ಮಾಜಿ ಪ್ರೇಯಸಿಗೆ 50 ಮೆಸೇಜಗಳು : 50+ Sad Love Quotes Messages in Kannada - Sad Quotes in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮಾಜಿ ಪ್ರೇಯಸಿಗೆ 50 ಮೆಸೇಜಗಳು : 50+ Sad Love Quotes Messages in Kannada - Sad Quotes in Kannada

Director Satishkumar

೧) ನೀನಿಲ್ಲದೆ ನನ್ನೆದೆಯ ತುಂಬೆಲ್ಲ ಸೂತಕ.
ಯಾರಿಗೆ ತೋರಿಸಲಿ ನನ್ನ ಜನ್ಮ ಜಾತಕ?
Sad Love Quotes in Kannada

೨) ಕೆಲವು ಸಲ ಕಾರಣವಿಲ್ಲದೆ ಕೆಲವರು ತುಂಬ ಇಷ್ಟ ಆಗ್ತಾರೆ. ಆದ್ರೆ ಅವರು ನಮಗೆ ಖಂಡಿತ ಸಿಗಲ್ಲ. ಅವರು ಅಮಾಯಕರ ಕನಸ್ಸಲ್ಲಿ ಬರೋ ಅಲೆಮಾರಿ ಹುಡುಗಿಯರು. ಅವರಲ್ಲಿ ನೀನೊಬ್ಳು ಎಂಬ ಬೇಜಾರು ನನಗೆ...

Sad Love Quotes in Kannada

೩) ಪ್ರೀತಿಯಲ್ಲಿ ಕಲ್ಲು ಕರಗುವ ಸಮಯ ಬರಬಹುದು. ಆದರೆ ನಿನ್ನ ಕಲ್ಲು ಹೃದಯ ಕರಗುವ ಸಮಯ ಬರಲ್ಲ ಅನಿಸುತ್ತೆ...
Sad Love Quotes in Kannada

೪) ನಿನ್ನ ನೆನಪುಗಳ ನೆನಪಲ್ಲಿ ನಾ ದಿನಾ ನರಳುತ್ತಿರುವೆ. ನೀ ಕೊನೆಪಕ್ಷ ಮರೆವಿನ ರೂಪದಲ್ಲಾದರೂ  ಮತ್ತೆ ನನ್ನ ಬಳಿ ಬರಬಾರದೆ?
Sad Love Quotes in Kannada

೫) ಗೆಳತಿ ನಿನ್ನ ಕೈ ಮೇಲೆ ಹಾಕಿರುವ ಗೊರಂಟಿ ನಾಳೆ ಒಂದಿನ ಅಳಿಸಿ ಹೋಗಬಹುದು. ಆದರೆ ನಿನ್ನ ಮನಸ್ಸಲ್ಲಿರೋ ನನ್ನ ಪ್ರೀತಿ ಯಾವತ್ತು ಅಳಿಸಲ್ಲ.
Sad Love Quotes in Kannada

೬) ನೀ ನನ್ನ ಮನಸ್ಸಲ್ಲಿ ಅನುಮತಿಯಿಲ್ಲದೆ ಬಂದು ಮನೆ ಮಾಡ್ಕೊಂಡು ಹಾಯಾಗಿರುವೆ. ಆದರೆ ನನ್ನನ್ನು ನಿನ್ನ ಮನದೊಳಗೆ ಬರಲು ಬಿಡ್ತೀಲ್ಲ ಯಾಕೆ?
Sad Love Quotes in Kannada

೭) ಕನಸಲ್ಲಿ ಬಂದು ಕಾಡೋಳಿಗೆ ಮನಸ್ಸಲ್ಲಿರೋ ಪ್ರೀತಿ ಮಾತನ್ನು ಹೇಳೊಕೆ ಡಬ್ಬಲ್ ಗುಂಡಿಗೆ ಬೇಕು. ಕಣಕಣದಲ್ಲೂ ಕಿರಿಕಿರಿ. ಈ ಪ್ರೀತಿಯ ಉಸಾಬರಿ.
Sad Love Quotes in Kannada

೮) ನೀನಿಲ್ಲದೆ ನನ್ನ ಜೀವನವೆಂಬ ಜೋಕಾಲಿ ಖಾಲಿ-ಖಾಲಿ. ಹೀಗಿರುವಾಗ ನೀನಿಲ್ಲದೆ ನಾ ಹೇಗೆ ನಗುನಗುತಾ ಸಾಗಲಿ?

Sad Love Quotes in Kannada

೯) ನಿನ್ನ ಕೋಪಕ್ಕೆ ಸೂರ್ಯ ಕೂಡ ಹೋರಟೋಗಿ ಸಂಜೆ ಆಯ್ತು. ಇನ್ನು ನಾನ್ಯಾವ ಲೆಕ್ಕ ನಿನಗೆ?
Sad Love Quotes in Kannada

೧೦) ನೀನು ನನ್ನ ಲೈಫಲ್ಲಿ ಇರದಿದ್ದರೂ, ನನ್ನ ಲೈಫ್ಬುಕನಲ್ಲಿ ನಿನಗೊಂದು ವಿಶೇಷ ಅಧ್ಯಾಯವಿದೆ.
Sad Love Quotes in Kannada

೧೧) ಅವತ್ತು ನಿನ್ನ ಕಂಗಳಲ್ಲಿನ ಪ್ರೀತಿ ನನ್ನೆದೆಯಲ್ಲಿನ ಕಲ್ಮಶವನ್ನೆಲ್ಲ ಸುಟ್ಟಿತು. ಆದರೆ ಇವತ್ತು ನಿನ್ನ ಕಂಗಳಲ್ಲಿನ ಕೋಪ ನನ್ನೆದೆಯಲ್ಲಿನ ಪ್ರೀತಿಯನ್ನೇ ಸುಡುತ್ತಿದೆ.
Sad Love Quotes in Kannada

೧೨) ಕತ್ತಲೆಗೂ ಕ್ಯಾಂಡಲಗೂ ಪ್ರೀತಿಯಾದಾಗ, ನನಗೂ ಬೆಳಕಿಗೂ ಶೀತಲ ಸಮರ ಶುರುವಾಯಿತು.

Sad Love Quotes in Kannada

೧೩) ಪ್ರಿಯೆ ನೀ ಗಂಗೆಯಾದರೆ ನಾ ಭಗೀರಥನಾಗ್ತೀನಿ. ನೀ ಒಲಿಯುವರೆಗೆ ನಾ ನನ್ನ ಪ್ರಯತ್ನ ಬಿಡಲ್ಲ.
Sad Love Quotes in Kannada

೧೪) ನಾನು ಸೇದುತ್ತಿರುವ ಸಿಗರೇಟ್ ಹೊಗೆಯಲ್ಲಿ ನಿನ್ನ ನೆನಪುಗಳು ಹೊಗೆಯಾಗ್ತೀವೆ ಅಂತಾ ಅನ್ಕೊಂಡಿದ್ದೆ. ಆದರೆ ನಿನ್ನ ನೆನಪುಗಳನ್ನು ಸುಡಲು ಹೋಗಿ ನಾನು ನನ್ನೆದೆಯನ್ನು ಸುಟ್ಕೊಂಡ ಬಿಟ್ಟೆ.

Sad Love Quotes in Kannada

೧೫)  ಕಾಡುವ ನೆನಪುಗಳನ್ನು ಕೊಲ್ಲುವ ವಿದ್ಯೆಯನ್ನು ಕಲಿಸಿ ಹೋಗುತ್ತಿರುವ ಏಕೈಕ ಪ್ರೇಯಸಿ ನೀನೇ ಇರಬೇಕು. 
Sad Love Quotes in Kannada

೧೬) ಕನ್ನಡಿಯಲ್ಲಿ ನನ್ನ ಮುಖಾನಾ ನಾನೇ ನೋಡೊಕ್ಕಾಗದೆ ಮನೆಯಲ್ಲಿರೋ ಕನ್ನಡಿಯನ್ನು ನೀನು ನನ್ನ ಮನಸ್ಸನ್ನು ಒಡೆದಂತೆ ಒಂದೇ ಏಟಿಗೆ ಒಡೆದು ಚೂರು ಮಾಡಿದೆ.

Sad Love Quotes in Kannada

೧೭)  ಮುಖ ನೋಡಿ ಪ್ರೀತಿಸಬೇಡ ಅಂತದ್ದ್ರು. ಅದ್ಕೆ ನಿನ್ನನ್ನು ಮನಸ್ಸು ನೋಡಿ ಪ್ರೀತಿಸಿದೆ. ಆದರೆ ನೀನು ಕೊನೆಯಲ್ಲಿ ಮನಸ್ಸನ್ನೇ ಬದಲಾಯಿಸಿ ಬಿಟ್ಟೆ.
Sad Love Quotes in Kannada


೧೮) ಸಾವಿನಲ್ಲೂ ನೀ ನನ್ನ ಜೊತೆಗಿರ್ತೀನಿ ಅಂದಿದ್ದೆ. ಆದರೆ ಬದುಕಿರುವಾಗಲೇ ನನ್ನ ಸಾಯಿಸಿ ಹೋದೆ ಯಾಕೆ?

Sad Love Quotes in Kannada

೧೯) ನಿನ್ನ ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗೋಕೆ, ನಾನೇನು ನಿನ್ನ ಕಣ್ಣಲ್ಲಿ ಬಿದ್ದಿರೋ ಕಸವಲ್ಲ. ನಿನ್ನ ಮನಸ್ಸಲ್ಲಿರೋ ಮಹಾರಾಜ.

Sad Love Quotes in Kannada

೨೦) ಕಾಡಲ್ಲಿರೋ ಒಂಟಿ ಬೆಳಂದಿಗಳು  ನಾನು.
ನನ್ನನ್ನು ಬಯಸಿ ಬಂದೋಳು ನೀನು.
ನಾನು ಸಾಗರದ ಉಪ್ಪು ನೀರು.
ನನ್ನನ್ನು ಸಿಹಿಯಾಗಿಸುವುದೇ ನಿನ್ನ ಕಣ್ಣೀರು.
Sad Love Quotes in Kannada

೨೧) ನಿನ್ನಂಥ ಊಸರವಳ್ಳಿ ಜೊತೆಗಿನ ಸರಸಕ್ಕಿಂತ ನಾಗವಲ್ಲಿ ಜೊತೆಗಿನ ವಿರಸವೇ ವಾಸಿ.

Sad Love Quotes in Kannada

೨೨) ನನ್ನ ಬಾಡಿಗೆ ಯೌವ್ವನದಲ್ಲಿ ನಿನ್ನ ಪ್ರೀತಿ ಸಾಲ ಮಾಡಿ, ಪ್ರೇಮದ ಬಡ್ಡಿ ಕಟ್ಟೋಕ್ಕಾಗದೆ ವಿರಹದ ಚಕ್ರಬಡ್ಡಿಯಲ್ಲಿ ನಾನು ಸತ್ತೆ.
Sad Love Quotes in Kannada

೨೩) ನನ್ನ ಆತ್ಮಕಥೆಗೆ "ದುರಂತ ಸಾವು" ಎಂದು ಹೆಸರಿಡಲೇ?

Sad Love Quotes in Kannada

೨೪) ನಾನು ನಿನ್ನ ಹೊಸ ಪ್ರಿಯಕರನಿಗೆ ತ್ಯಾಗವೆಂಬ ಇಟ್ಟಿಗೆಯನ್ನು ದಾನ ಮಾಡಿದ್ದರಿಂದ ನನ್ನ ಪ್ರೇಮಕೋಟೆ ನೆಲಕಚ್ಚಿತು.
Sad Love Quotes in Kannada

೨೫) ನಿನಗೆ ನೆಗಡಿಯಾದಾಗ ನಾನು ಸೀನುತ್ತಿದ್ದೆ. ಅದರೆ ನಾನೀವತ್ತು ನರಳುವಾಗ ನೀ ನಗುತ್ತಿರುವೆ. ಇದು ನ್ಯಾಯವೇ?

Sad Love Quotes in Kannada

೨೬) ನೀನಿಲ್ಲದ ಅರಮನೆ, ನನಗೆ ಸೆರೆಮನೆ. 
ನೀನಿಲ್ಲದೆ ಹೋದರೆ ನನ್ನ ಸಂಗಾತಿ ಸಾರಾಯಿನೇ. 
ತಾಳಲಾರೆನು ವಿರಹದ ಶಾಪ, 
ಬೇಡ ಕಣೇ ನಿನ್ನ ಕೋಪ.
Sad Love Quotes in Kannada

೨೭) ಹಾಳಾಗಿದೆ ಹೃದಯ ಚೂರು ಚೂರಾಗಿ, 
ವಿರಹ ಉಕ್ಕಿದೆ ಕಣ್ಣೀರ ಹನಿ ಹನಿಯಾಗಿ, 
ಜೀವ ನಲುಗಿದೆ ನೀನಿಲ್ಲದೆ ಬೇಜಾರಾಗಿ, 
ಮತ್ತೆ ನೀ ಮನ ಸೇರುವೆಯಾ ಮತ್ತದೆ ಹಳೇ ಪ್ರೇಯಸಿಯಾಗಿ?

Sad Love Quotes in Kannada

೨೮) ಹಗಲು ರಾತ್ರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ನನ್ನ ಕನಸುಗಳೆಲ್ಲ ನಿನ್ನ ಪ್ರೀತಿಯ ಕಾಮಾಲೆ ರೋಗವಂಟಿಸಿಕೊಂಡು ಕೊರಗುತ್ತಿವೆ.
Sad Love Quotes in Kannada

೨೯) ನಿನ್ನ ಪ್ರೀತಿಯ ಸೆಲೆಯಿಲ್ಲದೆ ನನ್ನೆದೆಯಲ್ಲಿ ವಿರಹದ ಬೆಂಕಿಮಳೆಯಾಗ್ತಿದೆ.
Sad Love Quotes in Kannada

೩೦) ಅವತ್ತು ಜಡಿಮಳೆಯಲ್ಲಿ ನಿಂಜೊತೆ ನೆನೆದ ನೆನಪು, ಇವತ್ತು ನನ್ನ ಹೃದಯಕ್ಕೆ ಜಿಡ್ಡು ತರಿಸಿದೆ.
Sad Love Quotes in Kannada

೩೧) ದಿನಾ ರಾತ್ರಿ ನನ್ನ ನೆರಳು ನನ್ನ ಬಿಟ್ಟೊದಾಗ, ನಿನ್ನ ನೆನಪುಗಳ ದಾಳಿ ಶುರುವಾಗುತ್ತದೆ.

Sad Love Quotes in Kannada

೩೨) ಮಳೆ ಬಂತೆಂದರೆ ಸಾಕು, ಮರೆತು ಹೋದ ನೆನಪುಗಳೆಲ್ಲ ಮತ್ತೆ ಮರುಕಳಿಸುತ್ತವೆ. ಮಳೆ ಹನಿಗಳೊಂದಿಗೆ ನನ್ನ ಮುರಿದ ಮನಸ್ಸು ಮಾತಾಡುತ್ತದೆ.
Sad Love Quotes in Kannada

೩೩) ಚಟ್ಟ ಸೇರಿದ ಮೇಲೆ ಚಟಗಳೆಲ್ಲ ನಮ್ಮನ್ನು ಬಿಟ್ಟೊಗ್ತವೆ. ಆದರೆ ಮನಸ್ಸು ಮಸಣ ಸೇರಿದ್ರು ಮನಸ್ಸಲ್ಲಿರೋರು ನಮ್ಮನ್ನ ಬಿಟ್ಟೋಗಲ್ಲ.

Sad Love Quotes in Kannada

೩೪) ಎದೆಯ ಹಾಳೆಯ ಮೇಲೆ 
ನೋವುಗಳೆಂಬ ಅಕ್ಷರಗಳನ್ನು ಮೂಡಿಸಿ, 
ನನ್ನಯ ಕಂಬನಿ ಆಗಿದೆ ಲೇಖನಿ...

Sad Love Quotes in Kannada

೩೫) ನನ್ನೆದೆಗೆ ಬೆಂಕಿ ಹಚ್ಚಿ ನೀನು ಬೇರೊಬ್ಬನ ಹಾಸಿಗೆಯಲ್ಲಿ ಮೈಛಳಿ ಬಿಡಿಸಿಕೊಳ್ಳುತ್ತಿರುವಾಗ ಕಣ್ಣೀರ ಮಳೆಯಾಗಿ ನನ್ನೆದೆ ತಂಪಾಯ್ತು.

Sad Love Quotes in Kannada

೩೬) ನೀನಿಲ್ಲದೆ ಈಗಾಗಲೇ ವನವಾಸ ಅನುಭವಿಸಿದೀನಿ. ಈಗ ಮತ್ತೆ ನೀನಿಲ್ಲದೆ ಅಜ್ಞಾತ ವಾಸ ಅನುಭವಿಸಲೇ? ಇಲ್ಲ ನಿನ್ನ ನೆನಪುಗಳ ನೆರಳಲ್ಲಿ ಸೆರೆವಾಸ ಅನುಭವಿಸಲೇ?

Sad Love Quotes in Kannada

೩೭) ಹುಣ್ಣಿಮೆಯ ಬೆಳದಿಂಗಳಲ್ಲಿ ಬಣ್ಣಬಣ್ಣದ ಮಾತುಗಳನ್ನಾಡಿ ಬದುಕನ್ನೇ ಕತ್ತಲು ಮಾಡಿ ಹೋದವಳೇ ನೀನೀಗ ಎಲ್ಲಿರುವೆ? ಹೃದಯವೇ ಇಲ್ಲದ ಹಣದ ಹುಚ್ಚನ ಜೊತೆ ಎಷ್ಟು ಸುಖವಾಗಿರುವೆ?

Sad Love Quotes in Kannada

೩೮) ಜರತಾರಿ ಸೀರೆಯುಟ್ಟು 
ಹಸೆಮನೆ ಏರಿದ ದೇವತೆ ನೀನು.
ಹರದಾರಿ ಹಣೆಬರಹಗೆಟ್ಟು 
ಸ್ಮಶಾನ ಸೇರಿದ ನತದೃಷ್ಟ ನಾನು.
Sad Love Quotes in Kannada

೩೯) ಗೆಳತಿ, ಗಾಳಿ ಮಾತನ್ನು ಗಾಳಿಗೆ ತೂರು, 
ವಿರಹ ಮರೆತು ಏರು ನನ್ನೆದೆಯ ತೇರು, 
ನೀ ಬಾರದಿದ್ದರೆ ಮಸಣವೇ ನನ್ನ ಸೂರು, 
ನಿನ್ನೆದೆಯಲ್ಲಿ ಭದ್ರವಾಗಿರಲಿ ನಮ್ಮಿಬ್ಬರ ಪ್ರೀತಿ ಬೇರು.

Sad Love Quotes in Kannada

೪೦) ನನ್ನ ಹೃದಯದ ಧಮನಿ ಧಮನಿಯೊಳಗೆ ನಿನ್ನ ಪ್ರೀತಿಯ ಕೊಲೆಸ್ಟರಾಲ್ ಹೆಚ್ಚಾಗಿದ್ದರಿಂದ ನನಗೆ ಹೃದಯಘಾತವಾಯಿತು. ಆದರೆ ನಾನಿನ್ನು ಸತ್ತಿಲ್ಲ. ಜೊತೆಗೆ ಸಾಧಿಸದೆ ಸಾಯೋದು ಇಲ್ಲ.

Sad Love Quotes in Kannada

೪೧) ನಿನ್ನ ಹಾಡಿಗೆ ನಾ ಕಿವುಡಾಗಿರುವೆ.
ನಿನ್ನ ಮಾತಿಗೆ ನಾ ಮರುಳಾಗಿರುವೆ. 
ನಿನ್ನ ಮನಸ್ಸಿಗೆ ನಾ ಮೋಹಿತನಾಗಿರುವೆ. 
ನಿನ್ನ ಭಾವನೆಗಳಿಗೆ ನಾ ಬಲಿಯಾಗಿರುವೆ.
ನಿನ್ನ ಮೌನ ತರಂಗಗಳಿಗೆ ನಾ ಮೂಕ ಪ್ರೇಕ್ಷಕನಾಗಿರುವೆ.

Sad Love Quotes in Kannada

೪೨) ನೀನಿಲ್ಲದೆ ನಾನು ಏಕಾಂಗಿ. 
ನಾನಿಲ್ಲದೆ ನೀನು ಏಕಾಂಗಿ. 
ಮನಸ್ಸುಗಳು ಒಂದಾದ ಮೇಲೆ
ಈ ಮಂಗನಾಟ ಬೇಕೆನೆ ಕಮಂಗಿ?

Sad Love Quotes in Kannada

೪೩) ಚೀನಾ ಗೋಡೆಯ ತುಂಬೆಲ್ಲ ನಿನ್ನ ಹೆಸರನ್ನು ಬರೆಯುವ ಆಸೆಯಿತ್ತು. ಆದರೆ ನಿನ್ನ ಪ್ರೀತಿ ಚೀನಾ ವಸ್ತುಗಳಿಗಿಂತ ಕಡೆಯಾದಾಗ ಆ ಆಸೆ ಅಮವಾಸ್ಯೆಯಾಯಿತು.

Sad Love Quotes in Kannada

೪೪) ಹೃದಯದಿಂದ ಕಳೆದುಹೋದ ಮುತ್ತೊಂದನ್ನು
ನೆನಪುಗಳ ಮಾಲೆಗೆ ಸೇರಿಸಲೇ? ಅಥವಾ 
ನೆನಪುಗಳ ನೋವಿನ ಮಾಲೆಯನ್ನು
ಮರೆವಿನಿಂದ ಶೃಂಗರಿಸಲೇ?
Sad Love Quotes in Kannada

೪೫) ನೀನು ಮುತ್ತು ಕೊಟ್ಟ ಹೋದ ಕೆನ್ನೆ
 ಮೇಲೆ, ನಿನ್ನ ನೆನಪುಗಳ ಕಣ್ಣೀರ ಮಾಲೆ. 
ನಿನ್ನಿಂದ ನನ್ನ ಹೃದಯದ ಕೊಲೆ,
ನನ್ನ ನಗುವನ್ನು ಸುಡುತಿದೆ ನಿನ್ನ ವಿರಹದ ಜ್ವಾಲೆ.

Sad Love Quotes in Kannada

೪೬) ನೀನಿಲ್ಲದೆ ನಾನು ಬದುಕಬಲ್ಲೆ. 
"ನೀನಿಲ್ಲದೆ ನಾನು ಬದುಕಲ್ಲ" ಅನ್ನೋಕೆ 
ನೀನೇನು ಆಕ್ಸಿಜನ್ ಅಲ್ಲಲ್ವಾ?
Sad Love Quotes in Kannada

೪೭) ಎದೆಯ ಕಡಲಿಗೆ ತೆರೆಗಳೆಲ್ಲ ಬರುವಂತೆ,
ಹೃದಯದ ಮಡಿಲಿಗೆ ನೋವುಗಳೆಲ್ಲ ಬಂದು ನಿಂತಿವೆ.
ರೆಕ್ಕೆ ಮುರಿದ ಆಸೆಗಳೆಲ್ಲ ಕಣ್ಣೀರಿನ ಆಸರೆಯನ್ನು ಬಯಸಿವೆ.

Sad Love Quotes in Kannada

೪೮) ಕಲ್ಪನೆ ಮೂಡೋದಕ್ಕೆ, 
ಕವಿತೆ ಕುಡಿಯೋಡೆಯೊದಕ್ಕೆ, 
ಕನಸು ಬೀಳೊದಕ್ಕೆ, 
ಕಾರಣವಿಲ್ಲದೆ ಕಣ್ಣೀರು ಬರೋದಕ್ಕೆಲ್ಲ ನೀನೇ ಕಾರಣಳು.

Sad Love Quotes in Kannada

೪೯) ನಾನು ಬರೆಯೋ ಪ್ರತಿ ಕವಿತೆಯಲ್ಲೂ, ಕಥೆಯಲ್ಲೂ ನೀನಿದ್ದೀಯಾ. ನನ್ನೆಲ್ಲ ನೋವುಗಳಿಗೆ ಕಾರಣಳು ನೀನೇ, ಕಾರಕಳು ನೀನೇ.

Sad Love Quotes in Kannada

೫೦) ನನ್ನ ಸತ್ತ ಕನಸುಗಳ ಸಮಾಧಿಯ ಮೇಲೆ, ನಿನಗಾಗಿ ಮತ್ತೆ ಪ್ರೀತಿ ಗೋಪುರ ಕಟ್ಟಿ ನಿನ್ನ ದಾರಿ ಕಾಯಲೇ? ನೀ ಬರಲ್ಲ ಅಂತಾ ನಂಬಿ ನಾ ಪ್ರಾಣ ಬಿಡಲೇ? ಈ ಮುಠ್ಠಾಳತನಗಳನ್ನು ನಾ ತಪ್ಪಿಯೂ ಮಾಡಲ್ಲ. ಜಾಸ್ತಿ ಖುಷಿ ಪಡದಿರು. ನಾ ಮತ್ತೆ ನಿನ್ನೆಡೆಗೆ ಕನಸಲ್ಲೂ ತಿರುಗಿ ನೋಡಲ್ಲ. ಯಾಕಂದರೆ "ಬಾಡಿದ ಹೂವು ಮತ್ತೆ ಅರಳಲ್ಲ" ಎಂಬುದು ನನಗೆ ಚೆನ್ನಾಗಿ ಗೊತ್ತು.
Sad Love Quotes in Kannada
Blogger ನಿಂದ ಸಾಮರ್ಥ್ಯಹೊಂದಿದೆ.