ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು : - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :

ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
               ಎಲ್ಲ ಪ್ರೇಯಸಿಯರೂ ನಿಜವಾದ ಪ್ರೇಯಸಿಯರೇ. ಆದರೆ ಅಸಾಮಾನ್ಯ ಆದರ್ಶ ಪ್ರೇಯಸಿ ಮಾತ್ರ ಬಹಳಷ್ಟು ಸಂದರ್ಭಗಳಲ್ಲಿ ಕೇವಲ ಕಾಲ್ಪನಿಕವಷ್ಟೇ. ನಾವು ಬಯಸುವ ನಿಜವಾದ ಅಸಾಮಾನ್ಯ ಆದರ್ಶ ಪ್ರೇಯಸಿ ಬರೀ ಸಿನಿಮಾಗಳಲ್ಲಿ ಮಾತ್ರ ಕಣ್ಣಿಗೆ ಬೀಳುತ್ತಾಳೆ ಅಂತ ಅನಿಸುತ್ತೆ. ನಿಜ ಜೀವನದಲ್ಲಿ ಆಕೆ ಹುಡುಕಿದರೂ ಸುಲಭವಾಗಿ ಸಿಗಲ್ಲ. ಒಂದು ವೇಳೆ ಅಂಥ ಅಪರೂಪದ ಪ್ರೇಯಸಿ ಸಿಕ್ಕರೆ, ಸಿಕ್ಕವನ ಹತ್ತು ಜನ್ಮದ ಪುಣ್ಯದ ಫಲವಿರಬಹುದು. ಸಾಮಾನ್ಯ ಪ್ರೇಯಸಿ ತಪ್ಪಿಯೂ ಸಹ ಸ್ಫೂರ್ತಿ ತುಂಬುವ ಮಾತುಗಳನ್ನು ಹೇಳಲ್ಲ ಎಂಬುದು ನನ್ನ ಅನಿಸಿಕೆ. ಯಾರಿಗೂ ಗೊತ್ತು ನನ್ನ ಅನಿಸಿಕೆ ಸುಳ್ಳಾಗಿರಬಹುದು.  ಉನ್ನತವಾದ ವಿಚಾರವುಳ್ಳ ವಿಷಯಗಳನ್ನು ಸಾಮಾನ್ಯ ಪ್ರೇಯಸಿ ಹೇಳಲು ಸಾಧ್ಯವೇ ಇಲ್ಲ. ಬದುಕಿಗೆ ಸ್ಪೂರ್ತಿಯಾಗುವ ವಿಷಯಗಳನ್ನು ಒಬ್ಬ ಆದರ್ಶ ಪ್ರೇಯಸಿ ಮಾತ್ರ ಹೇಳಬಲ್ಲಳು. 
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :

ನನ್ನ ಕಾಲ್ಪನಿಕ ಆದರ್ಶ ಪ್ರೇಯಸಿ ಹೇಳಬಲ್ಲ ಹತ್ತು ಮಾತುಗಳು ಇಂತಿವೆ ;

೧) ಹೌದು, ನಾನು ಶ್ರೀಮಂತಿಕೆಯನ್ನು ಬಯಸುತ್ತೇನೆ. ನೀನು ನನ್ನಲ್ಲಿ ಸೌಂದರ್ಯವನ್ನು ಹುಡುಕುತ್ತಿರುವಾಗ ನಾನು ನಿನ್ನಲ್ಲಿ ಸಂಪತ್ತನ್ನು ಹುಡುಕಿದರೆ ತಪ್ಪೇನಿಲ್ಲ. ಬರೀ ನಿನ್ನ ಪ್ರೀತಿ ಮಾತುಗಳಿಂದ ನಮ್ಮಿಬ್ಬರ ಹೊಟ್ಟೆ ತುಂಬಲ್ಲ. ಸುಖವಾಗಿ ಸಂಸಾರ ನಡೆಸಲು ಸಂಪತ್ತು ಬೇಕೇ ಬೇಕು. ಅದಕ್ಕಾಗಿ ನೀನು ಸಾಕಾಗುವಷ್ಟು ಸಂಪತ್ತನ್ನು ನಿಯತ್ತಾಗಿ ಸಂಪಾದಿಸಲೇಬೇಕು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೨) ನೀನೀಗ ಬಡವನಾಗಿದ್ದರೂ ಚಿಂತೆಯಿಲ್ಲ. ಮುಂದಾದರೂ ನೀ ಕಷ್ಟಪಟ್ಟು ದುಡಿದು ಶ್ರೀಮಂತನಾಗುವ ಛಲ ಹೊಂದಿದ್ದರೆ, ಜೀವನದಲ್ಲಿ ಏನಾದರು ಒಂದನ್ನು ಸಾಧಿಸುವ ಹಠ ಹೊಂದಿದ್ದರೆ ನಾನು ನಿನ್ನೊಡನೆ ನನ್ನ ಜೀವನವನ್ನು ಶೇರ್ ಮಾಡಲು ಸಿದ್ಧಳಿದ್ದೇನೆ. ನಿನ್ನ ಪ್ರತಿ ಪ್ರಯತ್ನಕ್ಕೆ ಸ್ಫೂರ್ತಿವಾಗಿ ನಿಲ್ಲಲು ನಾನು ಸಮರ್ಥಳಿದ್ದೇನೆ. ನಿನ್ನೆಲ್ಲ ಕಷ್ಟದ ಹೆಜ್ಜೆಗಳಿಗೆ ನಾನು ಹೆಗಲು ಕೊಟ್ಟು ನಿಲ್ಲುವೆ.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೩) ನನಗೆ ಕೇಜಿಗಟ್ಟಲೆ ಚಿನ್ನ ಬೇಕಿಲ್ಲ. ನಾನು ಪ್ರೀತಿಸಿ ಮದುವೆಯಾಗುವ ಹುಡುಗ ಚಿನ್ನವಾಗಿದ್ದರೆ ಸಾಕು. ನನ್ನ ಹುಡುಗನ ಬಳಿ ಹಣದ ಜೊತೆ ಗುಣವೂ ಇರಬೇಕು. ಬರೀ ಹಣ, ಬರೀ ಗುಣವಿದ್ದೇನು ಪ್ರಯೋಜನ? ಸಂಸಾರ ಸುಸೂತ್ರವಾಗಿ ಸಾಗಬೇಕಾದರೆ  ಹಣ ಮತ್ತು ಗುಣ ಎರಡೂ ಇರಲೇಬೇಕು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೪) ನೀನು ಸರ್ಕಾರಿ ನೌಕರಿಯಲ್ಲಿರದಿದ್ದರೂ ಪರವಾಗಿಲ್ಲ. ಆದರೆ ಸರಳ, ಸೌಮ್ಯ, ಸಜ್ಜನ,  ಸಂಭಾವಿತನಾಗಿರಬೇಕು. ಇಡೀ ಜಗತ್ತಿಗೆ ಸುಳ್ಳೇಳಿದರೂ ನನ್ನೊಂದಿಗೆ ಪ್ರತಿಕ್ಷಣ ನೈಜವಾಗಿರಬೇಕು. ನನಗೆ ಸುಳ್ಳೇಳಿ ಇಂಪ್ರೆಸ್ ಮಾಡುವ ಅವಶ್ಯಕತೆ ನಿನಗಿಲ್ಲ. ಸತ್ಯ ಕಹಿಯಾಗಿದ್ದರೂ ನೀನು ನನಗೆ ಸತ್ಯವನ್ನೇ ಹೇಳಬೇಕು. ಯಾಕೆಂದರೆ ಸತ್ಯ ಕಹಿಯಾದರೂ ಆರೋಗ್ಯಕರ ಸಂಸಾರಕ್ಕೆ ಅದೇ ದಿವ್ಯೌಷಧಿ.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೫) ನನಗೆ ವಜ್ರ, ವೈಡೂರ್ಯ, ಬಂಗಾರದ ಬಳೆ ಏನೂ ಕೊಡಿಸದಿದ್ದರೂ ಬೇಜಾರಿಲ್ಲ. ಆದರೆ ನೀನು ದಿನಾ ತಪ್ಪದೇ ನನ್ನೊಂದಿಗೆ ಸಮಯ ಕಳೆಯಲೇಬೇಕು. ನನ್ನನ್ನು ಪ್ರೀತಿಸುವುದಷ್ಟೇ ಅಲ್ಲ ನನ್ನನ್ನು ಗೌರವಿಸುವುದನ್ನು ಕಲಿಯಬೇಕು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೬) ನನ್ನ ಸೌಂದರ್ಯವನ್ನು ಅನುಭವಿಸಿ ನನಗೆ ಸಂಕಷ್ಟಗಳು ಬಂದಾಗ ಕುಂಟು ನೆಪಗಳನ್ನು ಹೇಳಿ ದೂರ ಉಳಿಯಬಾರದು. ನನಗೆ ನೋವಾದಾಗ, ನಿನ್ನನ್ನು ಅಪ್ಪಿಕೊಂಡು ನಿನ್ನ ಹೆಗಲ ಮೇಲೆ ತಲೆಯಿಟ್ಟು ಅಳಬೇಕೆನಿಸಿದಾಗ ನೀನು ನನ್ನ ಪಕ್ಕದಲ್ಲೇ ಇರಬೇಕು. ನನ್ನ ಸಂತೋಷಕ್ಕೂ, ದು:ಖಕ್ಕೂ ನೀನು ನನ್ನ ಜೊತೆಗಿರಲೇಬೇಕು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೭) ನನಗೆ ಕಾರು, ಬಂಗಲೆ, ಕಾಸ್ಟ್ಲಿ ಗಿಫ್ಟಗಳು ಬೇಕೇ ಬೇಕು ಅಂತೇನಿಲ್ಲ. ಸಾಧ್ಯವಾದರೆ ಕೊಡಿಸು. ಸುಲಭವಾಗಿ ಸಾಧ್ಯವಾಗದಿದ್ದರೂ ಕೊಡಿಸು. ಏಕೆಂದರೆ ನನಗೆ ಬೇಕಾಗಿದ್ದನ್ನು ನಿನ್ನತ್ರ ಕೇಳಿ ಪಡೆಯುವ ಸಂಪೂರ್ಣ ಹಕ್ಕು ನನಗಿದೆ. ನಾನು ಇಷ್ಟಪಟ್ಟಿದ್ದೆಲ್ಲವನ್ನು ನೀನು ನನ್ನೊಂದಿಗೆ ಸೇರಿ ಕಷ್ಟಪಟ್ಟು ದುಡಿದಾದರೂ ಕೊಡಿಸಲೇಬೇಕು. ನಿನಗೆ ಎಲ್ಲವೂ ಸಾಧ್ಯವಿದೆ. ಯಾಕೆಂದರೆ ನಾನು ಪ್ರೀತಿಸುತ್ತಿರುವುದು ೨೧ ವರ್ಷದ ನವಯುವಕನನ್ನೇ ಹೊರತು ೭೦ ವರ್ಷದ ಮುದುಕನನ್ನಲ್ಲ.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೮) ನಿನ್ನ ಪ್ರೀತಿ, ನಿನ್ನ ಕಾಳಜಿ, ನಿನ್ನ ಅಮೂಲ್ಯವಾದ ಸಮಯ, ನಿನ್ನ ಮೈಮನಸ್ಸು ಬರೀ ನನಗಷ್ಟೇ ಮೀಸಲಿರಬೇಕು. ನೀನು ನನಗಷ್ಟೇ ಸೀಮಿತವಾಗಿರಬೇಕು. ಈ ವಿಷಯದಲ್ಲಿ ನಾನು ಸಂಪೂರ್ಣ ಸ್ವಾರ್ಥಿ. ನಾನು ನಿನ್ನನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಕನಸಲ್ಲೂ ಇಷ್ಟಪಡಲ್ಲ.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೯) ನನಗೆ ನೀನು, ನೀನಿಷ್ಟಗಳು ಮಾತ್ರ ಮುಖ್ಯವಲ್ಲ. ನನಗೆ ನಿನ್ನ ಕಷ್ಟನಷ್ಟಗಳು ನನ್ನ ಇಷ್ಟಗಳಷ್ಟೇ ಮುಖ್ಯ. ನನಗೆ ನಿನ್ನ ಕಷ್ಟ, ನಷ್ಟ, ಇಷ್ಟಗಳಲ್ಲಿ ಸರಿ ಸಮನಾದ ಪಾಲು ಬೇಕೆ ಬೇಕು. ನೀನು ನಿನ್ನ ನೋವನ್ನು ನನ್ನೊಂದಿಗೆ ಮಾತ್ರ ಶೇರ್ ಮಾಡಬೇಕು. ನಿನ್ನ ನೋವುಗಳನ್ನು ನನ್ನಿಂದ ಯಾವುದೇ ಕಾರಣಕ್ಕೂ ಮುಚ್ಚಿಡುವ ಮೂರ್ಖತನ ಮಾಡಬಾರದು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :
೧೦) ಕೆಲವೊಂದಿಷ್ಟು ಬಯಕೆಗಳನ್ನು ನನಗೆ ನಾಚಿಕೆ ಬಿಟ್ಟು ಬಾಯ್ಬಿಚ್ಚಿ ನಿನ್ನತ್ರ ಹೇಳಲು ಸಾಧ್ಯವಿಲ್ಲ. ಅಂಥವುಗಳನ್ನೆಲ್ಲ ನೀನು ಅರ್ಥಮಾಡಿಕೊಂಡು ನನ್ನೊಂದಿಗೆ ಅಡ್ಜಸ್ಟ ಮಾಡಿಕೊಂಡು ಮುಂದೆ ಸಾಗಬೇಕು. ನನ್ನ ಚಿಕ್ಕಚಿಕ್ಕ ವಿಷಯಗಳಲ್ಲಿರುವ ಖುಷಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಬಾರದು.
ಸಾಮಾನ್ಯ ಪ್ರೇಯಸಿ ತಪ್ಪಿಯೂ ಹೇಳದ 10 ಮಾತುಗಳು :

Blogger ನಿಂದ ಸಾಮರ್ಥ್ಯಹೊಂದಿದೆ.