ಮುರಿದ ಮನಸ್ಸಲ್ಲಿ ಹೇಳಿಕೊಳ್ಳಲಾಗದಷ್ಟು ಮಾತುಗಳು ಮೌನವಾಗಿ ಚುಚ್ಚುತ್ತಿರುತ್ತವೆ. ಮುರಿದ ಮನಸ್ಸು ಸಹ ಒಂದು ರೀತಿಯ ಅಂಗವೈಕಲ್ಯವೇ ಸರಿ. ಇಷ್ಟಪಟ್ಟವರನ್ನು ಕಷ್ಟಪಟ್ಟು ಮರೆಯುವುದು ಸುಲಭದ ಮಾತಲ್ಲ. ಆದರೆ ಅದು ಅಸಾಧ್ಯವಲ್ಲ. ಮುರಿದ ಮನಸ್ಸುಗಳಿಗೆ ಸಾಂತ್ವನ ಹೇಳಲು ಈ ಚಿಕ್ಕ ಕವನ....
ಓ ಮನಸ್ಸೇ, ಮೋಸಹೋದ ಮನಸ್ಸೇ
ಇದೇನು ನಿನ್ನ ಹೊಸದಾದ ವರಸೆ?
ನಿನಗಿಲ್ಲವೇ ನಿನ್ನ ಮೇಲೆ ಭರವಸೆ?
ಯಾಕೆ ಬರಡಾಯ್ತು ನಿನ್ನ ಕನಸ್ಸುಗಳ ಕಿಸೆ?
ಓ ಮನಸ್ಸೇ, ನೀ ಕಾಣುವುದು ಬರೀ ಕನಸೇ?
ಮರೆಯಲೇಬೇಕು ನೀ ಅವಳಿಂದಾದ ಜಿಗುಪ್ಸೆ.
ನೋವಿಗೆ ಹೆದರಿ ಹೋಗದಿರು ವಲಸೆ
ಯೋಗ್ಯತೆ ಪ್ರಶ್ನಿಸಿದವಳಿಂದ
ಪಡೆಯಬೇಕು ನೀ ಪ್ರಶಂಸೆ...
ಓ ಮನಸ್ಸೇ, ನಿನ್ನದು ಬರೀ ಸರ್ಕಸ್ಸೇ?
ಯಾವಾಗ ನಾಂದಿ ಹಾಡುತ್ತೆ ನಿನ್ನ ಈ ಸಮಸ್ಯೆ?
ಸಿಗದವಳ ಪ್ರೀತಿ ನಿನಗೊಂದು ವರ್ಚಸ್ಸೇ?
ಕೆಚ್ಚದೆಯಿಂದ ಬೀಡು ನಿನ್ನ ಸಪ್ತ ವ್ಯಸೆ
ಓ ಮನಸ್ಸೇ, ಅವಳಾಗಲ್ಲ
ನಿನ್ನ ಮನೆಮನದ ಸದಸ್ಯೆ,
ಕಣ್ಣೀರಿನ ಶಾಖಕ್ಕೆ ಕೆನ್ನೆ ಬಿಸಿಯಾದರೂ
ಮಣ್ಣಾಗಲಿಲ್ಲವೇ ನಿನ್ನ ಮೀಸೆ ?
ಯಾಕೆ ಬೇಕು ನಿನಗೆ ವಿರಹದ ವೀರಗಾಸೆ?
ದೂರಾದವಳನ್ನು ಮರೆತು
ಮುಗಿಸು ನಿನ್ನ ಅಮವಾಸ್ಯೆ........