ಪ್ರೀತಿ ಮಾಡುವ ಹುಡುಗಿಯರಿಗೆ ಕೆಲವು ಸಲಹೆಗಳು :
೧) ಪ್ರೀತಿಯಲ್ಲಿ ಮೋಸ ಮಾಡಬೇಡಿ. ಮತ್ತೆ ಯಾರಿಂದಲೂ ಮೋಸ ಹೋಗಬೇಡಿ.
೨) ಹರೆಯದ ಹರಕೆಗೆ ಪ್ರೀತಿ ಮಾಡಿ ನಂತರ ಮನೆಯವರ ಮದುವೆಗೆ ಕೊರಳ ಚಾಚಿ ನಗುನಗುತ್ತಾ ಹಾಯಾಗಿದ್ದ ಬಡಪಾಯಿ ಹುಡುಗರನ್ನು ಅಳಿಸಬೇಡಿ.
೩) ಓದೋ ಟೈಮಲ್ಲಿ ಚೆನ್ನಾಗಿ ಓದಿ ಕಲಿಸಿದ ಗುರುವಿಗೆ, ಬೆಳೆಸಿದ ತಂದೆತಾಯಿಗಳಿಗೆ ಕೀರ್ತಿ ತನ್ನಿ. ಅದ್ನ ಬಿಟ್ಟು ಪ್ರೀತಿ ಪ್ರೇಮ ಅಂತಾ ಸುಮ್ಮಸುಮ್ನೆ ಸ್ಮೈಲ್ ಕೊಟ್ಟು ಹುಡುಗರಿಗೆ ಹುಸಿ ಪ್ರೀತಿಯ ಹುಚ್ಚು ಹಿಡಿಸಬೇಡಿ.
೫) ಇಷ್ಟ ಇದ್ದರೆ ಪ್ರೀತಿಸಿ, ಕಷ್ಟ ಆದರೆ ಧೈರ್ಯವಾಗಿ ದ್ವೇಷಿಸಿ. ಆದರೆ ಪ್ರಪೋಸಲ್ ಬಂದಾಗ ಸೈಲೆಂಟಾಗಿದ್ದು ಸುಮ್ನೆ ಚಮಕ್ ಕೊಟ್ಟು ಇಲ್ಲದ ಸಮಸ್ಯೆಗಳನ್ನು ಅನಾವಶ್ಯಕವಾಗಿ ಮೈಮೇಲೆ ಎಳೆದುಕೊಳ್ಳಬೇಡಿ.
೬) ಅಯೋಗ್ಯರನ್ನು ಪ್ರೀತಿಸಿ, ಅವರ ಜೊತೆ ಓಡೋಗಿ ಹೆತ್ತುಹೊತ್ತು ಬೆಳೆಸಿದ ತಂದೆತಾಯಿಗಳಿಗೆ ತಲೆನೋವಾಗಬೇಡಿ.
೭) ಈಗಿನ ಕಾಲದಲ್ಲಿ ಯಾವೊಬ್ಬ ಹುಡುಗನು ಮನಸ್ಸು ನೋಡಿ ಪ್ರೀತಿಸಲ್ಲ. ಎಲ್ಲರೂ ಮೈಮುಖ ನೋಡಿಯೇ ಪ್ರೀತಿಸುತ್ತಾರೆ. ಹುಡುಗರು ಹೇಳುವ ಫಿಲ್ಮಿ ಡೈಲಾಗಗಳಿಗೆಲ್ಲ ಫೀದಾ ಆಗಿ ತಿಳಿದು ತಿಳಿದು ತಪ್ಪಾದ ಹೆಜ್ಜೆಯನ್ನಿಟ್ಟು ಪಶ್ಚಾತ್ತಾಪ ಪಡಬೇಡಿ.
೧) ಏನೇ ಆದರೂ ಪ್ರೀತಿಸಿದ ಹುಡುಗಿಗೆ ಮೋಸ ಮಾಡಲ್ಲ ಅನ್ನೋ ನಂಬಿಕೆ ಇದ್ರೆ ಮಾತ್ರ ಪ್ರೀತಿಸಿ.
೨) ಸುಳ್ಳೇಳಿ ಇಲ್ಲದ ಸಿರಿತನವನ್ನು ತೋರಿಸಿ ಅಮಾಯಕ ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಅವರನ್ನು ವಂಚಿಸಬೇಡಿ.
೩) ಪ್ರೀತಿನಾ ಪ್ರೀತಿಯಿಂದ ಪ್ರೀತಿಸಿ ಗೆಲ್ಲಿ. ಬಲವಂತ ಮಾಡಿ ನೀವು ಪ್ರೀತಿಸುವ ಹುಡುಗಿಯನ್ನು ನೀವೇ ಪೀಡಿಸಿ ತೊಂದರೆ ಕೊಡಬೇಡಿ.
೪) ನಿಮ್ಮನ್ನು ಪ್ರೀತಿಸುವ ಹುಡುಗಿಯನ್ನು ನೀವು ಪ್ರೀತಿಸಿದರೆ ಒಳ್ಳೆಯದು. ನಿಮ್ಮನ್ನು ದ್ವೇಷಿಸುವ ಹುಡುಗಿಯ ಹಿಂದೆ ಬಿದ್ದು ನಿಮ್ಮ ಬಂಗಾರದಂಥ ಭವಿಷ್ಯವನ್ನು ಹಾಳು ಮಾಡ್ಕೋಬೇಡಿ.
೫) ನೀವು ಹುಡುಗಿಯರ ಹಿಂದೆ ಅಲೆಯೋದಕ್ಕಿಂತ ಅವರೇ ನಿಮ್ಮ ಹಿಂದೆ ಬೀಳೊವಂತೆ ನೀವಾಗಿ. ತಂದೆತಾಯಿಗಳ ಆಸೆಯಂತೆ ಚೆನ್ನಾಗಿ ಓದಿ, ಚೆನ್ನಾಗಿ ದುಡ್ಡು ಮಾಡಿ. ಜೀವನದಲ್ಲಿ ಏನಾದರೊಂದನ್ನು ಸಾಧಿಸಿ. ಆಮೇಲೆ ನೀವು ಇಷ್ಟಪಟ್ಟ ಹುಡುಗಿಗಿಂಥ ಚೆನ್ನಾಗಿರೋ ಹುಡುಗಿ ನಿಮಗೆ ಸಿಕ್ಕೆ ಸಿಗ್ತಾಳೆ.
ಸದ್ಯಕ್ಕೆ ಯುವಜನಾಂಗ ಪ್ರೀತಿಪ್ರೇಮದ ಮಾಯಾಜಾಲದಲ್ಲಿ ಸಿಕ್ಕು ಒದ್ದಾಡುತ್ತಿದೆ. ನಮ್ಮ ದೇಶದ ಯುವಶಕ್ತಿ ಪೋಲಾಗುತ್ತಿದೆ. ಅದು ದೇಶದ ಅಭಿವೃದ್ಧಿಗೆ ಒಳ್ಳೆಯ ರೀತಿಯಲ್ಲಿ ಬಳಕೆಯಾಗಬೇಕು ಎಂಬುದೇ ಈ ಅಂಕಣದ ಏಕಮಾತ್ರ ಉದ್ದೇಶ....