ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

                  ಪ್ರತಿಯೊಬ್ಬರ ಸ್ಕೂಲ್ ಲೈಫ್ ತುಂಬಾ ಕೂಲಾಗಿರುತ್ತೆ. ಆದರೆ ಕಾಲೇಜ ಲೈಫ್ ಸ್ವಲ್ಪ ಜಾಸ್ತಿನೇ ಹಾಟಾಗಿರುತ್ತೆ. ಕಾಲೇಜಿನ ಪ್ರತಿಗೋಡೆಯ ಮೇಲೆ ಪ್ರೇಮಕಹಾನಿಗಳ ಗುರ್ತಿರುತ್ತೆ. ಈ ಪ್ರೇಮಕಹಾನಿಗಳ ಗ್ಯಾಪಲ್ಲಿ ಗುಪ್ತವಾಗಿ ಸಾಕಷ್ಟು ಕಿರಿಕಗಳು ಆಗಿರುತ್ತವೆ. ನನ್ನ ಕಾಲೇಜ್ ಲೈಫಿನಲ್ಲಾದ ಅಂಥಹ ಕೆಲವು ಕಿರಿಕಗಳು ಇಂತಿವೆ ;

೧) ಪ್ರತಿದಿನ ಕ್ಲಾಸರೂಮಿನ ಕೊನೆಯ ಬೆಂಚಿನ ಮೇಲೆ ಕೂಡಲು ಹರಸಾಹಸ ಮಾಡುವುದು. ಕೆಲವು ಸಲ ಲಾಸ್ಟ್ ಬೆಂಚಿಗಾಗಿ ಕಿತ್ತಾಡುವುದು. ಲಾಸ್ಟ್ ಬೆಂಚ್ ಮೇಲೆ ಯಾಕಿಷ್ಟು ಮೋಹವೆಂದರೆ ಲಾಸ್ಟ್ ಬೆಂಚ್ ಮೇಲೆ ಕುತಾಗ ಕ್ಲಾಸಲ್ಲಿನ ಪ್ರತಿಯೊಬ್ಬರನ್ನೂ ಸಲೀಸಾಗಿ ನೋಡಬಹುದು. ಕದ್ದುಮುಚ್ಚಿ ಹುಡುಗಿಯರನ್ನು ನೋಡುವ ಪ್ರಮೇಯ ಇರಲ್ಲ. ಎಲ್ಲರೂ ನೇರವಾಗಿ ಕಾಣಿಸುತ್ತಾರೆ.

೨) ಸುಲಭವಾಗಿ ಒಪ್ಪಿಕೊಳ್ಳದ ಹುಡುಗಿಗೆ ಬೇಕಂತಲೆ ಲವ್ ಲೆಟರ್ ಕೋಡೋದು. ನಮ್ಮ ಕ್ಲಾಸ್ ಹುಡುಗಿರಿಂದ ಬರೋ ಲವ್ ಪ್ರಪೋಸಲಗಳನ್ನು ರಿಜೇಕ್ಟ ಮಾಡಿ, ಅವರ ಹೊಟ್ಟೆ ಉರಿಸೋಕೆ ಬೇರೆ ಕ್ಲಾಸ್ ಹುಡುಗಿಯರ ಜೊತೆ ಸುತ್ತೋದು.

೩) ಟಾರ್ಚರ್ ಮಾಡೋ ಬೋರಿಂಗ ಲೆಕ್ಚರಗಳ ಕ್ಲಾಸಿಗೆ ಬೇಕಂತಲೆ ಬಂಕ್ ಹೊಡೆದು ಊರ ಸುತ್ತೋದು.

೪) ಹುಡುಗಿಯರನ್ನು ಇಂಪ್ರೆಸ್ ಮಾಡಲು ಬೇಜಾನ್ ಬಿಲ್ಡಪಗಳ ಜೊತೆಗೆ ಡ್ರಾಮಾಗಳ ಮೇಲೆ ಡ್ರಾಮಾಗಳನ್ನು ಮಾಡುವುದು. ಹುಡುಗಿಯರನ್ನು ಪಟಾಯಿಸಲು ಪರದಾಡುವುದು.

೫) ಮೊಬೈಲನ್ನು ಸೈಲೆಂಟ ಮೊಡನಲ್ಲಿಡಲು ಮರೆತು ಕ್ಲಾಸ್ ನಡೆದಾಗ ಡಿಸ್ಟರ್ಬ ಮಾಡುವುದು.

೬) ಲೆಕ್ಚರರ್ ಸೀರಿಯಸ್ಸಾಗಿ ಪಾಠ ಮಾಡೋವಾಗ ಅನಾವಶ್ಯಕವಾಗಿ ಮಾತಾಡೋದು ಮತ್ತೆ ಕಾರಣವಿಲ್ಲದೆ ನಗೋದು.

೭) ಪ್ರತಿದಿನ ಹುಡುಗಿಯರಿಗಾಗಿ ಬಸಸ್ಟಾಪಲ್ಲಿ ಗಂಟೆಗಟ್ಟಲೆ ಕಾಯೋದು. ಎಲ್ಲ ಹುಡುಗಿಯರು ಮನೆಗೋದ ಮೇಲೆನೆ ನಾವ್ಗಳು ನಮ್ಮನೆ ದಾರಿ ಹಿಡಿಯೋದು.

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

೮) ಕೆಲವು ಕ್ಲಾಸಗಳಿಗೆ ಉದ್ದೇಶಪೂರ್ವಕವಾಗಿಯೇ ತಡವಾಗಿ ಹೋಗೋದು. ರಾಜಕಾರಣಿಗಳ ಥರಾ ಲೇಟಾಗಿ ಹೋದರೆ ಹೆಚ್ಚಿಗೆ ಮರ್ಯಾದೆ ಸಿಗುತ್ತೆ ಅಂತಾ ಭಾವಿಸೋದು.

೯) ಕ್ಲಾಸನಲ್ಲಿ, ಕಾಲೇಜ್ನಲ್ಲಿ, ಬಸಸ್ಟಾಂಡಲ್ಲಿ ಕಾಮಿಡಿಗಳನ್ನು ಮಾಡಲು ಹೋಗಿ ದೊಡ್ಡ ಟ್ರಾಜಿಡಿಗಳನ್ನು ಮಾಡಿ ರಾದ್ಧಾಂತ ಸೃಷ್ಟಿಸುವುದು.

೧೦) ಪ್ರತಿಸಲ ಸೆಮಿನಾರಗಳಿಂದ ಎಸ್ಕೇಪ ಆಗುವುದು.

೧೧) ನಾಳೆ ಎಕ್ಸಾಮಿದೆ ಎಂದಾಗ ರಾತ್ರಿ ನಿದ್ದೆಗೆಟ್ಟು ಓದದೆ ರಾತ್ರಿಯೆಲ್ಲ ಲೆಕ್ಚರರ್ಸ್ಗೆ ಹಿಡಿಶಾಪ ಹಾಕೋದು. ಕ್ಯಾಲ್ಕುಲೇಟರ ಮೇಲೆ ಕಾಫಿಗಳನ್ನು ಬರೆದುಕೊಂಡು ಹೋಗೊದು.

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

೧೨) ಪ್ರತಿ ಶುಕ್ರವಾರ ಹೊಸ ಸಿನಿಮಾಗಾಗಿ ಕ್ಲಾಸ್ ಬಂಕ್ ಮಾಡಿ ಬೈಯ್ಯಿಸಿಕೊಳ್ಳುವುದು.

೧೩) ಕಾಟ ಕೊಡುವ ಕೆಲವು ಲೆಕ್ಚರಗಳ ಕ್ಲಾಸಿಗೆ ರೆಗುಲರ್ ಅಬಸೆಂಟಾಗಿರುವುದು. ತಪ್ಪದೇ ಕ್ಲಾಸಿಗೋಗೆ ಫ್ರೆಂಡಿಗೆ ಫ್ರಾಕ್ಸಿ ಹಾಕಲು ಒತ್ತಾಯಿಸುವುದು.

೧೪) ಪಾಕೆಟ ಮನಿ ಸಾಕಷ್ಟಿದ್ದರೂ ಅಟೆಂಡನ್ಸ ಶಾರ್ಟೆಜ ಆದಾಗ ಒದ್ದಾಡುವುದು.

೧೫) ಪ್ರಿನ್ಸಿಪಾಲರ ಛೇಂಬರಿನಲ್ಲಿ ಪದೇಪದೇ ಸ್ಪೆಷಲ್ ಕ್ಲಾಸಗಳನ್ನು ಕೇಳಿ ಮಂಗಳಾರುತಿಗಳನ್ನು ಮಾಡಿಸಿಕೊಳ್ಳುವುದು.

೧೬) ಥೇರಿ ಕ್ಲಾಸಿನಲ್ಲಿ ಅಟೆಂಡನ್ಸ ಶಾರ್ಟೆಜಾಗಿ ಪ್ರ್ಯಾಕ್ಟಿಕಲ್ ಕ್ಲಾಸಗಳಿಂದ ಸಾಕಷ್ಟು ಸಲ ಸಸ್ಪೆಂಡ ಆದರೂ ಬುದ್ಧಿ ಕಲಿಯದಿರುವುದು.

೧೭) ಕ್ಲಾಸಲ್ಲಿನ ಕೆಟ್ಟ ವರ್ತನೆಯಿಂದಾಗಿ ಇಂಟರನಲ್ ಮತ್ತು ಪ್ರ್ಯಾಕ್ಟಿಕಲ್ ಮಾರ್ಕ್ಸಗಳನ್ನು ಕಳೆದುಕೊಂಡು ಕೊರಗುವುದು.

೧೮) ಪ್ರತಿ ಸೆಮಿಸ್ಟರಗೂ ಮ್ಯಾಥೆಮ್ಯಾಟಿಕ್ಸನ್ನು ಇನಸ್ಟಾಲಮೆಂಟಲ್ಲಿ ಪಾಸ್ ಮಾಡುವುದು.

೧೯) ಅಸೈನಮೆಂಟ ಮತ್ತು ಜರ್ನಲಗಳನ್ನು ಸಬ್ಮೀಟ ಮಾಡಲು ಯಾವಾಗಲೂ ತಡ ಮಾಡುವುದು.

೨೦) ಚಿಕ್ಕಚಿಕ್ಕ ವಿಷಯಗಳಿಗೆಲ್ಲ ಲೆಕ್ಚರರ್ಸ ಜೊತೆ ದೊಡ್ಡ ವಾದವಿದಾದಗಳನ್ನು ಮಾಡುವುದು.

೨೧) ಸೀನಿಯರ್ಸ ಜೊತೆ ಬೇಡದ ಕಿರಿಕಗಳನ್ನು ಮಾಡಿಕೊಂಡು ಸುಮ್ಮನೆ  ಗ್ಯಾಂಗ ಕಟ್ಟಿಕೊಂಡು  ಹೊಡೆದಾಡುವುದು.

೨೨) ಗಟ್ಟಿ ಸ್ನೇಹದ ಬಂಧನಗಳು. ಸ್ನೇಹಿತರ  ಚಿಕ್ಕ ಚಿಕ್ಕ ಗ್ಯಾಂಗಗಳು.

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

೨೩) ಗರ್ಲಫ್ರೆಂಡಗಳನ್ನು ಗುಟ್ಟಾಗಿ ಪ್ರೀತಿಸುವುದು. ಎದೆಯಲ್ಲಿರುವ ಪ್ರೀತಿಯನ್ನು ಹೇಳೊಕ್ಕಾಗದೆ ಒದ್ದಾಡುವುದು.

೨೪) ಕ್ರಶಗಳನ್ನು ಕದ್ದುಮುಚ್ಚಿ ನೋಡುವುದು. ನಮ್ಮ ಕ್ರಶ್ ಜೊತೆ ಬೇರೆ ಯಾರಾದರೂ ಮಾತಾಡಿದರೆ ಅವರ ಜೊತೆ ಕಿತ್ತಾಡುವುದು.

೨೫) ಸ್ನೇಹಿತರ ಲವ್ ಪ್ರಾಬ್ಲಮಗಳಿಗೆ ಹೊಡೆದಾಡಿ ಗಾಯ ಮಾಡಿಕೊಳ್ಳುವುದು.

೨೬) ಮರೆಯಲಾಗದ ಬರ್ಥ ಡೇ ಟ್ರಿಟಗಳು.

೨೭) ಅನಫ್ರೇಂಡ್ಲಿ ಲೆಕ್ಚರಗಳು. ಎಲ್ಲರೂ ಅಲ್ಲ, ಕೆಲವರಷ್ಟೇ.

೨೮) ಕೆಲ ಲೆಕ್ಚರ್ಸಗೆ ತೋರಿಕೆಯ ಗೌರವ ಕೊಡುವುದು. "ಅತೀ ವಿನಯಂ ಚೋರ್ ಲಕ್ಷಣಂ" ಎಂಬುದನ್ನು ಪ್ರೂವ್ ಮಾಡಿ ತೋರಿಸುವುದು.

ಕಾಲೇಜ ಲೈಫಿನ 30 ಕಿರಿಕಗಳು - Funny Facts of My College Life

೨೯) ಕಾಲೇಜಿನಲ್ಲಿ ಹೀರೊ ಆಗಲು ಹೋಗಿ ವಿಲನ್ ಆಗುವುದು.

೩೦) ಸಿಗದ ಹುಡುಗಿಯ ಹಿಂದೆಯೇ ಎರಡ್ಮೂರು ವರ್ಷ ಅಲೆದು ಸುಸ್ತಾಗಿ ಕೊನೆಗೆ ಬಾರ ಪಾಲಾಗುವುದು.

    ಇತ್ಯಾದಿ, ಇತ್ಯಾದಿ, ಇತ್ಯಾದಿ ... ನನ್ನ ಕಾಲೇಜ ಲೈಫನಲ್ಲಿ ಕಂಡ ಕೆಲವನ್ನು ನಾನು ಶೇರ್ ಮಾಡಿರುವೆ. ಎಲ್ಲವನ್ನು ಒಂದೇ ಸಲ ಹೇಳಲು ಆಗಲ್ಲ. ನಿಮ್ಮ ಕಾಲೇಜ ಲೈಫಿನ ಕಿರಿಕಗಳನ್ನು ಕಮೆಂಟ ಮಾಡಿ.

Blogger ನಿಂದ ಸಾಮರ್ಥ್ಯಹೊಂದಿದೆ.