27 ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು Best Tips for Successful Love in Kannada Love tips in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

27 ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು Best Tips for Successful Love in Kannada Love tips in kannada

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

           ಕಾರಣವಿಲ್ಲದೆ ಶುರುವಾಗುವ ಪ್ರೀತಿ, ನೂರಾರು ಕಾರಣಗಳ ಕಳಂಕದಲ್ಲಿ ಕೊನೆಯಾಗುತ್ತದೆ. ಪ್ರೀತಿ ಶುರುವಾಗಲು ಕಾರಣಗಳು ಬೇಕಿಲ್ಲ. ಆದರೆ ಮುರಿದು ಬಿದ್ದ ಪ್ರೀತಿಯ ಹಿಂದೆ ಯಾವುದಾದರೂ ಕಾರಣ ಇದ್ದೇ ಇರುತ್ತದೆ. ಮುರಿದ ಮನಸ್ಸು ಸಹ ಒಂದು ರೀತಿಯ ಅಂಗವೈಕಲ್ಯವೆ ಸರಿ. ಆದಕಾರಣ ನಿಮ್ಮ ಪ್ರೀತಿ ಮತ್ತು ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ವಹಿಸುವ ಅವಶ್ಯಕತೆ ತುಂಬಾನೆ  ಇದೆ. ಯಾವುದೇ ಕಾರಣಕ್ಕೂ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮಿಂದ ದೂರಾಗುವ ಅವಕಾಶವನ್ನು ಕೊಡಬೇಡಿ. ಇಪ್ಪತ್ತನೆಯ ವಯಸ್ಸಿನಲ್ಲಿ ಶುರುವಾದ ಪ್ರೀತಿ, ಎಪ್ಪತ್ತೆನೆಯ ವಯಸ್ಸಿನವರೆಗು ಹಚ್ಚ ಹಸಿರಾಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

ಯಶಸ್ವಿ ಪ್ರೀತಿ ಪ್ರೇಮದ ಸಂಬಂಧಕ್ಕಾಗಿ ಸೂಕ್ತ ಸಲಹೆಗಳು ಇಲ್ಲಿವೆ.

 1) ಪ್ರೀತಿಯಲ್ಲಿ ಪ್ರಾಮಾಣಿಕತೆ ಮತ್ತು ತಾಳ್ಮೆಯಿಂದ ನಡೆದುಕೊಳ್ಳಿ.

2) ಸಾಧ್ಯವಾದಷ್ಟು ನೇರ ಹಾಗೂ ನಿರಂತರ ಸಂಪರ್ಕದಲ್ಲಿರಿ. ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿ.  ಏಕೆಂದರೆ ಮೊಬೈಲನಿಂದ ತಪ್ಪು ತಿಳುವಳಿಕೆ ಆಗುವ ಸಾಧ್ಯತೆ ಅಧಿಕವಾಗಿರುತ್ತದೆ.

3) ಎಲ್ಲದರಲ್ಲೂ ನಿಮ್ಮ ಸ್ವಾರ್ಥ ಸಾಧಿಸಬೇಡಿ.

4) ಹೆಚ್ಚಿಗೆ ಆಲಿಸಿ, ಕಡಿಮೆ ಮಾತನಾಡಿ.

5) ಕಡಿಮೆ ಚಾಟಿಂಗ ಮಾಡಿ. ಹೆಚ್ಚಿಗೆ ಡೇಟಿಂಗ ಮಾಡಿ. ಈ ರೂಢಿ ಇರಲಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

6) ಯಾವುದೇ ತಪ್ಪಿಲ್ಲದಿದ್ದರೂ ಕ್ಷಮೆ ಕೇಳಿ ಮತ್ತಷ್ಟು ಹತ್ತಿರವಾಗಲು ಪ್ರಯತ್ನಪಡಿ.

7) ಕುಡಿತ, ಸಿಗರೇಟ್ ಮುಂತಾದ ದುಶ್ಚಟಗಳಿಂದ ದೂರವಿರಿ..

8) ನಿಮ್ಮ ಪ್ರೀತಿ ಮತ್ತು ಪ್ರೀತಿಪಾತ್ರರನ್ನು ನಂಬಿಕೆಯಿಂದ ಕಾಣಿ.

9) ನಿಮ್ಮ ಪ್ರೀತಿಪಾತ್ರರನ್ನು ಗೌರವಿಸಿ, ರಕ್ಷಿಸಿ ಮತ್ತು ಅವರಿಗೆ ಮಹತ್ವ ನೀಡಿ. ಅವರ ಮಾತನ್ನು ಮನ್ನಿಸಿ.

10) ನಿಮ್ಮ ಪ್ರೀತಿಯನ್ನು ಯಾವಾಗಲೂ ಈಗತಾನೆ ಅರಳಿದ ಹೂವಿನಂತೆ ಹೊಸದಾಗಿಡಲು ಪ್ರಯತ್ನಿಸಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

11) ಒಳ್ಳೆಯ ನೋಟ ಮತ್ತು ಒಳ್ಳೆಯ ಉದ್ದೇಶ ಸದಾ ನಿಮ್ಮ ಸಂಗಾತಿಗಳಾಗಿರಲಿ.

12) ತಿಳಿದು ತಿಳಿದು ಆಗಿರುವ ತಪ್ಪುಗಳನ್ನು ಮತ್ತೆ ಮತ್ತೆ ಪುನರಾವರ್ತನೆ ಮಾಡಬೇಡಿ.

13) ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟು ದೂರ ಓಡುವ ಬದಲು, ಬೆಲೆಕಟ್ಟಲಾಗದ ಸಮಯವನ್ನು ನಿಮ್ಮ ಪ್ರೀತಿಪಾತ್ರರೊಡನೆ ಸಂತೋಷದಿಂದ ಕಳೆಯಿರಿ.

14) ರಹಸ್ಯಗಳನ್ನು ಇಡಬೇಡಿ. ತೆರೆದ ಮನಸ್ಸಿನಿಂದ ಇರಲು ಪ್ರಯತ್ನಿಸಿ.

15) ಪದೇ ಪದೇ ಸುಳ್ಳೇಳಿ ವಂಚಿಸಿ ಸಿಕ್ಕಿಹಾಕಿಕೊಳ್ಳಬೇಡಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

16) ನಿಮ್ಮ ಪ್ರೀತಿಯನ್ನು ಧೈರ್ಯವಾಗಿ ಯಾವುದೇ ಮುಜುಗುರವಿಲ್ಲದೆ ವ್ಯಕ್ತಪಡಿಸಿ.

17) ನಿಮ್ಮ ಪ್ರೀತಿ ಮತ್ತು ಪ್ರೀತಿಪಾತ್ರರಿಗೆ ಅನಗತ್ಯ ಪ್ರಚಾರ ಕೊಡಬೇಡಿ.

18) ಮದುವೆಗೆ ಮುನ್ನವೇ ಲೈಂಗಿಕ ಸುಖಕ್ಕಾಗಿ ಪದೇಪದೇ ಪೀಡಿಸಬೇಡಿ.

19) ಬೇರೆ ಹುಡುಗ ಅಥವಾ ಹುಡುಗಿಯ ಜೊತೆ ಹೆಚ್ಚಾಗಿ ಮಾತನಾಡುವುದು ಇಲ್ಲವೇ ಹೆಚ್ಚಾಗಿ ಒಲವನ್ನು ತೋರಿಸುವುದು ಮಾಡಬೇಡಿ.

20) ನಿಮ್ಮ ಕೆಟ್ಟ ವರ್ತನೆಯಿಂದ ನಿಮ್ಮ ಪ್ರೀತಿಪಾತ್ರರಿಗೆ ಶಾರೀರಿಕ ಅಥವಾ ಮಾನಸಿಕ ಹಿಂಸೆ ಕೊಡಬೇಡಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

21) ಬೇಜಾವಾಬ್ದಾರಿತನದಿಂದ ಮಾತನಾಡುವುದು ಇಲ್ಲವೇ ನಡೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.

22) ಪ್ರೀತಿಯಲ್ಲಿನ ನಂಬಿಕೆ ಮತ್ತು ಆಸಕ್ತಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

23) ಪ್ರೀತಿಪಾತ್ರರಿಂದ ಅಸಾಧ್ಯವಾದ ಸಂಗತಿಗಳನ್ನು ಹೆಚ್ಚಾಗಿ ನಿರೀಕ್ಷೆ ಮಾಡಬೇಡಿ. ದುಬಾರಿ ಗಿಪ್ಟಗಳಿಗೆ ಬೇಡಿಕೆ ಇಡಬೇಡಿ.

23) ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ಮಧ್ಯೆ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ಕೊಡಬೇಡಿ.

24) ಅನಗತ್ಯವಾಗಿ ನಿಮ್ಮ ಪ್ರೀತಿಪಾತ್ರರನ್ನು ಅನುಮಾನಿಸಬೇಡಿ.

25) ನಿಮ್ಮ ನಗು ಹಾಗೂ ನಡತೆ ನೈಜವಾಗಿರಲಿ.

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

26) ಅಶ್ಲೀಲ ಜೋಕು ಇಲ್ಲವೇ ಎಲ್ಲರಿಗೂ ಸಾಮಾನ್ಯವಾಗಿ ಇರುವ ಸಮಸ್ಯೆಗಳನ್ನು  ಪದೇ ಪದೇ  ಹೇಳಿ ತಲೆ ತಿನ್ನಬೇಡಿ.

27) ಯಾವಾಗಲೂ ನಾನೇ ಶ್ರೇಷ್ಠ, ನಂದೇ ಸರಿ ಅಂತಾ ವಾದಿಸಬೇಡಿ.

 ಇತ್ಯಾದಿ ಇತ್ಯಾದಿ ಇತ್ಯಾದಿ.... ನಿಮ್ಮ ಪ್ರೀತಿಗೆ ಶುಭವಾಗಲಿ, ಗೆಲುವಾಗಲಿ....

27 - ಯಶಸ್ವಿ ಪ್ರೀತಿ ಪ್ರೇಮಕ್ಕೆ ಸೂಕ್ತ ಸಲಹೆಗಳು : Best Tips for Successful Love in Kannada - Love tips in kannada

Blogger ನಿಂದ ಸಾಮರ್ಥ್ಯಹೊಂದಿದೆ.