ಕೆಲವರು ಕಲಿಯೋ ಟೈಮಲ್ಲಿ ಮನೆಯಲ್ಲಿರುವ ಸಲುವಾಗಿ ಹಾಸ್ಟೇಲ್ ಲೈಫನ್ನು ದ್ವೇಷಿಸುತ್ತಾರೆ. ಆದರೆ ನಾನು ಹಾಸ್ಟೇಲ್ ಲೈಫನ್ನು ಪ್ರೀತಿಸುತ್ತೇನೆ. ನಾನು ಸಹ ಎಲ್ಲರಂತೆ ಇಷ್ಟವಿಲ್ಲದೆ ಹಾಸ್ಟೇಲ್ ಪಾಲಾದೆ. ಆದರೆ ಹಾಸ್ಟೇಲನಿಂದಲೆ ಒಬ್ಬ ಸ್ವತಂತ್ರ ಜೀವಿಯಾದೆ. ಹಾಸ್ಟೇಲ್ ನನ್ನ ಪಾಲಿಗೆ ಬದುಕುವುದನ್ನು ಕಲಿಸಿದ ಪಾಠಶಾಲೆ. ಹಾಸ್ಟೇಲನಲ್ಲಿ ನಾನು ಬಟ್ಟೆ ಒಗೆಯುವುದರಿಂದ ಹಿಡಿದು ಅಡುಗೆ ಮಾಡಿ ಪಾತ್ರೆ ತೊಳೆಯುವುದರ ತನಕ ಎಲ್ಲವನ್ನೂ ಕಲಿತಿರುವೆ. ಅದಕ್ಕೆ ನನ್ನ ಕೈ ಹಿಡಿಯುವ ಹುಡುಗಿ ತುಂಬಾನೆ ಲಕ್ಕಿ ಅನಿಸುತ್ತೆ. ಹಾಸ್ಟೇಲನಲ್ಲಿ ಕಳೆದ ಕ್ಷಣಗಳೆಲ್ಲವು ನನಗೆ ಅಚ್ಚುಮೆಚ್ಚು. ಆ ಅಮರ ಕ್ಷಣಗಳ ಕೆಲವು ಸವಿನೆನಪುಗಳು ಇಲ್ಲಿವೆ.
೧) ಮನೆಯ, ಮನೆಮಂದಿಯ, ಮನೆಯೂಟದ ಮಧುರ ನೆನಪುಗಳು.
೨) ಹುಟ್ಟಿ ಬೆಳೆದ ಹಳ್ಳಿಯನ್ನು ಬಿಟ್ಟು ಬಂದಾಗ ಆದ ಜಿಗುಪ್ಸೆಯ ನೆನಪು . ಹಳ್ಳಿ ಮತ್ತು ಹಳ್ಳಿ ಹುಡುಗಿಯರ ನೆನಪುಗಳು.
೩) ಅಪ್ಪ-ಅಮ್ಮನ ನೆನಪಾದಾಗ ಕರೆಯದೆ ಬಂದ ಬೆಚ್ಚನೆಯ ಕಣ್ಣೀರ ನೆನಪು.
೪) ಸದಾ ಕಾಲ ಹಸಿದ ಹೊಟ್ಟೆಯ ನೆನಪು.
೫) ಗೆಳೆಯರು ಖಜಾನೆಯಲ್ಲಿ ಬಚ್ಚಿಟ್ಟಿರುವ ತಿಂಡಿ ತಿನಿಸುಗಳಿಗಾಗಿ ಹುಡುಕಾಡಿದ ನೆನಪು. ಪಾಲಕರಿಗೆ ಮತ್ತು ಗೆಳೆಯರಿಗೆ ಮನೆಯಿಂದ ಸಾಧ್ಯವಾದಷ್ಟು ಜಾಸ್ತಿ ತಿಂಡಿಗಳನ್ನು ತರಲು ಆಗ್ರಹಿಸಿದ ನೆನಪು.
೬) ಪ್ರತಿ ರವಿವಾರ ಅಪ್ಪ-ಅಮ್ಮ ಬಂದೇ ಬರುತ್ತಾರೆ, ತಿಂಡಿಗಳ ಜೊತೆಗೆ ಪಾಕೆಟ ಮನಿ ಕೊಡುತ್ತಾರೆ ಅಂತಾ ಮಧ್ಯಾಹ್ನದವರೆಗೆ ಗೇಟ್ ಕಾದ ನೆನಪು. ಅವರು ಬರದಿದ್ದಾಗ ಕಣ್ಣಂಚಲ್ಲಿ ಮೆಲ್ಲನೆ ಬಂದ ಕಣ್ಣೀರ ನೆನಪು.
೭) ಮನಸ್ಸಿಲ್ಲದ ಮನಸ್ಸಿನಿಂದ ಆಲಸಿತನದಿಂದ ಬಟ್ಟೆ ತೊಳೆದ ನೆನಪು.
೮) ಚಿಕ್ಕಚಿಕ್ಕ ವಿಷಯಗಳಿಗೆಲ್ಲ ಗೆಳೆಯರೊಂದಿಗೆ ದೊಡ್ಡದಾಗಿ ಜಗಳಾಡಿ ಮಾತುಬಿಟ್ಟು ಮತ್ತೆ ಒಂದಾದ ನೆನಪು.
೯) ಒಂದೇ ಕಾಟಿನ ಮೇಲೆ ಎರಡ್ಮೂರು ಜನ ಮಲಗಿದ ನೆನಪು.
೧೦) ಬಟ್ಟೆಗಳು ಕೊಳೆಯಾದಾಗ ಗೆಳೆಯನ ಬಟ್ಟೆ ಹಾಕಿಕೊಂಡು ಸ್ಕೂಲಿಗೆ ಹೋದ ನೆನಪು.
೧೧) ತಡವಾಗಿ ಎದ್ದು ಹಲ್ಲುಜ್ಜದೆ, ಸ್ನಾನ ಮಾಡದೆ ಶಾಲೆ ಕಡೆಗೆ ಓಡಿದ ನೆನಪು.
೧೨) ಐರನ ಬಾಕ್ಸಿನ ಮೇಲೆ ಹಾಸ್ಟೇಲ್ ಸೂಪರವೈಸರ್ ಕಣ್ಣಿಗೆ ಮಣ್ಣೆರಚಿ ಮ್ಯಾಗಿ ಮತ್ತು ಆಮ್ಲೆಟ್ ಮಾಡಿದ ನೆನಪು.
೧೩) ಪೆನ್ನು, ಪೆನ್ಸಿಲು ಸಾಲದೆ ಕೋಲಗೆಟನಿಂದ ಹಾಸ್ಟೇಲ್ ಗೋಡೆ ತುಂಬೆಲ್ಲ ಬಿಡಿಸಿದ ಅಶ್ಲೀಲ ಚಿತ್ರಗಳ ನೆನಪು.
೧೪) ಮಧ್ಯರಾತ್ರಿ ರಹಸ್ಯವಾಗಿ ಮಾಡಿದ ಮಿಡನೈಟ ಮಿಟಿಂಗಗಳ ನೆನಪು.
೧೫) ಮಧ್ಯರಾತ್ರಿಯಲ್ಲಿ ಕೊಟ್ಟ ಸರ್ಪರೈಜ್ ಬರ್ತಡೇ ಪಾರ್ಟಿಗಳ ನೆನಪು.
೧೬) ಕೋಣೆಯ ಬಲ್ಬನ್ನು ಆರಿಸಿ ಒಟ್ಟಾಗಿ ಕುಳಿತು ಗುಟ್ಟಾಗಿ ನೋಡಿದ ನೀಲಿಚಿತ್ರಗಳ ನೆನಪು.
೧೭) ಸೆಕ್ಸಿ ಕನಸುಗಳೊಂದಿಗೆ ತಲೆದಿಂಬನ್ನು ತಬ್ಬಿಕೊಂಡು ಒಂಟಿಯಾಗಿ ಮಲಗಿದ ನೆನಪು.
೧೮) ಒಂದೇ ಬಾಥರೂಮಲ್ಲಿ ನಾಲ್ಕಾರು ಜನ ಒಟ್ಟಿಗೆ ಗುಂಪಾಗಿ ಸ್ನಾನ ಮಾಡಿದ ನೆನಪು.
೧೯) ಓದಿಗೆ ಟಾಟಾ ಬೈಬೈ ಹೇಳಿ ದಿನವೆಲ್ಲ ಆಡವಾಡಿದ ನೆನಪು.
೨೦) ವಾಚಮನ್ ಮತ್ತು ಸೆಕ್ಯುರಿಟಿ ಗಾರ್ಡಗಳೊಂದಿಗೆ ಮಾಡಿದ ಕೀಟಲೆಗಳ ನೆನಪು.
೨೨) ಬೇಜಾರಾದಾಗ ಹಾಸ್ಟೇಲನಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ ನೆನಪು.
೨೩) ಆಮಂತ್ರಣವಿಲ್ಲದೆ ಅಪರಿಚಿತರ ಮದುವೆ ಸಮಾರಂಭಗಳಲ್ಲಿ ಧೈರ್ಯವಾಗಿ ಊಟ ಮಾಡಿದ ನೆನಪು.
೨೪) ರಜೆ ಕೊಡದಿದ್ದಾಗ ರಾತ್ರಿ ಹಾಸ್ಟೇಲ್ ವಾರ್ಡನ್ ಕೋಣೆಯಲ್ಲಿ ಪಟಾಕಿಯಿಟ್ಟ ನೆನಪು.
೨೫) ಊಟ ಸರಿಯಿಲ್ಲ, ಸ್ನಾನದ ಕೋಣೆಯಲ್ಲಿ ನೀರು ಬರ್ತಿಲ್ಲ, ಆಟದ ಸಾಮಗ್ರಿಗಳು ಸಾಕಾಗುತ್ತಿಲ್ಲವೆಂಬ ಕಾರಣಕ್ಕೆ ಮಾಡಿದ ಪ್ರತಿಭಟನೆಗಳ ನೆನಪು.
೨೬) ಗೆಳೆಯರೆಲ್ಲರೂ ಓದುತ್ತಿದ್ದಾಗ ಜೋರಾಗಿ ಕಿರುಚುತ್ತಾ ಅವರ ಓದಿಗೆ ಭಂಗ ತಂದ ನೆನಪು.
೨೭) ಆಟವಾಡಲು ಬರದೆ ಹಗಲುರಾತ್ರಿ ಓದುತ್ತಿದ್ದ ಕ್ಲಾಸ್ ಟಾಪರಗಳ ಬುಕ್ಕಗಳನ್ನು ಬೇಗನೆ ಸಿಗದಂತೆ ಬಚ್ಚಿಟ್ಟ ನೆನಪು.
೨೮) ಹಾಸ್ಟೇಲಿನ ಆಸ್ತಿಗಳನ್ನು ಗುಟ್ಟಾಗಿ ಒಡೆದ ನೆನಪು.
೨೯) ದೆವ್ವಗಳಿಗೆ ಹೆದರುತ್ತಿದ್ದ ಗೆಳೆಯರನ್ನು ಮತ್ತಷ್ಟು ಹೆದರಿಸಲು ಹಾಸ್ಟೇಲ ತುಂಬೆಲ್ಲ ಹಬ್ಬಿಸಿದ ದೆವ್ವದ ಕಥೆಗಳ ನೆನಪು.
೩೦) ಅವಕಾಶ ಸಿಕ್ಕಾಗಲೆಲ್ಲ ಮಾಡುತ್ತಿದ್ದ ಗ್ರುಪ್ ಡ್ಯಾನ್ಸಗಳ ನೆನಪು.
೩೧) ಊಟದ ತಟ್ಟೆ ಮತ್ತು ಚಮಚದಿಂದ ಹೊರಬರುತ್ತಿದ್ದ ಬ್ಯಾಂಡ್ ಸಂಗೀತದ ನೆನಪು.
೩೨) ಹಾಸ್ಟೇಲಿನಲ್ಲಿರುವ ಬಾಥರೂಮ ಸಿಂಗರಗಳನ್ನು ಹುರಿದುಂಬಿಸಲು ಕಾಲೇಜಿನ ರಾಕಸ್ಟಾರಗಳನ್ನು ಕಿಂಡಲ್ ಮಾಡಿದ ನೆನಪು.
೩೩) ಹಾಸ್ಟೇಲಿನ ಟೆರೆಸ್ ಮೇಲೆ ರಹಸ್ಯವಾಗಿ ಸೇದುತ್ತಿದ್ದ ಸಿಗರೇಟಿನ ನೆನಪು....
ಇತ್ಯಾದಿ, ಇತ್ಯಾದಿ, ಇತ್ಯಾದಿ..