27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

                  ಪ್ರೀತಿ ಒಂದು ಸುಂದರವಾದ ಭಾವನೆ. ಮರೆಯಲಾಗದ ಅನುಭವ. ಪ್ರೀತಿ ಇರುವುದರಿಂದಲೇ ನಾವೆಲ್ಲರೂ ಇನ್ನೂ ಜೀವಂತವಾಗಿರುವುದು. ಪ್ರೀತಿಗೆ ಎಲ್ಲವನ್ನು ಮೋಡಿ ಮಾಡುವ ಮಾಯಾಶಕ್ತಿ ಇದೆ. ಪ್ರೀತಿ ಜೀವ ಉಳಿಸುವ ಒಂದು ಔಷಧಿ. ಆದರೆ ಅವಶ್ಯಕತೆಗಿಂತ ಅಧಿಕವಾದರೆ ಈ ಪ್ರೀತಿ ವಿಷವಾಗುವುದರಲ್ಲಿ ಸಂದೇಹವೇ ಇಲ್ಲ. ಈ ಜಗತ್ತಿನಲ್ಲಿ "ಹೊಟ್ಟೆಗೆ ಹಿಟ್ಟಿಲ್ಲ" ಅಂತಾ ಕೊರಗುವವರಿಗಿಂತ "ಪ್ರೀತಿಸಿದ ಜೀವ ಜೊತೆಗಿಲ್ಲ" ಅಂತಾ ಕೊರಗುವವರೆ ಹೆಚ್ಚಾಗಿದ್ದಾರೆ. ನಿಜವಾದ ಪ್ರೀತಿ ಎಲ್ಲ ತರಹದ ಬಯಕೆಗಳಿಂದ ಮುಕ್ತವಾಗಿರುತ್ತದೆ. ನಿಜವಾದ ಪ್ರೀತಿಗೆ ಬೆಲೆಬಾಳುವ ಉಡುಗೊರೆಗಳು ಬೇಕಾಗಿಲ್ಲ.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

    ನಿಜವಾದ ಪ್ರೀತಿ ಇರುವ ಕಡೆ ಸ್ವಲ್ಪ ಕೋಪವು ಇರುತ್ತದೆ. ಆದರೆ ಈ ಮುದ್ದಾದ ಕೋಪದಿಂದ ಪ್ರೀತಿಯ ಸೇತುವೆ ಮುರಿದು ಬೀಳುವ ಸಾಧ್ಯತೆ ತುಂಬಾ ಕಡಿಮೆ. ಯಾವುದೇ ಕಾರಣಗಳಿಲ್ಲದೆ ಶುರುವಾಗುವ ಪ್ರೀತಿ ನೂರಾರು ಕಾರಣಗಳಿಂದ ಮುಕ್ತಾಯವಾಗುತ್ತದೆ. ಮನಸ್ಸುಗಳು ಮಿಲಿನವಾಗಲು ಕಾರಣಗಳು ಬೇಕಿಲ್ಲ. ಆದರೆ ಅದೇ ಮನಸ್ಸುಗಳು ಮಲಿನವಾಗಲು ಒಂದು ಸಣ್ಣ ನೆಪ ಸಾಕು. ಆದ್ದರಿಂದ ಈ ಪ್ರೇಮ ವೈಫಲ್ಯಕ್ಕೆ ನಿಜವಾದ ಕಾರಣಗಳೇನು ಎಂಬುದನ್ನು ಅರಿಯುವುದು ಅತ್ಯವಶ್ಯಕವಾಗಿದೆ. 

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

ಈ ಕೆಳಗಿನ ಕಾರಣಗಳು ನಿಮ್ಮ ಪ್ರೀತಿಯನ್ನು ಯಾವುದೇ ಕ್ಷಣದಲ್ಲಿ ಮುರಿಯಬಲ್ಲವು.

1) ಭಿನ್ನ ಜಾತಿ, ಧರ್ಮ, ಆಸ್ತಿ, ಅಂತಸ್ತಿನ ಹೆಸರಲ್ಲಿ ಕುಟುಂಬ ಸದಸ್ಯರ ತೀವ್ರ ವಿರೋಧ.

2) ನಿಮ್ಮ ಪ್ರೀತಿ ಪಾತ್ರರು ತಿಳಿದು ತಿಳಿದು ಮಾಡುವ ನಿರಂತರ ತಪ್ಪುಗಳು.

 3) ಮೂಟೆಗಟ್ಟಲೆ ಸುಳ್ಳುಗಳನ್ನು ಹೇಳಿ ವಂಚಿಸುವುದು.

4) ನೈಜ ಭಾವನೆ ಮತ್ತು ನೈಜ ನಗುವಿನ ಕೊರತೆ.

5) ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಮತ್ತು ಸಾಬೀತುಪಡಿಸುವಲ್ಲಿ ವಿಫಲತೆ.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

6) ಬ್ಯಾಂಕ್ ಬ್ಯಾಲನ್ಸಿನ ಕೊರತೆ.

7) ಕುಟುಂಬದ ನಿಜವಾದ ಹಿನ್ನೆಲೆ, ಮಾಡುವ ಕೆಲಸ, ಸಂಬಳ, ಮೊಬೈಲ್ ಪಾಸವರ್ಡ ಇತ್ಯಾದಿಗಳನ್ನು ಗೌಪ್ಯವಾಗಿಡುವುದು.

8)  ಅತಿಯಾದ ಫೋನ್ ಸಂಭಾಷಣೆ.  ವರ್ಷಕೊಂದ್ಸಾರಿ ಡೇಟಿಂಗ್. ಆದರೆ ಹಗಲು ರಾತ್ರಿ ಚಾಟಿಂಗ್.

9) ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯ ಮತ್ತು ಮಹತ್ವ ಕೊಡದಿರುವುದು.

10) ಮದುವೆಗೆ ಮುಂಚೆಯೇ ಸಂಗಾತಿಯನ್ನು ಮಂಚ ಏರಲು ಪದೇ-ಪದೇ  ಒತ್ತಾಯಿಸುವುದು.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

11) ಅತಿಯಾದ ಬಯಕೆಗಳು, ಅತಿಯಾದ ಬೇಡಿಕೆಗಳು.

12) ಪರ ಪುರುಷ ಅಥವಾ ಮಹಿಳೆಯ ಮೇಲೆ ಹೆಚ್ಚಿನ ಒಲವನ್ನು ಹೊಂದುವುದು.

13) ಪ್ರೀತಿಪಾತ್ರರನ್ನು ಅಗೌರವದಿಂದ ನಡೆಸಿಕೊಳ್ಳುವುದು.

14) ಕುಡಿತ, ಸಿಗರೇಟ್ ಮತ್ತಿತರ ಚಟಗಳಿಗೆ ದಾಸರಾಗುವುದು.

15) ಕೆಟ್ಟ ನೋಟ ಮತ್ತು ಕೆಟ್ಟ ಉದ್ದೇಶ.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

16) ಪ್ರೀತಿಯಲ್ಲಿರುವ ಆಸಕ್ತಿ ಮತ್ತು ನಂಬಿಕೆಯನ್ನು ಕಳೆದುಕೊಳ್ಳುವುದು.

17) ಭಾವನಾತ್ಮಕವಾಗಿ ಮಾತಾಡಿ ಪ್ರೀತಿಪಾತ್ರರನ್ನು ದುರ್ಬಳಕೆ ಮಾಡಿಕೊಳ್ಳಲು ಪದೇ-ಪದೇ ಪ್ರಯತ್ನಿಸುವುದು.

18) ಪ್ರೀತಿಪಾತ್ರರ ಮೇಲೆ ಅತಿಯಾದ ಅವಲಂಬನೆ.

19) ಅತಿಯಾದ ಲೈಂಗಿಕ ಆಸಕ್ತಿ ಇಲ್ಲವೇ ನಿರಾಸಕ್ತಿ.

20) ವಿಭಿನ್ನ ಆಲೋಚನೆಗಳು ಮತ್ತು ನಂಬಿಕೆಗಳು.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

21) ಇಬ್ಬರ ಮಧ್ಯೆ ಮೂರನೇ ವ್ಯಕ್ತಿಯ ಪ್ರವೇಶ.

22) ಪ್ರೀತಿ ಮತ್ತು ಪ್ರೀತಿಪಾತ್ರರ ಮೇಲೆ ಅನಾವಶ್ಯಕ ಸಂದೇಹಗಳು.

23) ಯಾವಾಗಲೂ ಸಮಸ್ಯೆಗಳ ಬಗ್ಗೆ ಮಾತಾಡಿ ತಲೆ ತಿನ್ನುವುದು.

24) ಅಶ್ಲೀಲ ಜೋಕು ಹಾಗೂ ಸಮಸ್ಯೆಗಳನ್ನೆ ಹೇಳಿ ನೋಯಿಸುವುದು.

25) ಬರೀ  ಆರ್ಥಿಕ ಲಾಭ ಮತ್ತು ದೈಹಿಕ ಸುಖಕ್ಕಾಗಿ ಪ್ರೀತಿಸುವುದು.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

26) ಬರೀ ಪ್ರೀತಿಪಾತ್ರರ ತಪ್ಪುಗಳನ್ನು ಎತ್ತಿ ತೋರಿಸಲು ಕಾಯುವುದು.

27) ತಪ್ಪು ತಿಳುವಳಿಕೆ ಮತ್ತು ತಪ್ಪು ಗ್ರಹಿಕೆ.

   ಇತ್ಯಾದಿ, ಇತ್ಯಾದಿ, ಇತ್ಯಾದಿ
                       ಕಾರಣಗಳನ್ನು ಹುಡುಕುತ್ತಾ ಹೋದಷ್ಟು ಅವು ಹೆಚ್ಚಾಗುತ್ತಾ ಹೋಗುತ್ತವೆ. ಮೇಲಿನ ಯಾವುದೇ ಕಾರಣ ಯಾವಾಗ ಬೇಕಾದರೂ ನಿಮ್ಮ ಪ್ರೀತಿಯನ್ನು ಮುರಿದು ನಿಮ್ಮ ಮನಸ್ಸನ್ನು ಮಸಣವಾಗಿಬಹುದು. ಮನಸ್ಸು ಮುರಿದ ಮೇಲೆ ಮರುಗಿ ಏನು ಪ್ರಯೋಜನವಿಲ್ಲ. ಆದಕಾರಣ ನಿಮ್ಮ ತಪ್ಪುಗಳನ್ನು ನೀವೇ ತಿದ್ದಿಕೊಂಡು ಬದಲಾಗಿ. ನಿಮ್ಮ ಪ್ರೀತಿ ಮತ್ತು ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶುಭವಾಗಲಿ......
27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in Kannada #Love Tips in Kannada

Blogger ನಿಂದ ಸಾಮರ್ಥ್ಯಹೊಂದಿದೆ.