ಪ್ರೇಮಿಯೊಬ್ಬನ ಚರಣಗೀತೆ : Sad Love Poetry in Kannada - Sad Feeling Kavana - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪ್ರೇಮಿಯೊಬ್ಬನ ಚರಣಗೀತೆ : Sad Love Poetry in Kannada - Sad Feeling Kavana

ಪ್ರೇಮಿಯೊಬ್ಬನ ಚರಣಗೀತೆ : Sad Love Poetry in Kannada

ಹೃದಯವನ್ನು ತಣಿಸೆ ನನ್ನೊಂದಿಗೆ ಮಾತಾಡಿ
ಮರೆಯಾಗಿ ನೋಯಿಸದಿರು ನನ್ನನ್ನು ಕಾಡಿ
ಮಾತಾಡುವ ಬಾಯಿಗೆ ನೀನಾದೆ ಬೆಡಿ
ಕವಿತೆಗಳಿಂದ ತುಂಬಿದ ಮನದ ಜಾಡಿ...

Sad Love Poetry in Kannada - Sad Feeling Kavana


ನಿನ್ನ ದೃಷ್ಟಿಯಲ್ಲಿ ನಾ ಹೇಗೆ ಕೇಡಿ?
ಯಾರು ಹೇಳಿದರು ನಿನಗೆ ನನ್ನ ಚಾಡಿ?
ಅತ್ತು ಕೆಂಪಾಗಿವೆ ಕಣ್ಣುಗಳು ಬಾಡಿ
ಸರಿಯಿಲ್ಲವೇನೆ ನಮ್ಮಿಬ್ಬರ ಪ್ರೇಮ ಜೋಡಿ?

Sad Love Poetry in Kannada - Sad Feeling Kavana

ಬಾಳನ್ನೇ ಸುಡುತ್ತಿದೆ ನಿನ್ನ ಕೋಪದ ಕಿಡಿ
ಜಗವೇ ನಗುತ್ತಿದೆ ನನ್ನ ವ್ಯಥೆಯಾ ನೋಡಿ
ನಿನ್ನ ಮಡಿಲೇ ನನ್ನ ನಿದ್ರೆಗೆ ಜೋಪಡಿ
ಅದಕ್ಕಿರಲಿ ನಿನ್ನ ಪ್ರೀತಿಯ ಭದ್ರಗಡಿ...

Sad Love Poetry in Kannada - Sad Feeling Kavana

ಕೆಟ್ಟ ಮಾತಿಗೆ ವೇದಿಕೆ ಊರ ಚಾವಡಿ
ಅಲ್ಲಿ ಕೇಳಿದೆಯೇನೆ ನನ್ನ ಲೇಬಡಿ?
ತಪ್ಪಿಲ್ಲದಿದ್ದರೂ ಬಾಗುವೆನು ನಿನ್ನ ಪಾದದಡಿ
ಕ್ಷಮಿಸೆಂದು ಕೇಳುವೆನು ದಯಮಾಡಿ....

Sad Love Poetry in Kannada - Sad Feeling Kavana

ನೀನಿಲ್ಲದ ನಾನು ದೇವತೆಯಿಲ್ಲದ ಗುಡಿ
ನೀನಾಗದಿರು ಎನಗೆ ಬರೆಕೊಡುವ ಛಡಿ
ಸಂದೇಹವೇಕೆ ನೀನೇ ನನ್ನ ನರನಾಡಿ
ಮೆಚ್ಚಿಸಲೇ ನಿನ್ನ ಗುಣಗಾನ ಮಾಡಿ?

Sad Love Poetry in Kannada - Sad Feeling Kavana

ಬೆನ್ನು ತಟ್ಟಿಕೊಳ್ಳುತ್ತಿದೆ ವಿಧಿ ಆಟವಾಡಿ
ನೊಂದ ಜೀವದ ಮೇಲೇಕೆ ನಿನ್ನ ಸಿಡಿಮಿಡಿ?
ಸಂತೈಸು ಸಂತಸದಿ ಪ್ರೇಮಗೀತೆ ಹಾಡಿ
ಇಲ್ಲವೇ ಬಿಳ್ಕೊಡು ದು:ಖದಿ ಚರಣಗೀತೆ ಹಾಡಿ....

Sad Love Poetry in Kannada - Sad Feeling Kavana
Blogger ನಿಂದ ಸಾಮರ್ಥ್ಯಹೊಂದಿದೆ.