ಗೆದ್ದ ಪ್ರೇಮಕಥೆಗಳಿಗಿಂತ ಬಿದ್ದ ಪ್ರೇಮಕಥೆಗಳೇ ಹೆಚ್ಚಾಗಿ ಕಿವಿಗೆ ಬೀಳುತ್ತವೆ. ಪ್ರೀತಿ ಶುರುವಾಗಲು ಹಾಗೂ ಮುರಿದು ಬೀಳಲು ಕಾರಣಗಳು ಬೇಕಿಲ್ಲ. ಹೀಗೆ ಒಂದಿನ ಹುಡುಗರ ನೆಮ್ಮದಿ ಕೇಂದ್ರ ಬಾರಗೆ ಹೋಗಿದ್ದಾಗ ಒಬ್ಬ ಕುಡುಕನ ಮುರಿದ ಪ್ರೇಮಕಥೆ ಕಿವಿಗೆ ಬಿತ್ತು. ಅದನ್ನೆ ಚಿಕ್ಕದಾಗಿ ಒಂದು ಕವನದಲ್ಲಿ ವ್ಯಕ್ತಪಡಿಸಿದ್ದೇನೆ. ಇಷ್ಟ ಆದರೆ ಲೈಕ್ ಮತ್ತು ಶೇರ್ ಮಾಡಿ.
ನೀನಾಗೆ ಬಂದು ಪ್ರೀತಿಸುತ್ತೇನೆಂದಾಗ
ನನ್ನ ಹೃದಯವನ್ನೇ ಕೊಟ್ಟೆ........
ನೀ ನನ್ನ ಜೀವನಕ್ಕೆ ರಾಣಿಯಾಗುತ್ತೇನೆಂದಾಗ
ಯೋಚ್ನೆ ಮಾಡದೆ ಜೀವನವನ್ನೇ ಅರ್ಪಿಸಿ ಬಿಟ್ಟೆ...
ಮೋಹಿಸಿದ ನೀನೇ ಮೋಸಮಾಡುತ್ತೇನೆಂದಾಗ
ಕಷ್ಟವಾದರೂ ನಿನ್ನ ನಗುನಗುತ್ತಾ ಬಿಟ್ಟುಕೊಟ್ಟೆ....
ಮತ್ತೊಬ್ಬನಿಗೆ ನೀ ಖುಷಿಯಿಂದ ಕೊರಳ ಚಾಚಿದಾಗ
ಕಣ್ತುಂಬಿ ಬಂದರೂ ನಿನ್ನ ಮದ್ವೇಲಿ ಖುಷಿಪಟ್ಟೆ....
ಇನ್ನೇನು ನೀ ಸತ್ತೇ ಹೋಗ್ತೀಯಾ ಅನ್ನೋವಾಗ
ನನ್ನೆರಡು ಕಿಡ್ನಿಗಳನ್ನು ಮಾರಿ ನಾ ಪ್ರಾಣ ಕೊಟ್ಟೆ.....
ಸಾವನ್ನು ಗೆದ್ದು ಮತ್ತೆ ನೀ ಬದುಕಿ ಬಂದಾಗ
ಪ್ರೇತಾತ್ಮವಾಗಿದ್ದ ನಾ ಸಂತಸದಿ ಕಣ್ಣೀರಿಟ್ಟೆ.....
ನಿನಗಾಗಿ ಹೃದಯವಲ್ಲದೇ ಜೀವನದ ಜೊತೆಗೆ
ಜೀವವನ್ನು ಕೊಟ್ಟ ನನಗೆ ನೀನೇನು ಕೊಟ್ಟೆ...???