ಸ್ನೇಹಾನಾ? ಪ್ರೀತಿನಾ? - Kannada Friendship Love Poetry - Kannada Kavanagalu Friendship - friendship kannada kavanagalu
ನೂರಾರು ಹುಡುಗಿಯರ ನಡುವೆ
ನೀ ನನ್ನ ಸೆಳೆದಾಗ,
ನಾ ಸೇರಿದೆ ನಿನ್ನ ಸ್ನೇಹದ ಮಡಿಲು...
ನೀ ನನ್ನೊಂದಿಗೆ ಹೆಜ್ಜೆ ಹಾಕಿದಾಗ
ನಿನ್ನ ಸಂಬಂಧ ನನಗೆ ತಿಳಿಯದ ಕಡಲು...
ಈ ಸಂಬಂಧ ಪ್ರೀತಿಯಾಗಬಹುದು
ನೀ ನನ್ನ ಮನವೊಲಿಸಿ ಗೆಲ್ಲಲು...
ಅದೇ ಸಂಬಂಧ ಸ್ನೇಹವಾಗಬಹುದು
ನಾ ನಿನ್ನ ಆಸೆಯನ್ನು ಸೋಲಿಸಲು...
ನನ್ನ ಮಾತಿರದ ಮೌನ ನಿನಗೆ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ...
ನಿನ್ನ ಪ್ರೀತಿ ಮುಗುಳ್ನಗು ನನ್ನೆದೆಯ
ಶಾಂತಸಾಗರದಲ್ಲಿ ಸುನಾಮಿ ಎದ್ದಂತೆ...
ನಾ ನಿನ್ನ ಗೆಳೆಯನಲ್ಲದ ಗೆಳೆಯ
ನನ್ನನೇಕೆ ಬಯಸುತಿದೆ ನಿನ್ನ ಹೃದಯ?
ನಿನಗೇ ಬಿಡುವೆನು ಈ ದ್ವಂದ್ವವನ್ನಾ
ನೀನೇ ನಿರ್ಧರಿಸು ಸ್ನೇಹಾನಾ? ಪ್ರೀತಿನಾ?