ಹಸಿದವರಿಗೆ ಮಾಡು ಅನ್ನದಾನ
ಸಾಯುವವರಿಗೆ ಮಾಡು ರಕ್ತದಾನ
ಸತ್ತ ಮೇಲೆ ಮಾಡು ದೇಹದಾನ
ಮೂಢರಿಗೆ ಮಾಡು ವಿದ್ಯಾದಾನ
ಸ್ನೇಹಿತರಿಗೆ ಮಾಡು ಜೀವದಾನ...
ಕುರುಡರಿಗೆ ಮಾಡು ನೇತ್ರದಾನ
ಬಡವರಿಗೆ ಮಾಡು ಭೂದಾನ
ನೊಂದವರಿಗೆ ಮಾಡು ಸಮಾಧಾನ
ಇವ್ಯಾವ ದಾನಗಳನ್ನು ನಿನ್ನಿಂದ
ಮಾಡಲಾಗದಿದ್ದರೂ ಪರವಾಗಿಲ್ಲ.
ನಿನ್ನನ್ನು ಹುಚ್ಚನಂತೆ ಪ್ರೀತಿಸುವ
ಈ ಹುಚ್ಚು ಪ್ರೇಮಿಗೆ
ಮಾಡು ನಿನ್ನ ಹೃದಯದಾನ...
ಅದುವೇ ದಾನಗಳ ದಾನ
ಮಹಾದಾನ ಹೃದಯದಾನ...
೨) ಅರ್ಥವಾಗದ ಅಸ್ಥಿರ ಪ್ರೀತಿ
ಕಗ್ಗತ್ತಲ ಕನಸಲ್ಲಿ ಕಾಡುವ ತಾರೆ
ಮುಂಜಾನೆಯ ಬೆಳಕಲ್ಲಿ ಓಲೈಸು ಬಾರೆ
ನೀನು ಅಂತಸ್ತಿನಲ್ಲಿ ಅರಳಿದ ಕೆಂದಾವರೆ,
ನಾನು ಬಡತನದಲ್ಲಿ ಬೆಂದ ಅವರೆ...
ಓ ತಾರೆ, ನೀನು ಬೆಳದಿಂಗಳ ಬಾಲೆ
ನನಗರ್ಥವಾಗ್ತಿಲ್ಲ ನಿನ್ನ ಸೌಂದರ್ಯದ ಕಲೆ
ನಡುದಾರಿಯಲ್ಲಿ ದಾರಿ ತಪ್ಪಿದೆ ಮನದಲೆ
ಹೇಳು ಓ ತಾರೆ ನಾನೇನು ಮಾಡಲೇ?
ನಾ ನಿನ್ನ ಮನಸಾರೆ ಪ್ರೀತಿಸಲೇ?
ನಿನ್ನ ಪ್ರೀತಿ ಬೇಡೆಂದು ದೂರ ಓಡಲೇ?
ನೀನು ನಿಲುಕದ ದ್ರಾಕ್ಷಿಯೆಂದು
ಮನದಲ್ಲಿ ಮರುಗಲೇ?
ಇಲ್ಲ ನಿನ್ನ ಪ್ರೀತಿಸಲು
ನಿನ್ನ ಅನುಮತಿ ಕೇಳಲೇ?
೩) ನಿನಗಾಗಿಯೇ...
ನಿನಗಾಗಿಯೇ ಈ ಗೀತೆಯ ನಾ ಹಾಡುವೆ
ನನಗಾಗಿಯೇ ಆ ಗೀತೆಯ ನೀ ಕೇಳುವೆ
ಮುಖವೇ ಮನಸ್ಸಿನ ಕೈಗನ್ನಡಿ
ನಿನ್ನ ಪ್ರೀತಿ ಅರ್ಥವಾಯ್ತು ನಿನ್ನ ಮುಖ ನೋಡಿ...
ಪ್ರೀತಿಯಿದ್ದರೂ ನೀನ್ಯಾಕೆ ಹೇಳಲಾರೆ?
ಧೈರ್ಯವಿಲ್ಲದೇ ನಾ ನಿನ್ನ ಕೇಳಲಾರೆ.
ಕಣ್ಣರೆಪ್ಪೆ ಮಿಡಿತವೇ ಪ್ರೀತಿಯ ಪತ್ರ
ಕಣ್ಣ ಸಾಕ್ಷಿಗೂ ನಾ ನಿನ್ನ ಪ್ರೀತಿಗೆ ಪಾತ್ರ...
ನನ್ನ ಪ್ರೀತಿ ಆಗಸಕ್ಕಿಂತಲೂ ಮಿಗಿಲು
ನೀ ಬಂದರೆ ನಿಲ್ಲುವುದು ಮನದ ದಿಗಿಲು
ಅಕ್ಷತೆಗಳನ್ನು ಸುರಿಸುತ್ತೆ ಆ ಮುಗಿಲು
ನನ್ನ ಪ್ರೀತಿಯನ್ನು ನೀ ಕಾಯಲು...
೪) ಭರವಸೆಯಿಲ್ಲದ ಬಾಳದೋಣಿ
ನನ್ನ ಬಾಳದೋಣಿ ಸಾಗಲು
ನೀನೇ ನಾವಿಕನಾಗಬೇಕು...
ನಿನ್ನ ಬದುಕ ದೀಪ ಉರಿಯಲು
ನಾನೇ ಎಣ್ಣೆಯಾಗಬೇಕು...
ನನ್ನ ಮನವರಳಲು
ನಿನ್ನ ನಗುವೇ ಸಾಕು...
ನಿನ್ನ ಮೊಗ ನಗಲು
ತೋಳಚಾಚಿ ನನ್ನೊಮ್ಮೆ ಸೋಕು...
ಇರಲಿ ಪ್ರೀತಿಲಿ ನೂರು ಜೋಕು
ತಗಲದಿರಲಿ ವಿರಹದ ಒಂದು ಸೋಂಕು...