ಪ್ರೀತಿ ಇಲ್ಲದ ಮೇಲೆ ಸಿಕ್ಕಸಿಕ್ಕಲೆಲ್ಲ ಸುಮಸುಮ್ನೆ ಸ್ಮೈಲ್ ಯಾಕೆ ಕೊಟ್ಟೆ...?
ಪ್ರೀತಿ ಇಲ್ಲದ ಮೇಲೆ ಕೇಳದೇನೆ ಮೊಬೈಲ್ ನಂಬರ್ ಯಾಕೆ ಕೊಟ್ಟೆ...?
ಪ್ರೀತಿ ಇಲ್ಲದ ಮೇಲೆ ಮಧ್ಯರಾತ್ರಿ ಮಿಸಕಾಲ್ ಯಾಕೆ ಕೊಟ್ಟೆ...?
ಪ್ರೀತಿ ಇಲ್ಲದ ಮೇಲೆ ಮೊಬೈಲ್ನಲ್ಲಿ ಗಂಟೆಗಟ್ಟಲೆ ಯಾಕೆ ಮಾತನಾಡಿದೆ...?
ಪ್ರೀತಿ ಇಲ್ಲದ ಮೇಲೆ ಹಗಲುರಾತ್ರಿ ಚಾಟಿಂಗ್ ಯಾಕೆ ಮಾಡಿದೆ...?
ಪ್ರೀತಿ ಇಲ್ಲದ ಮೇಲೆ ಸಾವಿರಾರು ಪ್ರೇಮ ಸಂದೇಶಗಳನ್ನು ಯಾಕೆ ಕಳಿಸಿದೆ...?
ಪ್ರೀತಿ ಇಲ್ಲದ ಮೇಲೆ ನನ್ನೊಂದಿಗೆ ಕೈಕೈಹಿಡಿದು ಕದ್ದುಮುಚ್ಚಿ ಊರೆಲ್ಲ ಯಾಕೆ ಸುತ್ತಾಡಿದೆ...?
ಪ್ರೀತಿ ಇಲ್ಲದ ಮೇಲೆ ನನ್ನನ್ನು ನಿನ್ನ ಮಡಿಲಲ್ಲಿ ಮಲಗಿಸಿಕೊಂಡು ಮುದ್ದಾಡಿ ಮುತ್ತುಗಳನ್ನು ಯಾಕೆ ಕೊಟ್ಟೆ...?
ಪ್ರೀತಿ ಇಲ್ಲದ ಮೇಲೆ ನನಗೆ ಕಾಸ್ಟ್ಲಿ ಗಿಫ್ಟಗಳನ್ನು ಯಾಕೆ ಕೊಟ್ಟೆ...?
ಪ್ರೀತಿ ಇಲ್ಲದ ಮೇಲೆ ಸೆಲ್ಫಿ ನೆಪದಲ್ಲಿ ನನ್ನನ್ನು ನಿನ್ನತ್ರ ಯಾಕೆ ಸೆಳೆದುಕೊಂಡೆ...?
ಪ್ರೀತಿ ಇಲ್ಲದ ಮೇಲೆ ನನ್ನ ಜೊತೆ ಯಾಕೆ ಪೆದ್ದುಪೆದ್ದಾಗಿ ಆಡಿ ಮುದ್ದು ಮಾಡಿದೆ...?
ಪ್ರೀತಿ ಇಲ್ಲದ ಮೇಲೆ ನನ್ನ ನೋವು ನಲಿವುಗಳಿಗೆ ಯಾಕೆ ಕಷ್ಟಪಟ್ಟೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ಹೆಸರನ್ನು ನಿನ್ನ ಕೈಮೇಲೆ ಹಚ್ಚೆ ಹಾಕಿಸಿಕೊಂಡೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ಮದುವೆಗೂ ಮುಂಚೆಯೇ ನನ್ನೊಂದಿಗೆ ಹನಿಮೂನಿಗಾಗಿ ಕಿತ್ತಾಡಿದೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನಿನ್ನ ಮನೆಯವರ ಕಣ್ತಪ್ಪಿಸಿ ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿದೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ಪ್ರೀತಿಸಿ ವಂಚಿಸಿದೆ...?
ಪ್ರೀತಿ ಇಲ್ಲದ ಮೇಲೆ ಗಂಡನ ಮನೆಗೆ ಹೋಗುವಾಗ ಯಾಕೆ ಕಣ್ಣೀರಾಕಿದೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀ ಮದುವೆಯಾದರೂ ನನಗಿನ್ನೂ ಮೆಸೇಜ್ ಮಾಡುತ್ತಿರುವೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀನಿನ್ನೂ ನನ್ನ ನೆನಪಲ್ಲಿ ಇಟ್ಟುಕೊಂಡಿರುವೆ...?
ಪ್ರೀತಿ ಇಲ್ಲದ ಮೇಲೆ ಯಾಕೆ ನೀ ನನ್ನ ನೆನೆಸಿಕೊಂಡು ಕಣ್ಣಿರಾಕಿ ಕೊರಗುತ್ತಿರುವೆ...?
ಕ್ಷಮಿಸಿ ಬಿಡು ಗೆಳತಿ,,, ನಾನೀಗ ನಿನ್ನವನಲ್ಲ... ನಿನ್ನವನಾಗಲು ಸಾಧ್ಯವೂ ಇಲ್ಲ...