೧) ಅವಳ ನಗುವಿನ ಸದ್ದಿಗೆ ನನ್ನೆದೆಯ ಬಡಿತ ಒಂದು ಸೆಕೆಂಡ್ ನಿಲ್ಲಬಹುದು. ಈ ಜಗತ್ತಿನಲ್ಲಿ ನನ್ನ ಪಾಲಿಗೆ ಅತ್ಯಂತ ಕಾಸ್ಟ್ಲಿಯಾಗಿರುವ ಏಕೈಕ ವಸ್ತುವೆಂದರೆ ಅವಳ ನಗು ಮಾತ್ರ. ಅವಳ ನಗುವಿನ ಮುಂದೆ ಎಲ್ಲವೂ ಶೂನ್ಯ...
೨) ಅವಳ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ನಾಚುವ ನಗು, ಕಂಡು ಕಾಣದ ಮೂಗು ಬೊಟ್ಟು, ಉಯ್ಯಾಲೆಯಾಡುವ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು, ಮತ್ತೇರಿಸುವ ಮಾದಕ ಮೈಮಾಟಗಳು ಸಾಕು ನನ್ನ ನಿದ್ದೆ ನೆಗೆದು ಬೀಳಲು...
೩) ನನ್ನೆದೆಯ ಮೀಡಿತದಲ್ಲಾಗುವ ಏರುಪೇರುಗಳನ್ನು ಅಳೆದು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವುದು ಅವಳಿಗೆ ಮಾತ್ರ. ಏಕೆಂದರೆ ಪ್ರತಿದಿನ ರಾತ್ರಿ ನನ್ನೆದೆಯ ಮೇಲೆ ತಲೆಯಿಟ್ಟು ಮಲಗಿಕೊಳ್ಳುವ ಅವಕಾಶವಿರುವುದು ಅವಳಿಗಷ್ಟೇ...
೫) ಅವಳು ವಾಸ್ತವಕ್ಕಿಂತ ನನ್ನ ಕನಸ್ಸಿನಲ್ಲಿಯೇ ಮತ್ತಷ್ಟು ಮುದ್ದಾಗಿ ಕಾಣಿಸುತ್ತಾಳೆ. ಅವಳು ಚೂಡಿದಾರ, ಲಂಗದಾವಣಿಗಿಂತ ಸೀರೆಯಲ್ಲೇ ಸೂಪರ್ ಸೆಕ್ಸಿಯಾಗಿ ನನ್ನ ಸೆಳೆಯುತ್ತಾಳೆ...
೬) ಅವಳ ಮಡಿಲು ನನ್ನ ನೆಚ್ಚಿನ ತಲೆದಿಂಬಾಗಿದೆ. ನಾನು ನಿಶ್ಚಿ0ತೆಯಾಗಿ ಮಲಗಲು ಅವಳ ಮಡಿಲು ಸುರಕ್ಷಿತ ಸ್ಥಾನವಾಗಿದೆ. ಜಗತ್ತಿನಲ್ಲಿ ನಾನು ಕೊಂಡುಕೊಳ್ಳಲಾಗದ ಏಕೈಕ ಜಾಗವೆಂದರೆ ಅವಳ ಹೃದಯ ಮಾತ್ರ...
೭) ನನ್ನ ಬದುಕಿನ ಪುಸ್ತಕದಲ್ಲಿ ಅವಳಿಗೊಂದು ವಿಶೇಷ ಅಧ್ಯಾಯವಿದೆ. ಆದರೆ ಅದನ್ನು ಓದುವ ಅಧಿಕಾರವಿರುವುದು ಅವಳಿಗೆ ಮಾತ್ರ...
೮) ಚಂದ್ರನ ನಗು,
ನವಿಲಿನ ವಯ್ಯಾರ,
ಗಿಳಿಗಳ ಮಾತು,
ನದಿಗಳ ಚಂಚಲತೆ,
ಹೂಗಳ ಕೋಮಲತೆ,
ಮೋಹಿನಿಯ ಮಾದಕತೆಗಳೆಲ್ಲ ಸೇರಿ ಅವಳು ಸೃಷ್ಟಿಯಾಗಿದ್ದಾಳೆ.
೯) ಅವಳ ಕಣ್ಣೀರಿಗೆ ನನ್ನನ್ನು ಮಂಜಿನಂತೆ ಕರಗಿಸುವ ಶಕ್ತಿಯಿದೆ. ಅವಳ ಮಹಾಮೌನಕ್ಕೆ ನನ್ನನ್ನು ನಿಶಬ್ದವಾಗಿ ಕೊಲ್ಲುವ ತಾಕತ್ತಿದೆ.
೧೦) ನನ್ನ ಪ್ರೀತಿಯ ಪೋಲಿ ಮಾತುಗಳಿಗೆ, ಮುದ್ದಿನ ಅಪ್ಪುಗೆಗೆ, ಸಿಹಿಮುತ್ತಿನ ಮಳೆಗೆ ಅವಳ ಬೆನ್ನು ನಾಚಿ ನೀರಾಗಬಹುದು...