ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ... - Love is Not Blind Poetry in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ... - Love is Not Blind Poetry in Kannada

ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ... - ಪ್ರೇಮ ಕವನಗಳು - ಪ್ರೀತಿಯ ಕವನಗಳು
           
     ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನಮ್ಮ ಮೆದುಳಿನಲ್ಲಿ ಅಚ್ಚಾಗಿ ಬಿಟ್ಟಿದೆ. ಹಳೇ ಕಾಲದಲ್ಲಿ ಮುಖ ನೋಡದೆ ಪ್ರೀತಿ ಮಾಡೋದಷ್ಟೇ ಅಲ್ಲದೆ ಮದ್ವೆ ಕೂಡ ಆಗುತ್ತಿದ್ದರು. ಆದ್ರೆ ಈಗ ಕಾಲ ಬಹಳ ಮುಂದೆ ಹೋಗಿದೆ. ಕಾಲದ ವೇಗಕ್ಕೆ ತಕ್ಕಂತೆ ಎಲ್ಲರೂ ಕಲ್ಪನೆ ಮೀರಿ ಬದಲಾಗಿದ್ದಾರೆ. ಎಲ್ಲರೂ ಈಗ ಮುದ್ದಾದ ಮುಖ ಮತ್ತು ಮಾದಕವಾದ ಮೈಯನ್ನು ನೋಡಿಯೇ ಪ್ರೀತಿಸಲು ಶುರು ಮಾಡುತ್ತಾರೆ. ಆದ್ರೆ ಸಾಚಾ ಎನಿಸಿಕೊಳ್ಳಲು ಸುಮ್ನೆ "ನಾ ನಿನ್ನ ಮನಸ್ಸು ನೋಡಿ ಪ್ರೀತಿಸುತ್ತಿದ್ದೇನೆ, ಮುಖ ನೋಡಿ ಅಲ್ಲ" ಎಂದು ಬುರಡೆ ಬಿಡುತ್ತಾರೆ. ಹುಡುಗರು ಸೌಂದರ್ಯವನ್ನು ಹುಡುಕಿದರೆ, ಹುಡುಗಿಯರು ಸಂಪತ್ತನ್ನು ಹುಡುಕುತ್ತಾರೆ. ಅದೇ ಕರಾಳ ಕಟು ಸತ್ಯ. ಅದರಲ್ಲಿ ತಪ್ಪೇನಿಲ್ಲ. 

        
               ಸರ್ಕಾರಿ ನೌಕರಿ ಇರೋ ಒಬ್ಬ ಮುದುಕನಿಗೆ ಸುಂದರವಾದ ಹುಡುಗಿಯನ್ನು ಆಕೆಯ ಮನೆಯವರು ಹೆಮ್ಮೆಯಿಂದ ಮದುವೆ ಮಾಡಿ ಕೊಡುತ್ತಾರೆ. ಆದರೆ ಆಕೆಗೆ ಇಷ್ಟವಾಗುವ ಸುಂದರವಾದ ಬಡ ಹುಡುಗನ ಜೊತೆ ಮದುವೆ ಮಾಡಲು ಖಂಡಿತ ಮುಂದಾಗಲ್ಲ. ಇದೇ ಒಂದು ಉದಾಹರಣೆ ಸಾಕು ಸೌಂದರ್ಯ ಮತ್ತು ಸಂಪತ್ತಿನ ಕಣ್ಣಾಮುಚ್ಚಾಲೆ ಆಟ ಅರ್ಥವಾಗಲು. ಪುರಾಣ ಕಾಲದಲ್ಲಿ ಮುಖ ನೋಡದೆ ಸಾವಿರಾರು ಪತ್ರ ಬರೆದು ಹತ್ರ ಆಗ್ತಿದ್ರು. ಆದ್ರೆ ಇವತ್ತು ಫೇಸ್ಬುಕಲ್ಲಿ ಫ್ರೇಂಡ್ಸಾಗಿ ಚಾಟಿಂಗ್ ಮಾಡಿ ಪ್ರೇಮಿಗಳಾಗುತ್ತಾರೆ. ಅರ್ಥವಿರದ, ಅರ್ಥವಾಗದ ವಿಷಯದ ಬಗ್ಗೆ ಅನಾವಶ್ಯಕವಾಗಿ ಬರೆಯುವ ಅವಶ್ಯಕತೆ ಇಲ್ಲ ಅನಿಸುತ್ತೆ. ಒಟ್ಟಿನಲ್ಲಿ ಪ್ರೀತಿಗೆ ಕಣ್ಣಿಲ್ಲ. ಆದ್ರೆ ಪ್ರೀತಿ ಕುರುಡಲ್ಲ. ಪ್ರೀತಿಗೆ ಕಣ್ಣಿರದಿದ್ದರೆ ಏನಂತೆ ಪ್ರೇಮಿಗಳಿಗೆ ಇದೆಯಲ್ಲ. ಪ್ರೇಮಿಗಳು ಜಗತ್ತನ್ನು ನೋಡುತ್ತಾರೆ ಎಂದ್ಮೇಲೆ ಖುದ್ದು ಪ್ರೀತಿಯೇ ಜಗತ್ತನ್ನು ನೋಡಿದಂತೆ. So ಪ್ರೀತಿ ಕುರುಡಲ್ಲ...
6 blind people image with elephant
"ಈ ಪ್ರೀತಿ ಒಂದು ಮಹಾ ಕುರುಡು" ಎಂದರು
ಪ್ರೀತಿಗೆ ಮನಸಾರೆ ಮೋಸ ಮಾಡಿದವರು.
"ಪ್ರೀತಿಯಲ್ಲಿ ಬಿದ್ದರೆ ಬಾಳೇ ಬರಡು" ಎಂದರು
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕರು...

love kavanagalu - ಪ್ರೇಮ ಕವನಗಳು - ಪ್ರೀತಿಯ ಕವನಗಳು

ರೋಮಿಯೋ-ಜ್ಯೂಲಿಯಟ್ ಸಾಯೋವಾಗ,
ಲೈಲಾ ಮಜನು ಲೋಕ ತ್ಯಜಿಸುವಾಗ,
ಪಾರುಗಾಗಿ ದೇವದಾಸ ಹುಚ್ಚನಾದಾಗ, 
ಈ ಪ್ರೀತಿ ತನ್ನ ಅಕ್ಷಿಯನ್ನೇಕೆ ತೆರೆಯಲಿಲ್ಲ?
ಎಂದು ಕೇಳಿದರು ವಿರಹಿಗಳು...

love kavanagalu - ಪ್ರೇಮ ಕವನಗಳು - ಪ್ರೀತಿಯ ಕವನಗಳು

"ಈ ಪ್ರೀತಿ ಒಂಥರಾ ಮಾಯಾಜಾಲವೇ?"
ಎಂದು ಪ್ರಶ್ನಿಸಿದರು ನವ ಪ್ರೇಮಿಗಳು.
"ಪ್ರೀತಿಗೆ ಮನಸ್ಸನ್ನು ಕೊಟ್ರೆ ಉಳಿಗಾಲವಿಲ್ಲ"
ಎಂದು ಹೆದರಿಸಿದರು ಭಗ್ನ ಪ್ರೇಮಿಗಳು...

love kavanagalu - ಪ್ರೇಮ ಕವನಗಳು - ಪ್ರೀತಿಯ ಕವನಗಳು

ಪ್ರೀತಿಗೆ ಶರಣಾದೊಡೆ ಪ್ರೀತಿನೇ ಎಲ್ಲ,
ಪ್ರೀತಿ ಇರದಿದ್ದರೇ ಈ ಲೋಕವೇ ಇಲ್ಲ,
"ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ".
ಕೇಳಿ ಪ್ರೇಮಿಗಳೇ ನನ್ನ ಮಾತು ಸುಳ್ಳಲ್ಲ...

love kavanagalu - ಪ್ರೇಮ ಕವನಗಳು - ಪ್ರೀತಿಯ ಕವನಗಳು
Blogger ನಿಂದ ಸಾಮರ್ಥ್ಯಹೊಂದಿದೆ.