50 ಕೇಳಬಾರದ ಪೋಲಿ ಪ್ರಶ್ನೆಗಳು.... - Poli Kathegalu Questions in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

50 ಕೇಳಬಾರದ ಪೋಲಿ ಪ್ರಶ್ನೆಗಳು.... - Poli Kathegalu Questions in Kannada

50 ಕೇಳಬಾರದ ಪೋಲಿ ಪ್ರಶ್ನೆಗಳು....
                             ಕೆಲವು ಪ್ರಶ್ನೆಗಳನ್ನು ಕೇಳಬಾರದು. ಯಾಕಂದ್ರೆ ಅವುಗಳಿಗೆ ಉತ್ತರಗಳಿರುವುದಿಲ್ಲ. ಇನ್ನು ಕೆಲವು ಪ್ರಶ್ನೆಗಳಿಗೆ ಕಾರಣ ಗೊತ್ತಿದ್ದರೂ ಉತ್ತರ ಹೇಳಬಾರದು. ಒಂದು ವೇಳೆ ಹೇಳಿದರೆ ನಮ್ಮ ಮರ್ಯಾದೆ ಉಳಿಯುವುದಿಲ್ಲ, ಮಣ್ಣು ಪಾಲಾಗುತ್ತದೆ. ಜೀವನ ಈ ಥರದ ಉತ್ತರವಿಲ್ಲದ ವಿಚಿತ್ರ ಪ್ರಶ್ನೆಗಳ ಸಂತೆ. ಆ ಸಂತೆಯಲ್ಲಿನ ಕೆಲವು ಅಂತೆ ಕಂತೆಗಳು ಇಂತಿವೆ ;

೧) ಮೂಗುತಿಯಲ್ಲಿ ಕೋಪಾನಾ ಬಚ್ಚಿಡಬಹುದೆ?
ಉಂಗುರದಲ್ಲಿ ಪ್ರೀತಿನಾ ಬಂಧಿಸಬಹುದೆ?
ಕಣ್ಣಲ್ಲಿ ಕನಸುಗಳನ್ನು ಕಟ್ಟಿಡಬಹುದೆ?
ಮುಖದಲ್ಲಿ ಮನಸ್ಸನ್ನಾ ಮುಚ್ಚಿಡಬಹುದೆ?

೨) ಒಬ್ಬ ಮೇಷ್ಟ್ರು ಆರು ವಿಷಯಗಳನ್ನು ನೋಡದೆ ಕಲಿಸಲು ಅಸಾಧ್ಯವಾಗಿರುವಾಗ, ಒಬ್ಬ ವಿದ್ಯಾರ್ಥಿ ಆರು ವಿಷಯಗಳನ್ನು ಕಲಿತು ನೋಡದೆ ಎಕ್ಸಾಂ ಬರೆಯುವುದು ಯಾವ ನ್ಯಾಯ?

೩) ಪ್ರೇಯಸಿಗಾಗಿ ಅಥವಾ ಪ್ರಿಯಕರನಿಗಾಗಿ ಪ್ರಾಣ ಕೊಡೋಕೆ ತಯಾರಿರುವ ನೀವು, ಅವರಿಗೆ ನಿಮ್ಮ ಮೊಬೈಲ್ ಪಾಸವರ್ಡ ಯಾಕ ಕೊಡಲ್ಲ?

೪) ಯಾವಾಗಲೂ ಎಲ್ಲರಿಗೂ ಕೆಟ್ಟ ಮೇಲೆಯೇ ಬುದ್ಧಿ ಬರುತ್ತೆ ಯಾಕೆ? ಕೆಡುವುದಕ್ಕಿಂತ ಮುಂಚೆ ಸ್ವಲ್ಪನಾದ್ರೂ ಬುದ್ಧಿ ಬರಬಾರ್ದಾ ?

೫) ಕೆಲ ಶ್ರೀಮಂತರಿಗೆ ಹರಿದ ಜೀನ್ಸ ಮೇಲೆ ಯಾಕಿಷ್ಟು ಪ್ರೀತಿ? ಯಾಕೀಷ್ಟು ಹುಚ್ಚು ಫ್ಯಾಷನ್ ವ್ಯಾಮೋಹ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೬) ಕೆಲವು ಕೆಟ್ಟ ಕೆಲಸಗಳನ್ನು ಮಾಡುವುದರಿಂದ ಹಲವರಿಗೆ ಖಂಡಿತ ಒಳ್ಳೆಯದಾಗುತ್ತದೆ ಅಂತಂದ್ರೆ ಆ ಕೆಲಸಗಳನ್ನು ಮಾಡುವುದು ತಪ್ಪಲ್ಲ ಅಲ್ವಾ?

೭) ಹಳೇ ಹುಡುಗಿಯ ನೆನಪುಗಳನ್ನು OLX ಅಥವಾ Quicker.comನಲ್ಲಿ ಹಾಕಿ ಉಚಿತವಾಗಿ ಮಾರುವ ಆಸೆ. ಆದರೆ ಕೆಲ್ಸಕ್ಕೆ ಬಾರದ ನೆನಪುಗಳನ್ನು ಕೊಂಡುಕೊಳ್ಳುವ ಮೂರ್ಖ ಯಾರು?

೮) ಪ್ರೀತಿ ತರೋ ನೋವಿಗೆ,
ಸಾರಾಯಿ ತರೋ ಸಾವಿಗೆ,
ಕನಸು ತರೋ ಕಾಮನೆಗೆ ಯಾರು ಹೊಣೆ?
ಖಂಡಿತ ಹುಡ್ಗಿರಂತು ಅಲ್ವೇ ಅಲ್ವಾ?

೯) ನೀರಿಗೂ ಬರಗಾಲ, 
ಬೀರಿಗೂ ಬರಗಾಲ, 
ಸ್ನೇಹಕ್ಕೂ ಬರಗಾಲ, 
ಪ್ರೀತಿಗೂ ಬರಗಾಲ,
ಯಾವಾಗ ಬರುತ್ತೆ ಸಕಾಲ ?

೧೦) ಬಣ್ಣಬಣ್ಣದ ಸೀರೆ ಇತ್ಯಾದಿ ಎಲ್ಲ OK. 
ಆದರೆ ಈ ಬಿಟ್ಟಿ ಬೆನ್ನು ಪ್ರದರ್ಶನ ಯಾತಕ್ಕೆ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೧೧) ನೆನಪುಗಳ ಬೆಂಕಿಮಳೆಗೆ ಹೃದಯ ತುಕ್ಕು ಹಿಡಿದಿದೆ. ಮರೆವು ಎಂಬ ಡೆಟಾಲ್ ಹಾಕಿ ತುಕ್ಕಿಡಿದ ಹೃದಯವನ್ನು ತೋಳೆಯಬೇಕೆಂದಿರುವೆ. ಆದರೆ ಆ ಡೆಟಾಲ್ ಯಾವ ಔಷಧಿ ಅಂಗಡಿಯಲ್ಲೂ ಸಿಗ್ತಿಲ್ಲ. ನಿಮಗೆ ಮರೆವಿನ ಡೆಟಾಲ್ ಎಲ್ಲಿದೆಯಂತ ಗೊತ್ತಾ?

೧೨) ತಿಳಿಯದೇ ಮಾಡಿದ ತಪ್ಪಿಗೂ ಬಹಳಷ್ಟು ಸಲ ಕ್ಷಮೆ ಸಿಗಲ್ಲ. ಹೀಗಿರುವಾಗ ತಿಳಿದು ತಿಳಿದು ತಪ್ಪು ಮಾಡುವವರನ್ನು ಯಾಕೆ ಕ್ಷಮಿಸಬೇಕು?

೧೩) ಆರಡಿ ಭೂಮಿಯಲ್ಲಿ ಮೂರ ಹಿಡಿ ಮಣ್ಣಾಕೊಂಡು ಬರಿಗೈಯಲ್ಲಿ ಬೆತ್ತಲೆಯಾಗಿ ಹೋಗೊರಿಗೆ ನೂರಡಿ ಆಸೆಗಳ್ಯಾಕೆ?

೧೪) ಗುಡೀಲಿ ನಿಂತ ದೇವ್ರಿಗೆ ಈ ಜಗದ ಚಿಂತೆ ಯಾಕೆ? ಮನೇಲಿ ಕುಂತ ಮಂತ್ರಿಗೆ ಈ ಜನಗಳ ಚಿಂತೆ ಬೇಕೆ? ಹೊಟ್ಟೆ ತುಂಬಿದ ಮೇಲೆ ನಿಮಗೆ ಲೂಟಿ ಮಾಡುವ ಆಸೆ ಏಕೆ?

೧೫) ಸಾಮಾನ್ಯವಾಗಿ ಗಂಡಸರು ಒಂಟಿಯಾಗಿದ್ದಾಗ ಮಾಡುವ ಘನಂದಾರಿ ಕೆಲಸಗಳಲ್ಲಿ ಇದು ಒಂದಲ್ವಾ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೧೬) ಆ ದೇವರು, ದಿನಾ ನರಳೋ ವಿರಹಿಗಳಿಗೆ ಮತ್ತು ರೋಗಿಗಳಿಗೆ ಭೀಷ್ಮನಂತೆ ಇಚ್ಛಾಮರಣವನ್ನು ಯಾಕೆ ದಯಪಾಲಿಸಲ್ಲ?

೧೭) ಮನಸ್ಸಲ್ಲಿ ಮನೆ ಕಟ್ಟಿ ಗೃಹಪ್ರವೇಶ ಮಾಡದೆ ಹೋದವಳನ್ನು ನೆನಪಲ್ಲಿಟ್ಟುಕೊಂಡೇನು ಪ್ರಯೋಜನ?

೧೮) ಎಕ್ಸಾಮಗಿಂತ ಆರು ತಿಂಗಳು ಮುಂಚೆಯೇ ಓದೋದು, ಹೊಳಿ ಹಬ್ಬಕ್ಕಿಂತ ಮುಂಚೇನೆ ಬಾಯಬಾಯ್ ಬಡ್ಕೊಳೊದು ಎರಡು ಒಂದೇ ಅಲ್ವಾ?

೧೯) ಸಾಯೋವಾಗ ಉಸಿರಿಗಿಂತ ಹೆಸರು ಮುಖ್ಯನಾ?

೨೦) ಕೈಯಿಂದ ಬಿದ್ರೆ ಮೊಬೈಲ್ ಒಡೆದೊಗುತ್ತೆ ಎಂಬ ಭಯದಲ್ಲಿ ಮೊಬೈಲ್ಗೆ ತಪ್ಪದೇ ಬ್ಯಾಕ್ ಕವರ್ ಹಾಕಿಸೋ ಬುದ್ಧಿ ಇರೋ ನಿಮಗೆ ಹೆಲ್ಮೇಟ್ ಖರೀದಿಸುವುದು ಯಾಕ ಗೊತ್ತಾಗಲ್ಲ? ಅದನ್ನು ಸಹ ಸರ್ಕಾರವೇ ಹೇಳಬೇಕಾ? ನಿಮ್ಮ ಜೀವದ ಮೇಲೆ ನಿಮಗೆ ಆಸೆ ಇಲ್ವಾ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೨೧) ಎಳೆ ವಯಸ್ಸಿನಲ್ಲಿ ಹಸಿಬಿಸಿ ಮನಸ್ಸುಗಳಲ್ಲಾದ ಪ್ರೀತಿ ವ್ಯಯಸಾಯದ ಫಸಲೇನು? ಬರೀ ಕಣ್ಣಿರಾ? 

೨೨) ಕಾಯಬೇಕಾದವನೆ ಕಾಮುಕನಾಗಿದ್ದರೂ ನೀನಿನ್ನೂ ಯಾಕೆ ಕಣ್ಣುಚ್ಚಿ ಕುಳಿತಿರುವೆ? ನಿನ್ನ ಮನೆಯಲ್ಲಿ ಕ್ರೈಂ ಆದಾಗ ಮಾತ್ರ ನೀನು ಕಣ್ಣು ತೆರೆಯುತ್ತಿಯಾ?

 ೨೩) ಬುದ್ಧ ಬಸವಣ್ಣನವರು ನಮ್ಮ ದೇಶದಲ್ಲಿ ಹುಟ್ಟಿದ್ರೂ ನಾವೇಕೆ ಇನ್ನೂ ಬದಲಾಗಿಲ್ಲ? ನಾವೇಕೆ ಇನ್ನೂ ಮನುಷ್ಯರಾಗಿಲ್ಲ?

೨೪) ಮನಸಿಗೆ ಮುದಿತನವಿಲ್ಲ ಅಂದ್ಮೇಲೆ ಕನಸಿನ ಬಡತನವೇಕೆ?

೨೫)  ಕಣ್ಣೀಲ್ಲದ ಅಂಧರು ಕನಸು ಕಾಣೋವಾಗ, ಕಣ್ಣಿರೋ ನೀನ್ಯಾಕೆ ಕನಸುಗಳನ್ನು ಕಾಣಬಾರದು?  ಆ ಕನಸುಗಳನ್ನು ನನಸಾಗಿಸಲು ಪ್ರಯತ್ನ ಪಡಬಾರದು?
50 ಕೇಳಬಾರದ ಪೋಲಿ ಪ್ರಶ್ನೆಗಳು....
೨೬) ಪ್ರೀತಿಸಿದಾಗ ಓಡೋಗಿ ಮದುವೆ ಆಗೋರು ಪ್ರೇಮಿಗಳಾ? ಇಲ್ಲ ನಿಜವಾದ ಹೇಡಿಗಳಾ? ಇಲ್ಲ ದ್ರೋಹಿಗಳಾ?

೨೭) ಪ್ರೀತಿ ಮಾಡೋವಾಗ ಇದ್ದ ಪ್ರಜ್ಞೆ, ಮೋಸ ಮಾಡುವಾಗ ಯಾಕೀರಲ್ಲ? ತಾಳಿ ಕಟ್ಟಿಸಿಕೊಳ್ಳುವಾಗ ಇದ್ದ ತಾಳ್ಮೆ, ಸಂಸಾರ ಮಾಡುವಾಗ ಯಾಕೀರಲ್ಲ?

೨೮) ಮನೆತನಕ, ಮನಸಿನ ತನಕ ಬಂದಿರುವವನಿಗೆ ಬಾ ಎನ್ನದೇ, ಕನಸ್ಸಲ್ಲೂ ಬರದಿರುವವನಿಗೆ ಸಾಯೋತನಕ ಕಾದೇನು ಪ್ರಯೋಜನ?

೨೯) ಕಾಮನಬಿಲ್ಲಿನ ನೆರಳನ್ನು ಹುಡುಕೋದು, ಮರೆತು ಹೋದ ಹಳೇ ನೋವನ್ನು ಕೆದಕೋದು ಎರಡೂ ಒಂದೇ ತಾನೇ? 

೩೦) ಪ್ರೇಯಸಿ ನಿನ್ನ ಕೆಂಡ ಸಂಪಿಗೆಯಂಥ ಕಣ್ಣುಗಳಲ್ಲಿ ಕೆಂಡ ಕಾರುವ ಕೋಪವೇಕೆ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೩೧) ಹುಲಿಗೆ ಹೆದರದ ಹುಡುಗರೆಲ್ಲ ಹುಡ್ಗೀರಿಗೆ ಹೆದರತ್ತಾರೆ ಯಾಕೆ?

೩೨) ಮಿಸ್ಡ್ ಕಾಲ್ (Missed Call) ಕಂಡು ಹಿಡಿದ ಭಾರತದ ಹುಡುಗಿಯರಿಗೆ ಯಾಕೀನ್ನು ನೊಬೆಲ್ ಅವಾರ್ಡ ಕೊಟ್ಟಿಲ್ಲ?

೩೩) ಮೊದಲ ನೋಟದಲ್ಲೇ ನೋಡಿ ಪ್ರೀತಿಸುವಾಗ ಇಲ್ಲದ ಭಯ, ಪ್ರಪೋಸ್ ಮಾಡೋವಾಗ ಎಲ್ಲಿಂದ ಬರುತ್ತೆ?

೩೪) ಪ್ರೇಮಿಗಳಿಗೆ ಪ್ರೇಮಿಗಳ ದಿನ ಇರುವಾಗ, ಸ್ನೇಹಿತರಿಗೆ ಸ್ನೇಹಿತರ ದಿನ ಇರುವಾಗ, ಎಲ್ಲರಿಗೂ ಒಂದೊಂದು ದಿನ ಇರುವಾಗ, ಹೃದಯ ಮುರಿದ ವಿರಹಿಗಳಿಗೆ "ವಿರಹಿಗಳ ದಿನ" ಅಂತಾ ಯಾಕ ಮಾಡಿಲ್ಲ?

೩೫) ನಿನ್ನ ಕಪ್ಪು ಕಣ್ಣುಗಳಲ್ಲಿ ಪದೇ ಪದೇ ನೀಲಿ ಕನಸುಗಳೇ ಯಾಕೆ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೩೬) ಫೇಲಾದ ಪ್ರತಿಯೊಬ್ಬ ಹುಡುಗನ ಹಿಂದೆ ಒಬ್ಬಳು ಸಿಗದ ಸುಂದರಿ ಇದ್ದೇ ಇರ್ತಾಳೆ ಅಂದರೆ ಯಾರು ಒಪ್ಪಲ್ಲ ಅಲ್ವಾ?

೩೭) ಪ್ರೀತ್ಸೋ ಹುಡುಗಿಗೆ ನೆಗಡಿಯಾದರೆ ಹುಡುಗರು ಸೀನೋವಾಗ, ಹುಡುಗರಿಗ್ಯಾಕೇ ಯಾರು ಪಾಪ ಅನ್ನಲ್ಲ?

೩೮) ಮಸಣವಾಗಿದೆ ನನ್ನ ಹೃದಯದ ಗೂಡು. ಹೇಳು ಗೆಳತಿ ಮುಂದೇನು ನನ್ನ ಪಾಡು?

೩೯) ಅತ್ತೆ ನಮ್ಮವಳಾದರೂ ಅತ್ತೆ ಮಗಳು ನನ್ನವಳಾ? ಬಾಳೇ ನನ್ನದಾದರೂ ಭಾಗ್ಯ ನನ್ನವಳಾ?

೪೦) ದಿನಾ ಸಕ್ಕರೆ ತಿನ್ನೋ ಇರುವೆಗೂ ಸಕ್ಕರೆ ಕಾಯಿಲೆ ಬರುತ್ತಾ?
50 ಕೇಳಬಾರದ ಪೋಲಿ ಪ್ರಶ್ನೆಗಳು....


೪೧)  ಹುಡುಗಿ ಹಾರ್ಟು ಹೌಸಫುಲ್ ಆಗಿದೆ ಅಂತಾ ಗೊತ್ತಾದ ಮೇಲೂ ಮತ್ಯಾಕೆ ಟಿಕೆಟ್ ತಗೋಳೊಕೆ ಸರ್ಕಸ್ಸ ಮಾಡ್ತೀಯಾ?

೪೨)  ಹುಡುಗಿಯರ ಮುಗುಳ್ನನಗೆಯ ಮುನ್ಸೂಚನೆ ಇಲ್ಲದೆ ಹುಡುಗರ ಹೃದಯದಲ್ಲಿ ಪ್ರೇಮಪೂಜೆ ಪ್ರಾರಂಭವಾಗಲು ಸಾಧ್ಯವೇ?

೪೩) ಏಪ್ರಿಲ್ 1stಗೂ ಫೂಲಾಗದ ಭಾರತೀಯರು ಎಲೆಕ್ಷನ್ ಟೈಮಲ್ಲಿ ಪದೇ ಪದೇ ಫೂಲಾಗುತ್ತಾರೆ ಯಾಕೆ?

೪೪) ನಮ್ಮ ದೇಶದ ರಾಜಕಾರಣಿಗಳನ್ನು ನೋಡಿದಾಗ, ಮಹಾಭಾರತ ಮುಗಿದೋದ್ರು ಭಾರತದಲ್ಲಿ ಇನ್ನೂ ಶಕುನಿ, ಕೌರವರೆಲ್ಲ ಬದುಕೇ ಇದಾರೆ ಅಂತಾ ಅನಿಸುತ್ತೆ ಅಲ್ವಾ?

೪೫) ಪಾವಿತ್ರ್ಯತೆಯ ಪರೀಕ್ಷೆಗಾಗಿ ಇವತ್ತಿನ ಎಲ್ಲ ಪುರುಷರಿಗೆ ಮತ್ತು ಮಹಿಳೆಯರಿಗೆ ಸೀತಾ ಮಾತೆಯಂತೆ ಅಗ್ನಿ ಪರೀಕ್ಷೆ ಇಟ್ಟರೆ ಎಲ್ಲರೂ ಪಾಸಾಗುವುದು ಅನುಮಾನವಲ್ಲವೇ?
50 ಕೇಳಬಾರದ ಪೋಲಿ ಪ್ರಶ್ನೆಗಳು....
೪೬) ಮನೆಗೆ ಬೆಂಕಿ ಹತ್ತಿದರೆ ನಂದಿಸಬಹುದು. ಆದರೆ ಮನಕ್ಕೆ ಬೆಂಕಿ ಹತ್ತಿದರೆ ನಂದಿಸಬಹುದೆ?

೪೭) ಹುಡುಗರಿಗಿಂತ ಹುಡುಗಿಯರಿಗೇನೆ ಧೀಮಾಕು, ಕೊಬ್ಬು, ಅಹಂಕಾರ, ದುರಹಂಕಾರ, ಕೋಪ, ತಾಪ ಇತ್ಯಾದಿಗಳೆಲ್ಲ ಜಾಸ್ತಿ ಅನ್ನೋದು ತಪ್ಪಲ್ವಾ?

೪೮) ಪ್ರೀತಿಸಿದ ಹುಡುಗಿ ಬಿಟ್ಟೋದ ನಂತರ, ಅವಳಿಲ್ಲದೇ ಬದುಕೋಕೆ ಆಗಲ್ಲ ಅನ್ನೋಕೆ ಅವಳೇನು ಆಕ್ಸಿಜನ್ನಾ?

೪೯) ನಾವು ಹೆಚ್ಚಾಗಿ ಯಾರನ್ನು ನಂಬಿರುತ್ತೇವೆಯೋ ಅವರೇ ಮೊದಲು ಮೋಸ ಮಾಡುತ್ತಾರೆ ಯಾಕೆ?

೫೦) ಜೀವನ ಅಂದ್ಮೇಲೆ ನೂರು ನೋವುಗಳು ಸಾವಿರ ಆಗೋದು ಸಹಜ. ಹಾಗಂತ ಸಾಧಿಸದೇ ಸಾಯೋಕ್ಕಾಗತ್ತಾ?
                            To Be Continued ..............
50 ಕೇಳಬಾರದ ಪೋಲಿ ಪ್ರಶ್ನೆಗಳು....

Blogger ನಿಂದ ಸಾಮರ್ಥ್ಯಹೊಂದಿದೆ.