೧) ಹೂವಿಗಿಂತ ಮಿಗಿಲಾದ ನಗು ನಿನ್ನದು
ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು
ಮುತ್ತಿಗಿಂತ ಮಧುರವಾದ ಮಾತು ನಿನ್ನದು
ಚಂದ್ರನಿಗಿಂತ ಸೊಗಸಾದ ರೂಪ ನಿನ್ನದು
ಇದೆಲ್ಲವನ್ನು ಪ್ರೀತಿಸುವ ಹೃದಯ ನನ್ನದು
ಈ ಹೃದಯವನ್ನು ಪ್ರೀತಿಸುವ ಕರ್ತವ್ಯ ನಿನ್ನದು...
೨) ನಿಜವಾಗಿಯೂ ನೀನೇ ನನ್ನ ಸಂಪತ್ತು
ನೀ ಜೊತೆಗಿದ್ದರೆ ನನಗಿಲ್ಲ ಯಾವುದೇ ಆಪತ್ತು
ಪರಸ್ಪರ ಸೋಲುವಿಕೆ ಪ್ರೀತಿಯ ಶರತ್ತು
ಎಂದೆಂದಿಗೂ ನೀನು ನನ್ನ ಸೊತ್ತು
ಪ್ರಿಯೆ ಇದು ನಿನಗೂ ಗೊತ್ತು...
೩) ಕೆಂಗಣ್ಣಿನಿಂದ ಉರಿ ಸೂಸುವ ಸೂರ್ಯನಂತೆ ನೀ ನನ್ನ ನೋಡದಿರು. ಏಕೆಂದರೆ ರಾತ್ರಿ ತಂಪನ್ನು ಸೂಸುವ ಚಂದ್ರನಿಗಿಂತಲು ಮಿಗಿಲಾದ ಪ್ರೀತಿ ನನ್ನದು...
೪) ನಿನ್ನ ನಗುವಿನ ರಸದೌತಣ
ನನ್ನ ಪ್ರೀತಿಗೆ ನೀ ಕೊಡುವ ವೇತನ...
ಅದನ್ನು ಕಡೆತನಕ ಗಳಿಸುವುದೇ
ನನ್ನ ಜಾಣತನ...
೫) ಕಾಲ್ಗೆಜ್ಜೆ ಸದ್ದಿನಲ್ಲಿ
ಆಕೆಯ ಸಂಚಾರ,
ಮೂಡಿಸಿತು ಮನದಲಿ
ಪ್ರೀತಿಯ ಇಂಚರ...
೬) ದೂರದಿರು ನನ್ನನ್ನು ಓ ಗೆಳೆಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ...
೭) ನನ್ನ ಪ್ರೇಯಸಿ ಅಪರೂಪದ ರೂಪಸಿ
ಸತಾಯಿಸುವಳು ನನ್ನ ಸದಾ ಕಾಯಿಸಿ
ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ...
೮) ಆಕೆ ನನ್ನ ಮನದ ಮಹಾರಾಣಿ
ನಾ ಹೇಳಬೇಕಿಲ್ಲ ಅವಳಿಗೆ ಬುದ್ಧಿವಾಣಿ
ಪದೇ ಪದೇ ಅವಳೇ ಹೇಳ್ತಾಳೆ ಕಹಾನಿ
ಮುನಿದಾಗ ಆಕೆ ಆವೇಶದ ಅಗ್ನಿ.
ಆದರೂ ಅವಳೇ ನನ್ನ ಮುದ್ದು ಅರಗಿಣಿ...
೯) ಮಲೇರಿಯಾ ಬರುತ್ತೆ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ,
ಚಿಕನಗುನಿಯಾ ಬರುತ್ತೆ ಏಡಿಸ್ ಹೆಣ್ಣು ಸೊಳ್ಳೆಯಿಂದ,
ಪ್ರೀತಿ ಕಾಯಿಲೆ ಬರುತ್ತೆ ಹೃದಯಾನಾ ಕೊಳ್ಳೆ ಹೊಡೆದ ಪ್ರೇಯಸಿ ಎಂಬ ಸುಂದರ ಸೊಳ್ಳೆಯಿಂದ...
೧೦) ಅವಳ ನೋಟ ಮನಮೋಹಕ
ಅವಳ ನಡದ ನಡಿಗೆ ಮಾದಕ
ಮುಂಚೆ ನಾನೋರ್ವ ಶ್ರೇಷ್ಠ ಸಾಧಕ
ಆದರೀಗ ಅವಳ ನಿಷ್ಟ ಸೇವಕ...
೧೧) ನೀ ನನ್ನ ಬೆರೆತರೆ
ಬೇಕೆ ಅನ್ಯರ ಅಕ್ಕರೆ?
ನೀ ನನ್ನ ಮರೆತರೆ
ಖಾತ್ರಿಯಾದೀತು ಗಂಡನ ಮನೆಯ ಸೆರೆ...
೧೨) ನೂರು ನೂರು ಸಾರಿ
ನಿನ್ನನ್ನೇ ಕೇಳುತ್ತಿರುವೆನು ನಾರಿ
ನನ್ನಿಂದ ದೂರಾಗದಿರು ಜಾರಿ
ನನ್ನ ಪ್ರೀತಿಯನ್ನು ಒಪ್ಪಿಕೊಂಡಾಗು ಆಭಾರಿ.
ಏಕೆಂದರೆ ನೀನೇ ನನ್ನ ಮನಕದ್ದ ಚೋರಿ...
೧೩) ಮನದೊಳು ಜನಿಸಿದ
ಪ್ರೇಮದ ಸಿಂಚನ,
ವಿರಹದ ನೆಪದಲಿ
ಮಾಡಿದೆ ನಯನದ ಕನಸುಗಳ ಮಥನ...
೧೪) ಆಕೆ ಉಟ್ಟ ಗುಲಾಬಿ ಸಾಡಿ
ಮಾಡಿತು ಮನಕ್ಕೆ ಪ್ರೇಮದ ಮೋಡಿ
ನೋಡುತ್ತಾ ಹಿಂದೆಯೇ ಹೋದೆ ಓಡಿ
ತಳ್ಳುತ್ತಾ ಪಂಕ್ಚರ್ ಆದ ಹೃದಯದ ಗಾಡಿ...
೧೫) ಏಳೇಳು ಜನ್ಮದ ಬಂಧ ನಮ್ಮದು
ಜೀವಸವೆದರು ಸೋಲದ ಸ್ನೇಹ ನಮ್ಮದು
ಆದರೆ ಅದನ್ನು ಹುಸಿಯಾಗಿಸುವ
ಹುಚ್ಚು ಪ್ರಯತ್ನವೇಕೆ ನಿನ್ನದು?
೧೬) ನೆತ್ತರದಿ ಬರೆದಾಗಿದೆ ಪ್ರೇಮ ಕಾದಂಬರಿ
ಅದನ್ನೊಮ್ಮೆ ಓದುವೆಯಾ ಬಂಗಾರಿ?
ನಿನ್ನ ಹೆಜ್ಜೆ ಹಿಂದೆ ಸಾಗಿದೆ
ನಮ್ಮಿಬ್ಬರ ಪ್ರೀತಿ ಅಂಬಾರಿ...
ನಿನ್ನ ತಿರಸ್ಕಾರದಿಂದ ನಮ್ಮ
ಪ್ರೀತಿಯಾಗದಿರಲಿ ಕವಲುದಾರಿ...
೧೭) ಓ ನನ್ನ ಹುಡುಗಿಯೇ
ನೀನೀಗ ಏಲ್ಲಿರುವೆ?
ನನ್ನ ಬಿಟ್ಟು ಏನು ಮಾಡುತ್ತಿರುವೆ?
ನೀನೀಗ ಮರೆಯಾಗಿ ಯಾರಿಗಾಗಿ ಕಾದಿರುವೆ?
ನೀನು ನಿಜವಾಗಿಯೂ ನನ್ನ ಹುಡುಗಿಯೇ?
೧೮) ನಿನ್ನ ಕಣ್ಣ ಕಾಡಿಗೆ
ಕೇಳಿದೆ ಪ್ರೇಮದ ಬಾಡಿಗೆ...
ನಾನೇನು ಹೇಳಲಿ ನಿನ್ನ ಮೋಡಿಗೆ?
ನನಗೆ ಬೇಕು ನಿನ್ನ ಮನದ ಪ್ರೀತಿ ಬಿಂದಿಗೆ...