ಓ ಪ್ರೀತಿಯೇ ನೀ ಅಮರವೇ ? - Kannada Love Poem Kavana - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಓ ಪ್ರೀತಿಯೇ ನೀ ಅಮರವೇ ? - Kannada Love Poem Kavana

ಓ ಪ್ರೀತಿಯೇ ನೀ ಅಮರವೇ ? - Kannada Sad  Love Poem - ಕನ್ನಡ ವಿರಹ ಕವನಗಳು

ಓ ಪ್ರೀತಿಯೇ ನೀ ಅಮರವೇ?
ನನ್ನ ಹೃದಯದೊಡನೆ ನಿನ್ನ ಸಮರವೇ?
ಪ್ರಿಯೆಯೆಂಬ ಕೋಗಿಲೆಗೆ ನೀ ಮಾಮರವೇ?
ನನ್ನ ಮನಕುಟೀರದಲ್ಲಿ ನೀ ಚಾಮರವೇ?



ನನ್ನವಳ ಅಂತರಂಗ ನಿನ್ನಲ್ಲಿ ಪರಸ್ಪರ,
ಸಂಬಂಧದ ಹೊರನೋಟಕ್ಕೆ ನೀನೇ ಅಪಸ್ವರ. 
ಬಂಧ ಬಂಧನವಾಗಲು ನಿನ್ನದೇ ಬಲುಕಾತುರ,
ಕೊಂಡಿ ಕಳಚಿದರೆ ನಿನ್ನದು ಬರೀ ಮರ್ಮರ...


ಪ್ರೀತಿ ನಿನಗಿಲ್ಲ ತಾನೇ ರೂಪ ಶರೀರ?
ನ್ಯಾಯವೇ ನಿನಗಾಗಿ ಹುಡುಗನ ಕಳೇಬರ?
ತಾರುಣ್ಯದ ಶಿಖರದಲ್ಲಿ ನಿನ್ನ ಸಿಹಿ ಶಿಬಿರ, 
ಅವಸರದ ಮನದಲ್ಲಿ ನಿನ್ನದೇ ಸಡಗರ...


ಅವಳ ಜೊತೆಸಾಗಲು ನನಗೆ ಕಾತರ,
ನೀ ಎದೆ ಮೀಟಿದರೆ ಎಲ್ಲವೂ ಸುಂದರ.
ನಾ ಅವಳೊಡನೆ ಇದ್ದಾಗ 
ನಿನ್ನ ನೆನಪು ಸಾವಿರ,
ಅವಳು ಮರೆಯಾದರೂ 
ನೀನೇಕೆ ಅಜರಾಮರ?

Blogger ನಿಂದ ಸಾಮರ್ಥ್ಯಹೊಂದಿದೆ.