ರಾಜಾ : "ಪ್ರಿಯೆ ನೀನಿರದ ನಾನು
ತಾರೆಯಿರದ ಖಾಲಿಬಾನು...
ನನ್ನನ್ನು ಪ್ರೀತಿಸದಿದ್ದರೆ ನೀನು
ನಾ ಸೇರ್ಕೊತ್ತೀನಿ ತಾಲಿಬಾನು"
ರಾಣಿ : ಹೌದಾ! ನೀ ತಾಲಿಬಾನ್ ಸೇರ್ಕೊತ್ತೀಯಾ? ಹಂಗಾದ್ರೆ ನಾ ನಿನ್ನ ಕೊಲ್ಲೋಕೆ ಗ್ರೇಟ್ ಇಂಡಿಯನ್ ಆರ್ಮಿ ಸೇರ್ಕೊತೀನಿ...
೨) ರಾಜಾ💕ರಾಣಿ💕
ರಾಜಾ : ಹೃದಯದಿಂದ ಬರೋ ಮಾತಿಗೂ, ಮೆದುಳಿನಿಂದ ಬರೋ ಮಾತಿಗೂ ಏನು ವ್ಯತ್ಯಾಸ?
ರಾಣಿ : "ನೀನಿಲ್ಲದೆ ನಾ ಬದುಕಲ್ಲ ಸತ್ತೋಗತ್ತೀನಿ" ಅನ್ನೋದು ಹೃದಯದ ಮಾತು. ಆದ್ರೆ "ನೀನಿಲ್ಲದಿದ್ದರೆ ನಾನೇನು ಸಾಯಲ್ಲ, ನೀನಿಲ್ಲದೆ ನಾನು ಬದುಕಬಲ್ಲೆ" ಎಂಬುದು ಮೆದುಳಿನ ಮಾತು..
೩) ರಾಜಾ💕ರಾಣಿ💕
ರಾಣಿ : ಭೂತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲಗಳಿಗೆ ಉದಾಹರಣೆ ಕೊಡು.
ರಾಜಾ : ನಿನ್ನಂಥ ಸುಂದರಿ ಹಿಂದೆ ಹುಟ್ಟಿಲ್ಲ.
ನಿನ್ನಂಥ ಸುಂದರಿ ಈಗಲೂ ಹುಟ್ಟಿಲ್ಲ.
ನಿನ್ನಂಥ ಸುಂದರಿ ಮುಂದೇನು ಹುಟ್ಟಲ್ಲ.
೪) ರಾಜಾ💕ರಾಣಿ💕
ರಾಜಾ : ಮನೆ ಹೆಂಗಸರಿಗೆ ಜಗಳವಾಡಲು ದಿನಾ ಹೊಸಹೊಸ ಐಡಿಯಾಗಳನ್ನು ಯಾರು ಕೊಡುತ್ತಾರೆ?
ರಾಣಿ : ಸಾಯಂಕಾಲ ಸಿರಿಯಲ್ನಲ್ಲಿ ಬಳಕುತ್ತಾ ಬರುವ ಸಿರಿಯಲ್ ಸುಂದರಿಯರು...!
ರಾಜಾ : ಗಂಡಸರು ಹಾಳಾಗಲು ಬಾರು ಕಾರಣವಾದರೆ, ಹೆಂಗಸರು ಹಾಳಾಗಲು ಮನೆಹಾಳ ಧಾರಾವಾಹಿಗಳು ಕಾರಣ ಎಂದಗಾಯ್ತು...!!
೫) ರಾಜಾ💕ರಾಣಿ💕
ರಾಣಿ : ನನ್ನನ್ನು ಯಾಕೆ ನೀನು ಆವಾಗಾವಾಗ ಮೋಹಿನಿಗೆ ಹೋಲಿಸುತ್ತಿಯಾ?
ರಾಜಾ : ನೀನು ಕಣ್ಣಿಗೆ ಕಾಡಿಗೆ ಹಾಕಿಕೊಂಡು, ತುಟಿಗಳಿಗೆ ಕೆಂಪಾಗಿ ಲಿಪಸ್ಟಿಕ್ ಬಡಕೊಂಡು ನನ್ನನ್ನು ಭಯಂಕರವಾಗಿ ಹೆದರಿಸುವುದರಿಂದ ಮೋಹಿನಿಗೆ ಹೋಲಿಸುತ್ತೇನೆ.
೬) ರಾಜಾ💕ರಾಣಿ💕
ರಾಣಿ : ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿಯಾ?
ರಾಜಾ : ನೀ ನನ್ನ ದ್ವೇಷಿಸುವಷ್ಟು.
ರಾಣಿ : ನಾ ನಿನ್ನ ಎಷ್ಟೇ ದ್ವೇಷಿಸಿದ್ರೂ ಮತ್ತೆ ನನ್ನ ಹಿಂದೆ ಬರ್ತಿಯಲ್ಲ, ನಿನಗೆ ನಾಚ್ಕೆಯಾಗಲ್ವಾ?
ರಾಜಾ : ದ್ವೇಷವಿರುವಲ್ಲೆ ನಿಜವಾದ ಪ್ರೀತಿಯಿರುವಾಗ ನಾಚ್ಕೆ ಎಲ್ಲಿಂದ..?
೭) ರಾಜಾ💕ರಾಣಿ💕
ರಾಜಾ : ಯಾವುದೇ ಕಾಯಿಲೆಯಿಲ್ಲದಿದ್ದರೂ ನರಳಾಡುವ ರೋಗಿಗಳಾರು?
ರಾಣಿ : ಹುಡುಗಿಯರ ಮನದಲ್ಲಿ ಪ್ರೀತಿಯ ಬಲೆಯನ್ನು ಹೆಣೆಯಲು ವ್ಯರ್ಥ ಪ್ರಯತ್ನ ನಡೆಸುವ ನವಯುವಕರು.
೮) ರಾಜಾ💕ರಾಣಿ💕
ರಾಜಾ : ಪ್ರೀತಿಯಲ್ಲಿ ಹುಡುಗಿಯರು ಮಾಡಿರುವ ಮಹಾನ್ ಸಾಧನೆಯೇನು?
ರಾಣಿ : ಹುಡುಗರ ಸುಂದರವಾದ ಕೆನ್ನೆಯ ಮೇಲೆ ಗಡ್ಡದ ಗದ್ದೆಯನ್ನು ಯಾವುದೇ ನೀರು, ಗೊಬ್ಬರ ಹಾಕದೇ ವಿರಹದ ವಿಷದಿಂದ ಸಲೀಸಾಗಿ ಬೆಳೆಸಿರುವುದು.
೯) ರಾಜಾ💕ರಾಣಿ💕
ರಾಜಾ : ನಿನ್ನನ್ನು ಗೆಲ್ಲಲು ನಾನು ಪಣತೊಟ್ಟಿದ್ದೇನೆ.
ರಾಣಿ : ನಿನ್ನನ್ನು ಸುಲಭವಾಗಿ ಸೋಲಿಸಲು ನಾನು ಬಳೆ ತೊಟ್ಟಿದ್ದೇನೆ.
ರಾಜಾ : ನಾನು ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ ಗೊತ್ತಾ?
ರಾಣಿ : ಹಾಗಾದರೆ ನನ್ನನ್ನು ಮರೆತುಬಿಡು ನೋಡೋಣಾ..!
೧೦) ರಾಜಾ💕ರಾಣಿ💕
ರಾಣಿ : ಸಾವಕಾಶವಾಗಿ ಮಾತಾಡು. ಆ ಚಂದ್ರ ನಮ್ ಮಾತುಗಳನ್ನು ಕದ್ದು ಕೇಳಿಸಿಕೊಳ್ಳಬಹುದು.
ರಾಜಾ : ಈಡೀ ಜಗಕ್ಕೇನೆ ನಾನಿನ್ನ ಪ್ರೀತಿಸತ್ತೀನಿ ಅಂತಾ ಕೂಗಿಕೂಗಿ ಹೇಳಿದಿನಿ. ಅಂದ್ಮೇಲೆ ಈ ಚಂದ್ರನಿಗ್ಯಾಕೆ ಹೆದರಿಕೆ...??
೧೧) ರಾಜಾ💕ರಾಣಿ💕
ರಾಣಿ : ಜಗತ್ತಿನ ಬುದ್ಧಿವಂತರೆಲ್ಲ ತಡೆಹಿಡಿಯಲು ಪ್ರಯತ್ನಿಸಿದರೂ ರಾಜಾರೋಷವಾಗಿ ಹರಡುತ್ತಿರುವ ಕಾಯಿಲೆ ಯಾವುದು?
ರಾಜಾ : ನಾರಿಮಣಿಗಳ ಮೇಲಿನ ಹುಚ್ಚು ಪ್ರೀತಿ...
೧೨) ರಾಜಾ💕ರಾಣಿ💕
ರಾಜಾ : ಒಂದು ವೇಳೆ ನಾ ನಿನ್ನಿಂದ ದೂರಾದ್ರೆ ಏನ್ ಮಾಡ್ತೀಯಾ?
ರಾಣಿ : ತಲೆಹರಟೆ ತೊಲಗಿತು ಅಂತಾ ಆರಾಮಾಗಿರ್ತಿನಿ. ಆನಂತರ ಬೋರಾದರೆ ನೀ ಹೇಳಿದ ಹಳೇ ಜೋಕ್ಸಗಳನ್ನು ನೆನಪಿಸಿಕೊಂಡು ನಗುತ್ತೇನೆ...
೧೩) ರಾಜಾ💕ರಾಣಿ💕
ರಾಣಿ : ಒಂದು ವೇಳೆ ನಾ ನಿನಗೆ ಕೈ ಕೊಟ್ರೆ ಏನ ಮಾಡ್ತೀಯಾ?
ರಾಜಾ : ತುಂಬಾ ಸಿಂಪಲ್, ನಿನಗಿಂತ ಚೆನ್ನಾಗಿರೋ ಹುಡುಗಿ ಕೈಹಿಡಿತಿನಿ...
೧೪) ರಾಜಾ💕ರಾಣಿ💕
ರಾಣಿ : ನಾನು ನಿನಗೆ ಮೋಸ ಮಾಡಿದ್ರೆ ಏನ್ ಮಾಡ್ತೀಯಾ?
ರಾಜಾ : ಗಡ್ಡ ಬಿಟ್ಟು ದೇವದಾಸ ಅಂತು ಆಗಲ್ಲ. ಆದರೆ ನೀವು ಸ್ತ್ರೀ ಸಂಘಗಳನ್ನು ಕಟ್ಟಿಕೊಂಡು ನಮ್ಮ ವಿರುದ್ಧ ಹೋರಾಡುವಂತೆ, ನಾನು ಒಂದು ದೊಡ್ಡ ವಿರಹಿಗಳ ಸಂಘ ಕಟ್ಟಿಕೊಂಡು ನಿನ್ನ ವಿರುದ್ಧ ಹೋರಾಟ ಮಾಡ್ತೀನಿ ..
೧೫) ರಾಜಾ💕ರಾಣಿ💕
ರಾಜಾ : ನೀನು ಅಪ್ಸರೆ ಥರಾ ಕಾಣಿಸ್ತಿಯಾ. ಆದರೆ ನೀನು ಅಪ್ಸರೆಯಲ್ಲ.
ರಾಣಿ : ಹೋಗೋ ನಾ ನಿಂಜೊತೆ ಮಾತಾಡಲ್ಲ..
ರಾಜಾ : ನಾನು ತಮಾಷೆಗೆ ಅಂತಾ ಹೇಳಿದೆ ಕಣೇ ..
ರಾಣಿ : ಆದ್ರೆ ನಾನು ನಿಜವಾಗಿ ಹೇಳಿದೆ...!!
೧೬) ರಾಜಾ💕ರಾಣಿ💕
ರಾಜಾ : ಈ ಜಗದಲ್ಲಿ ಅತೀ ಹೆಚ್ಚು ದು:ಖ ಮತ್ತು ಭಯ ಅನುಭವಿಸುವವರು ಯಾರು?
ರಾಣಿ : ಮದುವೆಯಾದ ಗಂಡಸರು ಮತ್ತು ಪ್ರೀತಿಯಲ್ಲಿ ಬಿದ್ದ ನವಯುವಕರು..!!
೧೭) ರಾಜಾ💕ರಾಣಿ💕
ರಾಜಾ : ನಾನು ನಿನ್ನ ಮದುವೆಯಾಗಲ್ಲ ಅಂದ್ರೆ ಹೇಗೆ ನನ್ನ ಒಪ್ಪಿಸತ್ತೀಯಾ?
ರಾಣಿ : ವಿಸ್ಕಿ ಬಾಟಲಲ್ಲಿ ಪೆಪ್ಸಿ ಹಾಕಿ, ನಿನಗೆ ಚೆನ್ನಾಗಿ ಬೈಯ್ದು ನನ್ನ ಮದ್ವೆಯಾಗದಿದ್ರೆ ಹೀಗೆ ಕುಡಿದು ಕುಡಿದು ಸತ್ತೋಗತ್ತೀನಿ ಅಂತಾ ಬ್ಲ್ಯಾಕ್ಮೇಲ್ ಮಾಡಿ ಒಪ್ಪಿಸತ್ತೀನಿ...!!
೧೮) ರಾಜಾ💕ರಾಣಿ💕
ಒಂದಿನ ರಾಣಿ ಜಾತ್ರೆಗೆ ಹೋಗುವುದಕ್ಕಾಗಿ ಪ್ಯಾಂಟು, ಶರ್ಟು,ಚೂಡಿದಾರಗಳ ಬದಲಾಗಿ ಲಂಗ ದಾವಣಿ ಧರಿಸಿ ಸ್ವಲ್ಪ ಜಾಸ್ತಿ ಅಲಂಕಾರ ಮಾಡಿಕೊಂಡಿದ್ದಳು. ಆಗ ರಾಜ ಬಂದಾಗ,,
ರಾಣಿ : ಈ ಡ್ರೇಸ್ಸಲ್ಲಿ ನಾನು ಹೇಗೆ ಕಾಣಿಸತ್ತೀದಿನಿ?
ರಾಜಾ : ಜಾತ್ರೇಲಿ ಹೆರಪಿನ್ನಾ, ಪುಗ್ಗಾ, ರಬ್ಬರ್ ಬೌಗಳನ್ನು ಮಾರುವ ದಾಸರ ಹುಡುಗಿಯಂತೆ..!!
೧೯) ರಾಜಾ💕ರಾಣಿ💕
ರಾಣಿ : ಹುಡುಗಿಯರು ಮನಸ್ಸು ಮಾಡಿದರೆ ಒಂದೇ ಒಂದು ನಿಮಿಷದಲ್ಲಿ ಹುಡುಗರನ್ನು ದೇವದಾಸನಂತೆ ಹುಚ್ಚರನ್ನಾಗಿ ಮಾಡಬಹುದು.
ರಾಜಾ : ಅದು ಹೇಗೆ ಮಹಾರಾಣಿಯವರೇ?
ರಾಣಿ : ಜಸ್ಟ್ ಒಂದೇ ಒಂದು ಸ್ಮೈಲ್ ಮತ್ತು ಮಿಸ್ಡಕಾಲ್ ಸಾಕು...
೨೦) ರಾಜಾ💕ರಾಣಿ💕
ರಾಜಾ : ಹೃದಯ ಮಿಡಿಯುತ್ತಿದ್ದರೆ ...?
ರಾಣಿ : ಲಬ್ ಡಬ್, ಲಬ್, ಡಬ್...
ರಾಜಾ : ಹೃದಯ ಮಿಡಿಯದಿದ್ದರೇ...?
ರಾಣಿ : ಬರೀ ಲಬೋ, ಲಬೋ....
೨೧) ರಾಜಾ💕ರಾಣಿ💕
ಒಂದಿನ ಗರ್ಜಿಸುವ ಸಮುದ್ರದ ಪಕ್ಕದಲ್ಲಿ ..
ರಾಣಿ : ಯಾಕೆ ಈ ಸಮುದ್ರದಲ್ಲಿ ಭಯಂಕರ ಅಲೆಗಳು ಉಂಟಾಗುತ್ತವೆ?
ರಾಜಾ : ಸಮುದ್ರರಾಜ ತನ್ನ ಪ್ರೇಯಸಿ ಸಮುದ್ರರಾಣಿನಾ ತುಂಬಾನೇ ಪ್ರೀತಿಸುತ್ತಿದ್ದನು. ಆದ್ರೆ ಆಕೆ ಅವನಿಗೆ ಮೋಸ ಮಾಡಿ ಮೇಘರಾಜನೊಂದಿಗೆ ಓಡಿಹೋದಳು. ಆವಾಗಿನಿಂದ ಸಮುದ್ರರಾಜ ತನ್ನ ಪ್ರೇಯಸಿಯನ್ನು ಹುಡುಕಾಡಲು ಈ ರೀತಿ ಭಯಂಕರ ಅಲೆಗಳ ರೂಪದಲ್ಲಿ ಸಂಚರಿಸುತ್ತಾನೆ..
೨೨) ರಾಜಾ💕ರಾಣಿ💕
ರಾಣಿ : ವಿರಹಿಗಳ ಸಮಾಧಾನ ಸೂತ್ರವೇನು?
ರಾಜಾ : ಪ್ರೀತಿ ಸಾಯಲ್ಲಾ ನಿಜ
ಪ್ರೀತ್ಸೋಳ ಸಾಯಲ್ವಾ?
ಪ್ರೀತ್ಸೋಳ್ ಸತ್ತ ಮೇಲೆ
ಹೊಸ ಹುಡ್ಗೀ ಸಿಗಲ್ವಾ?
ನಾನಿಲ್ಲದೆ ನೀ ಇನ್ನೂ ಬದುಕಿದ್ದಿಯಾ ಅಂದ್ಮೇಲೆ, ನೀನಿಲ್ಲದೆ ನಾನು ಬದುಕಲ್ವಾ?
೨೩) ರಾಜಾ💕ರಾಣಿ💕
ರಾಜಾ : ಪ್ರೀತಿಸುವುದು ತಪ್ಪಾ?
ರಾಣಿ : ಪ್ರೀತಿಸುವುದು ತಪ್ಪಲ್ಲ. ಆದರೆ ಮನಸ್ಸಿಲ್ಲದ ಹುಡುಗಿಯನ್ನು ಪ್ರೀತಿಸಿ ಜೀವನವಿಡೀ ಕೊರಗುವುದು ತಪ್ಪು. ಸಿಗದವರ ನೆನಪಲ್ಲಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳೊದು ತಪ್ಪು.
೨೪) ರಾಜಾ💕ರಾಣಿ💕
ರಾಜಾ : ನೀವು ಹುಡ್ಗೀರು ಮದ್ವೆಗಿಂತ ಮುಂಚೆಯೂ, ಮದ್ವೆಯಾದ ನಂತರವೂ ಹಲ್ಲಿ, ಇಲಿ, ಜೆರಲೆಗಳಿಗೆಲ್ಲ ಸಿಕ್ಕಾಪಟ್ಟೆ ಹೆದರುತ್ತೀರಿ. ಆದ್ರೆ ನಿಮ್ಮ ಗಂಡಂದಿರಿಗೆ ಮಾತ್ರ ಹೆದರಲ್ಲವಲ್ಲಾ ಯಾಕೆ?
ರಾಣಿ : ಯಾಕೆಂದರೆ ಅವುಗಳನ್ನು ನೋಡಿದ್ರೆ ಭಯವಾಗುತ್ತೆ. ಆದ್ರೆ ಗಂಡಂದಿರನ್ನು ನೋಡಿ ಪಾಪ ಅನ್ನಿಸಿ ನಗು ಬರುತ್ತೆ. ಅಷ್ಟೇ ಅಲ್ಲ ನೀವು ಒಂಥರಾ ಬೊಗಳುವ ನಾಯಿಯಂತೆ. ನೀವು ಕಚ್ಚಲ್ಲ ಅಂತಾ ನಮಗೆ ಚೆನ್ನಾಗಿ ಗೊತ್ತು. ಒಂದು ವೇಳೆ ಕಚ್ಚೋಕೆ ಮುಂದಾದ್ರೆ 'ಬೆಡ್ರೂಮ್ ಬ್ರಹ್ಮಾಸ್ತ್ರ'ದಿಂದ ನಿಮ್ಮನ್ನು ಬಂಧಿಸಿ ಕಂಟ್ರೋಲ್ ಮಾಡೋದ್ರಲ್ಲಿ ನಾವು ಮೊದಲಿನಿಂದಲೂ ಎಕ್ಸಪರ್ಟ ತಾನೇ ...
೨೫) ರಾಜಾ💕ರಾಣಿ💕
ರಾಜಾ : ಹುಡುಗಿಯರು ಪ್ರೀತಿಸಿ ಕೈಕೊಟ್ಟು ಹೋಗೊವಾಗ ಹೇಳೊ ಒಂದು ಸತ್ಯ ಯಾವುದು?
ರಾಣಿ : "ನಿನಗೆ ನನಗಿಂತ ಚೆನ್ನಾಗಿರೋ ಹುಡುಗಿ ಸಿಗ್ತಾಳೆ"
೨೬) ರಾಜಾ💕ರಾಣಿ💕
ರಾಜಾ : ನೀವು ಈಗ ಯಾವ ಕಡೆಗೆ ಹೊರಟ್ಟಿದ್ದೀರಾ?
ಆಟೋಚಾಲಕ : ಬಸಸ್ಟ್ಯಾಂಡ್ ಕಡೆಗೆ ಸರ್.
ರಾಜಾ : ಹಾಗಾದರೆ ನಮ್ಮಿಬ್ಬರಿಗೆ ಡ್ರಾಪ್ ಕೊಡ್ತೀರಾ?
ಆಟೋಚಾಲಕ : ಸರ್ ನಿಮಗೆ ತಲೆ ಕೆಟ್ಟಿದೆಯಾ? ಆಟೋದವರತ್ರಾನೆ ಡ್ರಾಪ್ ಕೇಳ್ತಿರಲ್ಲ..?
ರಾಣಿ : ಅದರಲ್ಲಿ ತಪ್ಪೇನಿದೆ? ನೀವು ಖಾಲಿ ಬಸಸ್ಟ್ಯಾಂಡಗೆ ಹೋದ್ರೂ, ನಮ್ಮನ್ನ ಕರಕೊಂಡು ಹೋದ್ರೂ ಅಷ್ಟೇ ಪೆಟ್ರೋಲ್ ಖರ್ಚಾಗುತ್ತೆ ತಾನೇ? ಹೀಗಿರುವಾಗ ನಮಗೆ ಡ್ರಾಪ್ ಕೊಟ್ರೆ ನಿನಗೇನು ನಷ್ಟ ಆಗುತ್ತೆ?
ಆಟೋಚಾಲಕ : ಬೆಳಬೆಳ್ಗೆ ಒಳ್ಳೆ ತಲೆಹರಟೆಗಳ ಸಹವಾಸವಾಯ್ತು.