12 Qualities of a Great Leader in Kannada - ಶ್ರೇಷ್ಠ ನಾಯಕನ 12 ಗುಣಗಳು - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

12 Qualities of a Great Leader in Kannada - ಶ್ರೇಷ್ಠ ನಾಯಕನ 12 ಗುಣಗಳು

12 Qualities of a Great Leader in Kannada - ಶ್ರೇಷ್ಠ ನಾಯಕನ 12 ಗುಣಗಳು

                      ನಮಸ್ಕಾರ ಗೆಳೆಯರೇ, ನಾನು ನಿಮ್ಮ ಸತೀಶ್‌ಕುಮಾರ್. ಇಂದಿನ ಅಂಕಣದಲ್ಲಿ ನಾನು ನಿಮಗೆ ಒಬ್ಬ ಮಹಾನ್ ನಾಯಕನ 12 ಉತ್ತಮ ಗುಣಗಳನ್ನು ಹೇಳಲಿದ್ದೇನೆ. ನೀವೂ ನಾಯಕರಾಗಲು ಬಯಸಿದರೆ ಇವುಗಳನ್ನು ಅನುಸರಿಸಿ. ಶ್ರೇಷ್ಠ ನಾಯಕನ ಉತ್ತಮ ಗುಣಗಳು ಹೀಗಿವೆ.

12 Qualities of a Great Leader in Kannada - ಶ್ರೇಷ್ಠ ನಾಯಕನ 12 ಗುಣಗಳು

 1) Unlimited Courage & Confidence : ಅನಿಯಮಿತ ಧೈರ್ಯ ಮತ್ತು ಆತ್ಮವಿಶ್ವಾಸ

               ಅಪರಿಮಿತ ಧೈರ್ಯ ಮತ್ತು ಆತ್ಮವಿಶ್ವಾಸ ಶ್ರೇಷ್ಠ ನಾಯಕನ ಉತ್ತಮ ಗುಣಗಳಾಗಿವೆ. ಯಾರು ತಮ್ಮನ್ನು ತಾವು ನಂಬುತ್ತಾರೋ ಹಾಗೂ ಸಾಹಸವನ್ನು ತೋರಿಸುತ್ತಾರೋ ಅಂಥವರನ್ನು ಮಾತ್ರ ಜನ ನಂಬುತ್ತಾರೆ ಮತ್ತೆ ಹಿಂಬಾಲಿಸುತ್ತಾರೆ. 

1) Unlimited Courage & Confidence : ಅನಿಯಮಿತ ಧೈರ್ಯ ಮತ್ತು ಆತ್ಮವಿಶ್ವಾಸ

2) Self-Control : ಸ್ವಯಂ ನಿಯಂತ್ರಣ 

                        ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದವನು ಇತರರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ Self Control ಕ್ವಾಲಿಟಿ ನಾಯಕನಲ್ಲಿ ಕಡ್ಡಾಯವಾಗಿ ಇರಬೇಕು. ಅವನಿಗೆ ತಾಳ್ಮೆಯು ಇರಬೇಕು. 

2) Self-Control : ಸ್ವಯಂ ನಿಯಂತ್ರಣ

3) Fair Conduct :  ತಟಸ್ಥ ನಡವಳಿಕೆ 

                  ನಾಯಕ ನ್ಯಾಯಯುತವಾಗಿ ನಡೆದುಕೊಂಡರೆ ಮಾತ್ರ ಅನುಯಾಯಿಗಳು ಅವನನ್ನು ಗೌರವಿಸುತ್ತಾರೆ. ಆದ್ದರಿಂದ ನಾಯಕ ನ್ಯಾಯ ಪ್ರಿಯನಾಗಿರಬೇಕು ಹಾಗೂ ನ್ಯಾಯದ ದಾರಿಯಲ್ಲಿ ನಡೆಯಬೇಕು. 

3) Fair Conduct :  ತಟಸ್ಥ ನಡವಳಿಕೆ

4) Decision Taking Ability : ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

                    ಯಾರತ್ರ Decision Taking Ability ಇದೆಯೋ ಅವರು ಮಾತ್ರ ನಾಯಕನಾಗಲು ಅರ್ಹರಾಗಿದ್ದಾರೆ. ಇಲ್ಲದಿದ್ದರೆ ಅವರು ನಾಯಕರಲ್ಲ, ನಾಲಾಯಕ !

4) Decision Taking Ability : ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

5) Certainty of Plans : ಯೋಜನೆಗಳ ನಿಶ್ಚಿತತೆ

                 ಯಶಸ್ವಿ ನಾಯಕ ಯಾವಾಗಲೂ ನಿರ್ದಿಷ್ಟ ಯೋಜನೆಗಳನ್ನು ರೂಪಿಸುತ್ತಾನೆ ಮತ್ತು ಯೋಜನೆಗಳ ಮೂಲಕ ಕೆಲಸ ಮಾಡುತ್ತಾನೆ ಮತ್ತು ಯಶಸ್ಸನ್ನು ಸಾಧಿಸುತ್ತಾನೆ.

5) Certainty of Plans : ಯೋಜನೆಗಳ ನಿಶ್ಚಿತತೆ

6) Habit of Giving More : ಹೆಚ್ಚು ಕೊಡುವ ಅಭ್ಯಾಸ

                    ಒಬ್ಬ ಒಳ್ಳೆಯ ನಾಯಕನಿಗೆ ಸಿಕ್ಕಿದ್ದಕ್ಕಿಂತ ಹೆಚ್ಚಿನದನ್ನು ನೀಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವು ಅವನನ್ನು ಎಲ್ಲರೂ ಪ್ರೀತಿಸುವಂತೆ ಮಾಡುತ್ತದೆ.

6) Habit of Giving More : ಹೆಚ್ಚು ಕೊಡುವ ಅಭ್ಯಾಸ

7) Pleasant Personality : ಆಹ್ಲಾದಕರ ವ್ಯಕ್ತಿತ್ವ

           Pleasant Personality ಶ್ರೇಷ್ಠ ನಾಯಕನ ಅತ್ಯುತ್ತಮ ಗುಣವಾಗಿದೆ. ಪ್ರತಿಯೊಬ್ಬರೂ Pleasant ಆಗಿರುವವನನ್ನು ಪ್ರೀತಿಸುತ್ತಾರೆ ಮತ್ತು ಫಾಲೋ ಮಾಡುತ್ತಾರೆ. 

7) Pleasant Personality : ಆಹ್ಲಾದಕರ ವ್ಯಕ್ತಿತ್ವ

8) Empathy & Understanding : ಸಹಾನುಭೂತಿ ಮತ್ತು ತಿಳುವಳಿಕೆ

                         ಒಬ್ಬ ನಾಯಕನಲ್ಲಿ Empathy ಮತ್ತು Understanding ಇರಲೇಬೇಕು. ಬೇರೆಯವರ ಪ್ರತಿ ಸಹಾನುಭೂತಿ ಉಳ್ಳವನು ಮತ್ತು ಇತರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವನು ಮಾತ್ರ ಶ್ರೇಷ್ಠ ನಾಯಕನಾಗಲು ಸಾಧ್ಯ.

8) Empathy & Understanding : ಸಹಾನುಭೂತಿ ಮತ್ತು ತಿಳುವಳಿಕೆ

9) Responsibility Taking Ability : ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ

                       ನಾಯಕನಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು. ತಂಡ ಗೆದ್ದರೆ ಆ ಶ್ರೇಯ ತಂಡಕ್ಕೆ ಸಲ್ಲುತ್ತದೆ. ಒಂದು ವೇಳೆ ತಂಡ ಸೋತರೆ ಅದು ನಾಯಕನ ಜವಾಬ್ದಾರಿಯಾಗಿದೆ.

9) Responsibility Taking Ability : ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ

10) Cooperation :  ಸಹಕಾರ

                   ಯಾವಾಗ ಒಬ್ಬ ನಾಯಕ ಎಲ್ಲರನ್ನು ತನ್ನೊಂದಿಗೆ ಸೇರಿಸಿಕೊಂಡು ಸಹಕಾರದಿಂದ ಕೆಲಸ ಮಾಡುತ್ತಾನೋ ಆವಾಗ ಮಾತ್ರ ಆತ ಸಫಲನಾಗುತ್ತಾನೆ. 

10) Cooperation :  ಸಹಕಾರ

11) Selflessness : ನಿಸ್ವಾರ್ಥತೆ

                    ನಾಯಕ ಯಾವಾಗಲೂ ನಿಸ್ವಾರ್ಥತೆಯನ್ನು ಅಳವಡಿಸಿಕೊಳ್ಳಬೇಕು. ಮೊದಲು ತಂಡದ ಯೋಗಕ್ಷೇಮವನ್ನು ನೋಡಬೇಕು, ನಂತರ ತನ್ನ ಯೋಗಕ್ಷೇಮವನ್ನು ಕೊನೆಯಲ್ಲಿ ನೋಡಬೇಕು.

11) Selflessness : ನಿಸ್ವಾರ್ಥತೆ

12) Loyalty : ನಿಷ್ಠೆ

           ಒಬ್ಬ ನಾಯಕನಿಗೆ ನಿಷ್ಠೆ ಇರಲೇಬೇಕು. ಭ್ರಷ್ಟ ನಾಯಕ ಹೆಚ್ಚು ಕಾಲ ಉಳಿಯುವುದಿಲ್ಲ.

12) Loyalty : ನಿಷ್ಠೆ

                       ಸ್ನೇಹಿತರೇ, ಇವಿಷ್ಟು ಒಬ್ಬ ಮಹಾನ್ ನಾಯಕನ ಅತ್ಯುತ್ತಮ ಗುಣಗಳು. ನಾನು ಇವುಗಳನ್ನು "ಥಿಂಕ್ & ಗ್ರೋ ರಿಚ್" ಪುಸ್ತಕದಿಂದ ಕಲಿತಿದ್ದೇನೆ. ನೀವು ಅದನ್ನು ಓದಲು ಬಯಸಿದರೆ ನೀವು ಅದನ್ನು ಓದಬಹುದು. ಲಿಂಕ್ ಇಲ್ಲಿದೆ - Click Here to Read. ಹೆಚ್ಚಿನ ಮಾಹಿತಿಗಾಗಿ ಡೈರೆಕ್ಟರ್ ಸತೀಶ್‌ಕುಮಾರ್ ಯೂಟ್ಯೂಬ್ ಚಾನೆಲ್   ಫಾಲೋ ಮಾಡಿ. ಧನ್ಯವಾದಗಳು... 

Blogger ನಿಂದ ಸಾಮರ್ಥ್ಯಹೊಂದಿದೆ.