50 ಸಕ್ಸೆಸ್ ಸೂತ್ರಗಳು - Success Tips in Kannada - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

50 ಸಕ್ಸೆಸ್ ಸೂತ್ರಗಳು - Success Tips in Kannada

Director satishkumar

                      ಸಕ್ಸೆಸ್ ಅನ್ನೋದು ಅದೃಷ್ಟಶಾಲಿಗಳ ಸ್ವತ್ತಲ್ಲ. ಅದು ಪ್ರಯತ್ನಶಾಲಿಗಳ ಬೇಟೆ. ಸಕ್ಸೆಸಗೆ ಯಾವುದೇ ಶಾರ್ಟಕಟಗಳಿಲ್ಲ. ಸಾವಿರಾರು ಪ್ರಯತ್ನಗಳ ಒಟ್ಟಾರೆ ಫಲವೇ ಸಕ್ಸೆಸ್. ಇಷ್ಟಪಟ್ಟಿದ್ದು ಸಿಗಬೇಕೆಂದರೆ ಕಷ್ಟಪಡಲೇಬೇಕು. ಕಷ್ಟಪಡದೆ ಇಷ್ಟಪಟ್ಟಿದ್ದು ಸಿಗುವುದಿಲ್ಲ. ಸಾಧಕರ ಜೀವನದ ಆಧಾರದ ಮೇಲೆ ಕೆಲವೊಂದಿಷ್ಟು ಸಕ್ಸೆಸ್ ಸೂತ್ರಗಳನ್ನು ನಾನು ಪಟ್ಟಿ ಮಾಡಿದೀನಿ. ಅವು ಇಂತಿವೆ ;

೧) ಚಿಲ್ಲರೆ ವ್ಯಕ್ತಿಗಳೊಡನೆ ಚಿಲ್ಲರೆ ವಿಷಯಗಳಿಗಾಗಿ ಕೆಟ್ಟ ಶಬ್ದಗಳಿಗಳಿಂದ ಅಥವಾ ಕೈಗಳಿಂದ ಹೊಡೆದಾಡಬೇಡಿ. ಕೆಟ್ಟವರನ್ನು ನಿರ್ಲಕ್ಷಿಸಿ, ನೀವು ನಿಮ್ಮ ಕೆಲಸವನ್ನು ಮಾಡುತ್ತಾ ಮುಂದೆ ಸಾಗಿ.

೨) ನಿಮ್ಮ ಸಮಯವನ್ನು ಯಾವುದೇ ಕಾರಣಕ್ಕೂ ಕೊಲ್ಲಬೇಡಿ. ಲಭ್ಯವಿರುವ ಸಂಪೂರ್ಣ ಸಮಯವನ್ನು ನಿಮ್ಮ ಏಳ್ಗೆಗಾಗಿ ಬಳಸಿಕೊಳ್ಳಿ. ಹೊಗಳು ಭಟ್ಟರಿಂದ ದೂರವಿರಿ.

೩) ನಿಮ್ಮ ಕನಸುಗಳನ್ನು ಬೆನ್ನಟ್ಟಿ. ನಿಮ್ಮ ಕನಸುಗಳನ್ನು ನೀವೇ ಕೊಲ್ಲದಿರಿ. ನಿಮ್ಮ ಕಲೆಯನ್ನು ಕೊಲೆ ಮಾಡಬೇಡಿ. ನಿಮ್ಮ ಫ್ಯಾಷನನ್ನು ಪ್ರೋಫೆಶನ್ನಾಗಿ ಪರಿವರ್ತಿಸಿ.

೪) ನೀವು ನೀವಾಗಿರಿ. ಬೇರೆಯವರಂತಾಗಲು ಪ್ರಯತ್ನಿಸಬೇಡಿ. ಎಲ್ಲರಿಂದ ಪ್ರೇರಣೆ ಪಡೆದುಕೊಳ್ಳಿ. ಅದರೆ ಕಣ್ಚುಚ್ವಿ ಯಾರನ್ನು ಅನುಕರಣೆ ಮಾಡಬೇಡಿ. ನಿಮ್ಮಲ್ಲಿ ನಿಮ್ಮತನ ಇರಲಿ. ನಿಮ್ಮ ಕಲೆಯಲ್ಲಿ, ಕೆಲಸದಲ್ಲಿ ಸ್ವಂತಿಕೆ ಇರಲಿ.

೫) ದೌರ್ಬಲ್ಯಗಳಿಗೆ ಹೆದರದಿರಿ. ನಿಮ್ಮ ಸಾಮರ್ಥದ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಎಲ್ಲರಿಗೂ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತದೆ.


೬) ಸಾಧ್ಯವಾದರೆ ಚೆನ್ನಾಗಿ ಅಧ್ಯಯನ ಮಾಡಿ. ನಿಮ್ಮ ಓದನ್ನು ನೆಗ್ಲೆಟ್ ಮಾಡಿ ನಂತರ ಪಶ್ಚಾತ್ತಾಪ ಪಡಬೇಡಿ. ಕಾಲೇಜ್ ಬಿಟ್ಟ ಮೇಲೆಯೂ ಕಥೆ, ಕಾದಂಬರಿ ಇತ್ಯಾದಿಗಳ ಜೊತೆಗೆ ಸಾಧಕರ ಲೇಖನಗಳನ್ನು ಓದಿ.

೭) ಪ್ರಾಮಾಣಿಕತೆ ನಿಮ್ಮ ಮಿತ್ರನಾಗಿರಲಿ. ದೇಹದ ಜೊತೆಗೆ ಸ್ವಲ್ಪ ಬುದ್ಧಿನು ಬೆಳೆಸಿ.

೮) ದೊಡ್ಡ ದೊಡ್ಡ ಕನಸುಗಳನ್ನು ಕಾಣಿ. ಆ ಕನಸುಗಳನ್ನು ನನಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡಿ.

೯) ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಟರಾಗಿ.

೧೦) ಸಣ್ಣಪುಟ್ಟ ಸಮಸ್ಯೆಗಳಿಗೆ ಹೆದರಿ ಹಿಂದೆಜ್ಜೆ ಇಡಬೇಡಿ. ಮೊಲದ ಥರಾ ಅನಾವಶ್ಯಕವಾಗಿ ಓಡಿ ಸೋಲಬೇಡಿ. ಎಲ್ಲಿಯೂ ನಿಲ್ಲದೆ ಸಾವಕಾಶವಾಗಿ ಮುಂದೆ ಸಾಗಿ.


೧೧) ಸೋಲನ್ನು ಸಂತೋಷವಾಗಿ ಸ್ವೀಕರಿಸಿ. ಸೋಲನ್ನು ನಿಭಾಯಿಸುವುದನ್ನು ಕಲಿಯಿರಿ. ಸೋಲು ಗೆಲುವಿನ ಮೊದಲ ಹೆಜ್ಜೆ ಎಂಬುದನ್ನು ಮರೆಯಬೇಡಿ.

೧೨) ಕಂಫರ್ಟ ಝೋನ್ ಬಿಟ್ಟು ಹೊರಬನ್ನಿ. ನಿಮ್ಮ ಕನಸುಗಳಿಗಾಗಿ ರಿಸ್ಕ ತೆಗೆದುಕೊಳ್ಳಲು ಯಾಕೆ ಹಿಂಜರಿಕೆ?

೧೩) ನಿಮ್ಮ ಕೆಲಸವನ್ನು ಪ್ರೀತಿಸಿ. ನಿಮಗೆ ಇಷ್ಟವಿರುವ ಕೆಲಸವನ್ನೇ ಮಾಡಿ.

೧೪) ಪ್ರಯತ್ನಿಸಲು ಮುಜುಗುರ ಪಡಬೇಡಿ. ನೀವು ತಪ್ಪು ಮಾಡಿದಾಗಲೇ ನೀವು ಕಲಿಯುವುದು. ನಿಮ್ಮಿಂದ ತಪ್ಪಾದರೆ ನೀವು ಹೊಸದಾಗಿ ಏನಾದರೂ ಒಂದನ್ನು ಕಲಿಯಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ.

೧೫) ಹೊಸ ಹೊಸ ಐಡಿಯಾಗಳನ್ನು ಹುಟ್ಟು ಹಾಕಿ. ನಿಮ್ಮ ಫ್ಯಾಮಿಲಿ ಬ್ಯಾಕಗ್ರೌಂಡ್ ಮತ್ತು ಇನ್ನಿತರ ವಿಷಯಗಳಿಗಿಂತ ನಿಮ್ಮಲ್ಲಿರುವ ಕಲೆ ಮತ್ತು ಐಡಿಯಾಗಳು ಮಾತ್ರ ನಿಮ್ಮನ್ನು ಮುಗಿಲೆತ್ತರಕ್ಕೆ ಬೆಳೆಸುತ್ತವೆ.


೧೬) ಪ್ರ್ಯಾಕ್ಟಿಸ್ ನಿಮಗೆ ಪರಿಪೂರ್ಣತೆಯನ್ನು ತಂದುಕೊಡುತ್ತದೆ. ಆದ್ದರಿಂದ ನಿಮ್ಮ ಕಲೆ ಇಲ್ಲವೇ ಕೆಲಸವನ್ನು ಸರಿಯಾಗಿ ಪ್ರ್ಯಾಕ್ಟಿಸ್ ಮಾಡ್ತೀರಿ.

೧೭) ಭವಿಷ್ಯತ್ತಿನಲ್ಲಿ ಬರಬಹುದಾದ ಸಂಗತಿಗಳನ್ನು ಊಹಿಸಿ. ಹೊಸ ಸಂಗತಿಗಳನ್ನು ಅನ್ವೇಷಣೆ ಮಾಡಿ. ಇನಪುಟಗಿಂತ ಮುಂಚೆ ಔಟಪುಟ ಬಗ್ಗೆ ಸ್ವಲ್ಪ ಊಹಿಸಿ ಕೆಲಸ ಪ್ರಾರಂಭಿಸಿ.

೧೮) ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಸಾಧ್ಯವಾದಷ್ಟು ಪರಿಹರಿಸಿ ಮಾದರಿ ಪ್ರಜೆಯಾಗಿ. ನೀವು ಒಳ್ಳೆಯವರಾಗಿ. ಜೊತೆಗೆ ಬೇರೆಯವರಿಗೂ ಬದಲಾಗಲು ಪ್ರೇರೆಪಿಸಿ. 

೧೯) ಒಗ್ಗಟ್ಟಿನಿಂದ ಕೆಲಸ ಮಾಡಿ. ಟೀಮವರ್ಕ ನಿಮಗೆ ಬೇಗನೆ ಯಶಸ್ಸನ್ನು ತಂದುಕೊಡುತ್ತದೆ.

೨೦) ಸದಾ ಕ್ರಿಯಾಶೀಲರಾಗಿರಿ. ಸೋಮಾರಿ ಸಿದ್ದರಾಗಬೇಡಿ.


೨೧) ಕಲಿಯುವುದನ್ನು ನಿಲ್ಲಿಸಬೇಡಿ. ಪ್ರತಿದಿನ ಹೊಸಹೊಸ ವಿಷಯಗಳನ್ನು ತಿಳಿದುಕೊಂಡು ನಿಮ್ಮ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಿ.

೨೨) ನಿಮ್ಮ ದಾರಿಯನ್ನು ನೀವೇ ನಿರ್ಮಿಸಿ. ಬೇರೆಯವರ ದಾರಿಯಲ್ಲಿ ಅಡ್ಡ ಸಾಗಬೇಡಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವ ರೀತಿ ನೀವಾಗಿ.

೨೩) ಬುದ್ಧಿವಂತಿಕೆಯಿಂದ  ಸ್ವಲ್ಪ ಸ್ಮಾರ್ಟಾಗಿರಿ. ಸಕ್ಸೆಸ್ ಸ್ಮಾರ್ಟ್ ವರ್ಕರಗಳನ್ನು ಮೊದಲು ಚುಂಬಿಸುತ್ತದೆ.

೨೪) ಬದುಕು ನಿಮಗೆ ಪಾಠ ಕಲಿಸುವ ಮುಂಚೆಯೇ ಬದಲಾಗಿ. ಬದುಕಿನ ಪಾಠ ಒಂಥರಾ ಶಿಕ್ಷೆಯಿದ್ದಂತೆ.

೨೫) ಆಡಂಬರದಲ್ಲಿ ಮೆರೆಯದೆ, ಸರಳತೆಯಿಂದ ಇರಲು ಪ್ರಯತ್ನಿಸಿ. ಸರಳತೆ, ಸಜ್ಜನಿಕೆ, ಸ್ವಾಭಿಮಾನ, ಸಂಯಮಗಳೆಲ್ಲವು ನಿಮ್ಮ ಸಂಗಾತಿಗಳಾಗಿರಲಿ. ಸ್ವಲ್ಪ ಕರುಣಾಮಯಿಗಳಾಗಿ. ಬೇರೆಯವರಿಗೆ ಮೇಲೇರಲು ನೀವು ಸಹಕರಿಸಿದರೆ, ನಿಮಗೆ ಮೇಲೇರಲು ಬೇರೆಯವರು ಸಹಕರಿಸುತ್ತಾರೆ.


೨೬) ನಿಮ್ಮ ಮುಂದಿನ ಪ್ಲ್ಯಾನಗಳನ್ನು ಅನಾವಶ್ಯಕವಾಗಿ ಬೇರೆಯವರೊಂದಿಗೆ ಶೇರ್ ಮಾಡಬೇಡಿ. ನಿಮ್ಮ ಪ್ಲ್ಯಾನಗಳನ್ನು ಶೇರ್ ಮಾಡುವ ಬದಲು, ಫಲಿತಾಂಶಗಳನ್ನು ತೋರಿಸಿ.

೨೭) ಬೇರೆಯವರನ್ನು ಪ್ರೀತಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ. ಮೊದಲು ನಿಮ್ಮ ಜೀವನವನ್ನು ಪ್ರೀತಿಸಿ. ಮೊದಲು ನಿಮ್ಮ ಕೆಲಸವನ್ನು ಪ್ರೀತಿಸಿ.

೨೮) ಬರೀ ದುಡ್ಡಿಗಾಗಿ ದುಡಿಬೇಡಿ. ಆತ್ಮತೃಪ್ತಿಗಾಗಿ ದುಡಿಯಿರಿ. ಆತ್ಮತೃಪ್ತಿಯಿಂದ ನೀವು ಮಾಡುವ ಕೆಲಸ ಒಂದಲ್ಲ ಒಂದಿನ ನಿಮಗೆ ಅಂತಸ್ತನ್ನು ತಂದುಕೊಡುತ್ತದೆ.

೨೯) ಮೂರ್ಖರ ಮೂರ್ಖ ಪ್ರಶ್ನೆಗಳಿಗೆ, ಕೀಚಕರ ಕೆಟ್ಟ ಕಮೆಂಟುಗಳಿಗೆ ಮೌನವೇ ಸರಿಯಾದ ಪ್ರತ್ಯುತ್ತರ. ನಿಮ್ಮ ಕೆಲಸದಿಂದ ಅವರ ಬಾಯ್ಮುಚ್ಚಿಸಿ.

೩೦) ನಿಮಗೆ ವಂಚಿಸಿದವರಿಗೆ, ಅವಮಾನಿಸಿದವರಿಗೆ, ಅನುಮಾನಿಸಿದವರಿಗೆ, ನೋಯಿಸಿದವರಿಗೆ ಥ್ಯಾಂಕ್ಸ್ ಹೇಳಿ. ಯಾಕೆಂದರೆ ಅವರು ನಿಮ್ಮನ್ನು ಮಾನಸಿಕವಾಗಿ ಬಲಿಷ್ಟರನ್ನಾಗಿಸಿದ್ದಾರೆ.


೩೧) ಹೆಚ್ಚುಕಡಿಮೆ ರಿಸ್ಕಗಳನ್ನು ತೆಗೆದುಕೊಳ್ಳಬೇಡಿ. ಸರಿಯಾಗಿ ಕ್ಯಾಲ್ಕುಲೇಟೆಡ ರಿಸ್ಕಗಳನ್ನು ತಗೊಳ್ಳಿ. ರಿಸ್ಕ ತೆಗೆದುಕೊಳ್ಳದೆ ನೀವು ಮೇಲೇರಲು ಆಗುವುದಿಲ್ಲ.

೩೨) ಸೋಲನ್ನು ಸವಾಲಾಗಿ ಸ್ವೀಕರಿಸಿ. ಸೋಲಿಗೆ ಕಾರಣವಾದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಪ್ರಯತ್ನಿಸಿ. ನಿಮ್ಮ ಗೆಲುವಿನ ನಗೆಯಲ್ಲಿ ಸೋಲನ್ನು ಮರೆತು ಬಿಡಿ.

೩೪) ನಿಮ್ಮನ್ನು ನೀವು ಸದಾ ಸುಧಾರಿಸಿಕೊಳ್ಳಿ. ಸದಾ ಅಪಡೇಟ್ ಆಗಿರಿ. ಸದ್ಯದ ಪರಿಸ್ಥಿತಿಗೆ ತಕ್ಕಂತೆ ಅಪಡೇಟ್ ಆಗಿ ಆರಾಮಾಗಿರಿ.

೩೫) ನಿಮ್ಮ ಪ್ರತಿ ಹೆಜ್ಜೆಯಲ್ಲಿ ಕಾನ್ಫಿಡೆಂಟಾಗಿರಿ. ಕಾರಣವಿಲ್ಲದೆ ಹೆದರುವ ಅವಶ್ಯಕತೆ ಏನಿಲ್ಲ.೩೬) ಸಮಾಜದಲ್ಲಿನ ಬದಲಾವಣೆಗಳಿಗೆ ಬೇಗನೆ ಹೊಂದಿಕೊಳ್ಳಿ. ಕ್ರಿಯೇಟಿವ ಆಗಿ ಯೋಚಿಸಿ. ಹಿಂದೆ ಉಳಿಯಬೇಡಿ.

೩೭) ಎಲ್ಲ ಸಂದರ್ಭಗಳಲ್ಲೂ ಸಂತೋಷವಾಗಿರಿ. Smile Forever for your success.

೩೮) ನಿಮ್ಮ ಸಕ್ಸೆಸಗಾಗಿ ಸ್ವಲ್ಪ ಸ್ವಾರ್ಥಿಗಳಾಗಿ. ಹರಟೆ ಭಟ್ಟರಿಗೆ ನಿಮ್ಮ ಸಮಯವನ್ನು ಪೋಲು ಮಾಡಲು ಕೊಡಬೇಡಿ.

೩೯) ನಿಮ್ಮ ಆ್ಯಟಿಟುಡನ್ನು ಅನಾವಶ್ಯಕವಾಗಿ ಬಿಟ್ಟು ಕೊಡಬೇಡಿ. ಯಾರ ಬಳಿಯೂ ಅನಾವಶ್ಯಕವಾಗಿ ಅಥವಾ ಅವಶ್ಯಕವಾಗಿ ಕೈಚಾಚಬೇಡಿ. ಸ್ವಲ್ಪನಾದ್ರು ಸ್ವಾಭಿಮಾನವಿರಲಿ.

೪೦) ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ನಿಮ್ಮ ಮೇಲಿನ ನಂಬಿಕೆಯನ್ನು ನೀವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.


೪೧) ಬೇರೆಯವರಿಗೆ ಬೇರೆಯವರ ಉದಾಹರಣೆಗಳನ್ನು ಕೊಡುವುದನ್ನು ನಿಲ್ಲಿಸಿ. ನೀವೇ ಜೀವಂತ ಊದಾಹರಣೆಯಾಗಲು ಪ್ರಯತ್ನಿಸಿ.

೪೨) ಸಣ್ಣಪುಟ್ಟ ವಸ್ತುಗಳಿಗಾಗಿ ಸಾಯಬೇಡಿ. ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ನಿಯತ್ತಾಗಿ ಕೆಲಸ ಮಾಡಿ. ದುಡ್ಡಿದ್ರೆ ಮಾತ್ರ ದೋಸ್ತಿ, ಪ್ರೀತಿ ಇತ್ಯಾದಿ...

೪೩) ಡ್ರೀಮಬಾಯ್, ಡ್ರೀಮಗರ್ಲಗಳನ್ನು ಹಿಂಬಾಲಿಸುವ ಬದಲು, ನಿಮ್ಮ ಡ್ರೀಮಗಳನ್ನು ಹಿಂಬಾಲಿಸಿ. ಸಿಗದ ಕನಸಿನ ಕನ್ಯೆಯರಿಗಿಂತ ಕನಸೇ ಮುಖ್ಯ.

೪೪) ಚಿಕ್ಕವರಿಗೆ ಟೀಚರಾಗಿರಿ. ದೊಡ್ಡವರಿಗೆ ಸ್ಟೂಡೆಂಟಾಗಿರಿ. ಯಾವಾಗಲೂ ಕಲಿಯುತ್ತಾ ಮತ್ತೆ ಕಲಿಸುತ್ತಾ ಇರಿ.

೪೫) ಯಾವಾಗಲೂ ಶಾಂತಚಿತ್ತದಿಂದಿರಿ. ತಾಳ್ಮೆ ಕಳೆದುಕೊಂಡು ಇರೋ ಸಮಸ್ಯೆಗಳನ್ನು ಮತ್ತಷ್ಟು ದೊಡ್ಡದಾಗಿಸಿಕೊಳ್ಳಬೇಡಿ. ನಿಮ್ಮ ಒಂದು ಸಿಹಿನಗೆ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರದ ದಾರಿ ತೋರಿಸುತ್ತದೆ.


೪೬) ಕೊರತೆಗಳಿಗೆ ಕುಗ್ಗಬೇಡಿ. ಬಡತನವೇ ಬದುಕನ್ನು ಕಲಿಸುವ ಪಾಠಶಾಲೆ.

೪೭) ಮೊದಲು ನಿಮ್ಮ ಆಲಸಿತನವನ್ನು, ಬೇಜಾವಾಬ್ದಾರಿತನವನ್ನು ಕೊಲೆ ಮಾಡಿ. ಸೋಲಿಗೆ ನಿಮ್ಮ ಆಲಸಿತನ ಮತ್ತು ಬೇಜಾವಾಬ್ದಾರಿತನಗಳೇ ನೇರ ಹೊಣೆ.

೪೮) ಹಾನಿಕಾರಕ ವ್ಯಕ್ತಿಗಳಿಂದ ಮತ್ತು ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಿ.

೪೯) ಎಲ್ಲರೊಂದಿಗೆ ಫ್ರೇಂಡ್ಲಿಯಾಗಿರಿ. ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.

೫೦) ನಿಮ್ಮ ಸಕ್ಸೆಸಗೆ ಮತ್ತು ಸೋಲಿಗೆ ನೀವೇ ಕಾರಣ ಹೊರತು ಬೇರೆಯವರಲ್ಲ. ನಿಮ್ಮ ಸೋಲು ಗೆಲುವುಗಳೆರಡು ನಿಮ್ಮ ಮೇಲೆಯೇ ನಿರ್ಧಾರಿತವಾಗಿವೆ.

ಸಾಧಿಸದೇ ಸಾಯದಿರಿ. All the Best...
50 ಸಕ್ಸೆಸ್ ಸೂತ್ರಗಳು - Success Tips in Kannada 50 ಸಕ್ಸೆಸ್ ಸೂತ್ರಗಳು - Success Tips in Kannada Reviewed by Director Satishkumar on February 20, 2018 Rating: 4.5
Powered by Blogger.