ನನಗೂ ಖುಷಿ ಬೇಕು, ನಿಮಗೂ ಖುಷಿ ಬೇಕು, ಎಲ್ಲರಿಗೂ ಖುಷಿ ಬೇಕೆ ಬೇಕು. ಪ್ರತಿಯೊಬ್ಬರೂ ಸಂತೋಷದಿಂದಿರಲು ಬಯಸುತ್ತಾರೆ. ಪ್ರತಿಯೊಬ್ಬರೂ ಖುಷಿಯಿಂದ ಜೀವನ ನಡೆಸಲು ಆಸೆ ಪಡುತ್ತಾರೆ. ಅವರಲ್ಲಿ ಬಹಳಷ್ಟು ಜನರಿಗೆ ನಿಜವಾದ ಸಂತೋಷ, ಅಸಲಿ ಖುಷಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಅವರು ಎಲ್ಲದರಲ್ಲಿಯೂ ಮತ್ತು ಎಲ್ಲರಲ್ಲಿಯೂ ಖುಷಿಯನ್ನು ಹುಡುಕುತ್ತಾರೆ. ಹಾಗಾದರೆ ನಿಜವಾದ ಸಂತೋಷ ಎಲ್ಲಿದೆ?
ಸಂತೋಷ ದುಡ್ಡಲ್ಲಿದೆಯಾ?
ಸಂತೋಷ ಸಂಪತ್ತಲ್ಲಿದೆಯಾ?
ಸಂತೋಷ ಸೆಕ್ಸಲ್ಲಿದೆಯಾ?
ಸಂತೋಷ ಬೈಕು, ಕಾರು,
ಬಂಗಲೆ ಮತ್ತು ಬಂಗಾರದಲ್ಲಿದೆಯಾ?
ಹಾಗಾದರೆ ಎಲ್ಲಿದೆ ಸಂತೋಷ?
ನಿಜವಾದ ಸಂತೋಷ ದುಡ್ಡು, ಸಂಪತ್ತು, ಕಾರು, ಬೈಕು, ಬಂಗಲೆ, ಬಂಗಾರ, ಸೆಕ್ಸ್ ಇತ್ಯಾದಿಗಳಲ್ಲಿ ಇಲ್ಲ. ಬೆಲೆಬಾಳುವ ವಸ್ತುಗಳಲ್ಲಿ ಸಂತಸದ ಖಜಾನೆಯಿಲ್ಲ. ಸಂತೋಷವೆನ್ನುವುದು ನಾವು ಇಷ್ಟಪಡುವ ಸಣ್ಣಪುಟ್ಟ ವಿಷಯಗಳಲ್ಲೆ ಇದೆ. ಸಂತೋಷ ಸಣ್ಣಪುಟ್ಟ ಸಂಗತಿಗಳಲ್ಲಿದೆ. ಸಂತೋಷ ಅನ್ನೋದು ಸ್ವಾರ್ಥರಹಿತ ತ್ಯಾಗದಲ್ಲಿದೆ. ನಿಜವಾದ ಸಂತೋಷ ಸ್ಯಾಟಿಸಫ್ಯಾಕ್ಷನ್ನಲ್ಲಿದೆ. ತೃಪ್ತಿಯೇ ನಿಜವಾದ ಸಂತೋಷ. ನಿಜವಾದ ಸಂತೋಷ ಬೇಡದಿರುವ ವಸ್ತುಗಳನ್ನು ನಿರ್ಭಯವಾಗಿ ಬಿಟ್ಟು ಬಿಡುವುದರಲ್ಲಿದೆ. ಸಂತೋಷ ಸದಾ ನಿಮ್ಮ ಜೊತೆಯಲ್ಲೇ ಇರುತ್ತದೆ. ಅದನ್ನು ಬೇರೆಡೆಗೆ ಹುಡುಕುವ ಅವಶ್ಯಕತೆ ಇಲ್ಲ. ಅನುಮಾನವಿದ್ದರೆ ಒಂದು ನಿಮಿಷ ಕಣ್ಮುಚ್ಚಿ ನಿಮ್ಮ ಕೈಯನ್ನು ನಿಮ್ಮೆದೆ ಮೇಲಿಟ್ಟುಕೊಂಡು ನೋಡಿ. ನಿಮಗೆ ಸಂತೋಷದ ಅನುಭವವಾಗುತ್ತದೆ. ಸ್ನೇಹಿತರೆ, ಸಂತೋಷವನ್ನು ಅವರಿವರಲ್ಲಿ, ಸಿಗದ ಕಡೆಗಳಲ್ಲಿ ಹುಡುಕಬೇಡಿ. ಸಂತೋಷ ನಿಮ್ಮಲ್ಲೇ ಸಾಕಷ್ಟಿದೆ. ಅದು ಸದಾ ನಿಮ್ಮೊಂದಿಗೆ ಎಲ್ಲದರಲ್ಲಿಯೂ ಇದ್ದೇ ಇರುತ್ತದೆ. ಅದನ್ನು ಫ್ರಿಯಾಗಿ ಫೀಲ್ ಮಾಡಿ. Just feel it freely.
ಶೇಕ್ಸ್‌ಪಿಯರ್ ಹೇಳಿ ಕೊಟ್ಟ ಸಂತೋಷದ ರಹಸ್ಯ ;
ವಿಶ್ವವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಒಂದು ಕಡೆಗೆ ಹೇಳ್ತಾರೆ, "ನಾನು ಸದಾ ಸಂತೋಷವಾಗಿರ್ತೀನಿ. ನಿಮಗೆ ಯಾಕಂತಾ ಗೊತ್ತಾ? ಯಾಕೆಂದರೆ ನಾನು ಯಾರಿಂದಲೂ ಏನನ್ನೂ ಬಯಸುವುದಿಲ್ಲ. ಬಯಕೆಗಳು ಯಾವಾಗಲೂ ನೋಯಿಸುತ್ತವೆ". ಹೌದು, ಆತ 100% ಕರೆಕ್ಟ್. ಬಯಕೆಗಳು ಯಾವಾಗಲೂ ಬಹಳಷ್ಟು ನೋಯಿಸುತ್ತವೆ. ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಬೇಕೆಂದರೆ ಶೇಕ್ಸ್‌ಪಿಯರ್ ಹೇಳಿಕೊಟ್ಟ ಈ ಸುಲಭ ಸೂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಅದು ಇಂತಿದೆ ;
"ನೀನು ನಿನ್ನ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬೇಕೆಂದರೆ ಯಾರಿಂದಲೂ ಏನನ್ನೂ ಎಳ್ಳಷ್ಟೂ ಸಹ ಬಯಸಬೇಡ. ಬಯಕೆಗಳು ಯಾವಾಗಲೂ ನೋಯಿಸುತ್ತವೆ. ಜೀವನ ಚಿಕ್ಕದಾಗಿದೆ. ಅದನ್ನು ಪ್ರೀತಿಸು. ನೀನು ನಿನ್ನನ್ನು ಮತ್ತು ನಿನ್ನ ಜೀವನವನ್ನು ಮೊದಲು ಪ್ರೀತಿಸು. ಮೊದಲು ನಿನ್ನಷ್ಟಕ್ಕೆ ನೀನು ಬದುಕು. ನಿನಗಾಗಿ ನೀನು ಬದುಕು.
ಮಾತನಾಡುವ ಮುಂಚೆ, ಆಲಿಸು.
ಬರೆಯುವ ಮುಂಚೆ, ಯೋಚಿಸು.
ಖರ್ಚು ಮಾಡುವ ಮುಂಚೆ, ಗಳಿಸು.
ಬೇರೆಯವರಿಗೆ ನೋವು ಕೊಡುವ ಮುನ್ನ,
ನೀನು ಆ ನೋವನ್ನ ಒಮ್ಮೆ ಅನುಭವಿಸು.
ದ್ವೇಷಿಸುವುದಕ್ಕಿಂತ ಮುಂಚೆ, ಪ್ರೀತಿಸು.
ಸೋಲುವ ಮುಂಚೆ, ಪ್ರಯತ್ನಿಸು.
ಸಾಯುವ ಮುಂಚೆ, ಬದುಕು.
ಏನಾದರೂ ನಗುನಗುತ್ತಾ, ಸದಾ ಸಂತೋಷವಾಗಿರು".
Be Happy and Always Keep smiling....