50 ಪ್ರೇಮ ಸಂದೇಶಗಳು - Love Messages in Kannada - ಪ್ರೀತಿಯ ಸಂದೇಶಗಳು - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

50 ಪ್ರೇಮ ಸಂದೇಶಗಳು - Love Messages in Kannada - ಪ್ರೀತಿಯ ಸಂದೇಶಗಳು

Director Satishkumar

೧) ನಿನ್ನ ನಗುವಿನ ಸದ್ದಿಗೆ ನನ್ನ ಹೃದಯ ಒಂದು ಸೆಕೆಂಡ ನಿಲ್ಲಬಹುದು.

೨) ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ.

೩) ನನ್ನ ಕಣ್ಣುಗಳು ಮಾತಾಡುವಾಗ ನಿನ್ನ ತುಟಿಗಳು ಸುಮ್ಮನಿರಬೇಕು. ನೀನು ನನ್ನ ಜೊತೆಗಿದ್ದಾಗ ಈ ಜಗದ ಕಣ್ಣು ಮುಚ್ಚಿರಬೇಕು.

೪) ಕಳ್ಳನೋಟವೊಂದು ಸಾಕು ಹೃದಯ ಕಾಣೆಯಾಗಲು. ನಿನ್ನ ಹುಸಿನಗುವೊಂದು ಬೇಕು ಪ್ರೀತಿ ಜನ್ಮತಾಳಲು.

೫) 1 ದೊಡ್ಡ ವಿಶ್ವದ 8 ಗ್ರಹಗಳಲ್ಲಿನ 195 ದೇಶಗಳಲ್ಲಿ, 7 ಸಾಗರದ ಕಡಲ ತೀರಗಳಲ್ಲಿ, 760 ಕೋಟಿ ಜನರಲ್ಲಿ ಇಷ್ಟವಾದವಳು ನೀನೊಬ್ಬಳೇ. ನನ್ನ ಹೃದಯಕ್ಕೆ ತೀರಾ ಹತ್ತಿರವಾದವಳು ನೀನೋಬ್ಬಳೇ.


೬) ರುಚಿ ನೀಡೋ ಉಪ್ಪಿಗೆ ಮುಪ್ಪಿಲ್ಲ. ಕಣ್ಣು ಕಾಣೋ ಕನಸುಗಳಿಗೆ ಕಂತುಗಳಿಲ್ಲ. ನಿನ್ನನ್ನು  ಹುಚ್ಚನಂತೆ ಪ್ರೀತ್ಸೋ ಈ ಹೃದಯಕ್ಕೆ ಆಯಾಸ ಅಂದ್ರೇನಂಥ ಗೊತ್ತಿಲ್ಲ.

೭) ನಿನಗೆ ಅಳಬೇಕೆನಿಸುವ ಮುಂಚೆಯೇ ನನ್ನ ಕಣ್ಣಲ್ಲಿ ಆಗ್ಲೇ ಕಣ್ಣೀರು ಬಂದಿರುತ್ತೆ. ನಿನಗೆ ನೋವಾಗುವ ಮುಂಚೆಯೇ ನನ್ನೆದೆ ಆ ನೋವನ್ನು ಅನುಭವಿಸಿರುತ್ತದೆ.

೮) ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು.

೯) ನನ್ನೆದೆ ಮಿಡಿತದಲ್ಲಾಗುವ ಏರುಪೇರುಗಳನ್ನು ನೀನು ಮಾತ್ರ ಅಳೆಯಬಲ್ಲೆ...

೧೦) ನಿನ್ನ ಹಾರಾಡುವ ಕೂದಲು, ಕೆಣಕುವ ಕಣ್ಣೋಟ, ಕರೆಯುವ ಕಳ್ಳ ನಗು, ಕಾಣದ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಇಷ್ಟು ಸಾಕು ನನ್ನ ನಿದ್ದೆ ನೆಗೆದು ಬೀಳಲು.


೧೧) ನಿನ್ನ ಪ್ರೀತಿಯಲ್ಲಿ ನಾ ಪಂಜರದ ಪಕ್ಷಿಯೇ ಆಗಿರಬಹುದು. ಆದರೆ ನನಗೆ ಯಾವತ್ತೂ ಸ್ವಾತಂತ್ರ್ಯ ಬೇಕು ಅಂತ ಅನಿಸಿಲ್ಲ. ಮುಂದೆ ಅನಿಸೋದು ಇಲ್ಲ.

೧೨) ನೀನು ನನಗೆ ಸಿಕ್ಕ ಮೇಲೆ ಹಾರೋ ಹಕ್ಕಿಗೆ ಮತ್ತೆರಡು ರೆಕ್ಕೆ ಪುಕ್ಕ ಬಂದಂತಾಗಿದೆ.

೧೩) ನೀನು ನಾಚೋ ರೀತಿಗೆ ಹಿಮಾಲಯ ನಾಚಿ ತಲೆ ತಗ್ಗಿಸುತ್ತೆ ಅಂದ್ಮೇಲೆ ನನ್ನ ಹೃದಯ ಕಾಣೆಯಾಗದೆ ಇರುತ್ತಾ...?

೧೪) ನನ್ನ ಹೃದಯದ ವೀಣೆಗೆ, ನಿನ್ನ ಒಲವು ತಂತಿ ತಾನೇ?

೧೫) ಚಂದ್ರನ ನಗು,
ನವಿಲಿನ ವಯ್ಯಾರ,
ಗಿಳಿಗಳ ಮಾತು,
ನದಿಗಳ ಚಂಚಲತೆ,
ಹೂಗಳ ಕೋಮಲತೆ,
ಮೋಹಿನಿಯ ಮಾದಕತೆಗಳೆಲ್ಲ ಸೇರಿದಾಗ ನೀ ಸೃಷ್ಟಿಯಾಗಿದ್ದೀಯಾ..


೧೬) ಯಾಕೇ ನಿನ್ನ ಈ ಮೌನ?
ಹೇಳುವೆಯಾ ಒಮ್ಮೆ ಕಾರಣ?

೧೭) ನನ್ನೆದೆಯ ವನದಲ್ಲಿ ಗರಿಗೆದರಿ ನಲಿದಾಡುವ ನವಿಲು ನೀನು.

೧೮) ನಿನ್ನ ನಗುವಲ್ಲಿ ಹೂ ಅರಳಿ ನಗುತ್ತಿದೆ. ನೋಡ್ತಾ ನಿಂತರೆ ನಂದೇ ದೃಷ್ಟಿ ಆಗೋ ಹಂಗಿದೆ.

೧೯) ನಿನ್ನ ಮುಗುಳ್ನಗೆಯ ಕನ್ನಡಿ,
ನನ್ನ ಪ್ರೀತಿಗೆ ನೀ ಬರೆದ ಮುನ್ನುಡಿ...

೨೦) ನೀನೊಂದು ಸಲ ಸುಮ್ಮನೆ ನಕ್ಕಿ ಬಿಡು. ಈ ಭೂಮಿಯಲ್ಲಿನ ನೋವೆಲ್ಲ ಮಾಯವಾಗಲಿ.


೨೧) ನಿನ್ನ ಕಣ್ಣುಗಳ ಸೌಂದರ್ಯವನ್ನು ನಿನ್ನ ಕಣ್ಣಲ್ಲಿರುವ ಕೋಪ ಕೊಲ್ಲುತ್ತಿದೆ. ನಿನ್ನ ಕೋಪ ನನ್ನ ಪ್ರೀತಿಯನ್ನು ಕೊಲ್ಲದಿದ್ದರೆ ಸಾಕು ನನಗೆ.

೨೨) ನನ್ನ ಕಣ್ಣಲ್ಲಿ ಸೂರ್ಯ ಮುಳುಗಿದಾಗ, ನಿನ್ನ ಕೆನ್ನೆಯಲ್ಲಿ ಚಂದ್ರ ಉದಯಿಸುತ್ತಾನೆ.

೨೩) ನಿನ್ನ ನಗುವನ್ನು ನೋಡಿ ನಾ ನನ್ನ ಅಳುವನ್ನು ಮರೆತಿರುವೆ. ನೀನು ಸದಾ ನಗುತಿರು.

೨೪) ನೀ ನಿನ್ನೆ ರಾತ್ರಿ ನನ್ನ ಕನಸ್ಸಲ್ಲಿ ಬಂದಿದ್ದೆ. ಅದಕ್ಕೆ ಈ ಮುಂಜಾನೆಯಲ್ಲಿ ನಾನು ನಿನ್ನ ಮನಸ್ಸಿನ ಕದ ತಟ್ಟುತ್ತಿರುವೆ.

೨೫) ನಿನ್ನ ಕನಸುಗಳ ಕಾಟಕ್ಕೆ ನನ್ನ ನಿದ್ರೆಗಳು ದೇಶಾಂತರ ಹಾರಿ ಹೋಗಿವೆ. ನಿನ್ನ ನಿದ್ರೆಗಳನ್ನು ನನಗೆ ಸಾಲವಾಗಿ ಕೊಡುವೆಯಾ?


೨೬) ಕಾದಿರುವೆ ನಿನ್ನ ದಾರಿಗೆ,
ತಪ್ಪದೆ ಬಾ ನನ್ನೆದೆ ಗೂಡಿಗೆ..
ನನ್ನೆದೆ ಗೂಡು ನಿನಗಾಗಿ ಕೆತ್ತಿದ ಗುಡಿಯಿದ್ದಂತೆ.

೨೭) ಸೂರ್ಯನ ಕಾಂತಿಯನ್ನು ಎದುರಿಸಿ ನಿಂತೆ. ಆದ್ರೆ ನಿನ್ನ ಕಣ್ಣ ಕಾಂತಿಗೆ ಸುಲಭವಾಗಿ ಸೋತು ಶರಣಾದೆ.

೨೮) ನಿನ್ನ ಮನಸ್ಸು ನಿನಗಿಂತ ಸುಂದರವಾಗಿದೆ.

೨೯) ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೋತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು.

೩೦) ಕೋಟ್ಯಾಂತರ ರೂಪಕಗಳು ಸೇರಿದರೂ ವರ್ಣಿಸಲಾಗದ ಅಪರೂಪದ ರೂಪ ನಿನ್ನದು.


೩೧)  ನಿನ್ನ ನೋಡಿದಾಗ ಮಾತು ಬಂದರೂ ಮಾತನಾಡಬಾರದು ಅಂತಾ ಅನಿಸುತ್ತೆ. ನೀನೇ ಏನಾದರೂ ಮಾತಾಡು.. 

೩೨) ನನ್ನ ಮನೆಯೂ ದೊಡ್ಡದಾಗಿದೆ, ಮನಸ್ಸು ದೊಡ್ಡದಾಗಿದೆ. ನೀನಿಲ್ಲದೆ ನನ್ನ ಮನೆ, ಮನಸ್ಸು ಎರಡು ದೇವತೆಯಿರದ ಗುಡಿಯಂತೆ ಅಪೂರ್ಣ.

೩೩) ಓಜೋನ್ ಪದರು ಸುಡೋ ಸೂರ್ಯನಿಂದ ಭೂಮಿಯನ್ನು ನೆರಳಾಗಿ ಕಾಯೋವಂತೆ ನಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತೀನಿ.

೩೪) ನನಗೆ ನಿನ್ನ ಮೇಲೆ ಹೇಳಿಕೊಳ್ಳಲಾಗದಷ್ಟು ಪ್ರೀತಿಯಿದೆ. ಆದರೆ ನಿನ್ನನ್ನು ನೇರವಾಗಿ ಮಾತನಾಡಿಸೋಕೆ ಬೆಟ್ಟದಷ್ಟು ಭೀತಿ ಅಡ್ಡ ಬರುತ್ತಿದೆ.

೩೫) ನೀನು ದಿನಾ ನನ್ನ ಕನಸ್ಸಲ್ಲಿ ಬಂದೇ ಬರ್ತೀಯಾ ಎಂಬ ನಂಬಿಕೆಯ ಮೇಲೆ ನಾ ದಿನಾ ಬೇಗನೆ ಮಲಗಿಕೊಳ್ತೀನಿ. ಕನಸ್ಸಲ್ಲಿ ನಿನಗಾಗಿ ಕಾಯ್ತಾ ಇರ್ತೀನಿ. ಬೇಗ ಬಾ ಗೆಳತಿ, GOOD NIGHT.


೩೬) ನಿನ್ನ ಕೊಲ್ಲುವ ಕಣ್ಣೋಟ, ಕೈಬೀಸಿ ಕರೆಯುವ ಕೈಬಳೆ, ಕುಣಿಯುವ ಕಾಲ್ಗೆಜ್ಜೆ, ಮುನಿಯುವ ಮೂಗುತಿ, ತಲೆ ಕೆಡಿಸುವ ಕೇಶರಾಶಿ, ಓಲೈಸುವ ಕಿವಿಯೋಲೆ, ಮೈಮರೆಸುವ ಮಾದಕ ಮೈಮಾಟಗಳೆಲ್ಲವು ನನ್ನ ನಿದ್ದೆಯನ್ನು ಕದ್ದಿವೆ.

೩೭) ಹೂವು ಮತ್ತು ಮುಳ್ಳು ಯಾವಾಗಲೂ ಜೊತೆಯಾಗಿಯೇ ಇದ್ರೇ ಚೆಂದ ಮತ್ತು ಕ್ಷೇಮ. ನೀನು ಹೂವಾದರೆ, ನಾ ಮುಳ್ಳಾಗುವೆ. ನಿನ್ನ ಕಾಯುವೆ.

೩೮) ನನ್ನ ಮನಸ್ಸಿಗೆ ಬುದ್ಧಿ ಹೇಳೊ ಮನುಜೆ ಎಲ್ಲೌಳೆ? ಕನಸಿಗೆ ಕಾಡಿಗೆ ಹಚ್ಚೋ ಕನ್ಯೆ ಯಾವಾಗ ಬರ್ತಾಳೆ? ಎಂದು ಕಾಯ್ತಿದಾಗ ಸರಿಯಾಗಿ ನೀ ನನ್ನ ಕಣ್ಮುಂದೆ ಬಂದು ನನ್ನ ಮನಸ್ಸಲ್ಲಿ ಪ್ರೀತಿ ಮನೆ ಕಟ್ಟಿದೆ.

೩೯) ನೀನು ರಾತ್ರಿ ಜೋಗುಳ ಹಾಡಿ ಮಲಗಿಸೋದೇನ ಬೇಡ. ಬೆಳಿಗ್ಗೆ ಸುಪ್ರಭಾತ ಹಾಡಿ ಬೇಗನೆ ಎಬ್ಬಿಸು ಸಾಕು.

೪೦) ನಿನ್ನಂದವನ್ನು ವರ್ಣಿಸುತ್ತಾ ಹಾಗೇ ಕವಿಯಾಗಿರುವೆ. ಎಲ್ಲಿಯೂ ಕೆಲ್ಸ ಸಿಗ್ತಿಲ್ಲ. ನೀನೇ ಒಂದು ಕೆಲ್ಸ ಕೊಡಿಸು. ನಿನ್ನ ಗಂಡನಾಗಿ ಸಂಬಳವಿಲ್ಲದೆ ಎಲ್ಲ ಕೆಲಸಗಳನ್ನು ಮಾಡಲು ನಾನು ತುದಿಗಾಲಲ್ಲಿ ನಿಂತಿದ್ದೇನೆ.


೪೧) ನಾನು ನಿನ್ನೆದೆಯನ್ನು ನಿನ್ನ ಅನುಮತಿಯಿಲ್ಲದೆ ಲೂಟಿ ಮಾಡಿದ ತಪ್ಪಿಗಾಗಿ ನೀ ನನ್ನ ಮದುವೆಯಾಗಿ ಜೀವನಪೂರ್ತಿ ನನ್ನ ಮೇಲೆ ಪ್ರೀತಿಯಿಂದ ಲಾಠಿಚಾರ್ಜ ಮಾಡು.

೪೨) ನಿನ್ನ ಕನಸುಗಳ ಸಾಮ್ರಾಜ್ಯಕ್ಕೆ ನಾನು ಸಾಮ್ರಾಟನಾಗಲೇ?

೪೩) ಹೂ ಅರಳಲು ಸೂರ್ಯನ ಬಿಸಿಲು ಬೇಕು. ನನ್ನ ಮನ ಅರಳಲು ನಿನ್ನ ನಗುವೊಂದೆ ಸಾಕು.

೪೪) ನಿನ್ನ ಹೆಸರು ನನ್ನ ಹೃದಯದ ಕಲ್ಲಿನ ಮೇಲೆ ಬರೆದಿರೊವರೆಗೂ ಜೀವನವೆಂಬ ಸಾಗರದಲ್ಲಿ ಅದು ತೇಲ್ತಾನೆ ಇರುತ್ತೆ. ಯಾವತ್ತೂ ಮುಳುಗಲ್ಲ.

೪೫) ಕೋಪವಿದ್ದರೆ ಕಿಲೋಮೀಟರಗಳಷ್ಟು ಬೈಯ್ಯಿ, ಕಿವಿಮುಚ್ಚಿ ಕೇಳಿಸಿಕೊಳ್ತಿನಿ. ದ್ವೇಷವಿದ್ದರೆ ನಿನ್ನ ಕೈಗಳನ್ನು ಕೊಡು ನಾನೇ ನನ್ನ ಕೆನ್ನೆಗೆ ಮುದ್ದಾಗಿ ಹೊಡ್ಕೋತ್ತಿನಿ. ಆದರೆ ನಿನ್ನ ತುಟಿಗಳಿಗೆ ಬೀಗ ಹಾಕಿ ಮೌನಯುದ್ಧ ಸಾರಿ ನನ್ನನ್ನು ನಿಶಬ್ದವಾಗಿ ಕೊಲ್ಲಬೇಡ.


೪೬) ಕಣ್ಣಲ್ಲಿ ಕಾಂತಿ, ಮನಸ್ಸಲ್ಲಿ ಶಾಂತಿ, ತೋಳಲ್ಲಿ ತಾಕತ್ತು, ಕೆಲಸದಲ್ಲಿ ನಿಯತ್ತು, ಮಾತಲ್ಲಿ ಮುತ್ತು, ಇವೇ ನನ್ನ ಸಂಪತ್ತು. ನೀ ನನ್ನ ಬಾಳಸಂಗಾತಿಯಾದರೆ ನನಗಿಲ್ಲ ಯಾವ ಆಪತ್ತು.

೪೭) ನಾನು ನಿನ್ನ ಮನಸ್ಸಿನ ಲವ್ ಅಕೌಂಟಿಗೆ ಲಾಗಿನ್ ಆಗಲು ಒದ್ದಾಡುತ್ತಿರುವೆ. ನಿನ್ನ ಮನಸ್ಸಿನ ಪಾಸವರ್ಡ ಕೊಡುವೆಯಾ?

೪೮) ಆವತ್ತು ನೀನಿಲ್ಲದೆ ನಿದ್ದೆ ಬರ್ತಿರಲಿಲ್ಲ. ಆದರೆ ಇವತ್ತು ನೀ ನನ್ನ ಜೊತೆಯಲ್ಲಿರುವಾಗಲೂ ನಿದ್ದೆ ಬರ್ತಿಲ್ಲ. ನಿನ್ನ ಸೌಂದರ್ಯ ನನ್ನನ್ನು ಕೆಡಿಸಿ ಬಿಟ್ಟಿದೆ.

೪೯) ನೀನು ನನ್ನವಳಾದ ಮೇಲೆ, ನಾನು ನಿನ್ನವನಾದ ಮೇಲೆ ನಮ್ಮಿಬ್ಬರ ಮಧ್ಯೆಯೇಕೆ ಈ ಮುಜುಗುರ? ಯಾಕೆ ಕದ್ದುಮುಚ್ಚಿ ಫೋನಲ್ಲಿ ಮಾತಾಡುವ ಅವಾಂತರ? 

೫೦)ನಿನಗೆ ಹೇಳದೆ ಉಳಿದಿರುವ ಹತ್ತು ಮಾತುಗಳಿವೆ. ನೀನೊಂದು ಫ್ಲಾಯಿಂಗ್ ಕಿಸ್ ಕೊಟ್ರೆ ಮಾತ್ರ ಅವುಗಳನ್ನು ಹೇಳುವೆ... To be Continued...

ಕನ್ನಡ ಕಥೆ ಪುಸ್ತಕಗಳು - Kannada Story Books


Note : This article is written for Commercial and Entertainment purpose only. Please, don't take it too seriously.

50 ಪ್ರೇಮ ಸಂದೇಶಗಳು - Love Messages in Kannada - ಪ್ರೀತಿಯ ಸಂದೇಶಗಳು 50 ಪ್ರೇಮ ಸಂದೇಶಗಳು - Love Messages in Kannada - ಪ್ರೀತಿಯ ಸಂದೇಶಗಳು Reviewed by Director Satishkumar on January 24, 2018 Rating: 4.5
Powered by Blogger.
close
skkkannada.com