ಹುಡುಗರಿಗೆ ಸಾವಿರ ಸಮಸ್ಯೆಗಳಿರುತ್ತವೆ. ಅದರಲ್ಲಿ ಹುಡ್ಗೀರಿಂದಾನು ಒಂದು ಸಮಸ್ಯೆ ಇದ್ದೆ ಇರುತ್ತೆ. 1, 2, 3.... ಬರದವನಿಗೆ ಗಣಿತದ ಪಾಠ ಅರ್ಥ ಆಗಬಹುದು. ಆದರೆ PhD ಆದವನಿಗೂ ಹುಡ್ಗೀರು ಸಂಪೂರ್ಣವಾಗಿ ಅರ್ಥ ಆಗಲ್ಲ. ಹುಡುಗಿಯರು ಯಾವಾಗ ಬಾಯ್ತುಂಬ ಬೈಯ್ತಾರೆ, ಮುದ್ದು ಮಾಡ್ತಾರೆ, ಯಾಕೆ ಕೋಪ ಮಾಡ್ಕೋತ್ತಾರೆ ಎಂಬುದು ಅವರ್ಗೆ ಸರಿಯಾಗಿ ಗೊತ್ತಿರಲ್ಲ. ಈ ಜಗತ್ತಿನಲ್ಲಿ ಹುಡುಗಿಯರಿಗಾಗಿ ಒಂದು ವಿಶೇಷ ಭಾಷೆ ಇದೆ. ಅದು ಹೃದಯದ ಭಾಷೆ. ಹುಡುಗರಿಗೆ ಈ ಭಾಷೆ ಅಷ್ಟು ಸುಲಭವಾಗಿ ಅರ್ಥ ಆಗಲ್ಲ. ಆದ್ರೂನು ಅರ್ಥ ಮಾಡ್ಕೊಳ್ಳಿ. ಯಾಕಂದ್ರೆ ನಿಮಗೆ ಜೀವನದಲ್ಲಿ ಪ್ರೇಯಸಿ ಅನ್ನೋ ದೇವತೆ ಸಿಕ್ಕ ಮೇಲೆ ಈ ಭಾಷೆ ತುಂಬಾ ಉಪಯೋಗ ಆಗುತ್ತೆ...
ನನಗೆ ನನ್ನವಳು ಹೇಳಿಕೊಟ್ಟ ಭಾಷೆಯನ್ನು ಯಥಾವತ್ತಾಗಿ ಹೇಳ್ತಾ ಇದೀನಿ.
"ಏ ಗೂಬೆ, ನಿನಗೆ ಹುಡ್ಗೀರ ಭಾಷೆನೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹುಡುಗಿಯರಿಗಂತಾನೆ ಒಂದು ವಿಶೇಷ ಭಾಷೆ ಇದೆ. ಅದುವೇ ಹೃದಯದ ಭಾಷೆ. ಅದ್ನ ಅರ್ಥ ಮಾಡ್ಕೋ ರಾಜಾ...
೧) ರಾತ್ರಿ ನಾ ನಿನಗೆ ಕಾಲ್ ಅಥವಾ ಮೆಸೇಜ್ ಮಾಡಿಲ್ಲ ಅಂದ್ರೆ ನಿನ್ಮೇಲೆ ಕೋಪ ಬಂದಿದೆ ಅಂತಲ್ಲ. ನಿನ್ನ ಕರೆಗಾಗಿ , ನಿನ್ನ ಪ್ರೇಮ ಸಂದೇಶಕ್ಕಾಗಿ ಕಾಯ್ತಾ ಇದೀನಿ ಅಂತರ್ಥ.
೨) ನಾನು ಕಾರಣವಿಲ್ಲದೆ ಕೋಪಿಸಿಕೊಂಡು ದೂರ ನಡೆದರೆ, ನೀನು ಹಿಂಬಾಲಿಸಿಕೊಂಡು ಬಂದು ನನ್ನ ಸಮಾಧಾನ ಮಾಡಲಿ ಎಂದರ್ಥ.
೩) ನಾನು ನಿನ್ನ ದೂರ ತಳ್ಳಿದರೆ, ಮತ್ತೆ ನೀ ಬಳಿಬಂದು ನನ್ನ ಅಪ್ಪಿಕೊಂಡು ಮುತ್ತಿಡಬೇಕು ಅಂತರ್ಥ.
೪) ನಾನು ಸಿರೀಯಸ್ ಆದರೆ ನೀನು ಕಾಮಿಡಿಯನ್ ಆಗಬೇಕು. ನನ್ನ ನಗೀಸಬೇಕು.
೫) ನಾ ನಿನ್ನ ನಿರ್ಲಕ್ಷಿಸಿದರೆ, ನೀ ನನ್ನ ಗಮನ ಸೆಳೆಯಲು ಸರ್ಕಸ್ ಮಾಡಬೇಕು.
೬) ನಾನು ಬೇಡಬೇಡ ಅಂದ್ರು ನನಗಿಷ್ಟವಾದ ಎಲ್ಲವನ್ನೂ ಕೊಡಿಸಬೇಕು.
೭) ನಾನು ಅಳಲು ಶುರುಮಾಡಿದರೆ, ನೀ ನನ್ನ ಗಟ್ಟಿಯಾಗಿ ಅಪ್ಪಿಕೊಂಡು ಧೈರ್ಯ ಹೇಳಬೇಕು.
೮) ನಾನು ಮಾತು ಮುಗಿಸುವಾಗ ಮತ್ತೆ ನೀ ಶುರುಮಾಡಬೇಕು.