ಬದುಕುತ್ತಲೇ ಸಾಯುವೆನು
ಸಾಯುತ್ತಲೇ ಬದುಕುವೆನು
ಏನಾದರೂ ನಿನ್ನ ಮಾತ್ರ
ನಾನೆಂದು ಮರೆಯನು.
ಪ್ರೀತಿಗೇಂದು ಸಾವಿಲ್ಲ
ನನ್ನ ಪ್ರೀತಿಗೆ ಕೊನೆಯಿಲ್ಲ...
ನಗುತ್ತಲೇ ಅಳುವೆನು
ಅಳುತ್ತಲೇ ನಗುವೆನು
ಏನಾದರೂ ನಿನ್ನ ಮಾತ್ರ
ನಾನೆಂದು ಅಗಲೆನು...
ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ
ನನ್ನ ಪ್ರೀತಿಗೆ ನೀನೇ ಎಲ್ಲ...
೨) ಪ್ರೇಮಪೂಜೆ
ಕನಸ ಕಾಣುವ ಕಂಗಳೆ
ಈಗ ಕುರುಡಾಗಿವೆ...
ಮಾತಾಡುವ ತುಟಿಗಳೆ
ಈಗ ಮೌನ ತಾಳಿವೆ...
ಈ ಹೃದಯವೀಗ ಒಡೆದು
ಚೂರು ಚೂರಾಗಿದೆ.
ಅದೇ ಚೂರಾದ ಹೃದಯದಲ್ಲಿ
ನಿನ್ನ ಸಾವಿರ ನೆನಪುಗಳಿವೆ...
ನಿನ್ನ ಪ್ರೀತಿಯ ಸಂಜೀವಿನಿ
ಸಿಗದೇ ಕನಸುಗಳು ಸಾವನ್ನಪ್ಪಿವೆ.
ಮತ್ತೆ ಈ ಮನದಲ್ಲಿ ಪ್ರೇಮಪೂಜೆ
ಪ್ರಾರಂಭವಾಗಲು ನಿನ್ನ ಪ್ರೀತಿಯ
ಮುಗುಳ್ನಗೆಯೊಂದು ಸಾಕಲ್ಲವೇ...?
೩) ಮಸಣದ ಹೂವು
ಲೇಖನಿ ಕೊರಗುತಿದೆ
ನಯನ ಹುಡುಕುತಿದೆ
ಈ ಮನ ನಿನ್ನನ್ನೇ ಬಯಸುತಿದೆ...
ಕೆಂದಾವರೆ ಬಾಡುತಿದೆ
ಮಂದಹಾಸ ಮರಗುತಿದೆ
ಈ ಜೀವ ನಿನ್ನನ್ನೇ ಅರಸುತಿದೆ...
ಕಣ್ಣೀರು ಕಾಡುತಿದೆ
ಕನಸು ತಣ್ಣೀರೆರೆಚಿದೆ
ಈ ಮನ ನಿನ್ನನ್ನೇ ನೆನೆದಿದೆ...
ಮನಸು ಮಸಣವಾಗಿದೆ
ಪ್ರೀತಿ ಮಸಣದ ಹೂವಾಗಿದೆ
ಆದರೂ ನನ್ನ ಹುಚ್ಚು ಮನ
ನಿನ್ನನ್ನೇ ಹುಡುಕುತಿದೆ....
೪) ಕಾಣೆಯಾದ ಕನಸು
ನಾ ಬಯಸಿದ ಸ್ನೇಹದ ಎರವಲು
ಈಗಾಗಿದೆ ಹುಚ್ಚುಪ್ರೀತಿಗೆ ಉರುವಲು
ಬೇಲಿ ಕಳಚಿದೆ ಗೆಳೆತನದ ಕಾವಲು
ಹಿಂಜರಿಯುತಿದೆ ಹಗೆತನ ಸಾಯಲು...
ಹೊಗೆಯಾಡಿದೆ ಹಗೆತನ ಸ್ನೇಹದಲಿ
ಮರೆಯಾಗಿದೆ ಗೆಳೆತನ ಮನದಲಿ
ಚಿಮ್ಮಿದೆ ರಾಗದ್ವೇಷ ಎದೆಯಲಿ
ಏನೋ ಕಾಣೆಯಾಗಿದೆ ಜೀವನದಲಿ....
೫) ಹೃದಯದ ಹಾಡು ;
ನಿನಗಾಗಿ ಹೃದಯದಲ್ಲೊಂದು ಹಾಡಿದೆ,
ಅದರ ಜೊತೆಗೊಂದು ಹೇಳದ ನೋವಿದೆ.
ನೀನಿಲ್ಲದ ಬಾಳು ಯಾರಿಗೆ ಬೇಕಿದೆ?
ಕಣ್ಣೀರು ಪದೇಪದೇ ಇಣುಕಿ ನೋಡಿ,
ಇದ್ದಬಿದ್ದ ಕನಸುಗಳನ್ನೆಲ್ಲ ಬಾಚಿಕೊಂಡಿದೆ.
ನನ್ನನ್ಯಾಕೆ ನೀ ವಿರಹದ ವಿಷದಲ್ಲಿ
ನೂಕಿ ಮುಂದೆ ಸಾಗಿದೆ?
ಪ್ರೀತಿಗೋಪುರದಿಂದ ಜಾರಿಬಿದ್ದ
ನನ್ನ ನೋಡಿ ಆಗಸ ಕಣ್ಣೀರಿಟ್ಟಿದೆ...
ಹುಚ್ಚನಂತೆ ನಾ ಅಲೆಯುವುದನ್ನು ಕಂಡ
ಚಂದ್ರನ ಕೊಂಕು ನಗು ನಿನಗೆ ಕೇಳಿಸದೆ..?