ಒಂದಿನ ರಾಣಿ ಕನ್ನಡಿ ಮುಂದೆ ನಿಂತು ಮುಖದ ಮೇಲಿನ ಮೊಡವೆಗಳನ್ನು ಕೀಳುತ್ತಾ ವ್ಯಥೆಪಡುತ್ತಿದ್ದಳು. ಆಗ
ಕನ್ನಡಿ : ಯಾಕೆ ಆ ಮೊಡವೆಗಳನ್ನು ಕೀಳುತ್ತಾ ಸುಮ್ನೆ ವ್ಯಥೆ ಪಡ್ತಿದೀಯಾ?
ರಾಣಿ : ಈ ಮೊಡವೆಗಳು ನನ್ನ ಕೋಮಲವಾದ ಮುಖದ ಸೌಂದರ್ಯವನ್ನು ಕೆಡಿಸುತ್ತಿವೆ.
ಕನ್ನಡಿ : ಅವು ನಿನ್ನ ಮುಖದ ಸೌಂದರ್ಯವನ್ನು ಕೆಡಿಸುತ್ತಿಲ್ಲ. ಅವು ನಿನ್ನ ಚಂದಿರನಂಥ ಮುಖಕ್ಕೆ ಸ್ವಾಭಾವಿಕ ದೃಷ್ಟಿಬೊಟ್ಟುಗಳಿದ್ದಂತೆ. ನಿನಗೆ "ನಾನೇ ವಿಶ್ವಸುಂದರಿ" ಎಂಬ ಆಲೋಚನೆ ತಲೆ ಸೇರಿದಾಗ ಈ ಮೊಡವೆಗಳೇ ನಿನ್ನ ಅಹಂಕಾರವನ್ನು ಮುರಿಯುತ್ತವೆ. ಆದರೆ ಈ ಮೊಡವೆಗಳು ನಿನ್ನ ಸೌಂದರ್ಯವನ್ನು ಕುಗ್ಗಿಸಲ್ಲ ಕಾಳಜಿ ಮಾಡಬೇಡ...
ರಾಣಿ : ನಾನು ಹೇಗಿದೀನೊ ಹಾಗೆ ನೀ ನನ್ನ ತೋರಿಸತ್ತಿಯಾ. ನಾ ಅಳೋವಾಗ ನೀ ನನ್ನ ನೋಡಿ ನಗಲ್ಲ, ನೀನು ನಂಜೊತೆ ಅಳ್ತೀಯಾ ಅದಕ್ಕೆ ನಿನ್ನ ಮಾತನ್ನು ನಾ ಕೇಳ್ತಿನಿ. ಈ ಮೊಡವೆಗಳನ್ನು ಕೀಳಲ್ಲ...
ನಂತರ ರಾಣಿ ತನ್ನ ಮುಖಕ್ಕೆ ಪೌಡರ ಹಚ್ಚಿಕೊಳ್ಳುವುದನ್ನು ನೋಡಿ ಕನ್ನಡಿ ನಗಲು ಶುರುಮಾಡಿತು.
ರಾಣಿ : ಯಾಕ ನಗ್ತೀದಿಯಾ? ನಾನ್ ಪೌಡರ ಹಚಕೊಂಡ್ರೆ ನಿಂಗೇನ ಕಷ್ಟ?
ಕನ್ನಡಿ : ನಂಗೇನ್ ಕಷ್ಟ ಇಲ್ಲ. ನೀನು ಬೆಳ್ಳಗೆ ಬೆಳಂದಿಗಳಷ್ಟು ಸುಂದರವಾಗಿದ್ದರೂ ಮತ್ತೆ ಪೌಡರ್ ಹಚ್ಚಿಕೊಳ್ತಿದಿಯಲ್ಲ, ನಿನ್ನ ನೋಡಿ "ಬಿಳಿಗೋಡೆಗೆ ಸುಣ್ಣ ಬಳಿಯುವ ಮೂರ್ಖತನ" ಅಂತಾ ಅನ್ನಿಸಿತು. ಅದ್ಕೆ ನಗ್ತಿದೀನಿ..
ರಾಣಿ : ನಗು ನಗು... ಆದರೆ ನೀ ತುಂಬಾ ಮಾತಾಡ್ತಿದೀಯಾ, ಮಾತು ಮಿತಿ ಮೀರಿದರೆ ನಿನ್ನ ಒಡದಾಕ ಬೀಡ್ತೀನಿ ಹುಷಾರ್...
ಕನ್ನಡಿ : Sorry ಕಣೇ... ಹಾಗೇನಾದರೂ ಮಾಡಿಯಾ ಮತ್ತೆ. ನನಗೆ ಪ್ರತಿ ಜನ್ಮದಲ್ಲೂ ಹುಡುಗಿಯರ ಮುದ್ದಿನ ಕನ್ನಡಿಯಾಗೇ ಇರಬೇಕು ಎಂಬ ಕಳ್ಳ ಆಸೆ....