ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

                    ಇವತ್ತು ಎಲ್ಲರ ಬಳಿ ಬೆಲೆಬಾಳುವ ಸ್ಮಾರ್ಟಫೋನಗಳಿವೆ. ಅದರಲ್ಲಿ ಅಚ್ಚರಿಯೇನಿಲ್ಲ. ಸ್ಮಾರ್ಟಫೋನ ಸ್ಮಾರ್ಟನೆಸ್ಸಿನ ಸಂಕೇತವಾಗಿದೆ. ಸ್ಮಾರ್ಟಫೋನ ಹೊಂದಿದವರೆಲ್ಲ ಸ್ಮಾರ್ಟ ಎಂದು ನಾನು ಹೇಳುತ್ತಿಲ್ಲ. ನಾನು ಸಹ ಎಲ್ಲರಂತೆ ಪ್ರೇಯಸಿಯನ್ನು ಬಿಟ್ಟು ವಾರಗಟ್ಟಲೆ ಹಾಯಾಗಿರಬಲ್ಲೆ. ಆದರೆ ಮೊಬೈಲನ್ನು ಬಿಟ್ಟು ಒಂದು ಕ್ಷಣವೂ ಹಾಯಾಗಿರಲಾರೆ. ಸ್ಮಾರ್ಟಫೋನಗಳು ಬಂದಾಗಿನಿಂದ ಜಗತ್ತು ನಮ್ಮ ಅಂಗೈಯಲ್ಲಿದೆ. ಆದರೆ ಈ ಸ್ಮಾರ್ಟಫೋನಗಳಿಂದ ಕೆಲವು ತೊಂದರೆಗಳಾಗುತ್ತಿವೆ. ಆದ್ದರಿಂದ ಸ್ಮಾರ್ಟಫೋನಗಳನ್ನು ಸ್ಮಾರ್ಟಾಗಿ ಮತ್ತು ಸೇಫಾಗಿ ಬಳಸುವುದು ಬುದ್ಧಿವಂತರ ಲಕ್ಷಣ. ಎಲ್ಲ ಸ್ಮಾರ್ಟಫೋನ ಬಳಕೆದಾರರಿಗೆ ಎಚ್ಚರಿಕೆಗಳು ಇಂತಿವೆ ;

ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

೧) ಸ್ಮಾರ್ಟಫೋನಿಗೆ ಬಹಳಷ್ಟು ಅಂಟಿಕೊಳ್ಳಬೇಡಿ : 
          ( Don't get addict to Smartphones) :

            ಸ್ಮಾರ್ಟಫೋನಗಳನ್ನು ಅವಶ್ಯಕತೆಗಿಂತ ಅಧಿಕವಾಗಿ ಬಳಸಿ ಅವುಗಳಿಗೆ ಅಂಟಿಕೊಳ್ಳಬೇಡಿ. ಅವುಗಳನ್ನು ಅನಾವಶ್ಯಕವಾಗಿ ಶೋಕಿಗಾಗಿ ಬಳಸಬೇಡಿ. ಸ್ಮಾರ್ಟಫೋನಿಗೆ ಅಡಿಕ್ಟ ಆಗುವುದರಿಂದ ನೀವು ಕೆಲವು ಸಮಸ್ಯೆಗಳಿಗೆ ತುತ್ತಾಗುತ್ತೀರಿ. ಸ್ಮಾರ್ಟಫೋನನ್ನು ನಿರಂತರವಾಗಿ ಬಹಳ ಸಮಯದ ತನಕ ಬಳಸುವುದರಿಂದ ನಿಮ್ಮ ಮೆದುಳಿನ ಮೇಲೆ ದುಷ್ಪರಿಣಾಮಗಳಾಗುತ್ತವೆ. ಇದರಿಂದ ತಲೆನೋವು, ಮಾನಸಿಕ ಅಶಾಂತಿ, ಮಾನಸಿಕ ಖಿನ್ನತೆಗಳ ಜೊತೆಗೆ ಕಣ್ಣಿನ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ರಾತ್ರಿ ವೇಳೆಯಲ್ಲಿ ಮಲಗುವ ಮುಂಚೆ ಮೊಬೈಲ್ ಬಳಸುವುದರಿಂದ ನಿದ್ರಾಹೀನತೆ ಬಾಧಿಸುತ್ತದೆ. ಕಣ್ಣಿನಲ್ಲಿ ಊರಿತ ಉಂಟಾಗಿ ತಡರಾತ್ರಿಯಾದರೂ ನಿಮಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ರಾತ್ರಿ ಸಮಯದಲ್ಲಿ ನಿಮ್ಮ ಮೊಬೈಲನಿಂದ ಹೊರಹೊಮ್ಮುವ ನೀಲಿ ಬೆಳಕಿನಿಂದ ನಿಮ್ಮ ದೇಹದ ಗಡಿಯಾರ (Body Clock) ಅಸ್ತವ್ಯಸ್ತವಾಗುತ್ತದೆ. ಇದರಿಂದ  ಸಮಯಕ್ಕೆ ಸರಿಯಾಗಿ ನಿಮಗೆ ನಿದ್ರೆ ಬರುವುದಿಲ್ಲ. ಆದ್ದರಿಂದ ಅವಶ್ಯಕತೆಯಿದ್ದಷ್ಟೆ ಸ್ಮಾರ್ಟಫೋನನ್ನು ಬಳಸಿ. ಸಾಧ್ಯವಾದಷ್ಟು ಅದನ್ನು ನಿಮ್ಮಿಂದ ದೂರವಿರಿಸುವುದು ನಿಮಗೇ ಒಳ್ಳೆಯದು.

ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

೨) ಸ್ಮಾರ್ಟಫೋನಿನ ಸೆಕ್ಯುರಿಟಿ ಬಗ್ಗೆ ಕಾಳಜಿ ಇರಲಿ :

* ಸೆಕ್ಯುರಿಟಿ ಸಾಫ್ಟವೇರಗಳನ್ನು ನಿಮ್ಮ ಸ್ಮಾರ್ಟಫೋನಲ್ಲಿ ಇನಸ್ಟಾಲ ಮಾಡಿ.

* ನಿಮ್ಮ ಸ್ಮಾರ್ಟಫೋನಿಗೆ ಸ್ಕ್ರೀನ ಲಾಕ್ ಜೊತೆಗೆ ಸೂಕ್ತವಾದ ಪಾಸವರ್ಡನ್ನು ಸೆಟ್ ಮಾಡಿ.

* ಹಾನಿಕಾರಕ ಜಾಲತಾಣಗಳಿಂದ ಯಾವುದೇ ಆ್ಯಪನ್ನು ಡೌನಲೋಡ ಮತ್ತೆ ಇನಸ್ಟಾಲ್ ಮಾಡಿಕೊಳ್ಳಬೇಡಿ. ನಿಮ್ಮ ಮೊಬೈಲ್ ಪ್ಲೇಸ್ಟೋರನಲ್ಲಿ ಲಭ್ಯವಿರುವ ಆ್ಯಪಗಳನ್ನು ಮಾತ್ರ ಇನಸ್ಟಾಲ ಮಾಡಿಕೊಳ್ಳಿ.

* ಸಮಯಕ್ಕೆ ಸರಿಯಾಗಿ ನಿಮ್ಮ ಸ್ಮಾರ್ಟಫೋನಿನ ಎಲ್ಲ ಆ್ಯಪಗಳನ್ನು ಅಪಡೇಟ್ ಮಾಡಿಕೊಳ್ಳಿ.

* ಕೆಲಸ ಆದ ನಂತರ ಬ್ಲೂಟೂಥ, ವೈಫೈ, ಶೇರ್ ಇಟ್, ಮೊಬೈಲ್ ಡಾಟಾಗಳನ್ನು ಟರ್ನ್ ಆಫ್ ಮಾಡುವುದನ್ನು ಮರೆಯಬೇಡಿ.
ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

* ನಿಮ್ಮ ಸಂಪನ್ಮೂಲ ಮಾಹಿತಿಗಳಾದ ಬ್ಯಾಂಕ ಖಾತೆ, ಬ್ಯಾಂಕ ಟ್ರಾಂಜಿಷನ್,ವೋಟರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿಗಳನ್ನು ಭದ್ರವಾಗಿಟ್ಟುಕೊಳ್ಳಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬ್ಯಾಂಕಿನ ಎಲ್ಲ ವಿವರಗಳು ಮತ್ತು ಆಧಾರ ಕಾರ್ಡ ಲಿಂಕ್ ಆಗಿರುವುದರಿಂದ ನೀವು ನಿಮ್ಮ ಸ್ಮಾರ್ಟಫೋನಿನ ಭದ್ರತೆಯ ಬಗ್ಗೆ ಗಮನವಹಿಸಲೇಬೇಕು.

* ನಿಮ್ಮ ಎಟಿಎಮ್, ಪೇಟಿಎಮ್ ಪಿನಕೋಡಗಳನ್ನು, ಫೇಸ್ಬುಕ್, ಇನಸ್ಟಾಗ್ರಾಮ, ಟ್ವಿಟರ್ ಖಾತೆಗಳ ಪಾಸವರ್ಡಗಳನ್ನು ರಹಸ್ಯವಾಗಿಡಿ. ಯಾವುದೇ ಕಾರಣಕ್ಕೂ ಯಾರೊಂದಿಗೆ ಇವುಗಳನ್ನು ಶೇರ್ ಮಾಡಬೇಡಿ.

* ಯಾವುದೇ ಬ್ಯಾಂಕಿನವರು ನಿಮ್ಮ ಬ್ಯಾಂಕ ಖಾತೆ ಮತ್ತು ಎಟಿಎಮ್ ವಿವರಗಳನ್ನು ಕೇಳಿ ಕರೆ ಮಾಡುವುದಿಲ್ಲ ಮತ್ತು ಸಂದೇಶ ಕಳಿಸುವುದಿಲ್ಲ. ಫ್ರಾಡ್ ಫೋನ್ ಕರೆಗಳಿಗೆ ಉತ್ತರಿಸಿ ನಿಮ್ಮ ಬ್ಯಾಂಕ ಖಾತೆಯಲ್ಲಿನ ದುಡ್ಡನ್ನು ಕಳೆದುಕೊಳ್ಳಬೇಡಿ.

* ನಿಮ್ಮ ಸ್ಮಾರ್ಟಫೋನನ್ನು ಜೈಲಬ್ರೇಕ್ ಮಾಡುವುದಾಗಲಿ ಅಥವಾ ಅದರಲ್ಲಿರುವ Rootage Security Softwareನ್ನು Uninstall ಮಾಡುವುದಾಗಲಿ ಮಾಡಬೇಡಿ.
ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

೩) ಸ್ಮಾರ್ಟಫೋನ ಸ್ಫೋಟದ ಬಗ್ಗೆ ಎಚ್ಚರವಿರಲಿ :

        ನಿಮ್ಮ ಸ್ಮಾರ್ಟಫೋನ ಅತಿಯಾಗಿ ಬಿಸಿಯಾದಾಗ ಅದರಲ್ಲಿನ ಬ್ಯಾಟರಿ ಸ್ಪೋಟಗಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಆದ್ದರಿಂದ ನಿಮ್ಮ ಸ್ಮಾರ್ಟಫೋನಿನ ತಾಪಮಾನ ಏರಿಕೆಯಾದಂತೆ ನೋಡಿಕೊಳ್ಳಿ. ನಿಮ್ಮ ಮೊಬೈಲನ್ನು ಅತಿಯಾಗಿ 100% ಚಾರ್ಜ್ ಮಾಡಬೇಡಿ. (95% ಸಾಕು). ಚಾರ್ಜಿಂಗ ಮಾಡುವಾಗ ಮತ್ತು ಪೆಟ್ರೋಲ್ ಬಂಕಗಳಲ್ಲಿರುವಾಗ ನಿಮ್ಮ ಮೊಬೈಲನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಈ ಸಂದರ್ಭಗಳಲ್ಲಿ ನಿಮ್ಮ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆಗಳಿರುತ್ತವೆ. ಹೆಡಫೋನ ಬಳಸುವಾಗ ವ್ಯಾಲ್ಯೂಮನ್ನು ಜಾಸ್ತಿ ಏರಿಸಬೇಡಿ.
ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

             ಬಹಳಷ್ಟು ಜನ ರಾತ್ರಿ ಸರಿಯಾಗಿ ಇದ್ದೆ ಬರುತ್ತಿಲ್ಲ ಎಂದು ಪರದಾಡುತ್ತಿದ್ದಾರೆ, ಬ್ಯಾಂಕ ಖಾತೆಯಲ್ಲಿನ ದುಡ್ಡನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ, ಮೊಬೈಲನ್ನು ಚಾರ್ಜಿಂಗಿಗೆ ಹಾಕಿ ವಿಡಿಯೋ ಗೇಮ ಆಡುವಾಗ ಮೊಬೈಲ್ ಸ್ಫೋಟಗೊಂಡು  ಎಷ್ಟೋ ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂಥವರಲ್ಲಿ ನೀವು ಕೂಡ ಒಬ್ಬರಾಗಬಾರದು ಎಂಬುದು ಈ ಅಂಕಣದ ಏಕೈಕ ಉದ್ದೇಶ. ಸ್ಮಾರ್ಟಫೋನ ಸ್ಮಾರ್ಟಾಗಿದೆ ಅಂದ್ಮೇಲೆ ಅದನ್ನು ಬಳಸುತ್ತಿವವರು ಸಹ ಸ್ಮಾರ್ಟಾಗಿರಬೇಕು. ನಿಮ್ಮ ಸ್ಮಾರ್ಟಫೋನನ್ನು ಅನಾವಶ್ಯಕವಾಗಿ ಬಳಸದೆ, ಅವಶ್ಯಕತೆ ಇದ್ದಷ್ಟೇ ಬಳಸಿ. ನಿಮ್ಮ ಸ್ಮಾರ್ಟಫೋನಿನೊಂದಿಗೆ ಸದಾ ಸ್ಮಾರ್ಟ್ ಮತ್ತು ಸೇಫಾಗಿರಿ....

ನಿಮ್ಮ ಸ್ಮಾರ್ಟಫೋನಿನೊಂದಿಗೆ ಸ್ಮಾರ್ಟಾಗಿರಿ : ಎಲ್ಲ ಸ್ಮಾರ್ಟಫೋನ್ ಬಳಕೆದಾರರಿಗೆ 3 ಎಚ್ಚರಿಕೆಗಳು - Be Safe with Smartphone

Blogger ನಿಂದ ಸಾಮರ್ಥ್ಯಹೊಂದಿದೆ.