೧) ಮದುವೆ ಗಂಟಿನ ಕಗ್ಗಂಟು :
ಕತ್ತೆಗೇನು ಗೊತ್ತು
ಕಸ್ತೂರಿಯ ವಾಸನೆ?
ನಮ್ಮಪ್ಪನಿಗೇನು ಗೊತ್ತು
ನನ್ನ ಮನೋಕಾಮನೆ..
ನಮ್ಮ ಬೀದಿಯಲ್ಲೇ ಇದೆ
ನನ್ನ ಪ್ರೇಯಸಿಯ ಮನೆ
ಹೋಗುವೆನು ನಾ ಆ ಕಡೆಗೆ
ಸುಮ್ಮ-ಸುಮ್ಮನೆ...
ಅವಳು ನನಗೆ ಸಹಪಾಠಿ
ಓದಿನಲ್ಲಿ ಬಲುಚೂಟಿ
ಎಲ್ಲರನ್ನೂ ನಾಚಿಸುವಂತಿದೆ
ಅವಳ ಬ್ಯೂಟಿ.... ಆದರೆ
ಅವಳು ಕಾಲ ಕೆದರಿ ಜಗಳಕ್ಕೆ
ಬರೋ ದೊಡ್ಡ ಜಗಳಗಂಟಿ..
ತಮಾಷೆಗೆಂದು ನಿಂತರೆ
ಕಾಲೆಳುವ ತುಂಟಿ...
ನಾವಿಬ್ಬರೂ ಪ್ರೀತಿಸಲು ಶುರುಮಾಡಿ
ಆಯ್ತು ಒಂದು ವರುಷ
ನಮ್ಮ ಪ್ರೀತಿ ಮೇಲೇಕೆ
ಅವಳಪ್ಪನ ಮಹಾಪೌರುಷ?
ಇಬ್ಬರಿಗೂ ಭವಿಷ್ಯವುಂಟು,
ಗುಣವುಂಟು, ಹಣವುಂಟು
ನನಗಾಗಿದೆ 21, ಅವಳಿಗೂ
ಹದಿನೆಂಟು ದಾಟಿದುಂಟು...
ನಮ್ಮಿಬ್ಬರಿಗೆ ಮದುವೆಯ ಗಂಟಾಗಿದರೆ
ಹೋಗುವುದಾ ಇವರ ಅಜ್ಜಿಗಂಟು...??
೨) ಕನ್ಯೆ V/S ಸೊನ್ನೆ
ಆಕೆ ಸೌಂದರ್ಯಲೋಕದ ಕನ್ಯೆ
ಅವಳದು ಊರ್ವಶಿಯ ಕೆನ್ನೆ...
ಅಪ್ಸರೆಯಂತೆ ಸಿಕ್ಕಳು ಮೊನ್ನೆ
ಅರಿಯದೇ ಪ್ರೀತಿಯಲಿ ಬಿದ್ದೆ ನಿನ್ನೆ...
ನಗುವಿನಲಿ ಸಂದೇಶ ಕಳಿಸಿದೆ ಸುಮ್ನೆ
ಸನ್ಮತಿ ಸೂಚಿಸಿತು ಅವಳ ಕಣ್ಸನ್ನೆ...
ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು
ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ....
೩) ಹುಚ್ಚು ಹರಕೆ
ಓ ದೇವರೆ ನಮ್ಮನ್ನು ಬೈಯ್ಯುವ
ಮೇಷ್ಟ್ರಿಗೆ ಓಸಿಯಾದ್ರು ಬುದ್ಧಿ ಕೊಡು...
ನಮಗೆಲ್ಲ ಕ್ಲಾಸಲ್ಲಿ ಸುಮ್ನೆ ಕೂಡಲು
ಸ್ವಲ್ಪ ಜಾಸ್ತಿನೇ ಶಕ್ತಿಕೊಡು...
ಕ್ಲಾಸಿನ ಸಮಯವನ್ನು
ಬೇಗಬೇಗನೆ ಓಡಿಸು...
ದಿನಾ ಕಾಲೇಜಿಗೆ ಹೋಗುವಂತೆ
ಭಯಭಕ್ತಿ ಹುಟ್ಟಿಸು...
ಕೆಲ ಗುರುಗಳ ಅರ್ಥವಾಗದ
ಕೊರೆಯುವ ಪಾಠಗಳನ್ನು ತಪ್ಪಿಸು...
ನಮಗೆ ಅರ್ಥವಾಗುವಂತೆ ಒಳ್ಳೆ
ಗುರುಗಳಿಂದ ಪಾಠ ಹೇಳಿಸು...
ಪರೀಕ್ಷೆ ಹತ್ರ ಬಂದಿದೆ
ಕಾಫಿಗಳ ರಕ್ಷೆಗೆ ದಾರಿ ತೋರಿಸು..
ಭಯವನ್ನು ದೂಡಿಸಿ ಹೇಗಾದರೂ ಮಾಡಿ
ನಮ್ಮನ್ನು ಜಸ್ಟ್ ಪಾಸ್ ಮಾಡಿಸು...
ನಾವು ಏನೇ ಮಾಡಿದರೂ
ಎಲ್ಲರ ಬೆಂಬಲವನ್ನು ನಮಗೇ ಕೊಡಿಸು...
ನಮ್ಮ ಗುರುಗಳಿಗೆ ನಮ್ಮ ಕಾಟವನ್ನು
ಸಹಿಸುವ ಶಕ್ತಿ ಕರುಣಿಸು...
ನಮ್ಮಿಂದ ಏನಾದರೂ ತಪ್ಪಾಗದಿದ್ದರೇ
ದಯಮಾಡಿ ನಮ್ಮನ್ನು ಕ್ಷಮಿಸು ...
ನಾವು ಎಲ್ಲರಂತೆ ಚೆನ್ನಾಗಿ ಓದಿ
ಉದ್ಧಾರವಾಗುವಂತೆ ನಮ್ಮನ್ನು ಹರಸು.....