ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

ಗೆಳತಿ ಹೇಳಿ ಹೋಗು ಕಾರಣ ; ಕೊಲ್ಲದಿರು ವಿನಾಕಾರಣ - Kannada Sad Love Kavanagalu - Love Kavana - Kannada Feeling Kavanagalu

೧) ಅವತ್ತು ನನ್ನ ಕಾಲಲ್ಲಿ ಮುಳ್ಳು ಚುಚ್ಚಿದಾಗ ನಿನ್ನ ಕಣ್ಣಂಚಲ್ಲಿ ಕಣ್ಣೀರು ಇಣುಕಿ ನೋಡಿತ್ತು. ಆದರೆ ಇವತ್ತು ನನ್ನೆದೆಗೆ ಮುಳ್ಳು ಚುಚ್ಚಿದರೂ ನೀನೇಕೆ ಮೌನವಾಗಿರುವೆ?
Kannada Sad Love Kavanagalu

೨) ಅವತ್ತು ನಾನು ಕಣ್ಣಲ್ಲಿ ಕಸ ಬಿದ್ದವರಂತೆ ನಾಟಕವಾಡುವಾಗ ಸಿಕ್ಕಾಪಟ್ಟೆ ಕೇರ್ ತೆಗೆದುಕೊಂಡ ನೀನು, ಇವತ್ತು ನಾನು ನಿಜವಾಗಿಯೂ ಅಳೋವಾಗ ಕಲ್ಲಾಗಿ ಕುಳಿತಿರುವೆ ಏಕೆ?
Kannada Sad Love Kavanagalu


೩) ನಿನ್ನ ನೋಡಿದಾಗಲೇ ಕಣ್ಣಿಗೌತಣ
ನಿನ್ನ ಪ್ರೀತಿಸಿದಾಗಲೇ ಈ ಮನಸ್ಸಿಗೆ ಸಮಾಧಾನ.
ಕಂಗಳಿದ್ದು ಏನು ಫಲ ನಿನ್ನ ನೋಡದೆ?
ಕೈಗಳಿದ್ದು ಏನು ಫಲ ನಿನ್ನ ಮುದ್ದಾಡದೆ?

Kannada Sad Love Kavanagalu

೪) ನೀರಲ್ಲಿ ಬಿದ್ದು ಸಾಯುವ ಇರುವೆಯನ್ನು ಬದುಕಿಸುವ ವಿಶಾಲ ಹೃದಯಿ ನೀನು. ಆದ್ರೆ ನಿನ್ನ ಪ್ರೀತಿಯಲ್ಲಿ ಬಿದ್ದ ಹೃದಯವನ್ನು ಸತಾಯಿಸಿ ಸಾಯಿಸುತ್ತಿರುವೆ ಯಾಕೀನ್ನು?

Kannada Sad Love Kavanagalu

೫) ನಿನ್ನೊಂದಿಗೆ ಜಡಿಮಳೆಯಲ್ಲಿ ನೆನೆಯುವಾಗ,
ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ,
ಬೀದಿಯಲ್ಲಿ ಕೈಕೈಹಿಡಿದು ನಡೆಯುವಾಗ, 
ಪದೇಪದೇ ಕಾರಣವಿಲ್ಲದೆ ಕಿತ್ತಾಡುವಾಗ 
ಗೊತ್ತಾಗದ ಪ್ರೀತಿ, ನೀನು ದೂರಾದ ಮೇಲೇಕೆ ಗೊತ್ತಾಗಿ ನನ್ನ ಕಾಡುತ್ತಿದೆ?

Kannada Sad Love Kavanagalu

೬) ನನಗ್ಯಾಕೋ ಸಂದೇಹ, ನೀನು ನಿಜವಾಗಿಯೂ ಹೃದಯಿಯೆಂದು. ನಿನ್ನ ನೆನಪಲ್ಲಿ ಕೊರಗಿ ಕೊರಗಿ ನನ್ನ ಆನೆದೇಹ ಕರಗಿತು. ಆದರೆ ನಿನ್ನ ಪುಟ್ಟ ಹೃದಯ ಕರಗಲಿಲ್ಲವಲ್ಲ?

Kannada Sad Love Kavanagalu

೭) ನಾನು ನನ್ನೆದೆಯಲ್ಲೊಂದು ಪುಟ್ಟ ಗುಡಿ ಕಟ್ಟಿ ಅಲ್ಲಿ ನಿನ್ನನ್ನು ದೇವತೆಯಾಗಿ ಪೂಜಿಸುತ್ತಿಲ್ಲ. ನಿನ್ನನ್ನು ನಾನು ನನ್ನೆದೆಯ ಗುಡಿಸಲಲ್ಲಿ ರಾಣಿಯಾಗಿ ಘೋಷಿಸಿ ಪ್ರೀತಿಸುತ್ತಿರುವೆ. ಹೀಗಿರುವಾಗ ನಿನ್ನ ಹೃದಯದಲ್ಲಿ ಪ್ರೀತಿ ಸಿಂಹಾಸನವನ್ನು ನೀಡದಿದ್ದರೂ ಪರವಾಗಿಲ್ಲ. ಕೊನೆಗೆ ನಿನ್ನ ಹೃದಯದ ಯಾವುದೋ ಒಂದು ಮೂಲೆಯಲ್ಲಿ ವಿಶ್ರಮಿಸಲು ಆರಡಿ-ಮೂರಡಿ ಜಾಗವನ್ನು ಸಹ ನೀಡದಷ್ಟು ಕ್ರೂರಿಯೇ ನೀನು?

Kannada Sad Love Kavanagalu

೮) ನೀ ನನ್ನ ಮೇಲೆ ಕೋಪಿಸಿಕೊಂಡು ಕೋಪಾಸ್ತ್ರದಿಂದ ನನ್ನ ಕೊಲ್ಲುವ ಬದಲು, ನಿನ್ನ ಚೆಂದುಟಿಯ ಬಿಲ್ಲಿನಿಂದ ಒಂದು ನಗುವಿನ ಹೂಬಾಣವನ್ನು ಬಿಟ್ಟು ನನ್ನನ್ನು ಸಂತೋಷದಿಂದ ಕೊಲ್ಲಬಹುದಿತ್ತಲ್ಲ?

Kannada Sad Love Kavanagalu

೯) ನಾನು ನೋವುಗಳಿದ್ದರೂ ನನ್ನ ಪಾಡಿಗೆ ನಗುನಗುತ್ತಾ ಆರಾಮಾಗಿದ್ದೆ. ನೀನು ನನ್ನ ಬಾಳಿಗೆ ಬೆಳಕಾಗಿ ಬಂದು ಹೋಗುವಾಗ ನೋವನ್ನು ನೀಡಿ ಹೋದೆ. ಒಂಟಿ ಯೌವ್ವನದಲ್ಲಿ ಬಂದು ಹೋಗುವ ಪೋಲಿ ಕವನವಾದೆ ಏಕೆ ನೀನು?

Kannada Sad Love Kavanagalu

೧೦) ನನ್ನ ತಪ್ಪುಗಳನ್ನು ನಾ ತಿದ್ದಿಕೊಂಡು ಬದಲಾದರೂ, ನಿನಗ್ಯಾಕೆ ನಿನ್ನ ತಪ್ಪಿನ್ನು ಅರ್ಥವಾಗ್ತೀಲ್ಲ? ನೀನಿಲ್ಲದೆ ನಾನು ಬದುಕಬಲ್ಲೆ. ಆದರೆ ಸಂತೋಷವಾಗಿರಲಾರೆ. ನಾನಿಲ್ಲದೆ ನೀನು ಸಂತೋಷವಾಗಿರಬಲ್ಲೆಯಾ? ಗೆಳತಿ ಹೇಳಿ ಹೋಗು ಕಾರಣ. ಕೊಲ್ಲದಿರು ವಿನಾಕಾರಣ...

Kannada Sad Love Kavanagalu

 ಇಲ್ಲಿ ''ನಾನು'' ಒಂದು ಕಾಲ್ಪನಿಕ ವಿರಹಿಯ ಪಾತ್ರವಷ್ಟೇ. ವಿರಹಿಗಳ ನೋವಿಗೆ ಯಾವುದೇ ಔಷಧಿಯಿಲ್ಲ. ನೋವಿನಲ್ಲೂ ನಗುವ ಹೂಗಳೇ ವಿರಹಿಗಳು.... 

Blogger ನಿಂದ ಸಾಮರ್ಥ್ಯಹೊಂದಿದೆ.