ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

        ಸದ್ಯಕ್ಕೆ ನಮ್ಮ ಸಮಾಜ ಪ್ರೇಮಿಗಳನ್ನು ಭಯೋತ್ಪಾದಕರಂತೆ ನೋಡ್ತಿದೆ. ಪ್ರೇಮಿಗಳನ್ನು ಕಂಡರೆ ಎಲ್ಲರ ಮೂಗಿನ ಮೇಲೆ ಕೆಂಡದಂಥ ಕೋಪ ಬಂದು ಬರಬಾರದ ಮಾತುಗಳು ಬಾಯಲ್ಲಿ ಸಲೀಸಾಗಿ ಬರುತ್ತವೆ. ಹೊಸ ಪ್ರೇಮಿಗಳ ಪ್ರೀತಿ ಈಗ ಪವಿತ್ರವಾಗಿ ಉಳಿಯುತ್ತಿಲ್ಲ. ಅದಕ್ಕಾಗಿ ಎಲ್ಲರೂ  ಪ್ರೀತಿಯನ್ನು ದ್ವೇಷಿಸುತ್ತಾರೆ. ಪವಿತ್ರ ಪ್ರೀತಿಗೆ ಕಳಂಕ ತಂದವರಲ್ಲಿ ನೀವು ಕೂಡ ಒಬ್ಬರಾಗಬೇಡಿ. ಕಾರಣವಿಲ್ಲದೆ ಯಾರು ಯಾರನ್ನು ದ್ವೇಷಿಸುವುದಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

              "ಮೋಜಿಗಾಗಿ ಪ್ರೀತಿಯ ದೋಸ್ತಿ, ಕಾಮಕ್ಕಾಗಿ ಪ್ರೇಮ" ಎಂಬ ಸಿದ್ಧಾಂತದಲ್ಲಿ ಹಲವರು  ಮೋಹದ ಮುಖವಾಡಕ್ಕೆ ಪ್ರೀತಿಯ ಕಿರೀಟವನ್ನು ಧರಿಸಿ ಮೇಲೊಂದು ನಗುವಿನ ನವಿಲುಗರಿಯನ್ನು ಸಿಕ್ಕಿಸಿಕೊಂಡು, ಮಾತುಗಳಿಗೆ ಬಣ್ಣ ಹಚ್ಚಿಕೊಂಡು ಹೃದಯಗಳ ಜೊತೆಗೆ ಹುಸಿಪ್ರೀತಿಯ ರಂಗೀನಾಟವಾಡುತ್ತಿದ್ದಾರೆ. ಇಂಥಹ ಮೋಸದ ಪ್ರೀತಿಯನ್ನು ಗುರ್ತಿಸುವಲ್ಲಿ ವಿಫಲವಾದ ಮುಗ್ಧ ಮನಸ್ಸುಗಳು ಇಂದಿಗೂ ನರಳುತ್ತಿವೆ. ಆ ನೊಂದ ಮನಸ್ಸುಗಳಲ್ಲಿ ತಮ್ಮ ಮಕ್ಕಳು ಮನಸ್ಸು ಸಹ ಒಂದಾಗಬಾರದು ಎಂಬ ಪುಟ್ಟ ಆಸೆ ನಿಮ್ಮ ಹೆತ್ತವರದ್ದು...

ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

      ನಿಮ್ಮ ಪಾಲಕರೆಲ್ಲ ಮಾಡುವುದು ನಿಮ್ಮ ಒಳ್ಳೆಯದಕ್ಕೆನೇ ಅಲ್ವಾ? ಜೀವನದಲ್ಲಿ ಮನೆ ಕಟ್ಟಿ, ಮದುವೆಯಾಗಿ, ಮಕ್ಕಳು ಮಾಡೋದು ಒಂದು ಸಾಧನೆಯಲ್ಲ. ನಿಮ್ಮ ಪಾಲಕರು ನಿಮ್ಮನ್ನು ಉನ್ನತವಾದ ಸ್ಥಾನದಲ್ಲಿ ನೋಡಲು ಬಯಸುತ್ತಾರೆ. ಮೊದಲು ಏನಾದರೂ ಒಂದನ್ನು ಸಾಧಿಸಿ ಉನ್ನತ ಸ್ಥಾನಕ್ಕೇರಿ. ನಂತರ ಪ್ರೀತಿಸಿ. ಆಮೇಲೆ ನಿಮ್ಮ ಪ್ರೀತಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಮತ್ತು ಬೆಂಬಲಿಸುತ್ತಾರೆ. ಅದನ್ನು ಬಿಟ್ಟು ಓದನ್ನು ಅರ್ಧಕ್ಕೆ ನಿಲ್ಲಿಸಿ ಕೆಲ್ಸ ಕಾರ್ಯ ಇಲ್ಲದೆ ಬರೀ ಪ್ರೀತಿ ಪ್ರೇಮ ಅಂತ ತಿರುಗಿದರೆ ಯಾರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ? ಯಾವ ಮುಠ್ಠಾಳ ತಾನೇ ಕೆಲಸ ಕಾರ್ಯಗಳಿಲ್ಲದೆ ತಿರುಗುವವನನ್ನ ಬೆಂಬಲಿಸುತ್ತಾನೆ?

            ನಿಮ್ಮ ತಂದೆತಾಯಿಗಳು ಸಿನಿಮಾದಲ್ಲಿನ ಪ್ರೀತಿಯನ್ನು ನೋಡಿ ಖುಷಿಪಡ್ತಾರೆ. ಆದರೆ ನಿಮ್ಮ ಪ್ರೀತಿಪ್ರೇಮದ ಕಥೆ ಕೇಳಿದಾಗ ಬಹಳಷ್ಟು ಆತಂಕ ಪಡ್ತಾರೆ. ಅದಕ್ಕಿರುವ ಕಾರಣ ಒಂದೇ!. ನಿಮ್ಮ ಭವಿಷ್ಯದ ಬಗ್ಗೆ ನಿಮ್ಮ ಪಾಲಕರಿಗಿರುವ ಅತೀವ ಕಾಳಜಿ. ಈ ಕಾಳಜಿಯಿಂದಲೆ ಅವರು ನಿಮ್ಮ ಪ್ರೀತಿಯನ್ನು ಮತ್ತು ಪ್ರೀತಿಪಾತ್ರರನ್ನು ದ್ವೇಷಿಸುತ್ತಾರೆ.

        ಓಡೋಗಿ ಮದುವೆಯಾಗೋಕೆ ನೀವೇನು ಹೇಡಿಗಳಾ? ಹುಟ್ಟಿದ ಊರಲ್ಲೇ ಎಲ್ಲರ ಮನಗೆದ್ದು, ಎಲ್ಲರನ್ನೂ ಒಪ್ಪಿಸಿ, ಎಲ್ಲರ ಆರ್ಶೀವಾದಗಳೊಂದಿಗೆ ಮದುವೆಯಾಗುವವರೆ ನಿಜವಾದ ಪ್ರೇಮಿಗಳು. ಬರೀ ನಿಮ್ಮ ಪಾಲಕರಷ್ಟೇ ಅಲ್ಲ, ಇಡೀ ಸಮಾಜ ಒಪ್ಪಿ ನಿಮ್ಮನ್ನು ಬೆಂಬಲಿಸುವ, ಪ್ರೀತಿಸುವ ಪ್ರೇಮಿಗಳು ನೀವಾಗಿ... ಸಮಾಜ ದ್ವೇಷಿಸುವ ಪ್ರೇಮಿಗಳು ನೀವಾಗದಿರಿ... All the best...


ನಿಮ್ಮ ಪ್ರೀತಿಪ್ರೇಮವನ್ನು ನಿಮ್ಮ ಪಾಲಕರು ದ್ವೇಷಿಸಲು ಕಾರಣಗಳು : Why your parents hate your love stories in Kannada

Blogger ನಿಂದ ಸಾಮರ್ಥ್ಯಹೊಂದಿದೆ.