ನನ್ನ ಬೆಸ್ಟ ಟೀಚರ್ಸ : My Best Teachers in Kannada : teachers day kavana in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನನ್ನ ಬೆಸ್ಟ ಟೀಚರ್ಸ : My Best Teachers in Kannada : teachers day kavana in kannada

ನನ್ನ ಬೆಸ್ಟ ಟೀಚರ್ಸ : My Best Teachers #Kannada Poetry

ನನಗೆ ಬರೀ ಶಾಲೆಯಲ್ಲಿ ಎ, ಬಿ, ಸಿ, ಡಿ 
ಕಲಿಸಿದವರು ಮಾತ್ರ  ಗುರುಗಳಲ್ಲ...

ಕಷ್ಟದಲ್ಲಿದ್ದಾಗ ಇಷ್ಟಪಟ್ಟು ಸಹಾಯ ಮಾಡಿ, 
ಹೆಗಲಿಗೆ ಹೆಗಲು ಕೊಟ್ಟ ನಿಂತ ಸ್ನೇಹಿತರು...

ಅಜ್ಞಾನವೆಂಬ ಕತ್ತಲೆಯಲ್ಲಿದ್ದಾಗ ಜ್ಞಾನದಾಹವನ್ನು 
ನೀಗಿಸಿ ಬದುಕಿನ ದಾರಿಯನ್ನೇ ಬದಲಿಸಿದ ಹೊತ್ತಿಗೆಗಳು...

ನಡುದಾರಿಯಲ್ಲಿ ಅಳುತ್ತಾ ನಿಂತಿದ್ದಾಗ 
ಕಣ್ಣೀರೊರಸಿ ಕೈತುತ್ತು ನೀಡಿದ ಕರುಣೆಯ ಕೈಗಳು...

ಜನ್ಮಕೊಟ್ಟು ಜಗತ್ತನ್ನು ಪರಿಚಯಿಸಿದ 
ಪೂಜ್ಯ ತಂದೆತಾಯಿಗಳು...

ಹೊಟ್ಟೆಬಟ್ಟೆಗಿಲ್ಲದೆ, ಓದಿಗೆ ದುಡ್ಡಿಲ್ಲದೇ
 ಅಲೆಯುತ್ತಿರುವಾಗ ಕರೆದು ಕೆಲಸ ಕೊಟ್ಟ ಮಹಾತ್ಮರು...

ತಪ್ಪು ಮಾಡಿದಾಗ ಪಶ್ಚಾತ್ತಾಪ ಪಡುವಂತೆ
 ಮಾಡಿದ ಆತ್ಮಸಾಕ್ಷಿಯ ಅರಿವು...

ಮುಗುಳುನಗೆಯಲ್ಲಿ ಹಗೆಯ ಸಂಚನ್ನು ಮುಚ್ಚಿಟ್ಟು 
ವಂಚಿಸಿದ ನಯವಂಚಕ ಸಮಯಸಾಧಕರು...

ಬದುಕೇ ಬೇಡವಾದಾಗ ಬದುಕಿಗೆ
 ಸ್ಪೂರ್ತಿಯಾಗಿ ಬಂದ ಜೀವದ ಗೆಳತಿ...

ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವುದನ್ನು
 ಕಲಿಸಿದ ಬರಿಬಾದ ಬದುಕು...

ಹೇಗೆ ಬದುಕಬೇಕು ಎಂಬುದನ್ನು 
ತೋರಿಸಿಕೊಟ್ಟ ಮಹಾನ್ ಸಾಧಕರು...

ಹೀಗೆ ಎಲ್ಲರೂ ನನ್ನ ಪಾಲಿಗೆ ಬೆಲೆಕಟ್ಟಲಾಗದ 
" ಬೆಸ್ಟ್ ಟೀಚರ್ಸ " . ಏಕೆಂದರೆ
"ವರ್ಣಮಾತ್ರಂ ಕಲಿಸಿದಾತನೂ ಸಹ ಗುರು"


ನನ್ನ ಬೆಸ್ಟ ಟೀಚರ್ಸ : My Best Teachers #Kannada Poetry
Blogger ನಿಂದ ಸಾಮರ್ಥ್ಯಹೊಂದಿದೆ.