ಅವಳು ಮಾತಾಡಿದಾಗ ಕನ್ನಡ ನೀತಿ ಕಥೆ : Kannada Moral Story - Moral Stories in Kannada - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಅವಳು ಮಾತಾಡಿದಾಗ ಕನ್ನಡ ನೀತಿ ಕಥೆ : Kannada Moral Story - Moral Stories in Kannada

ಅವಳು ಮಾತಾಡಿದಾಗ :  Kannada Moral Stories
         
  ಒಂದಿನ ಮಾನವನೊಬ್ಬ ಸೌದೆ ತರಲು ಕಾಡಿಗೆ ಹೋದ. ಒಂದು ದೊಡ್ಡ ಮರವನ್ನು ಹುಡುಕಿ, ಅದರ ಕೊಂಬೆಗೆ ತನ್ನ ಹರಿತವಾದ ಕೊಡಲಿಯನ್ನು ಬೀಸಿದ. ಮರುಕ್ಷಣವೇ ಆ ಮರವು ಕಣ್ಣೀರಾಕುತ್ತಾ, "ಅಯ್ಯೋ ಪರಿಸರ ಮಾತೆ ಈ ಬುದ್ಧಿಯಿಲ್ಲದ, ಉಪಕಾರವರಿಯದ ಮನುಷ್ಯನನ್ನು ಕ್ಷಮಿಸಿ, ರಕ್ಷಿಸು ತಾಯಿ" ಎಂದು ಕೀರುಚಿತು. ಆಗ ಎಚ್ಚೆತ್ತ ಮಾನವ ಮರದೊಂದಿಗೆ ಮಮಕಾರದ ಮಾತುಗಳನ್ನು ಪ್ರಾರಂಭಿಸಿದನು.


ಅವಳು ಮಾತಾಡಿದಾಗ :  Kannada Moral Stories


ಮಾನವ :  ಯೇ ಮರವೇ, ಯಾಕೆ ಅಳುತ್ತಿರುವೆ?
ಮರ :  ನಿನ್ನ ಕರುಣೆಯಿಲ್ಲದ ಕೊಡಲಿ ಏಟು ನನ್ನನ್ನು ನೋಯಿಸಲಿಲ್ಲ. ನಿನ್ನಂಥ ಉಪಕಾರವರಿಯದ ಮನುಷ್ಯರ ಅಮಾನವೀಯತೆ ನನ್ನನ್ನು ನೋಯಿಸುತ್ತಿದೆ. ಅದಕ್ಕಾಗಿ ಅಳುತ್ತಿದ್ದೇನೆ.ಮಾನವ :  ಇದೇನಿದು? ಇಷ್ಟೊಂದು ಒಗಟು-ಒಗಟಾಗಿ ಮಾತನಾಡುತ್ತಿರುವೆ? ಸ್ವಲ್ಪ ಅರ್ಥವಾಗುವಂತೆ ಹೇಳಬಾರದೇ?ಮರ :  ಯೇ ಮೂರ್ಖ ಮನುಜ, ನೀನು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೂ ನೀ ನಮ್ಮ ತನುಜನೇ. ನೀನು ನಮ್ಮ ಮಡಿಲಲ್ಲಿ ಆಟವಾಡಿಕೊಂಡು ಬೆಳೆದು ಬದುಕುತ್ತಿರುವ ಮುಗ್ಧ ಮಗು. ನಿಮಗೆ ನಾವು ಎಲ್ಲವನ್ನೂ ಧಾರೆಯೆರೆದು ಕೊಟ್ಟು ಬೆಳೆಸುತ್ತಿದ್ದೇವೆ. ಗಾಳಿ, ನೀರನ್ನು ಪುಕ್ಕಟೆಯಾಗಿ ಕೊಡುವುದಲ್ಲದೇ, ನಾವೇ ಸತ್ತು ನಿಮಗೆ ಆಹಾರವಾಗಿ ನಿಮ್ಮ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದೇವೆ. ಆದರೆ ನಿಮಗೆ ಕೃತಜ್ಞತೆ ಇಲ್ಲ. ನಮ್ಮ ಉಪಕಾರದ ಅರಿವು ಕೂಡ ನಿಮಗಿಲ್ಲ. ನಾವು ನಿಮಗಾಗಿ ಜೀವವನ್ನೇ ಕೊಟ್ಟಿದ್ದೇವೆ. ಆದರೆ ನೀವು ನಮಗೇನು ಕೊಟ್ಟಿರುವಿರಿ? ಬರೀ ನೋವು, ಕಣ್ಣೀರು, ಕಲುಷಿತ ಗಾಳಿ ಕೊನೆಗೆ ಸಾವು ಇಷ್ಟೇ. !!


ಅವಳು ಮಾತಾಡಿದಾಗ :  Kannada Moral Stories


ಮಾನವ : ಓ ಮಹಾತಾಯಿ ಈ ಪಾಪಿಯನ್ನು ಕ್ಷಮಿಸಿ ಬಿಡು. ಅರಿಯದೆ ತಪ್ಪು ಮಾಡುತ್ತಿದ್ದ ಕಟುಕನ ಕಣ್ಣು ತೆರೆಸಿ ಕರುಣೆ ಹುಟ್ಟಿಸಿದ ದೇವತೆ ನೀನು.


ಮರ : ಮಗು, ಇಷ್ಟು ದೊಡ್ಡ ಮಾತುಗಳೇಕೆ?  ಮಗು ಒದ್ದರೆ ತಾಯಿಗೆ ನೋವಾಗುವುದೇ? ಇಲ್ಲ ತಾನೇ? ಹಾಗೆ ನೀವು ಅವಿವೇಕದಿಂದ ಎಸಗಿದ ಅಪಚಾರವನ್ನು ಮನ್ನಿಸಿ ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ. ನಾವಷ್ಟೇ ಅಲ್ಲ. ನಮ್ಮ ಪರಿಸರ ಮಾತೆ ನಿಸರ್ಗ ದೇವತೆಯು ನಿಮ್ಮನ್ನು ಪ್ರೀತಿಸುತ್ತಾಳೆ. ಆದ್ದರಿಂದಲೇ ನೀವು ಮನುಷ್ಯರು ರಾಕ್ಷಸ ರೂಪ ತಾಳಿದರೂ ಇನ್ನೂ ಉಸಿರಾಡುತ್ತಿರುವಿರಿ. ನಿಸರ್ಗಕ್ಕೆ ಅಪಚಾರವೆಸಗಬೇಡಿ. ನಿಸರ್ಗವನ್ನು ಪ್ರೀತಿಸಿ.... ಶುದ್ಧ ಗಾಳಿ, ಪರಿಶುದ್ಧ ವಾತಾವರಣದೊಂದಿಗೆ ಸಂತೋಷವಾಗಿ ಬಾಳಿ...ಮಾನವ : ಎಂಥ ಉದಾರಿಗಳು ತಾಯಿ ನೀವು. ನಾನು ಇಂದಿನಿಂದ ನಿಸರ್ಗವನ್ನು ಪ್ರೀತಿಸುತ್ತೇನೆ, ಪೂಜಿಸುತ್ತೇನೆ. ಆದರೆ ಕನಸಲ್ಲೂ ನಿಸರ್ಗವನ್ನು ಮೋಹಿಸುವುದಿಲ್ಲ. ನನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ತಾಯಿ. ನಾನು ಇತರೇ ನನ್ನ ಸೋದರರ ಕಣ್ಣು ತೆರೆಸಲು ಹೋರಡುತ್ತೇನೆ. ಆರ್ಶಿವಧಿಸು ತಾಯಿ ಹೋಗಿ ಬರುತ್ತೇನೆ...


ಅವಳು ಮಾತಾಡಿದಾಗ :  Kannada Moral Stories
      
  ಗೆಳೆಯರೇ ನಿಸರ್ಗವನ್ನು ಪ್ರೀತಿಸಿ ಮತ್ತು ರಕ್ಷಿಸಿ. ಆದರೆ ಮೋಹಿಸಬೇಡಿ. ಇವತ್ತು ನೀವು ನಿಸರ್ಗವನ್ನು ಸರ್ವನಾಶ ಮಾಡಿದರೆ, ಮುಂದೊಂದು ದಿನ ಬದುಕಿರುವಾಗಲೇ ನರಕವನ್ನು ನೋಡಬೇಕಾಗುತ್ತದೆ. ಎಲ್ಲೆಡೆ ಆಮ್ಲಜನಕದ ಟ್ಯಾಂಕಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.  ಈಗಲೇ ಎಚ್ಚೆತ್ತುಕೊಳ್ಳಿ... ನಿಸರ್ಗವನ್ನು ಪ್ರೀತಿಸಿ, ಪೂಜಿಸಿ ಮತ್ತು ಸಂರಕ್ಷಿಸಿ...

ಕನ್ನಡ ಕಥೆ ಪುಸ್ತಕಗಳು - Kannada Story Books
ಅವಳು ಮಾತಾಡಿದಾಗ :  Kannada Moral Stories
Note: This article is coming out in the form of Animated Short Movie. For more updates keep in touch with Roaring Creations/YouTube. 

ಅವಳು ಮಾತಾಡಿದಾಗ ಕನ್ನಡ ನೀತಿ ಕಥೆ : Kannada Moral Story - Moral Stories in Kannada ಅವಳು ಮಾತಾಡಿದಾಗ ಕನ್ನಡ ನೀತಿ ಕಥೆ : Kannada Moral Story - Moral Stories in Kannada Reviewed by Director Satishkumar on October 24, 2017 Rating: 4.5
Powered by Blogger.