ಪ್ರೀತಿ ಪ್ರೇಮದ ಭಾವನೆ
ಮನಸೇರುವುದು ಹಾಗೇ ಸುಮ್ಮನೆ...
ಅದು ಹೃದಯದ ಒಳಮಿಡಿತಗಳನ್ನು
ತುಟಿಗಳಿಲ್ಲದೇ ಸೇರಿಸುವ ಸೇತುವೆ...
ಹಲವು ಸಲ ಅದು ಜೀವನದ
ದಡ ಸೇರಿಸುವ ಬಾಳದೋಣಿ...
ಕೆಲವು ಸಲ ಅದು ಜೀವನವನ್ನೇ
ಮುಳುಗಿಸುವ ಹಾಳದೋಣಿ...
ಎರಡು ಹೃದಯಗಳ ಸಮ್ಮಿಲನ
ಪ್ರೀತಿ ಬೇಸುಗೆಯ ಪ್ರತೀತಿ..
ಎರಡು ಹೃದಯಗಳ ಅಡ್ಡಚಲನ
ಪ್ರೀತಿಯ ಒಣ ಫಜೀತಿ...
ಪ್ರೀತಿಗ್ಯಾಕಿದೆ ಈ ದ್ವಂದ್ವ ಸ್ವರೂಪ?
ನಿಜವಾದ ಪ್ರೇಮಿಗಳೇ ಪ್ರಾಣ
ಕಳ್ಕೋತ್ತಾರೆ ಅಯ್ಯೋ ಪಾಪ...!!
೨) ಚಟದ ಚಟ್ಟ...
ವಿರಹ ಕೊಟ್ಟ ಮಾಜಿ ಗೆಳತಿಯಿಂದ
ಪರಿಚಯವಾಯಿತು ಚಟ...
ವಿನಾಯತಿ ಸಿಗರೇಟ ಹೊಗೆಯಲ್ಲಿ
ನೆನಪಾಯಿತು ಪ್ರೀತಿಯ ಹಟ...
ರಿಯಾಯತಿ ಕುಡಿತದಿಂದ ಹೆಚ್ಚಾಯಿತು
ಹಳೇ ಹುಡ್ಗಿ ನೆನಪಿನ ಕಾಟ...
ಅಕಾಲ ಸಾವಿನ ಸುದ್ದಿಯಿಂದ
ಖುಷಿಪಟ್ಟಿತು ಚಟ್ಟ...
ಸಮಾಧಿಯ ಸಂದಿಗೊಂದಿಯಲ್ಲಿ
ಮಲಗಿತು ಭವಿಷ್ಯದ ಪಟ್ಟ...
ಸತ್ತವರ ಸುದ್ದಿಯಿಂದ ಇತರರು
ಕಲಿಬಹುದಾ ಒಂದು ಪುಕ್ಸಟ್ಟೆ ನೀತಿಪಾಠ?