ಗಾಸಿಪಗಳನ್ನು ಎದುರಿಸುವುದು ಹೇಗೆ? - How to face rumors in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗಾಸಿಪಗಳನ್ನು ಎದುರಿಸುವುದು ಹೇಗೆ? - How to face rumors in kannada

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

                           ಪ್ರತಿದಿನ ನಮಗೆ ಬೇಡದಿರುವ ಸಾವಿರಾರು ರೂಮರ್ಸಗಳು ಕೇಳಲು ಸಿಗುತ್ತವೆ.  ರೂಮರ್ಸಗಳೆಂದರೆ ಗಾಸಿಪಗಳು ಅಥವಾ ಗಾಳಿಮಾತುಗಳು. ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಬಗ್ಗೆ ಹಬ್ಬುವ ಸುಳ್ಳು ಸುದ್ದಿಗಳು ಸಹ ರೂಮರ್ಸಗಳೇ. ಜನ ತಮ್ಮ ಶತ್ರುಗಳ ಬಗ್ಗೆ ಬಣ್ಣಬಣ್ಣದ ಗಾಸಿಪಗಳನ್ನು ಸೃಷ್ಟಿಸಲು ಮತ್ತು ಕೇಳಲು ಇಷ್ಟಪಡುತ್ತಾರೆ. ಕೆಲಸವಿಲ್ಲದವರು ಕೆಲಸಕ್ಕೆ ಬಾರದ  ಗಾಸಿಪಗಳನ್ನು ಕೇಳುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಬಹಳಷ್ಟು ಜನ ಗಾಸಿಪಗಳನ್ನು ಎಂಜಾಯ ಮಾಡುತ್ತಾರೆ. ಬೇರೆಯವರ ಮಾನಹಾನಿ ಮಾಡುವ ಗಾಸಿಪಗಳು ಇಂಥವರಿಗೆ ಅತೀ ಪ್ರಿಯವಾಗಿರುತ್ತವೆ.

                                 ಗಾಸಿಪಗಳ ವಿಚಾರ ಬಂದಾಗ ನನಗೆ ಒಂದು ಮಾತು ನೆನಪಾಗುತ್ತದೆ. ಅದೇನಂದರೆ "Rumors are created by Haters, spread by jobless fools and accepted by senseless idiots". ನಿಮ್ಮನ್ನು ದ್ವೇಷಿಸುವವರು ನಿಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪಗಳನ್ನು ಸೃಷ್ಟಿಸುತ್ತಾರೆ, ಕೆಲಸವಿಲ್ಲದೆ ಖಾಲಿ ಕುಂತ ಮೂರ್ಖರು ಈ ಗಾಸಿಪಗಳನ್ನು ಹಬ್ಬಿಸುತ್ತಾರೆ ಮತ್ತು ಸ್ವಲ್ಪವೂ ಪರಿಜ್ಞಾನವಿಲ್ಲದ ಜನ ಈ ಗಾಸಿಪಗಳನ್ನು ನಿಜವೆಂದು ನಂಬುತ್ತಾರೆ ".

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

                                        ರಸ್ತೆಬದಿಯಲ್ಲಿರುವ ಭಿಕ್ಷುಕನಿಂದ ಹಿಡಿದು ಬಿಲಗೇಟ್ಸವರೆಗೂ ಎಲ್ಲರೂ ರೂಮರ್ಸಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಪ್ರತಿಯೊಬ್ಬ ಯಶಸ್ವಿ ಅಥವಾ ಅಯಶಸ್ವಿ ವ್ಯಕ್ತಿ ಅನಾವಶ್ಯಕವಾದ ರೂಮರ್ಸಗಳಿಂದ ತೊಂದರೆಗೀಡಾಗುತ್ತಾನೆ. ಈ ರೂಮರ್ಸಗಳಿಗೆ ಹೊಟ್ಟೆಕಿಚ್ಚು ಜೊತೆಗೆ ಜೆಲಸಿಯೇ ಮುಖ್ಯ ಕಾರಣ. ಬಹಳಷ್ಟು ಸಂಬಂಧಗಳು, ಸ್ನೇಹಗಳು ಹಾಗೂ ಮದುವೆಗಳು ಈ ಗಾಸಿಪಗಳಿಂದ ಮುರಿದು ಬೀಳುತ್ತವೆ. ಪುರುಷರಿಗಿಂತ ಮಹಿಳೆಯರ ಬಗ್ಗೆಯೇ  ಹೆಚ್ಚಾಗಿ ಗಾಸಿಪಗಳು ಹರಡುತ್ತವೆ ಎಂಬುದು ನೋವಿನ ಸಂಗತಿ. 
                                  ತಮ್ಮ ಹುಚ್ಚು  ಪ್ರೀತಿಯನ್ನು ನಿರಾಕರಿಸಿದ್ದರಿಂದ ಹುಡುಗಿಯ ನಡತೆ ಸರಿಯಿಲ್ಲ ಎಂಬ ಗಾಸಿಪನ್ನು ಹುಡುಗರು ಹಬ್ಬಿಸುತ್ತಾರೆ. ತಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಹುಡುಗಿಯರು ಹುಡುಗರ ಮೇಲೆ ಗಾಸಿಪಗಳನ್ನು ಸೃಷ್ಟಿಸುತ್ತಾರೆ. ಇದೇ ರೀತಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗದ ಭಗ್ನ ಮನಸ್ಸಿನ ವ್ಯಕ್ತಿಗಳು ಗಾಸಿಪಗಳನ್ನು ಸೃಷ್ಟಿಸುತ್ತಲೇ ಹೋಗುತ್ತಾರೆ. ನಿಮ್ಮ ಬಗ್ಗೆ ಬೇಡದ ಗಾಸಿಪಗಳು ಹಬ್ಬಿದರೆ ವೀಚಲಿತರಾಗಬೇಡಿ. ಅವುಗಳನ್ನು ಧೈರ್ಯವಾಗಿ ಎದುರಿಸಿ. ಗಾಸಿಪಗಳನ್ನು ಎದುರಿಸಲು ಇಲ್ಲಿವೆ ಕೆಲವು ಸೂಕ್ತ ಸಲಹೆಗಳು,,,

೧) ಮೊದಲು ನಿಮ್ಮ ಬಗ್ಗೆ ಹಬ್ಬಿರುವ ಗಾಸಿಪಗಳ ಬಗ್ಗೆ ವಿಶ್ಲೇಷಣೆ ಮಾಡಿ :

   ನಿಮ್ಮ ಒಳ್ಳೆಯ ಹೆಸರಿಗೆ ಮಸಿ ಬಳಿಯುವುದಕ್ಕಾಗಿಯೇ ಗಾಸಿಪಗಳು ಹುಟ್ಟಿಕೊಂಡಾಗ ಧೃತಿಗೇಡಬೇಡಿ, ಧೈರ್ಯವಾಗಿರಿ. ಮೊದಲು ಬಂದ ಗಾಸಿಪನ್ನು ವಿಶ್ಲೇಷಣೆ ಮಾಡಿ. ಅಂದರೆ ಆ ಗಾಸಿಪಿನ ನೈಜತೆಯನ್ನು ಪರೀಕ್ಷಿಸಿ. ಆ ಮೂರ್ಖ ಗಾಸಿಪಿಗೆ ಕಾರಣವೇನಿರಬಹುದು? ಅದನ್ನು ಯಾರು ಮತ್ತು ಏಕೆ ಹಬ್ಬಿಸಿರಬಹುದು? ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ. ನಿಮ್ಮ ಜೊತೆಗೆ ಇರುವ, ನಿಮ್ಮನ್ನು ಸೈಲೆಂಟಾಗಿ ದ್ವೇಷಿಸುವ ನಯವಂಚಕ ನಕಲಿ ಗೆಳೆಯರೇ ಈ ಥರದ ಗಾಸಿಪಗಳನ್ನು ಎಬ್ಬಿಸುತ್ತಾರೆ. ಜೊತೆಗಿದ್ದು ಬೆನ್ನಿಗೆ ಚೂರಿ ಹಾಕುವ ಗೆಳೆಯರಿಂದ ಸ್ವಲ್ಪ ದೂರವಿರಲು ಪ್ರಯತ್ನಿಸಿ. ನಿಮ್ಮ ಗಾಸಿಪಗಳು ನಿಮ್ಮ ಕಿವಿಗೆ ಬಿದ್ದಾಗ ಸ್ವಲ್ಪ ಶಾಂತ ಚಿತ್ತದಿಂದ ವರ್ತಿಸಿ. ನಿಜಾಂಶ ಅರಿಯದೆ, ಸರಿಯಾದ ಸಾಕ್ಷಾಧಾರಗಳಿಲ್ಲದೇ ಯಾರ ಮೇಲೂ ಕೂಗಾಡಬೇಡಿ. ಯಾರನ್ನು ನಿಂದಿಸಬೇಡಿ. ನಿಮಗೆ ನಿಜ ಗೊತ್ತಾಗುವರೆಗೂ ಸ್ವಲ್ಪ ಮೌನವಾಗಿರಿ.

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

೨) ಯಾವುದೇ ಕಾರಣಕ್ಕೂ ನಿಮ್ಮ ಬಗ್ಗೆ ಹಬ್ಬಿರುವ ಗಾಸಿಪಗಳನ್ನು ನಿರ್ಲಕ್ಷಿಸಬೇಡಿ :

                           ಸುಳ್ಳು ಗಾಸಿಪಗಳಿಂದ ನಿಮ್ಮ ಘನತೆ ಗೌರವಕ್ಕೆ ಕಳಂಕ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಆದ್ದರಿಂದ ಗಾಸಿಪಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಗಾಸಿಪಗಳಿಂದ ಮಾನಸಿಕ ನೆಮ್ಮದಿ ಹಾಳಾದಂತೆ, ಸಾಮಾಜಿಕ ಗೌರವ ಹಾಳಾಗಲು ಬಿಡಬೇಡಿ. ನಿಮ್ಮ ಗಾಸಿಪಗಳು ನಿಮ್ಮ ಕಿವಿಗೆ ಬಿದ್ದ ಮೇಲೂ ಕಿವುಡರಂತೆ ವರ್ತಿಸಬೇಡಿ. ಗಾಸಿಪಗಳನ್ನು ಸವಾಲಾಗಿ ಸ್ವೀಕರಿಸಿ. ನಿಮ್ಮ ಸಂಪೂರ್ಣ ಶಕ್ತಿ ಉಪಯೋಗಿಸಿ, ನಿಮ್ಮ ಬಗ್ಗೆ ಹಬ್ಬಿರುವ ಗಾಸಿಪಗಳು ಶುದ್ಧಸುಳ್ಳು ಎಂಬುದನ್ನು ಸಾಬೀತುಪಡಿಸಿ.

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

೩) ಸುಖಾಸುಮ್ಮನೆ ಕೆಟ್ಟ ಮಾತು ಮತ್ತು ಕೈಗಳಿಂದ ಹೊಡೆದಾಡಬೇಡಿ :

         ಗಾಸಿಪಗಳು ಬಂದಾಗ ನಿಮ್ನ ಶತ್ರುಗಳ ಜೊತೆ ಕೆಟ್ಟ ಮಾತು ಹಾಗೂ ಬಲಿಷ್ಟವಾದ ಕೈಗಳಿಂದ ಹೊಡೆದಾಡಿ ಮತ್ತಷ್ಟು ತೊಂದರೆಗಳನ್ನು ಅನಾವಶ್ಯಕವಾಗಿ ಮೈಮೇಲೆ ಎಳೆದುಕೊಳ್ಳಬೇಡಿ. ಕೆಟ್ಟ ಮಾತು ಮತ್ತು ಕೈಗಳಿಂದ ಉತ್ತರ ನೀಡುವ ಬುದ್ಧಿಗೇಡಿ ಕೆಲಸ ಮಾಡಬೇಡಿ. ನಿಮ್ಮ ಒಳ್ಳೆಯ ಕೆಲಸಗಳಿಂದ, ಸಾಧನೆಗಳಿಂದ ಅವರಿಗೆ ತಕ್ಕ ಉತ್ತರ ನೀಡಿ. ನಿಮ್ಮ ಯಶಸ್ಸಿನ ಮೂಲಕ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳಿ. ಸೇಡು ತೀರಿಸಿಕೊಳ್ಳಲು ಸಾಧನೆಕ್ಕಿಂತ ಸೂಕ್ತವಾದ ಬೇರೆ ಮಾರ್ಗವಿಲ್ಲ.

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

೪) ನಿಮ್ಮನ್ನು ನೀವು ಸಂಪೂರ್ಣವಾಗಿ ನಂಬಿ. ಜೊತೆಗೆ ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ.

   ಕೆಲಸಕ್ಕೆ ಬಾರದ ಗಾಸಿಪಗಳು ಬಂದವೆಂಬ ಕಾರಣಕ್ಕೆ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ನಿಮ್ಮನ್ನು ನೀವು ಮಾನಸಿಕವಾಗಿ ಮತ್ತಷ್ಟು ಬಲಪಡಿಸಿಕೊಳ್ಳಿ. ನಿಮ್ಮಲ್ಲಿರುವ ಕಲೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ. ನಿಮ್ನ ಜ್ಞಾನ, ಕಲೆ ಹಾಗೂ ಕೌಶಲ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿ. ನಿಮ್ಮ ಸಾಧನೆಗಳಿಂದ ನಿಂದಕರ ಬಾಯಿಗೆ ಬೀಗ ಜಡೆಯಿರಿ. ನಿಮ್ಮ ಯಶಸ್ಸಿನಿಂದ ನಿಮ್ಮ ವ್ಯಕ್ತಿತ್ವ ಹಾಗೂ ಪಾವಿತ್ರ್ಯತೆಯನ್ನು ಸಾಬೀತುಮಾಡಿ.

ಗಾಸಿಪಗಳನ್ನು ಎದುರಿಸುವುದು ಹೇಗೆ? How to face rumors in kannada - Kannada Motivational Articles

                         ನಮ್ಮ ಜೀವನದಲ್ಲಿ ನಾವು ಯಾವುದೇ ಕಾರಣವಿಲ್ಲದಿದ್ದರೂ ಗಾಸಿಪಗಳನ್ನು ಎದುರಿಸಲೇಬೇಕಾಗುತ್ತದೆ. ಈ ತರಹದ ಗಾಸಿಪಗಳು, ಶತ್ರುಗಳಿಂದಾಗುವ ತೊಂದರೆಗಳು ನಮ್ಮ ಯಶಸ್ಸನ್ನು ಸಂಭ್ರಮಿಸಲು ಬೇಕಾಗುತ್ತವೆ. ಹಗಲು ರಾತ್ರಿ ನಿಮ್ಮನ್ನು ದ್ವೇಷಿಸುವವರನ್ನು ನಿಮ್ಮ ಅಭಿಮಾನಿಗಳೆಂದು ತಿಳಿಯಿರಿ. ಯಾಕೆಂದರೆ ಅವರು ನಿಮ್ಮ ಹೆಸರನ್ನು ಪ್ರತಿಕ್ಷಣ ಪಠಿಸುತ್ತಾರಲ್ಲವೇ? ನಿಮ್ಮ ಶತ್ರುಗಳ ಮುಂದೆ ಸದಾ ಸಂತೋಷವಾಗಿರಿ. ಏನೇ ಆದರೂ ಧೈರ್ಯವಾಗಿ ಮುನ್ನುಗ್ಗಿ .... 
Good Luck...



Blogger ನಿಂದ ಸಾಮರ್ಥ್ಯಹೊಂದಿದೆ.