ಬರೀ ಮಿಸ್ ಹಾರ್ಟ್...

Love Kavanagalu in Kannada

ಅವಳು ಹೃದಯದಿಂದ ಮಾತ್ರ ಶ್ರೀಮಂತಳು
ಅವಳು ಬರೀ ಹೃದಯದಿಂದ ಸುಂದರಳು.
ಅದಕ್ಕೆ ಅವಳು ನನ್ನ ಸ್ವೀಟಹಾರ್ಟಿಗೆ
ಪ್ರೇಯಸಿಯಾಗಿರುವಳು...

Love Kavanagalu in Kannada

ಅವಳು ಸಿಟಿ ಸುಂದರಿಯಲ್ಲ.
ಅವಳ ಮೈಬೆವರಿನ ಸುವಾಸಣೆ ಯಾವ
ಸುಂದರಿಯ ಸೆಂಟ ವಾಸನೆಗಿಂತಲೂ ಕಮ್ಮಿಗಿಲ್ಲ...


Love Kavanagalu in Kannada

ಫ್ಯಾಷನ್ ಎಂದರೆ ಅವಳಿಗೇನಂತ ಗೊತ್ತಿಲ್ಲ
ಲಿಪಸ್ಟಿಕ್ಕಿನ ನೆರಳು ಅವಳ
ತುಟಿಗಳ ಮೇಲಿನ್ನೂ ಬಿದ್ದಿಲ್ಲ.
ಸೀರೆಯುಟ್ಟರೆ ಅವಳಿಗಿಂತ
 ಸೆಕ್ಸಿಯಾಗಿರೋ ಸುಂದರಿ ಎಲ್ಲೂ ಸಿಗಲ್ಲ...

Love Kavanagalu in Kannada

ಪ್ರೀತಿಗೆ ಕಣ್ಣಿಲ್ಲ, ಅವಳನ್ನು ನೋಡಲು
ನನ್ನೆರಡು ಕಣ್ಣುಗಳು ಸಾಲಲ್ಲ.
ಪ್ರೀತಿಗೆ ಸಾವಿಲ್ಲ, ಅವಳನ್ನು ಪ್ರೀತಿಸಲು
ನನ್ನ ಒಂದು ಹೃದಯ ಸಾಕಾಗಲ್ಲ.

Love Kavanagalu in Kannada

ಅವಳು ಗುಡಿಯಲ್ಲಿರೋ ದೇವತೆಯಲ್ಲ
ಅರಮನೆಯಲ್ಲಿರೋ ರಾಣಿಯೂ ಅಲ್ಲ.
ಅವಳು ನನ್ನೆದೆಯ ಗುಡಿಸಲಲ್ಲಿರೋ
ಸಿಂಪಲ್ ಸುಂದರಿ...

Love Kavanagalu in Kannada

ಅವಳಿಗೆ ಅರಮನೆ ಕಟ್ಟೋ ಆಸೆಯಿಲ್ಲ
ನೆರಮನೆಯವರನ್ನು ನೋಡಿಯಾಕೆ
ಹೊಟ್ಟೆ ಉರಿದುಕೊಳ್ಳುವುದಿಲ್ಲ.
ಕಾಸ್ಟ್ಲಿ ಗಿಫ್ಟಗಳು ಬೇಕೆಂದು
ಅವಳು ಗೋಳಿಡುವುದಿಲ್ಲ...

Love Kavanagalu in Kannada

ಅವಳ ನಗುವಿಗೆ ಯಾವ
ಹೂಗಳು ಅರಳಲ್ಲ.
ಆದರೆ ಅವಳ ನಗುವಿಗೆ ನನ್ನ ಹೃದಯ
ಖಂಡಿತ ಅರಳುತ್ತೆ,
ಅವಳು ನಗದಿದ್ದರೆ ಮರಗುತ್ತೆ...

Love Kavanagalu in Kannada

ಅವಳು ಜಾಸ್ತಿ ಓದಿಲ್ಲ.
ಅವಳಿಗೆ ಒಣಜಂಭವಿಲ್ಲ.
ಅವಳು ಎಲ್ಲ ಹುಡುಗಿಯರಂತೆ
ಸುಂದರ ಸುಶೀಲೆಯಲ್ಲ.
ತುಂಟತನ ಮಾಡುತ್ತಾ ಸದಾ
ಸಂತೋಷವಾಗಿರುವ ಪೋಲಿ ಅವಳು...

Love Kavanagalu in Kannada

ಅವಳ ಮುಗುಳ್ನಗೆ, ಕೊಲ್ಲುವ ಕಣ್ಣೋಟ
ಯಾವ ಅಸ್ತ್ರಗಳಿಗೂ ಕಮ್ಮಿಯಿಲ್ಲ.
ಅವಳ ಕಣ್ಣೋಟ = ಯಾರ್ಕರ್
ಅವಳ ನಗು = ಗೂಗ್ಲಿ
ಅವಳ ಕೋಪ = ಬೌನ್ಸರ್ ಎಂದರೆ 
ಅವಳು ನನ್ನ ಸುಮ್ನೆ ಬಿಡಲ್ಲ...

Love Kavanagalu in Kannada

                 ಪ್ರೇಯಸಿ ಅಥವಾ ಮಡದಿ ಜೀವನದ ಒಂದು ಭಾಗವಲ್ಲ. ಈಡೀ ಜೀವನವೇ ಅವಳು. ಕಷ್ಟಗಳು ಬಂದಾಗ ಗೆಳೆಯರು ನೆಪ ಹೇಳಿ ದೂರ ಉಳಿಯಬಹುದು. ಆದರೆ ಅವಳು ದೂರ ಉಳಿಯಿಲ್ಲ. ಸಂಬಳವಿಲ್ಲದೆ ಕೆಲಸ ಮಾಡುವ, ಸ್ವಾರ್ಥವಿಲ್ಲದೆ ಸಹಾಯ ಮಾಡುವ ಏಕೈಕ ವ್ಯಕ್ತಿಯೆಂದರೆ ಅವಳು ಮಾತ್ರ....


Blogger ನಿಂದ ಸಾಮರ್ಥ್ಯಹೊಂದಿದೆ.