
ನಮಸ್ಕಾರ ಗೆಳೆಯರೇ, ನಾನು ನಿಮ್ಮ ಸತೀಶ್‌ಕುಮಾರ್. ಇಂದಿನ ಅಂಕಣದಲ್ಲಿ ನಾನು ನಿಮಗೆ ಒಬ್ಬ ಮಹಾನ್ ನಾಯಕನ 12 ಉತ್ತಮ ಗುಣಗಳನ್ನು ಹೇಳಲಿದ್ದೇನೆ. ನೀವೂ ನಾಯಕರಾಗಲು ಬಯಸಿದರೆ ಇವುಗಳನ್ನು ಅನುಸರಿಸಿ. ಶ್ರೇಷ್ಠ ನಾಯಕನ ಉತ್ತಮ ಗುಣಗಳು ಹೀಗಿವೆ.

1) Unlimited Courage & Confidence : ಅನಿಯಮಿತ ಧೈರ್ಯ ಮತ್ತು ಆತ್ಮವಿಶ್ವಾಸ
ಅಪರಿಮಿತ ಧೈರ್ಯ ಮತ್ತು ಆತ್ಮವಿಶ್ವಾಸ ಶ್ರೇಷ್ಠ ನಾಯಕನ ಉತ್ತಮ ಗುಣಗಳಾಗಿವೆ. ಯಾರು ತಮ್ಮನ್ನು ತಾವು ನಂಬುತ್ತಾರೋ ಹಾಗೂ ಸಾಹಸವನ್ನು ತೋರಿಸುತ್ತಾರೋ ಅಂಥವರನ್ನು ಮಾತ್ರ ಜನ ನಂಬುತ್ತಾರೆ ಮತ್ತೆ ಹಿಂಬಾಲಿಸುತ್ತಾರೆ.

2) Self-Control : ಸ್ವಯಂ ನಿಯಂತ್ರಣ
ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದವನು ಇತರರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ Self Control ಕ್ವಾಲಿಟಿ ನಾಯಕನಲ್ಲಿ ಕಡ್ಡಾಯವಾಗಿ ಇರಬೇಕು. ಅವನಿಗೆ ತಾಳ್ಮೆಯು ಇರಬೇಕು.

3) Fair Conduct : ತಟಸ್ಥ ನಡವಳಿಕೆ
ನಾಯಕ ನ್ಯಾಯಯುತವಾಗಿ ನಡೆದುಕೊಂಡರೆ ಮಾತ್ರ ಅನುಯಾಯಿಗಳು ಅವನನ್ನು ಗೌರವಿಸುತ್ತಾರೆ. ಆದ್ದರಿಂದ ನಾಯಕ ನ್ಯಾಯ ಪ್ರಿಯನಾಗಿರಬೇಕು ಹಾಗೂ ನ್ಯಾಯದ ದಾರಿಯಲ್ಲಿ ನಡೆಯಬೇಕು.

4) Decision Taking Ability : ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
ಯಾರತ್ರ Decision Taking Ability ಇದೆಯೋ ಅವರು ಮಾತ್ರ ನಾಯಕನಾಗಲು ಅರ್ಹರಾಗಿದ್ದಾರೆ. ಇಲ್ಲದಿದ್ದರೆ ಅವರು ನಾಯಕರಲ್ಲ, ನಾಲಾಯಕ !

5) Certainty of Plans : ಯೋಜನೆಗಳ ನಿಶ್ಚಿತತೆ
ಯಶಸ್ವಿ ನಾಯಕ ಯಾವಾಗಲೂ ನಿರ್ದಿಷ್ಟ ಯೋಜನೆಗಳನ್ನು ರೂಪಿಸುತ್ತಾನೆ ಮತ್ತು ಯೋಜನೆಗಳ ಮೂಲಕ ಕೆಲಸ ಮಾಡುತ್ತಾನೆ ಮತ್ತು ಯಶಸ್ಸನ್ನು ಸಾಧಿಸುತ್ತಾನೆ.

6) Habit of Giving More : ಹೆಚ್ಚು ಕೊಡುವ ಅಭ್ಯಾಸ
ಒಬ್ಬ ಒಳ್ಳೆಯ ನಾಯಕನಿಗೆ ಸಿಕ್ಕಿದ್ದಕ್ಕಿಂತ ಹೆಚ್ಚಿನದನ್ನು ನೀಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವು ಅವನನ್ನು ಎಲ್ಲರೂ ಪ್ರೀತಿಸುವಂತೆ ಮಾಡುತ್ತದೆ.

7) Pleasant Personality : ಆಹ್ಲಾದಕರ ವ್ಯಕ್ತಿತ್ವ
Pleasant Personality ಶ್ರೇಷ್ಠ ನಾಯಕನ ಅತ್ಯುತ್ತಮ ಗುಣವಾಗಿದೆ. ಪ್ರತಿಯೊಬ್ಬರೂ Pleasant ಆಗಿರುವವನನ್ನು ಪ್ರೀತಿಸುತ್ತಾರೆ ಮತ್ತು ಫಾಲೋ ಮಾಡುತ್ತಾರೆ.

8) Empathy & Understanding : ಸಹಾನುಭೂತಿ ಮತ್ತು ತಿಳುವಳಿಕೆ
ಒಬ್ಬ ನಾಯಕನಲ್ಲಿ Empathy ಮತ್ತು Understanding ಇರಲೇಬೇಕು. ಬೇರೆಯವರ ಪ್ರತಿ ಸಹಾನುಭೂತಿ ಉಳ್ಳವನು ಮತ್ತು ಇತರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವನು ಮಾತ್ರ ಶ್ರೇಷ್ಠ ನಾಯಕನಾಗಲು ಸಾಧ್ಯ.

9) Responsibility Taking Ability : ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ
ನಾಯಕನಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು. ತಂಡ ಗೆದ್ದರೆ ಆ ಶ್ರೇಯ ತಂಡಕ್ಕೆ ಸಲ್ಲುತ್ತದೆ. ಒಂದು ವೇಳೆ ತಂಡ ಸೋತರೆ ಅದು ನಾಯಕನ ಜವಾಬ್ದಾರಿಯಾಗಿದೆ.

10) Cooperation : ಸಹಕಾರ
ಯಾವಾಗ ಒಬ್ಬ ನಾಯಕ ಎಲ್ಲರನ್ನು ತನ್ನೊಂದಿಗೆ ಸೇರಿಸಿಕೊಂಡು ಸಹಕಾರದಿಂದ ಕೆಲಸ ಮಾಡುತ್ತಾನೋ ಆವಾಗ ಮಾತ್ರ ಆತ ಸಫಲನಾಗುತ್ತಾನೆ.

11) Selflessness : ನಿಸ್ವಾರ್ಥತೆ
ನಾಯಕ ಯಾವಾಗಲೂ ನಿಸ್ವಾರ್ಥತೆಯನ್ನು ಅಳವಡಿಸಿಕೊಳ್ಳಬೇಕು. ಮೊದಲು ತಂಡದ ಯೋಗಕ್ಷೇಮವನ್ನು ನೋಡಬೇಕು, ನಂತರ ತನ್ನ ಯೋಗಕ್ಷೇಮವನ್ನು ಕೊನೆಯಲ್ಲಿ ನೋಡಬೇಕು.

12) Loyalty : ನಿಷ್ಠೆ
ಒಬ್ಬ ನಾಯಕನಿಗೆ ನಿಷ್ಠೆ ಇರಲೇಬೇಕು. ಭ್ರಷ್ಟ ನಾಯಕ ಹೆಚ್ಚು ಕಾಲ ಉಳಿಯುವುದಿಲ್ಲ.

ಸ್ನೇಹಿತರೇ, ಇವಿಷ್ಟು ಒಬ್ಬ ಮಹಾನ್ ನಾಯಕನ ಅತ್ಯುತ್ತಮ ಗುಣಗಳು. ನಾನು ಇವುಗಳನ್ನು "ಥಿಂಕ್ & ಗ್ರೋ ರಿಚ್" ಪುಸ್ತಕದಿಂದ ಕಲಿತಿದ್ದೇನೆ. ನೀವು ಅದನ್ನು ಓದಲು ಬಯಸಿದರೆ ನೀವು ಅದನ್ನು ಓದಬಹುದು. ಲಿಂಕ್ ಇಲ್ಲಿದೆ - Click Here to Read. ಹೆಚ್ಚಿನ ಮಾಹಿತಿಗಾಗಿ ಡೈರೆಕ್ಟರ್ ಸತೀಶ್‌ಕುಮಾರ್ ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ. ಧನ್ಯವಾದಗಳು...