೧) ರಾಜಾ💕ರಾಣಿ
ರಾಣಿ : ನೀನು ಇತ್ತೀಚಿಗೆ ಕಾಲೇಜಿಗೆ ಸರಿಯಾಗಿ ಬರುತ್ತಿಲ್ಲ ಯಾಕೆ?
ರಾಜಾ: "ಕಲಿತವನಿಗೆ ಒಂದು ದಾರಿಯಾದರೆ ಕಲಿಯದವನಿಗೆ ಸಾವಿರ ದಾರಿಗಳಿವೆ" ಎಂದು ಮಹಾನ್ ಸಾಧಕರೆಲ್ಲ ಹೇಳಿರುವಾಗ ಕಾಲೇಜಿಗೆ ಬಂದೇನ ಮಾಡಲಿ...?
೨) ರಾಜಾ💕ರಾಣಿ
ರಾಜಾ : ನನಗಿಂತ ನಿನ್ನ ಬಾಳು ಅತೀ ಸರಳದಾಯಕ ಕಣೇ.
ರಾಣಿ : ಅದೇಗೆ?
ರಾಜಾ : ಒಂದು ವೇಳೆ ಎಕ್ಸಾಮಲ್ಲಿ ನಾನು ಫೇಲಾದರೆ ನಮ್ಮಪ್ಪ ನನ್ನ ಒದ್ದು ಕೆಲಸಕ್ಕೆ ಕಳಿಸತ್ತಾರೆ. ಆದರೆ ನೀನು ಫೇಲಾದರೆ ನಿಮ್ಮಪ್ಪ ನಿನಗೆ ಮದುವೆ ಮಾಡ್ತಾರೆ...!!
೩) ರಾಜಾ💕ರಾಣಿ
ರಾಣಿ: ನಮ್ಮ ಉಪನ್ಯಾಸಕರು ಯಾಕೆ ದಿನಾ ಕಾಲೇಜಿಗೆ ಕೂಲಿಂಗ ಗ್ಲಾಸನ್ನು ಹಾಕಿಕೊಂಡು ಬರುತ್ತಾರೆ?
ರಾಜಾ: ಕದ್ದು ಕದ್ದು ಉಪನ್ಯಾಸಕಿಯರನ್ನು, ವಿದ್ಯಾರ್ಥಿನಿಯರನ್ನು ನೋಡುವುದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದ...
೪) ರಾಜಾ💕ರಾಣಿ
ಶಿಕ್ಷಕಿ : ನಿಷೇಧಾರ್ಥಕ ವಾಕ್ಯಕ್ಕೆ ಒಂದು ಉದಾಹರಣೆ ಕೊಡಿ.
ರಾಣಿ : "ನೀವು ನನ್ನಷ್ಟು ಸುಂದರವಾಗಿಲ್ಲ ಮಿಸ್".
ಶಿಕ್ಷಕಿ : ನಕಾರಾತ್ಮಕ ವಾಕ್ಯಕ್ಕೆ ಒಂದು ಉದಾಹರಣೆ ಕೊಡಿ.
ರಾಜಾ : " ನೀವು ಕಲಿಸಿದ ಪಾಠ ನಮಗೆ ಅರ್ಥವಾಗಲ್ಲ ಮಿಸ್ ".
ಶಿಕ್ಷಕಿ : ನೀವು ನಿಮ್ಮ ತಲೆಹರಟೆಗಳನ್ನು ಬಿಡೋ ತನಕ ನೀವು ಪಾಸಾಗಲ್ಲ.
೫) ರಾಜಾ💕ರಾಣಿ
ರಾಣಿ : ನೀನು ಪರೀಕ್ಷೆಯಲ್ಲಿ ಫೇಲಾದ್ರೆ ಏನ ಮಾಡ್ತೀಯಾ?
ರಾಜಾ : ತುಂಬಾನೆ ಖುಷಿ ಪಡ್ತೀನಿ.
ರಾಣಿ : ಯಾಕೋ? ತಲೆ ಕೆಟ್ಟಿದೆಯೆನೋ?
ರಾಜಾ : ನಿನ್ನ ಪ್ರೀತಿಯಲ್ಲಿ ಬಿದ್ದಾಗಿನಿಂದ ಸ್ವಲ್ಪ ತಲೆಕೆಟ್ಟಿದೆ. ದೊಡ್ಡ ದೊಡ್ಡ ಸಾಧಕರೆಲ್ಲ SSLC, PUC ಫೇಲಾಗಿದ್ದಾರೆ. ನಾನು SSLC, PUC ಪಾಸಾಗೀದಿನಿ. ಅಂದ್ಮೇಲೆ ನಾನು ಡಿಗ್ರಿ ಫೇಲಾದರೆ ಅವರಿಗಿಂತ ದೊಡ್ಡ ಸಾಧಕನಾಗ್ತೀನಿ...
೬) ರಾಜಾ💕ರಾಣಿ
ರಾಣಿ : ದಿನಾ ನನ್ನ ಕಾಲೇಜ ಬ್ಯಾಗಿನಿಂದ, ಕಂಪಾಸ್ ಬಾಕ್ಸನಿಂದ ಏನಾದರೂ ಒಂದನ್ನು ಕದಿಯೋದು ಕಾಯಕವಾದಂತಿದೆಯಲ್ಲಾ? ನಿನಗೆ ನಾಚಿಕೆ ಆಗಲ್ವಾ?
ರಾಜಾ : ಆಗಲ್ಲ ಕಣೇ. ಕದಿಯೋದು ಕೂಡ ಒಂದು ಕಷ್ಟದ ಕಾಯಕ. ಅಲ್ಲದೆ ಕಾಯಕವೇ ಕೈಲಾಸ ತಾನೇ. ನಾನು ಕದಿಯೋ ಕಾಯಕದಲ್ಲೆ ನನ್ನ ದೇವತೆ ಅಂದ್ರೆ ನಿನ್ನನ್ನು ಕಾಣ್ತೀನಿ...
೭) ರಾಜಾ💕ರಾಣಿ
ರಾಜಾ : ಪರೀಕ್ಷೆ ಎಂದರೇನು?
ರಾಣಿ : ಒಂದು ವರ್ಷ ಸಮಯವಿದ್ದರೂ ಓದಲಾಗದಿರುವುದನ್ನು ಒಂದಿನ ರಾತ್ರಿಯೆಲ್ಲ ನಿದ್ದೆಗೆಟ್ಟು ಓದಿ, ಮರುದಿನ ಏನೂ ನೆನಪಿಲ್ಲದೆ, ಮೂರು ಗಂಟೆಯಲ್ಲಿ ಕಾಫಿಗಳ ಶ್ರೀರಕ್ಷೆಯಿಂದ ತೋಚಿದನ್ನು ಗೀಚುವ ಶಿಕ್ಷೆ...
೮) ರಾಜಾ💕ರಾಣಿ
ರಾಣಿ : ಯಾಕೋ ಇವತ್ತು ಪರೀಕ್ಷೆಯಿಂದ ಅರ್ಧಕ್ಕೆ ಎದ್ದು ಬಂದೆ?
ರಾಜಾ : ಏಕೆಂದರೆ ಪ್ರಶ್ನೆಪತ್ರಿಕೆಯಲ್ಲಿ "ಈ ಕೆಳಗಿನವುಗಳಿಗೆ ಸರಿಯಾಗಿ ಉತ್ತರಿಸಿ" ಅಂತ ಹೇಳಿದ್ದರು.
ರಾಣಿ : ಅದಕ್ಕೆ....ಏನಾಯಿತು?
ರಾಜಾ : ನಾನು ಬರೆದ ಉತ್ತರಗಳೆಲ್ಲ ತಪ್ಪಾದರೆ ಪ್ರಶ್ನೆಪತ್ರಿಕೆ ತೆಗೆದವರ ಮನಸ್ಸಿಗೆ ನೋವಾಗುತ್ತೆ ಅಂತ ಏನನ್ನು ಉತ್ತರಿಸದೆ ಎದ್ದು ಬಂದೆ...
೯) ರಾಜಾ💕ರಾಣಿ
ರಾಣಿ : ಮೌಲ್ಯಮಾಪನ ಎಂದರೇನು?
ರಾಜಾ : ನಾವು ಬೇಜಾರಿನಿಂದ ಬರೆದಿದ್ದನ್ನು, ಶಿಕ್ಷಕರು ಬೇಜಾರಿನಿಂದ ನೋಡಿ ಕಷ್ಟಾಪಟ್ಟು ಬೈಯ್ಯುವುದು ಇಲ್ಲವೇ ಇಷ್ಟಪಟ್ಟು ನಗುತ್ತಾ ಯದ್ವಾತದ್ವಾ ಮಾರ್ಕ್ಸ್ ಹಾಕಿ, ಹುಡುಗರನ್ನು ಜಸ್ಟ ಪಾಸ್ ಮಾಡಿ, ಹುಡುಗಿಯರನ್ನು ಟಾಪ್ ಬರುವಂತೆ ಮಾಡುವ ಪುಣ್ಯದ ಕೆಲಸ...
೧೦) ರಾಜಾ💕ರಾಣಿ
ಅಪ್ಪ : ಪರೀಕ್ಷೆಯಲ್ಲಿ ಮತ್ತೆ ಫೇಲಾಗಿದ್ದಿಯಲ್ಲ ಏನಿದರರ್ಥ?
ರಾಜಾ : ಇದರರ್ಥವೇನೆಂದರೆ "ಟೀಚರ್ ಸರಿಯಾಗಿ ಹೇಳಿ ಕೊಟ್ಟಿಲ್ಲ" ಅಂತ ಅಪ್ಪ.
ಅಪ್ಪ : ಯಾಕೆ? ಏನಾಗಿದೆ ಅವರಿಗೆ?
ರಾಜಾ : ಅವರಿಗೆ ಏನೂ ಆಗಿಲ್ಲ ಅಪ್ಪ. ಆದ್ರೆ ಅವರಿಗೆ ಸರಿಯಾಗಿ ಕಲಿಸೋಕೆ ಬರಲ್ಲ ಅಷ್ಟೇ ...!
೧೧) ರಾಜಾ💕ರಾಣಿ
ಶಿಕ್ಷಕಿ : ಯಾಕೇ ನಿನ್ನೆ ನೀನು ಪರೀಕ್ಷೆಗೆ ಬಂದಿರಲಿಲ್ಲ?
ರಾಣಿ : "ನೀನು ಫೇಲಾದರೂ ಪರವಾಗಿಲ್ಲ. ಆದರೆ ಸರಸ್ವತಿಯ ಸನ್ನಿಧಿಯಲ್ಲಿ ಕಾಪಿ ಕಳ್ತನ ಮಾಡಿ ಕಲಿಸಿದ ಗುರುವಿಗೆ ಮೋಸ ಮಾಡದಿರು" ಅಂತ ನನ್ನ ರಾಜಾ ಹೇಳಿದ್ದಾನೆ. ಅದಕ್ಕೆ ನಿನ್ನೆ ಪರೀಕ್ಷೆಗೆ ಬಂದಿರಲಿಲ್ಲ ಮಿಸ್.
೧೨) ರಾಜಾ💕ರಾಣಿ
ರಾಜಾ : ನಾನು ನಾಳೆ ಪರೀಕ್ಷೆಗೆ ಬರಲ್ಲ ಮಿಸ್.
ಶಿಕ್ಷಕಿ : ಯಾಕೋ? ಏನಾಯ್ತೋ? ಸರಿಯಾಗಿ ಓದಿಲ್ಲವೇನೊ?
ರಾಜಾ : ಪರೀಕ್ಷೆ ಒಂದು ಅನ್ಯಾಯ. ಅದಕ್ಕೆ ನಾನು ಬರಲ್ಲ ಮಿಸ್.
ಶಿಕ್ಷಕಿ : ಹೇಗೋ? ಹುಷಾರಾಗಿದ್ದೀಯಾ ತಾನೆ?
ರಾಜಾ : ನೀವು ಮಾತ್ರ ಎಲ್ಲ ಪುಸ್ತಕಗಳನ್ನು ನೋಡಿ ಪ್ರಶ್ನೆ ಬಿಡಿಸಿರುತ್ತೀರಾ. ಆದರೆ ನಮಗೆ ಮಾತ್ರ ಪುಸ್ತಕ ನೋಡಿ ಉತ್ತರ ಬಿಡಿಸೋಕೆ ಅವಕಾಶ ಕೊಡಲ್ಲ. ಇದು ಅನ್ಯಾಯವೇ.....!!!
೧೩) ರಾಜಾ💕ರಾಣಿ
ರಾಣಿ : ಹುಡುಗರು ಓದಿನಿಂದ ಹಿಡಿದು ಎಲ್ಲದರಲ್ಲೂ ಹುಡುಗಿಯರಿಗೆ ಪ್ರಥಮ ಸ್ಥಾನವನ್ನು ಬಿಟ್ಟು ಕೊಡ್ತಾರಲ್ಲ ಯಾಕೆ?
ರಾಜಾ : ಯಾಕೆಂದರೆ ಹುಡುಗರು ಹುಡುಗಿಯರನ್ನು ಪ್ರೀತಿಸುವ, ಪೂಜಿಸುವ ಕಲ್ಮಶ ರಹಿತ ವಿಶಾಲ ಹೃದಯವುಳ್ಳ ಮಹಾನ್ ತ್ಯಾಗಿಗಳು...!!
೧೪) ರಾಜಾ💕ರಾಣಿ
ರಾಜಾ : ಕಾಲೇಜಿನಲ್ಲಿ ನಮ್ಮ ಮೇಡಂ ಯಾಕೆ ಪದೇಪದೇ "ಇತ್ಯಾದಿ" ಎಂಬ ಪದವನ್ನು ಬಳಸುತ್ತಾರೆ.
ರಾಣಿ : ಅದರ ಮುಂದಿನ ಪದಗಳು ಅವರಿಗೆ ಖಂಡಿತ ಗೊತ್ತಿರುವುದಿಲ್ಲ.
೧೫) ರಾಜಾ💕ರಾಣಿ
ರಾಣಿ : ಯಾಕೆ ನಮ್ಮ ಮೇಡಂ ಮದುವೆಯಾಗಿದ್ದರೂ ದಿನಾ ಕಾಲೇಜಿಗೆ ತಾಳಿ, ಕಾಲುಂಗುರು, ಕಳಚಿಟ್ಟು ಸ್ಟೈಲಿಷ ಆಗಿ ಬರುತ್ತಾರೆ?
ರಾಜಾ : ಅವರ ಕ್ಲಾಸ್ ಇಷ್ಟವಿಲ್ಲದೆ ಬೋರಾದರೂ ಹುಡುಗರು ಎದ್ದೊಗದೇ, ನಿದ್ದೆಮಾಡದೆ ಅಲ್ಲೇ ಕುಳಿತಿರುವಂತೆ ನೋಡಿಕೊಳ್ಳಲು ಒಂದು ಚಿಕ್ಕ ಪ್ಲ್ಯಾನ್ ಮಾಡಿದಾರೆ ಅಷ್ಟೇ ಬೇರೆನಿಲ್ಲ...
೧೬) ರಾಜಾ💕ರಾಣಿ
ಶಿಕ್ಷಕಿ : ಇವತ್ತು ನಮ್ಮ ಕಾಲೇಜಿನ "ಮಲ್ಟಿ ಟ್ಯಾಲೆಂಟೆಡ್ ತಲೆಹರಟೆ" ಎಲ್ಲಿ ಕಾಣಿಸುತ್ತಿಲ್ಲವಲ್ಲ.
ವಿದ್ಯಾರ್ಥಿಗಳು : ಯಾರು ಮಿಸ್?
ಶಿಕ್ಷಕಿ : ರಾಜ ಕಣ್ರೋ..
ವಿದ್ಯಾರ್ಥಿಗಳು : ಅವನಾ ಮಿಸ್ ?. ಇವತ್ತು ರಾಣಿ ಬಂದಿಲ್ಲ ಅದಕ್ಕೆ ಅವನು ಬಂದಿಲ್ಲ. ಏಕೆಂದರೆ ಅವರಿಬ್ಬರೂ ಎರಡು ದೇಹ ಆದ್ರೆ ಒಂದೇ ಮೆದುಳುನಂತಿರುವ ದೊಡ್ಡ ತಲೆಹರಟೆ ಪ್ರೇಮಿಗಳು.
೧೭) ರಾಜಾ💕ರಾಣಿ
ಟೀಚರ್ : ಮಕ್ಕಳೇ ಹೆತ್ತತಾಯಿ ಗ್ರೇಟೋ ಅಥವಾ ನಿಮಗೆ ವಿದ್ಯೆ ಕಲಿಸಿದ ಗುರುಮಾತೆ ಗ್ರೇಟೋ?
ರಾಜಾ :ನೀವೇ ಗ್ರೇಟು ಮಿಸ್.
ಟೀಚರ್ : (ತುಂಬಾ ಖುಷಿಯಿಂದ) ಹ್ಯಾಗೋ ಮುದ್ದು ರಾಜಾ?
ರಾಜಾ : ನನ್ನಮ್ಮ ನನ್ನ ಮಲಗಿಸೋಕೆ ನಾನಾ ಕಸರತ್ತು ಮಾಡ್ತಿದ್ದಳಂತೆ. ಆದ್ರೆ ನೀವು ನನ್ನ ಯಾವುದೇ ಹರಸಾಹಸ ಮಾಡದೇ ತುಂಬಾ ಸಲೀಸಾಗಿ ಪಾಠ ಮಾಡಿ ಮಲಗಿಸುತ್ತೀರಿ. ಅದಕ್ಕೆ ನೀವೇ ಗ್ರೇಟು ಮಿಸ್.
೧೮) ರಾಜಾ💕ರಾಣಿ
ರಾಜಾ : ರಾಣಿ ನಮ್ಮಿಬ್ಬರ ಪ್ರೀತಿಯ ಸಂಕೇತವಾಗಿ ಆ ತಾಜಮಹಲಗಿಂತ ಅತೀ ಸುಂದರವಾದ ಒಂದು ರಾಣಿಮಹಲನ್ನು ಕಟ್ಟಲೇ?
ರಾಣಿ : ಬೇಡ ಅದರ ಅವಶ್ಯಕತೆ ಈಗಿಲ್ಲ. ನಿನ್ನ ಓದಿನ ಕಡೆ ಗಮನ ಕೊಡು.
ರಾಜಾ : ಮತ್ತೇನು ಕಟ್ಟಲಿ ಮಹಾರಾಣಿಯವರೇ?
ರಾಣಿ : ಮೊದಲು ಬೇಗನೆ ನಿನ್ನ ಓದು ಮುಗಿಸಿ ನನ್ನ ಕೊರಳಿಗೆ ಒಂದು ತಾಳಿಯನ್ನು ಕಟ್ಟು, ಆಮೇಲೆ ಬೇಕಾದರೆ ರಾಣಿಮಹಲ್ ಕಟ್ಟುವಂತೆ.
೧೯) ರಾಜಾ💕ರಾಣಿ
ಶಿಕ್ಷಕಿ : ನೋಡೋ ಕತ್ತೆ, ರಾಣಿಯ ಕೈಬರಹ ಎಷ್ಟು ಚೆನ್ನಾಗಿದೆ. ಅವಳ ಬರಹ ನೋಡಿ ನೀನು ನಾಚಬೇಕು. ನಿಜವಾಗ್ಲೂ ಅವಳ ಕೈಬರಹ ಮುತ್ತಿಟ್ಟಂತಿವೆ.
ರಾಜಾ : ಯಾರಿಗೆ ಮುತ್ತಿಟ್ಟಂತಿವೆ? ನನಗಾ ಮಿಸ್?
ರಾಣಿ : ಮೂರ್ಖ....
೨೦) ರಾಜಾ💕ರಾಣಿ
ರಾಜಾ : ನಾ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀ ನನ್ನ ಮದ್ವೆಯಾಗ್ತೀಯಾ?
ರಾಣಿ : ರಾಜಾ ನೀನಿನ್ನೂ ಓದ್ತಾ ಇದೀಯಾ, ಓದು ಮುಗಿಬೇಕು. ನಂತರ ನಿಂಗೆ ಕೆಲ್ಸ ಸಿಗಬೇಕು. ಹೀಗಿರುವಾಗ ಮದ್ವೆಗಿದ್ವೆ ಹೇಗ್ ಸಾಧ್ಯ?
ರಾಜಾ : ರಾಣಿ ನಮ್ಮ ಸರ್ಕಾರ ಇರೋವಾಗ ನಿನಗೇಕೆ ಚಿಂತೆ?
ಮದ್ವೆ ಖರ್ಚಿಗಂತ ಶಾದಿಭಾಗ್ಯವಿದೆ.
ಮುಂದೆ ಹೊಟ್ಟೆಪಾಡಿಗಂತ ಅನ್ನಭಾಗ್ಯವಿದೆ.
ಆರೋಗ್ಯಭಾಗ್ಯ ಸೇರಿ ಎಲ್ಲ ಭಾಗ್ಯಗಳೂ ಇವೆ. ಮತ್ಯಾಕೆ ಚಿಂತೆ?
೨೧) ರಾಜಾ💕ರಾಣಿ
ರಾಣಿ: ನೀನ್ಯಾಕೆ ಪದೇಪದೇ ಫೇಲಾಗುತ್ತಿದ್ದಿಯಾ?
ರಾಜಾ: ನಮ್ಮ ಕಾಲೇಜು ಈಗ ಆರ್ಥಿಕ ಸಂಕಷ್ಟದಲ್ಲಿದೆ. ಅಲ್ಲದೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶಿಕ್ಷಕರಿಗಿಂತ ಕಡಿಮೆಯಿದೆ. ಅದ್ಕೆ ನಾ ಫೇಲಾಗಿ ಸಪ್ಲಿಮೆಂಟ್ರಿ ಪೇಪರ ಫೀಸ್ ಕಟ್ಟಿ ಕಾಲೇಜಿಗೆ ಸಹಾಯ ಮಾಡ್ತಿದೀನಿ.
೨೨) ರಾಜಾ💕ರಾಣಿ
ರಾಜಾ: ಇವತ್ತು ಕಾಲೇಜಿನಿಂದ ಬರೋವಾಗ ನಾನೊಂದು ಹುಡ್ಗೀನಾ ರೆಗಿಸಿದೆ. ಸ್ವಲ್ಪ ಕೋಪಿಸಕೊಂಡ ಆಕೆ ನಂತ್ರ I LOVE You ಅಂದಳು.
ರಾಣಿ: ಯಾರು ಆ ರೂಪವತಿ? ವಿಶ್ವಸುಂದರಿ? ಗಂದರ್ವಕನ್ಯೆ? ದೇವಲೋಕದ ಅಪ್ಸರೆ? ರೋಜಾ ಹೂ? ...
ರಾಜಾ: ಏ ಸಾಕ ನಿಲ್ಸೆ. ಅವಳು ತುಂಬಾ ಕಪ್ಪಗಿದ್ದಳು. ಅದಕ್ಕೆ ನಾನು ರೇಗಿಸೋಣಾ ಅಂತಾ "ಬ್ರೇಕಿಂಗ್ ನ್ಯೂಸ್. ಕರ್ನಾಟಕದಲ್ಲಿ ಆಫ್ರಿಕಾದ ಸುಂದರಿ. Miss Africa ಪ್ರತ್ಯಕ್ಷವಾಗಿದ್ದಾಳೆ" ಎಂದೆನು. ಅಷ್ಟಕ್ಕೆ ಅವಳು I Love You ಅಂದಳು. ನಾನು ಓಡೋಡಿ ಬಂದೆ.
ರಾಣಿ : ನೀನು ಬೇಕಾದರೆ ಆಫ್ರಿಕಾ ಸುಂದರಿಯನ್ನು ಪ್ರೀತಿಸಬಹುದು. ನಂದೇನು ಅಭ್ಯಂತರವಿಲ್ಲ.
ರಾಜಾ: ಎಷ್ಟಾದರೂ ಹುಡುಗರಿಗೆ ಸಜಾ ಆದ್ರೆ ಹುಡ್ಗೀರಿಗೆ ಮಜಾ ತಾನೇ?
೨೩) ರಾಜಾ💕ರಾಣಿ
ರಾಣಿ: ನಾನು ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಗೊತ್ತಾ?
ರಾಜಾ: ನಿನ್ನ ಪ್ರೀತಿ ನಿಜವಾದರೆ ನನ್ನ ಈಗ್ಲೇ ಮದ್ವೆಯಾಗು ನೊಡೋಣಾ? ಯಾಕ ಸುಮ್ನಾದೆ?. ನಂಗೊತ್ತಮ್ಮ ಹುಡ್ಗೀರ ಬುದ್ಧಿ. ಪ್ರೀತಿ ಮಾಡೋವಾಗ ಸೂರ್ಯ, ಚಂದ್ರ, ನಕ್ಷತ್ರ ಎಲ್ಲ ಗಿಫ್ಟಾಗಿ ಕೊಡ್ತೀನಿ ಅಂತೀರಾ. ನಂತ್ರ ಕೈ ಕೊಟ್ಟು ನಮ್ಮನ್ನೆ ಅವುಗಳತ್ರ ಕಳ್ಸಿ ಹಾಯಾಗಿರ್ತಿರಾ ಅಷ್ಟೇ.
೨೪) ರಾಜಾ💕ರಾಣಿ
ರಾಣಿ : ನೀನೇಕೆ ಲಾಸ್ಟಬೆಂಚಿಗೆ ಭಕ್ತ ಆಗ್ತಿದೀಯಾ?
ರಾಜಾ : ಫಸ್ಟ್ ಬೆಂಚಿನ ವಿದ್ಯಾರ್ಥಿಗಳೆಲ್ಲ ಕೆಲ್ಸ ಸಿಗದೆ ಮಾನಸಿಕವಾಗಿ ಬಳಲಿ ಭಯೋತ್ಪಾದಕರಾಗ್ತಿದಾರೆ. ಇನ್ನು ಕೆಲವರು ಸರ್ಕಾರಿ ಅಧಿಕಾರಿಗಳಾಗಿ ಭ್ರಷ್ಟ ರಾಜಕಾರಣಿಗಳ ಜೊತೆ ಕೈಜೋಡಿಸಿ ದೇಶವನ್ನು ದರೋಡೆ ಮಾಡುತ್ತಿದ್ದಾರೆ. ಅವರ ಸಹವಾಸ ದೋಷದಿಂದ ನಾನು ಕೆಡಬಾರದಲ್ಲ ಅದಕ್ಕೆ ದೂರಾ ಇರೋಕೆ ಲಾಸ್ಟ ಬೆಂಚ್ ಪಾರ್ಟಿ ಸೇರಿದಿನಿ...
೨೫) ರಾಜಾ💕ರಾಣಿ
ರಾಣಿ : ಇವತ್ತು ಕಾಲೇಜಿನಲ್ಲಿ ಆ ಸುಷ್ಮಾ ನಿನ್ನ ಬಳಿಯಿಂದ ಹಾದು ಹೋಗೊವಾಗ ಅವಳ್ನಾ ನೋಡಿ ಮೂರ್ಛೆ ಹೋದೆಯಲ್ಲ, ಆಕೆ ನನಗಿಂತ ಸುಂದರವಾಗಿದಾಳಾ?
ರಾಜಾ : ಅಯ್ಯೋ ದಡ್ಡಿ. ನಾನು ಮೂರ್ಛೆ ಹೋದದ್ದು ಅವಳ ಸೌಂದರ್ಯಕ್ಕಲ್ಲ, ಅವಳ ಬಾಡಿಸ್ಪ್ರೇ ದುರ್ವಾಸನೆಗೆ...
೨೬) ರಾಜಾ💕ರಾಣಿ
ರಾಜಾ : ಇಂಗ್ಲಿಷ್ ಒಂದು ಕೋತಿಭಾಷೆ ಅಂತಾರಲ್ಲಾ ಹಾಗಾದರೆ ಇಂಗ್ಲೀಷ ಟೀಚರ್ ಏನು?
ರಾಣಿ : ಇಂಗ್ಲೀಷ ಕೋತಿಭಾಷೆಯಾದ್ಮೆಲೆ ಇಂಗ್ಲೀಷ ಟೀಚರ್ ಕೋತಿ ತಾನೆ?