25 ಕಾಡುವ ಪ್ರೇಮ ಕವನಗಳು : Sad Love Poems in Kannada - Kannada Sad Love Kavanagalu - Kannada Prema Kavanagalu - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

25 ಕಾಡುವ ಪ್ರೇಮ ಕವನಗಳು : Sad Love Poems in Kannada - Kannada Sad Love Kavanagalu - Kannada Prema Kavanagalu

ಕಾಡುವ ಪ್ರೇಮ ಕವನಗಳು  Sad Love Poems in Kannada

೧) ಮನದಲಿ ಆಸೆಗಳು ನೂರಾರು, 
ಆದರೆ ಅವುಗಳಿಗೆ ಆಸರೆ ಯಾರು?
ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ
ಅವುಗಳಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

೨) ಕರೆದಾಗ ಬರದಿರುವವಳು,
ಕನಸಲ್ಲಿ ಕರೆಯದೇನೆ ಹೇಗೆ ಬಂದಳು?
ಕೈಗೆ ಎಟುಕದವಳು,
ಕನಸಿಗೆ ಹೇಗೆ ಎಟುಕಿದಳು?
ಕಣ್ಣಿಗೆ ಕಾಣಿಸದವಳು,
ಮನಸಿಗೆ ಹೇಗೆ ಕಾಣಿಸಿದಳು?

೩) ಅವಳ ಸೌಂದರ್ಯಕ್ಕೆ ನಾ ಮಾರು ಹೋಗಲಿಲ್ಲ. ಅವಳ ಸಂಪತ್ತಿಗೆ ನಾ ಮೋರೆ ಇಡಲಿಲ್ಲ. ಅವಳ ಪ್ರೀತಿಗೆ ನಾ ಕೈ ಚಾಚಲಿಲ್ಲ. ಹೀಗಿರುವಾಗ ಅವಳೇಕೆ ಕನಸಲ್ಲಿ ಬಂದು ನನ್ನ ಕಾಡೋದನ್ನ ಬಿಡ್ತಿಲ್ಲ?

೪) ಅವಳಿಗೆ ನನ್ನೆದೆಯೊಳಗೆ ಬರುವಾಗ "ಒಳಗೆ ಬರಲಾ?'' ಅಂತಾ ಕೇಳುವ ಸೌಜನ್ಯವಿರಲಿಲ್ಲ. ಆದ್ರೆ ಕಡೇಪಕ್ಷ ಹೋಗುವಾಗ "ಹೋಗಿ ಮತ್ತೆ ಬರ್ತೀನಿ.." ಅಂತಾ ಹೇಳಿ ಹೋಗಬಹುದಿತ್ತಲ್ಲ..?

೫) ಆಮಂತ್ರಣವಿಲ್ಲದೆ ಬಂದೆ ಹೃದಯದ ಮನೆಗೆ, ಅನುಮತಿಯಿಲ್ಲದೆ ತಾಯಿಯಾದೆ ನನ್ನೆದೆ ಪ್ರೀತಿ ಕೂಸಿಗೆ. ಆದ್ರೆ ನೀನು ನನ್ನಿಂದ ದೂರವಾಗಿ ಹೋಗಿರುವೆ. ನನ್ನೆದೆಯಲ್ಲಿರುವ ಪ್ರೀತಿ ಕೂಸು "ಅಮ್ಮ ಎಲ್ಲಿ?" ಎಂದರೆ ನಾನೇನು ಹೇಳಲಿ? ನಿನ್ನ ಉದರದಲ್ಲಿರುವ ಮಗು "ಅಪ್ಪ ಎಲ್ಲಿ?" ಎಂದರೆ ನೀನೇನು ಹೇಳುವೆ?

ಕಾಡುವ ಪ್ರೇಮ ಕವನಗಳು : Sad Love Poems in Kannada

೬) ಎದೆಗೆ ವಿರಹದ ಬೆಂಕಿ ಹತ್ತಿದೆ ನಂದಿಸು ಬಾ ಗೆಳತಿ. ನಿನಗಿಷ್ಟವಿಲ್ಲದಿದ್ದರೂ ತೋರಿಕೆಗಾದರೂ ಬಾ ಮನದೊಡತಿ. ನೀನೇ ಹಚ್ಚಿದ ಬೆಂಕಿಯನ್ನು ನೀನೇ ನಂದಿಸು ಬಾ ಗೆಳತಿ...

೭) ಒಂದಿನ ಪೆಟ್ರೋಲಿಯಂ ನಿಂತೊದ್ರೆ,
ಭಾರತ ಹಾಫ್ ಮರ್ಡರ್ ಆಗುತ್ತೆ.
ಒಂದಿನ ಸಾಫ್ಟವೇರ್ ಬಿದ್ದೊದ್ದ್ರೆ,
ಅಮೇರಿಕಾ ಫುಲ್ ಮರ್ಡರ್ ಆಗುತ್ತೆ.
ಆದ್ರೆ ಒಂದ ಕ್ಷಣ ನೀ ನನ್ನಿಂದ ದೂರಾದ್ರೆ,
ನನ್ನ ಉಸಿರು ಕಟ್ಟಿದಂಗಾಗುತ್ತೆ...

೮) ಹೃದಯವೆಂಬ ತೊಟ್ಟಿಲೊಳಗೆ ಪ್ರೀತಿಯೆಂಬ ಹಸಿಗೂಸನ್ನು ಮಲಗಿಸಿ ದ್ವೇಷವೆಂಬ ಜೋಗುಳವನ್ನೇಕೆ ಹಾಡುತ್ತಿರುವೆ? ನಿನ್ನಲ್ಲಿರುವ ಪ್ರೀತಿಯನ್ನು ನೀನೇಕೆ ಸಾಯಿಸುತ್ತಿರುವೆ?

೯) ನನ್ನ ಪ್ರೇಮಗೀತೆಗೆ ಸ್ವರವಾಗಬೇಕಿದ್ದವಳು, ಪ್ರೀತಿ ನಾಟಕವಾಡಿ ನನ್ನ ವಿರಹಗೀತೆಗೆ ಅಪಸ್ವರವಾದಳು. ಆದರೂ ನಾ ಹಾಡೋದನ್ನು ನಿಲ್ಲಿಸಲಿಲ್ಲ. ನನ್ನ ಕಡೆ ಉಸಿರಿರೋ ತನಕ ನಾನು ಅವಳಿಗಾಗಿ ಹಾಡುವೆನು...

೧೦) ಮನಸ್ಸಿನಿಂದ ಮರೆಯಾಗಿ ಹೋದವಳನ್ನು ಬೇಡವೆಂದರು ನೆನೆಯುತ್ತಿದೆ ಈ ಮನಸು.
ಬೇಡವೆಂದರೂ ಬೀಳುತ್ತಿವೆ ಹಗಲುಗನಸು. ನನ್ನ ಹೃದಯದ ಸಂಗಾತಿಯೇ ನೀ ಎಲ್ಲಿರುವೆ ಎಂಬುದನ್ನು ಹೇಳಿ ಉಪಕರಿಸು... ತೋರಬೇಡ ತೋರಿಕೆಯ ಹುಸಿ ಮುನಿಸು. ಇಷ್ಟವಿದ್ದರೆ ನನ್ನನ್ನು ದ್ವೇಷಿಸು. ಆದ್ರೆ ಮತ್ತೆ ಪ್ರೀತಿಸಿ ಸತಾಯಿಸದಿರು...

ಕಾಡುವ ಪ್ರೇಮ ಕವನಗಳು : Sad Love Poems in Kannada

೧೧) ಕಳೆದು ಹೋಗಿರುವೆ ನಾ ಅವಳ ಮಡಿದ ಕನಸುಗಳ ಲೋಕದೊಳಗೆ. ದಾರಿ ತೋರಬೇಕಾದವಳೆ ತಾನು ದಾರಿ ತಪ್ಪುವುದಲ್ಲದೆ ನನ್ನನ್ನು ದಾರಿ ತಪ್ಪಿಸಿದ್ದಾಳೆ...

೧೨) ಕಣ್ಣಿಗೂ, ಕಣ್ಣೀರಿಗೂ 
ಕದನವು ಶುರುವಾಗಿದೆ. 
ಮನಸಿಗೂ ಕನಸಿಗೂ
ವಿರಹವು ಕಾಡಿದೆ...

೧೩) ಬಲಗಾಲಿಟ್ಟು ನನ್ನೆದೆಯೊಳಗೆ ಬಂದವಳು, ಎಡಗಾಲಿಟ್ಟು ಹೊರ ನಡೆಯುವಾಗ ಅವಸರಪಟ್ಟು ಎಡವಿ ಬಿದ್ದಳು... 

೧೪) ಪ್ರೀತಿ ಎಂಬ ಮಗುವನ್ನು ಹುಟ್ಟಿಸಿ ಕೊಂದ ಕ್ರೂರಿ ಅವಳು... 

೧೫) ಪ್ರೀತಿ ಬತ್ತಿ ಹೋದ 
ಮೇಲೆ ಪ್ರೇಯಸಿಯ ನೆನಪೇಕೆ? 
ಗೆದ್ದು ಸೋತ ಮೇಲೆ  
ಮತ್ತೆ ಸೋಲುವ ಆಸೆಯೇಕೆ? 


ಕಾಡುವ ಪ್ರೇಮ ಕವನಗಳು : Sad Love Poems in Kannada

೧೬) ಕನಸು ಕರಗಿ ಕಂಬನಿಯಾಗಿದೆ
ಅವಳ ನೆನಪು ನಂಜಾಗಿದೆ...

೧೭) ಮನಸ್ಸಲ್ಲಿನ ಪ್ರೀತಿ ನೋವು 
ತರುತ್ತಿದೆ ಸಾವು...

೧೮) ಖಾಲಿ ಜೀವನ
ಪೋಲಿ ಯೌವ್ವನ
ಯಾರಿಗೇಳಲಿ ನನ್ನ ಪ್ರೇಮಕವನ? 

೧೯) ಕಣ್ಣೀರಲ್ಲಿ ಅವಳ ಮಹಾಮೌನ
ತಣ್ಣೀರಲ್ಲಿ ನನ್ನೆದೆಯ ಸ್ನಾನ
ಒದ್ದೆಯಾಯ್ತು ಪ್ರೇಮ ಕವನ
ದಾರಿ ತಪ್ಪಿದೆ ಪ್ರೀತಿಯ ಪಯಣ
ಕಳೆದೋಗುತ್ತಿದೆ ಯೌವ್ವನ
ಇದ್ದನ್ನೆಲ್ಲ ಯಾರಿಗೇಳಿ ಸಾಯೋಣಾ? ಸುಸ್ತಾದ ಅನುಭವಸ್ಥರು ಸ್ವಲ್ಪ ಹೇಳ್ರಣ್ಣಾ? 

೨೦) ಹೃದಯವು ಖಾಲಿಖಾಲಿ
ಜೀವನವು ಖಾಲಿಖಾಲಿ
ಎಕ್ಸಾಮಲ್ಲಿ ಆ್ಯನ್ಸರ್ ಶೀಟು ಖಾಲಿಖಾಲಿ
ನಾನ್ಯಾಕಾದೆ ಇಷ್ಟೊಂದು ಪೋಲಿ?  


ಕಾಡುವ ಪ್ರೇಮ ಕವನಗಳು : Sad Love Poems in Kannada

೨೧) ಎಷ್ಟಂತ ನೆನೆಯಲಿ ನಿನ್ನ
ಕಣ್ಣೀರು ಬತ್ತೊಗೋ ಮುನ್ನ.
ಬೇಗನೆ ಹೇಳಿಬಿಡು ಚಿನ್ನ
ನಾ ನಿನ್ನಲ್ಲೇ ಮರೆಯಾಗೋ ಮುನ್ನ..

೨೨) ಪ್ರೀತಿಗಾಗಿ ಹೂವಾ ಕೊಟ್ಟೆ
ಹೂವಿನಲ್ಲಿ ಹೃದಯ ಇಟ್ಟೆ 
ಆ ಹೃದಯದಲ್ಲಿ ಜೀವಾ ಬಿಟ್ಟೆ
ನಿನ್ನಿಂದೆ ಅಲೆದು ನಾ ತುಂಬಾ ಕೆಟ್ಟೆ
ಆದ್ರೂ ನಾ ನಿನ್ನ ಹೊಗಳುವೆ ಕಟ್ಟಿ ಕವನಗಳ ಕೋಟೆ...

೨೩) ನೀ ನಿರ್ಮಿಸಿದ ಮಸಣದ ಮನೆ
ನನ್ನೆದೆಯ ಒಂಟಿ ಕೋಣೆ...

೨೪)  ಕಂಗಳ ನಡುವೆ
ಕನಸುಗಳ ಸೇತುವೆ
ಕೇಳದೇನೆ ಯಾಕೆ ಕಟ್ಟಿದೆ ಹೇಳು ನೀ ಚೆಲುವೆ..?? 

೨೫) ಕೊನೆಯಿರದ ಕಣ್ಣೀರ ಹನಿಗಳಿಂದ ಕನಸಿನ ಅರಮನೆಯನ್ನು ಕಟ್ಟಲೆ? ಮೌನವಾದ ಮಾತುಗಳಿಂದ ಮುರಿದ ಹೃದಯಗಳಿಗೆ ಮಹಾಸೇತುವೆ ಕಟ್ಟಲೇ?  ಇಲ್ಲ ಮುಳುಗುತ್ತಿರುವ ಬಾಳದೋಣಿಗೆ ಮತ್ತೆರಡು ರಂಧ್ರಗಳನ್ನು ಕೊರೆಯಲೆ? 

ಕನ್ನಡ ಕಥೆ ಪುಸ್ತಕಗಳು - Kannada Story Books


ಕಾಡುವ ಪ್ರೇಮ ಕವನಗಳು : Sad Love Poems in Kannada

25 ಕಾಡುವ ಪ್ರೇಮ ಕವನಗಳು : Sad Love Poems in Kannada - Kannada Sad Love Kavanagalu - Kannada Prema Kavanagalu 25 ಕಾಡುವ ಪ್ರೇಮ ಕವನಗಳು : Sad Love Poems in Kannada - Kannada Sad Love Kavanagalu - Kannada Prema Kavanagalu Reviewed by Director Satishkumar on March 31, 2018 Rating: 4.5
Powered by Blogger.
close
skkkannada.com