ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poems on Mother - kannada kavanagalu about amma - Story on Mother in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poems on Mother - kannada kavanagalu about amma - Story on Mother in Kannada

   ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poems on Mother

                                ನನ್ನ ಜೀವನದಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂಥ ದೊಡ್ಡ ವಿಷಯಗಳೇನು ಆಗಿಲ್ಲ. ಆದರೆ ಆಗುತ್ತಿರುವುದೆಲ್ಲವು ವಿಶೇಷವಾಗಿವೆ. ನನಗೆ ನಿಮ್ಮಂತೆ ಹತ್ತಾರು ಜನ ಗೆಳೆಯರಿಲ್ಲ. ನನಗೆ ಇರುವುದು ಇಬ್ಬರೇ ಗೆಳೆಯರು. ಅವರಲ್ಲಿ ಒಂದು ನನ್ನ ಲೇಖನಿಯಾದರೆ, ಮತ್ತೊಂದು ಅವಳು. ಅವಳಿಗೂ ಅಷ್ಟೇ..! ಅವಳಿಗೆ ಅವಳ ಕ್ಯಾಮೆರಾವನ್ನು ಬಿಟ್ಟರೆ ನಾನೊಬ್ಬನೇ ಗೆಳೆಯ. ನಿನ್ನೆ  ನಮ್ಮಿಬ್ಬರ ಕಣ್ಣಿಗೆ ಬಸ್ಸಲ್ಲಿ ಬಿಸಲೇರಿ ವಾಟರ್ ಬಾಟಲಗಳನ್ನು ಮಾರುತ್ತಿರುವ ೬೫ ವಯಸ್ಸಿನ ಒಬ್ಬಳು ಹಣ್ಣಾದ ಮುದುಕಿ ಕಾಣಿಸಿದಳು. ಅವಳನ್ನು ನೋಡಿದಾಗ ನನ್ನವಳ ಕಣ್ಣ೦ಚಲ್ಲಿ ಕಣ್ಣೀರು ಕಾಲು ಚಾಚಿತು.


        ಆ ಮುದುಕಿಗೆ ಮಗ, ಸೊಸೆ, ಮೊಮ್ಮಕ್ಕಳೆಲ್ಲರು ಇದ್ದಾರೆ. ಆದರೆ ಎಳ್ಳಷ್ಟು ಪ್ರಯೋಜನವಿಲ್ಲ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಆ ಮಹಾತಾಯಿ ಕಷ್ಟ ಪಡುತ್ತಿರುವುದನ್ನು ನೋಡಿದರೆ ಎಂಥ ಕಟುಕನ ಕಲ್ಲು ಹೃದಯವಾದರೂ ಕರಗಿ ಕನಿಕರ ತೋರಿಸುತ್ತೆ. ಆದರೆ ಅವಳ ಮಗ ಮತ್ತು ಸೊಸೆಯ ಹೃದಯವೇಕೋ ಕಲ್ಲಾಗಿದೆ. ಅಂಥ ಪರಿಸ್ಥಿತಿ ಯಾವ ತಾಯಿಗೂ ಬರದಿರಲಿ ಎಂಬ ಕಳಕಳಿ ನನ್ನದು. "ತಾಯಿ ದೇವರಾಗಬಹುದು. ಆದರೆ ದೇವರು ಎಷ್ಟೇ ಪ್ರಯತ್ನಿಸಿದರೂ ಯಾವತ್ತು ತಾಯಿಯಾಗಲಾರ". ಪ್ಲೀಸ್ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ತಾಯಿ ತೀರಿ ಹೋದಾಗ ನೀವು ಅತ್ತರೆ,,, ತಾಯಿ ಮತ್ತೆ ಮರಳಿ ಬಾರಳು ಎಂಬುದು ನೆನಪಿರಲಿ... ನೀನು ಚಿಕ್ಕವನಿದ್ದಾಗ ನೀನು ಸ್ವಲ್ಪ ಅತ್ತರೆ ಸಾಕು ತಾಯಿ ಎಲ್ಲಿದ್ದರೂ ಓಡೋಡಿ ಬರುತ್ತಿದ್ದಳು. ಆದರೆ ಈಗ ನೀ ಬಿಕ್ಕಿಬಿಕ್ಕಿ ಅತ್ತರೂ ತಾಯಿ ಮರಳಿ ಬಾರಳು...  


೧) ತಾಯಿ ಮತ್ತೆ ಮರಳಿ ಬಾರಳು... - Kavanagalu About Amma (Mother) in kannada 1


ತಾಯಿ ಹಾಡಿದ ಜೋಗುಳದ ಗೀತೆ
ತಾಯಿ ಪ್ರೀತಿಯ ಮುಗಿಯದ ಕವಿತೆ
ತಾಯಿಯದ್ದು ಕರುಳು ಬಂಧದ ಮಮತೆ
ಅದನ್ಯಾಕೆ ನೀ ಮಡದಿ ಬಂದಾಗ ಮರೆತೆ?

kannada kavanagalu about amma mother

ನವಮಾಸ ನಿನ್ನನ್ನು ಹೊತ್ತಳು
ನೀ ಹುಟ್ಟುವಾಗ ಸಂತಸದಿ ಅತ್ತಳು
ಜೀವತೆದು ನಿನ್ನ ಹೊಗಳಿ ಬೆಳೆಸಿದಳು
ನಿನಗಾಗಿ ವನವಾಸ ಅನುಭವಿಸಿದಳು..

kannada kavanagalu about amma mother

ಓದಿಸಿದಳು ನಿನ್ನ ಹಗಲಿರುಳು ದುಡಿದು
ಮರುಗಿದಳು ದಿನಾ ಸಂಕಷ್ಟಗಳಲ್ಲಿ ಮಡಿದು
ನಿನ್ನ ಏಳ್ಗೆಗೆ ತಾಯಿ ಪಟ್ಟ ನೋವಿದು
ಇಂಥ ಮಾತೆಗೆ ಯಾವ ಉಡುಗೊರೆ ನಿನ್ನದು?

kannada kavanagalu about amma mother

ನಿನ್ನ ಪ್ರೀತಿಗೆ ತಾಯಿ ಕೊಟ್ಟಳು ಒಪ್ಪಿಗೆ
ಬಂದ ಸೊಸೆ ಕಾಡುತಿಹಳು ಯಾವ ತಪ್ಪಿಗೆ?
ಜೀವ ಬಿಗಿಹಿಡಿದವಳೆ ಮೊಮ್ಮಕ್ಕಳ ಆಸೆಗೆ

kannada kavanagalu about amma mother

ಮುದಿ ಮುದುಕಿ ಮೌನವಾಗಿರುವಳು
ನಿನ್ನ ಮುದ್ದಿನ ಮಡದಿಯ ಕಾಟಕ್ಕೆ.
ನೀನು ಹೋಗುವೆ ಖಂಡಿತ ನರಕಕ್ಕೆ...

kannada kavanagalu about amma mother

ಸ್ವಾರ್ಥಿ ನಿನ್ನ ಹೆಂಡತಿ ತಾಯಿಯ ದೂಡಿದಳು
ಬೀದಿಲಿ ಬಿದ್ದ ತಾಯಿ ನಿನ್ನನ್ನೇ ಹರಸಿದಳು
ಕೊನೆಯುಸಿರೆಳೆದಳು ಸಿಗದೇ ಅನ್ನದಗಳು
ಈಗ ನೀ ಅತ್ತರೆ ತಾಯಿ ಮತ್ತೆ ಬಾರಳು...
ನೆನಪಿರಲಿ ತಾಯಿ ಮತ್ತೆ ಮರಳಿ ಬಾರಳು...

kannada kavanagalu about amma mother


೨) ಅತ್ತೆ v/s ಕತ್ತೆ -  Kavana About Amma (Mother) in kannada 2 

ಮದುವೆಯ ಮುಂಚೆ ಮಕ್ಕಳು
ಹೆತ್ತವರಿಗೆ ಸೊಂಪಾದ ನೆರಳು
ಮದುವೆಯ ನಂತರ ಮಕ್ಕಳು
ಹೆಂಡ್ತಿ ಮಾತಿಗೆ ಮರಳು...

kannada kavanagalu about amma mother

ಸೊಸೆ ತರುವ ಕಪಟ ತಿರುಳು
ಕಳಚುತ್ತೆ ಸಂಸಾರದ ಸರಳು
ಹೆಂಡತಿಯ ಮಾತಿಗೆ ಮಗ
ನೀಡ್ತಾನೆ ತನ್ನ ಮುಗ್ಧ ಕೊರಳು..

kannada kavanagalu about amma mother

ಮಗನ ಅಗಲುವಿಕೆಯಿಂದ
ತತ್ತರಿಸುತ್ತೆ ಹೆತ್ತ ಕರಳು
ಇದು ಹೆಣ್ಣಿನ ದೌರ್ಭಾಗ್ಯದ ಉರುಳು
ತನ್ನ ಕಣ್ಣಲ್ಲೇ ಚುಚ್ಚಿಕೊಂಡ ಬೆರಳು...

ಹೆಣ್ಣಿಗೆ ಹೆಣ್ಣೆ ತಾನೆ ಶತ್ರುಳು?
ಹೆಣ್ಮಕ್ಕಳು ಒಂಥರಾ ಪಾಪಿ ದೇವತೆಗಳು.
ಏಕೆಂದರೆ ಈಗ ಅಳುತ್ತಿರುವ ಅತ್ತೆ,
ಒಂದು ಕಾಲದಲ್ಲಿ ಸೊಸೆಯಾಗಿ ಮೆರೆದ ಕತ್ತೆ...


Blogger ನಿಂದ ಸಾಮರ್ಥ್ಯಹೊಂದಿದೆ.