ಒಂದು ಪ್ರೇಮ ಪತ್ರ - Love Letter in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಂದು ಪ್ರೇಮ ಪತ್ರ - Love Letter in Kannada

ಅವಳ ಹೃದಯದ ಬಾಗಿಲಿಗೆ....  Kannada Love Story
                   
   ನಾವು ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಬೇಕು ಹಾಗೂ ಪ್ರೀತಿಯಿಂದಲೇ ಅದನ್ನು ಪಡೆದುಕೊಳ್ಳಬೇಕು. ನಾವು ಇಷ್ಟಪಟ್ಟರೆ ಪ್ರೀತಿ ಸಿಗಬೇಕೆಂದು ಬಯಸುವುದು ಹುಚ್ಚುತನವಲ್ಲದೇ ಮತ್ತೇನು?  ನಮ್ಮ ಮನಸ್ಸಿಗೆ ನೋವಾದರೂ ಪರವಾಗಿಲ್ಲ, ಆದರೆ ನಾವು ಪ್ರೀತಿಸುವವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು. ನಾವೂ ದು:ಖದಲ್ಲಿದ್ದರೂ ಅವರು ಸಂತೋಷದಲ್ಲಿರುವಂತೆ ನೋಡಿಕೊಳ್ಳಬೇಕು. ಈ ಭಾವನೆಗಳೇ ಓರ್ವ ಆದರ್ಶ ಪ್ರೇಮಿಗಿರಬೇಕು. ಅದೇನೆ ಇರಲಿ ಅವಳಿಗೆ ಕೊಟ್ಟ ಮೊದಲ ಪ್ರೇಮಪತ್ರ ಇಂತಿದೆ ನೋಡಿ...


ಒಂದು ಪ್ರೇಮ ಪತ್ರ  - Love Letter in Kannada


"ನನ್ನ ನಯನಗಳಿಗೆ ನಿನ್ನ ಕನಸು ಕಾಣುವುದು ಗೊತ್ತು. ನನ್ನ ಹೃದಯಕ್ಕೆ ನಿನ್ನನ್ನು ಪ್ರೀತಿಸುವುದು ಗೊತ್ತು. ಆದರೆ ನನ್ನ ತುಂಟ ತುಟಿಗಳಿಗೆ ನಿನ್ನ ಮೇಲಿರುವ ಪ್ರೀತಿಯನ್ನು ಹೇಳಲು ಧೈರ್ಯವಿಲ್ಲ". ಅದಕ್ಕಾಗಿ ಈಗಿನ ಮೊಬೈಲ್ ದುನಿಯಾದ SMS ಯುಗದಲ್ಲೂ ಪ್ರೇಮಪತ್ರ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ. ಫೆಬ್ರುವರಿ-೧೪ ಪ್ರೀತಿಸುವ ಹೃದಯಗಳಿಗೆ ಹಬ್ಬದ ಸಂಭ್ರಮ. ಆ ದಿನ ಬರದಿದ್ದರೂ ನಿನ್ನೊಂದಿಗೆ ಸಂಚರಿಸಲು ನನಗೆ ಕಾತುರ. ಅದರಲ್ಲಿಯೂ ನಿನ್ನನ್ನು ಓಲೈಸುವಲ್ಲಿ ಬಲು ಆತುರ. ಆದ್ದರಿಂದ ನಿನ್ನ ಹೃದಯದ ಬಾಗಿಲಿನ ಕದ ತಟ್ಟಿ ಆಗುತ್ತಿರುವೆ ಪ್ರೇಮ ಚತುರ...


ಒಂದು ಪ್ರೇಮ ಪತ್ರ  - Love Letter in Kannada

      ನನ್ನ ನಯನಗೋಪುರದ ಕನಸುಗಳಿಗೆ ನೀ ನಾಯಕಿಯಾಗಿರುವೆ. ಆದರೆ ನಾ ನಿನ್ನ ಕನಸಿಗೆ ನಾಯಕನಾಗಿದ್ದೇನೆಯೋ ಇಲ್ಲವೋ ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ. ನನಗೆ ಬಹುದಿನಗಳಿಂದ ಕೋಗಿಲೆಯಂತೆ ಹಾಡಬೇಕು, ಗಾಳಿಪಟದಂತೆ ಎತ್ತರಕ್ಕೆ ಹಾರಾಡಬೇಕೆಂಬ ಆಸೆಗಳಿದ್ದವು. ಆದರೆ ನನ್ನ ಹಾಡಿಗೆ ಧ್ವನಿಗೂಡಿಸುವವಳಾರು? ನನ್ನ ಹಾರಾಟಕ್ಕೆ ಸೂತ್ರಧಾರಳು ಯಾರಾಗಬಲ್ಲಳು? ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ನಿನ್ನನ್ನು ನೋಡಿದಾಕ್ಷಣ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದಕ್ಕಾಗಿ ನಿನ್ನ ವಿಶಾಲ ಹೃದಯದೊಳಗೆ ಒಂದು ಚಿಕ್ಕ ಸ್ಥಾನವನ್ನು ನೀಡುವಂತೆ ಕೋರುತ್ತಿದ್ದೇನೆ. ನಿನಗೆ ಇಷ್ಟವಿದ್ದರೆ ಪ್ರೀತಿಸು ಇಲ್ಲವೇ ತಿರಸ್ಕರಿಸು. ನನ್ನ ಕಡೆಯಿಂದ ಬಲವಂತವೇನು ಇಲ್ಲ.


ಒಂದು ಪ್ರೇಮ ಪತ್ರ  - Love Letter in Kannada

       
   ನಿನ್ನ ನೋಡಿದಾಗಿನಿಂದ ನನ್ನನ್ನೇ ನಾ ಮರೆತ್ತಿದ್ದೇನೆ ಎಂಬುದು ಅರಿವಾದಾಗ ನನಗೆ ಈ ನನ್ನ ತುಂಟ ಹೃದಯ ಲೂಟಿಯಾಗಿದೆ ಎನ್ನುವುದು ಖಾತ್ರಿಯಾಯಿತು. ನನ್ನ ಹೃದಯ ಕದ್ದ ಕಳ್ಳಿ ನೀನೇ ಎಂದೂ ನನಗೆ ಗೊತ್ತಾದಾಗ ತುಂಬಾನೇ ಖುಷಿಯಾಯ್ತು. ಪ್ರೀತಿಯಿಂದ ಖುಷಿಯಾದ ಮೇಲೆ ಋಷಿಯಾಗಿದ್ದು ಏನು ಪ್ರಯೋಜನ? ಅದಕ್ಕೆ ಕನಸಿನ ಮಾತನ್ನು ಮರೆತರೂ, ಮನಸ್ಸಿನ ಮಾತನ್ನು ಮರೆಯದೆ  ನಿನ್ನೊಡನೆ ಹೆಜ್ಜೆ ಹಾಕಲು ಬಯಸುತ್ತಿರುವೆ. ನಿನ್ನ ವಿಶಾಲ ಹೃದಯದಲ್ಲೊಂದು ಪುಟ್ಟ ಪ್ರೀತಿಗೂಡು ಕಟ್ಟಿಕೊಂಡು, ನಿನ್ನದೇ ಹಾಡನ್ನು ಹಾಡುತ್ತಾ, ಜೀವನದ ದೋಣಿಯಲ್ಲಿ ನಿನ್ನೊಂದಿಗೆ ಅಂಬಿಗನಾಗಿ ಸಾಗುವ ದೊಡ್ಡ ಅವಕಾಶವನ್ನು ಕೇಳುತ್ತಿರುವೆ.


ಒಂದು ಪ್ರೇಮ ಪತ್ರ  - Love Letter in Kannada

      ನಾನು ತಮಾಷೆಗಾಗಿ "ನಿನ್ನನ್ನು ಪ್ರೀತಿಸುತ್ತಿಲ್ಲ" ಎಂಬುದಕ್ಕೆ ಲಕ್ಷಾಂತರ ಕಾರಣಗಳನ್ನು ಕೊಡಬಲ್ಲೆ. ಆದರೆ ನಾನು "ನಿನ್ನನ್ನು ಮಾತ್ರ ಪ್ರೀತಿಸುವೆ" ಎನ್ನುವುದಕ್ಕೆ ಒಂದೂ ಕಾರಣವನ್ನು ನಾ ಕೊಡಲಾರೆ. ಏಕೆಂದರೆ ನಾ ನಿನ್ನ ಪ್ರೇಮಿ ಮಾತ್ರ, ಪ್ರೇಮಜ್ಞಾನಿಯಲ್ಲ. "ನಾ ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವುದು ನಿನ್ನ ಸೌಂದರ್ಯಕ್ಕೆ, ನಿನ್ನ ಐಶ್ವರ್ಯ ಅಂತಸ್ತಿಗೆ ದಾಸನಾಗಂತು ಅಲ್ಲವೇ ಅಲ್ಲ. ನಾ ಪ್ರೀತಿಸುತ್ತಿರುವುದು ನಿನ್ನ ಒಳ್ಳೆಯ, ನಿಷ್ಕಪಟ, ಮಗುವಿನಂಥ ಮುಗ್ಧ ಮನಸ್ಸಿಗೆ ದಾಸನಾಗಿ ಎಂಬುದನ್ನು ನೀ ಮೊದಲು ಅರಿಯಬೇಕು" ಎಂದೆಲ್ಲ ನಾ ಹೇಳುವುದಿಲ್ಲ. ಇದರರ್ಥ ನಿನಗೆ ಗೊತ್ತಾಗುತ್ತೆ ಎಂದು ಭಾವಿಸುವೆ.


ಒಂದು ಪ್ರೇಮ ಪತ್ರ  - Love Letter in Kannada

                      ಈ ನಮ್ಮ ವಾತಾವರಣದಲ್ಲಿ ಹಲವಾರು ಅನಿಲಗಳಿದ್ದರೂ ಮನುಷ್ಯರಿಗೆ ಬದುಕಲು ಆಮ್ಲಜನಕವೇ ಬೇಕು. ಅದೇ ರೀತಿ ಈ ಜಗದಲ್ಲಿ ಕೋಟ್ಯಾಂತರ ಜನ ಸುರ ಸುಂದರಿಯರಿದ್ದರೂ ನನ್ನ ಉಸಿರಲ್ಲಿ ಆಮ್ಲಜನಕ ವಿಲೀನವಾಗಿ ಬದುಕಲ್ಲಿ ನಾ ತಲ್ಲೀನನಾಗಲು ನಿನ್ನ ಪ್ರೀತಿಯಮೃತದ ಸೆಲೆ ಬೇಕೆ ಬೇಕು. ನನ್ನ ಹೃದಯದ ತುಂಬಾ ನೀನೆ ಇರುವಾಗ, ನಿನ್ನ ಹೃದಯದ ಒಂದು ಮೂಲೆಯಲ್ಲಾದರೂ ನನ್ನ ಹೆಸರಿರಬೇಕು  ಎಂಬ ಚಿಕ್ಕ ಆಸೆ ನನ್ನದು. ಏಕೆಂದರೆ ನನ್ನ ಉಸಿರು ನಿನ್ನಲ್ಲಿದೆ.


ಒಂದು ಪ್ರೇಮ ಪತ್ರ  - Love Letter in Kannada

"ಉಸಿರು ಇರೋವರೆಗೂ ಹೆಸರು ಮಾಡ್ಬೇಕು. ಸ್ನೇಹ ಇರೋವರೆಗೂ ಸಹಾಯ ಮಾಡ್ಬೇಕು.
ಧೈರ್ಯ ಇರೋವರೆಗೂ ಹೋರಾಡಬೇಕು. ಈ ಪ್ರಾಣ ಇರೋವರೆಗೂ  ನಿನ್ನನ್ನೇ ಪ್ರೀತಿಸಬೇಕು" ಎಂಬಾಸೆಗಳು ನನ್ನದಾಗಿವೆ. ಈ ಆಸೆಗಳು ಒಂಥರಾ ಪ್ಯಾರಾಚೂಟ್ ಇದ್ದಂತೆ. ಇದಕ್ಕೆ ನಿನ್ನ ಪ್ರೀತಿಯ ಗಾಳಿ ತುಂಬಿ ನೀಲ ಗಗನದಲ್ಲಿ ಹಾರಾಡುವಂತೆ ಮಾಡ್ತಿಯೋ, ಇಲ್ಲವೇ ವಿರಹದ ಸೂಜಿ ಚುಚ್ಚಿ ಪಂಕ್ಚರ ಮಾಡ್ತಿಯೋ ನಿನಗೆ ಸೇರಿದ್ದು. ನೀ ನನ್ನ ಪ್ರೀತಿಯನ್ನು ಪ್ರತ್ಯಕ್ಷವಾಗಿ ಪ್ರಮಾಣಿಸಿ ನೋಡು. ಆದರೆ ಮನದ ಮರೆಯಲ್ಲಿ ಅನುಮಾನಿಸಿ ನೋಡಬೇಡ.

ಒಂದು ಪ್ರೇಮ ಪತ್ರ  - Love Letter in Kannada

                  ಒಂದು ವೇಳೆ ಈ ಸ್ವಚ್ಛ ಮನಸ್ಸಿನ ಹುಚ್ಚು ಪ್ರೇಮಿಯ ಪ್ರೇಮ ನೀವೇದನೆ ನಿನಗೆ ಸಂವೇದನೆರಹಿತ ಆಪಾದನೆಯಂತೆ ಕಂಡರೆ ನನ್ನನ್ನು ಬೇಕಾದರೆ ನೀ ದ್ವೇಷಿಸು. ಆದರೆ ನನ್ನ ಪ್ರೀತಿಯನ್ನು ದ್ವೇಷಿಸಬೇಡ. ಏಕೆಂದರೆ ಪ್ರೀತಿಸುವವರಿಗೆ ಸಾವಿದೆ ಹೊರತು ಪ್ರೀತಿಗಿಲ್ಲ. ಕೆಟ್ಟ ಪ್ರೇಮಿಗಳಿರಬಹುದು ಆದರೆ ಕೆಟ್ಟ ಪ್ರೀತಿಯಿಲ್ಲ. ಪ್ರೀತಿ ಯಾವತ್ತಿದ್ದರೂ ಪವಿತ್ರ. ಅಲ್ಲದೇ ಪವಿತ್ರ ಪ್ರೀತಿ ಕೊಂದ ಕ್ರೂರಹಂತಕಿ, ಕೊಲೆಗಾರ್ತಿ ಎಂಬ ಹಣೆಪಟ್ಟಗಳು ನಿನಗೆ ಬರುವುದು ನನಗಿಷ್ಟವಿಲ್ಲ.


ಒಂದು ಪ್ರೇಮ ಪತ್ರ  - Love Letter in Kannada

              ನೀ ನನ್ನ ದ್ವೇಷಿಸಿದರೂ ನಾ ಮಾತ್ರ ನಿನ್ನನ್ನಲ್ಲದೇ ಮತ್ಯಾರನ್ನು ಪ್ರೀತಿಸುವುದಿಲ್ಲ. ಏಕೆಂದರೆ ಹೃದಯವನ್ನು ಸ್ಥಳಾಂತರಿಸಬಹುದೇ ವಿನಹ ಹೃದಯದಲ್ಲಿರುವ ಪ್ರೀತಿಯನ್ನಲ್ಲ. ಈ ಮಾತು ವಿಜ್ಞಾನ ಓದಿದ ನಿನಗೆ ಸರಿಯಾಗಿ ಮನದಟ್ಟಾಗುತ್ತದೆ ಎಂದು ನಾ ಭಾವಿಸುವೆನು.

 ನಾನು ನಿನ್ನೊಂದಿಗೆ ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸಬೇಡ. ನನ್ನ ಮನಸ್ಸಲ್ಲಿ ನನಗೆ ಗೊತ್ತಾಗದಂತೆಯೆ ಉದಯಿಸಿದ ಪ್ರೀತಿ ಭಾವನೆಯನ್ನು ನಿನ್ನೊಂದಿಗೆ ನೇರವಾಗಿ ಹಂಚಿಕೊಳ್ಳುತ್ತಿದ್ದೇನೆ. ದಯವಿಟ್ಟು ಬೇಜಾರು ಅಥವಾ ಕೋಪ ಮಾಡಿಕೊಳ್ಳಬೇಡ. ನೇರವಾಗಿ ನಿನ್ನ ನಿರ್ಧಾರವನ್ನು ತಿಳಿಸಿ ಬಿಡು. ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ನನಗೆ ಖುಷಿಯಿದೆ. 

ಒಂದು ಪ್ರೇಮ ಪತ್ರ  - Love Letter in Kannada

            
     "ಜಗತ್ತನ್ನೇ ಪ್ರೀತಿಸಿದ ವಿಶಾಲ ಹೃದಯ ನಿನ್ನದಾದರೂ, ನನ್ನನ್ನು ಪ್ರೀತಿಸಲು ಸಾಲದಾಯಿತ್ತಲ್ಲ" ಎಂಬ ಕೊರಗು ನಿನಗೆ ಉಳಿಯದಿರಲಿ. ಗೆಳತಿ ನೀ ನನ್ನಿಂದ ದೂರಾದಾಗ, "ನನ್ನ ಕಣ್ಣಿನಿಂದ ನಿರಂತರವಾಗಿ ಧುಮುಕುವ ವಿರಹದ ಪ್ರತಿ ಕಣ್ಣೀರ ಹನಿಯ ಮೇಲೆ ನಿನ್ನ ಸವಿನೆನಪಿನ ಗುಣಗಾನವಿರುತ್ತದೆ" ಎಂದೆಲ್ಲಾ ಯೋಚಿಸದೇ, ನಿನಗೆ ನಾನು ಇಷ್ಟವಿಲ್ಲದಿದ್ದರೆ ನನ್ನಿಂದ ನೀ ದೂರಾಗು. ಆದರೆ ಕೋಪಿಸಿಕೊಳ್ಳಬೇಡ. ಏಕೆಂದರೆ ನಿನ್ನ ಮನಸ್ಸಿಗೆ ನೋವಾದರೆ ನನ್ನ ಹೃದಯದ ಮಿಡಿತದೊಂದಿಗೆ ಬಡಿತವೂ ನಿಲ್ಲುತ್ತದೆ. ನೀ ನನ್ನ ಪ್ರೀತಿಸದಿದ್ದರೂ ಪರವಾಗಿಲ್ಲ. ಕೊನೆಪಕ್ಷ ನೀ ನನ್ನ ಪ್ರೇಮಪತ್ರವನ್ನಾದರೂ ಓದಿದೆಯಲ್ಲ ನನಗಷ್ಟೇ ಸಾಕು. ನಿನ್ನ ಉತ್ತರಕ್ಕೆ ನಾ ಕಾಯುವೆ. ಆದರೂ ನಿನಗೆ ಕಟ್ಟ ಕಡೆಯದಾಗಿ ನನ್ನ ಕಡೆಯಿಂದ ಒಂದು ಕೊನೆಯ ಮಾತು,

"ಗೆಳತಿ ನೀ ಎಲ್ಲೆಯಿರು, ಹೇಗೆಯಿರು

ಯಾರೊಂದಿಗೆ ಬೇಕಾದರೂ ಜೊತೆಯಾಗಿರು. ಆದರೆ
ನೀ ಯಾವತ್ತೂ ನಗುನಗುತ್ತಾ ಚೆನ್ನಾಗಿರು". 

                ಇಂತಿ ನಿನ್ನ .......

love letter in kannada, best breakup quote in kannada
Blogger ನಿಂದ ಸಾಮರ್ಥ್ಯಹೊಂದಿದೆ.