ನಾನ್ಯಾರು...???? ಕನ್ನಡ ಕವನ : Nanyaru Kannada Kavana : Kannada Poetry - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಾನ್ಯಾರು...???? ಕನ್ನಡ ಕವನ : Nanyaru Kannada Kavana : Kannada Poetry

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ನಾನ್ಯಾರು ಎಂಬುದನ್ನು ಅರಿಯದಾಗಿರುವೆನು,
ನನಗೇನು ಕೆಲ್ಸವೆಂಬುದನ್ನು ತಿಳಿಯದಾಗಿರವೇನು,
ಅನ್ಯರು ಅಳಿದರೂ ಪರವಾಗಿಲ್ಲ, ನಾ ಮಾತ್ರ
ಉಳಿದರೆ ಸಾಕೆನ್ನುತ್ತಿರುವೆನು...

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ಪರಿಶ್ರಮದಿಂದ ಮೇಲೆ ಬರುವವರನ್ನು
ತುಳಿಯಲು ಪ್ರಯತ್ನಿಸುತ್ತಿರುವೆನು,
ಹೆತ್ತವಳನ್ನು ಬೀದಿಗೆ ಎಸೆದಿರುವೆನು,
ಹೊತ್ತವಳನ್ನು ಕಸದಂತೆ ಕಾಣುತ್ತಿರುವೆನು...

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ಮುತ್ತು ಕೊಡುವವಳು ಬಂದಾಗ
ತುತ್ತು ಕೊಟ್ಟವಳನ್ನು ಮರೆಯುವೆನು,
ಅಡ್ಡದಾರಿಗೆಳೆಯುವವಳು ಸಿಕ್ಕಾಗ
ಕೈ ಹಿಡಿದವಳನ್ನೇ ಬಿಟ್ಟು ಬಿಡುವೆನು...

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ನಿಸರ್ಗ ದೇವತೆಗೆ ಅತ್ಯಾಚಾರವೆಸಗಿ
ಅಟ್ಟಹಾಸದಿಂದ ಮೆರೆಯುತ್ತಿರುವೆನು,
ನನಗ್ಯಾರು ಹೇಳುವ ಕೇಳುವವರಿಲ್ಲದೇ
ನಾನೇ ಶ್ರೇಷ್ಠವೆಂದು ಬಿಗುತ್ತಿರುವೆನು...

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ಇತರರ ಸಂತಸಕ್ಕೆ ಕಾರಣವಾಗದೆ
ಎಲ್ಲರ ದು:ಖಕ್ಕೆ ಕಾರಣವಾಗುತ್ತಿರುವೆನು.
ಸತ್ಯ, ಧರ್ಮ, ನ್ಯಾಯ ನೀತಿಯನ್ನೆಲ್ಲ ಮರೆತು
ಅನ್ಯಾಯದ ದಾರಿಯಲ್ಲಿ ಸಾಗುತ್ತಿರುವೆನು...

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ಮನೆಗೆ ಉಪಕಾರಿಯಾದರೆ ಏನಾಯಿತು?
ದೇಶಕ್ಕೆ ದೊಡ್ಡ ಮಾರಿ ನಾನು.
ದೇಶಪ್ರೇಮವನ್ನು ಸ್ವಾರ್ಥಕ್ಕಾಗಿ ಕೊಂದಿರುವೆನು.
ನನಗ್ಯಾರು ಸರಿದಾರಿ ತೋರಿಸುವವರು ಇಲ್ಲವೇನು?

ನಾನ್ಯಾರು...???? ಕನ್ನಡ ಕವನ : Nanyaru Kannada Kavana

ನನ್ನನ್ನು ನೀವು ನೋಡಬೇಕೆಂದರೆ 
ಕನ್ನಡಿಯಲ್ಲೊಮ್ಮೆ ನಿಮ್ಮ ಮುಖವನ್ನು
ತಪ್ಪದೇ  ನೋಡಿಕೊಳ್ಳಿ ಸಾಕು.
ನಾನು ಸಹ ನಿಮ್ಮಂಥೇ ಮಾನವನ 
ರೂಪದಲ್ಲಿರುವ ನರರಾಕ್ಷಸ...

ನಾನ್ಯಾರು...???? ಕನ್ನಡ ಕವನ : Nanyaru Kannada Kavana
Blogger ನಿಂದ ಸಾಮರ್ಥ್ಯಹೊಂದಿದೆ.